ಉಡುಪಿಯಲ್ಲಿ ನಡೆದ 22 ನೇ ರಾಜ್ಯ ಶಾಟ್ ಕೋರ್ಸ್ ಚಾಂಪಿಯನ್ ಶಿಪ್ -2023 ಈಜು ಸ್ಪರ್ಧೆಯಲ್ಲಿ ಅತಿವೇಗದ ಈಜುಗಾರ ಎಂಬ ಗರಿಮೆ ಪಡೆದು ಬೆಂಗಳೂರಿನಲ್ಲಿ ನಡೆಯಲಿರುವ ದಕ್ಷಿಣ ವಲಯ ಈಜು ಸ್ಪರ್ಧೆಗೆ ರಿಲೇ ಸಹಿತ 8 ವಿಭಾಗಗಳಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ಚಿಂತನ್ ಶೆಟ್ಟಿಯವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಸನ್ಮಾನಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಚಿರಾಗ್ ಶೆಟ್ಟಿಯವರ ತಾಯಿ, ಒಕ್ಕೂಟದ ಆಡಳಿತಾಧಿಕಾರಿ ಶ್ರೀ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.