✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.
ಸುದ್ದಿ @ಹೈಕಾಡಿ (ಕುಂದಾಪುರ )
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರು ,ಕೃಷಿಕರು ಹೈನುಗಾರರಾದ ಶ್ರೀಮತಿ ಚೈತ್ರ.ವಿ ಅಡಪ ಇವರಿಗೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ ಯಲ್ಲಿ ಜರುಗಿದ ಹುಯ್ಯಾರು ಪಟೇಲ್ ಚಾರಿಟೆಬಲ್ ಟ್ರಸ್ಟ್ .(ರಿ.) ನವರು ನಡೆಸಿದ ಹತ್ತನೇ ವರ್ಷದ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಅಭಿನಂದನಾ ಸನ್ಮಾನ ಮಾಡಿ ಗೌರವಿಸಲಾಯಿತು. ಗ್ರಾಮೀಣ ಭಾಗದ ಕೈಲ್ಕೆರೆ ಪರಿಸರದಲ್ಲಿ ಸುಮಾರು 32 ಜಾನುವಾರುಗಳನ್ನು ಆರೈಕೆ ಮಾಡಿ ಪೋಷಿಸಿ, ಹೈನೋದ್ಯಮದಲ್ಲಿ ತನ್ನ ಹೆಸರನ್ನು ಪ್ರತಿಷ್ಠಾಪಿಸಿ ಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಅದೇ ರೀತಿ ಚೈತ್ರ ವಿ. ಅಡಪ ಅವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಬಾರಿ ಸನ್ಮಾನ ಪುರಸ್ಕಾರಗಳು ದೊರೆತಿವೆ. ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ರೈತ ಸಂಘ ಆಯೋಜನೆ ಆಯೋಜನೆ ಮಾಡಿದ್ದು ,ಕಾರ್ಯಕ್ರಮದ ಅಧ್ಯಕ್ಷರಾಗಿ ಡಾ. ಕೆ. ರತ್ನಾಕರ್ ಶೆಟ್ಟಿ ಹುಯ್ಯಾರು,ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎಚ್ .ಎಸ್ ಶೆಟ್ಟಿ ಮೈಸೂರು ಮರ್ಕಂಟೈಲ್ ಕ೦. ನೆರವೇರಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಸತೀಶ್ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಹೈಕಾಡಿ ,ಶ್ರೀ ನಾಗರಾಜ್ .ಪಿ ಮುಖ್ಯೋಪದ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ ,ಕುಂದಗನ್ನಡದ ಖ್ಯಾತಿಯ ಮನು ಹಂದಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿಯ ,ಹುಯ್ಯರು ಚಾರಿಟೆಬಲ್ ಟ್ರಸ್ಟ್ ರಿ.ವತಿಯಿಂದ ನಡೆಯಿತು.ಕಾರ್ಯಕ್ರಮದಲ್ಲಿ ಗ್ರಾಮಸ್ಥರು ,ಶಾಲಾ ವಿದ್ಯಾರ್ಥಿಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.