Author: admin
ನೆಲದ ಸಂಸ್ಕೃತಿಯನ್ನು ಗುರುತಿಸಿಕೊಂಡು , ಜನಸಂಸ್ಕೃತಿಯ ಮಿಡಿತಗಳನ್ನು ಗ್ರಹಿಸಿಕೊಂಡು, ಬಹುತ್ವದ ಮಾದರಿಗಳನ್ನು, ಅನನ್ಯತೆಗಳನ್ನು ಹುಡುಕಿ, ಗೌರವಿಸಿಕೊಂಡು ಅವುಗಳನ್ನು ತನ್ನೊಳಗೆ ಒಳಗು ಮಾಡಿಕೊಳ್ಳುವಿಕೆಯ ಮೂಲಕ, ಜೀವ ಪ್ರೀತಿ ಮತ್ತು ಜೀವನ ಪ್ರೀತಿಯನ್ನು ಪೋಷಿಸಿಕೊಂಡು ಲೋಕ ಹಿತದ ಚರ್ಯೆಗಳಿಗೆ ದಿಟ್ಟವಾಗಿ, ಮುಕ್ತವಾಗಿ ತೆರೆದುಕೊಂಡವರು, ಮಾತನಾಡಿದವರು, ಬರೆದವರು ಡಾ ಇಂದಿರಾ ಹೆಗ್ಗಡೆಯವರು. ಇವರ ಸಮಗ್ರ ಬರಹಗಳ ಅವಲೋಕನ ಸಂಪುಟವೊಂದು ಪ್ರಟಣೆಗೊಳ್ಳಲಿದೆ. ಇದೊಂದು ಸಂಭ್ರಮ ನಮಗೆಲ್ಲರಿಗೂ. ಪ್ರೊ. ಬಿ. ಎ. ವಿವೇಕ ರೈ ಅವರ ಆಶಯ, ಮಾರ್ಗದರ್ಶನ ಮತ್ತು ಗೌರವ ಸಂಪಾದಕತ್ವದಲ್ಲಿ, ಡಾ.ಜ್ಯೋತಿ ಚೇಳ್ಯಾರು ಅವರ ಪ್ರಧಾನ ಸಂಪಾದಕತ್ವದಲ್ಲಿ ಆಕೃತಿ ಆಶಯ ಪಬ್ಲಿಕೇಶನ್ಸ್ ಹೊರ ತರಲಿದೆ. ಎಸ್ ಆರ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ),ತುಳು ಪರಿಷತ್, ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮತ್ತು ಸ್ಕೂಲ್ ಅಪ್ ಸೋಷಲ್ ವರ್ಕ್ ರೋಶನೀ ನಿಲಯ ಕನ್ನಡ ಸಂಘ ಮಂಗಳೂರು -ಹೀಗೆ ಈ ಐದು ಸಂಘಟನೆಗಳ ಸಹಯೋಗದಲ್ಲಿ ಅಕ್ಟೋಬರ್ 26, 2023 ಗುರುವಾರದಂದು ‘ಮಾರಿಯಾ ಪೈವಾ’ ಸಭಾಂಗಣ ರೋಶನೀ ಮಂಗಳೂರು ಇಲ್ಲಿ…
ಧರ್ಮವು ಅಧರ್ಮದ ದಾರಿಯಲ್ಲಿ ನಡೆದಾಗ ಭಗವಂತನು ಯಾವುದೇ ರೂಪದಲ್ಲಿ ಬಂದು ರಕ್ಷಣೆ ನೀಡುತ್ತಾನೆ ಎಂಬ ದೃಢ ನಂಬಿಕೆಯಿಂದ ಹನ್ನೆರಡು ವರ್ಷಗಳ ಹಿಂದೆ ಅಮಾನುಷವಾಗಿ ಕೊಲೆಯಾದ ಧರ್ಮಸ್ಥಳ ಪರಿಸರದ ಬಾಲೆ ಸೌಜನ್ಯಳ ನಿಜವಾದ ಕೊಲೆಗಾರ ಯಾರು ಎಂದು ತಿಳಿಯುವರೇ ಹೋರಾಟ ಆರಂಭವಾಗಿದೆ. ಈ ಹೋರಾಟದಲ್ಲಿ ನ್ಯಾಯ ಸಿಗಲೇಬೇಕೆಂದು ಪ್ರೋತ್ಸಾಹಿಸಿ ಮಹಾರಾಷ್ಟ್ರದ ಮಣ್ಣಿನಲ್ಲಿ ನೆಲೆಸಿದ ಸಮಾನ ಮನಸ್ಕರಾದ ನಾವು ಮುಂಬಯಿಯಲ್ಲೂ ಬೃಹತ್ ಪ್ರತಿಭಟನೆ ನಡೆಸುವ ಉದ್ದೇಶದಿಂದ ಪೂರ್ವಬಾವಿ ಸಭೆಯಲ್ಲಿ ಒಟ್ಟುಗೂಡಿದ್ದೇವೆ. ನಮ್ಮ ನಡೆ ಕೇವಲ ನ್ಯಾಯದ ಕಡೆ. ಹಿಂದೆ ಸಂತೋಷ್ ರಾವ್ ಎಂಬ ಸಜ್ಜನ ಯುವಕನನ್ನು ಆರೋಪಿಯ ಸ್ಥಾನದಲ್ಲಿಟ್ಟು ಇದೀಗ ನ್ಯಾಯಾಲಯವು ಅವರನ್ನು ನಿರಾಪರಾಧಿ ಎಂದು ತೀರ್ಪು ನೀಡಿದೆ. ಹಾಗಾಗಿ ನಿಜವಾದ ಆರೋಪಿ ಅಲ್ಲದೆ ಸಂತೋಷ್ ರಾವ್ ಹಾಗೂ ಅವರ ಕುಟುಂಬಕ್ಕೆ ಕಳಂಕ ತಂದವರು ಯಾರು ಎಂಬ ಗೊಂದಲವು ಈ ಪ್ರತಿಭಟನೆಗೆ ಕಾರಣವಾಗಿದೆ. ಇದಕ್ಕಾಗಿ ಎಸ್ ಐಟಿ ಮುಖೇನ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಮರು ತನಿಖೆ ನಡೆಸಬೇಕೆಂದು ಸರಕಾರಕ್ಕೆ ಮನವಿ ಮಾಡಬೇಕು. ನಾವು ಯಾರದ್ದೇ…
ಪವಿತ್ರ ದೇಶ ನಮ್ಮದು. ಭಾರತದಲ್ಲಿರುವ ಹಲವು ಜಾತಿ, ಕುಲ, ಭಾಷೆ, ವಿಭಿನ್ನ ಸಂಸ್ಕೃತಿ ಎಲ್ಲಿಯೂ ಕಾಣಸಿಗದು. ವಿದೇಶಕ್ಕೆ ಹೋದ ಮಕ್ಕಳು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಸಂಘ ಕಳೆದ 10 ವರ್ಷಗಳಿಂದ ಸಾಮಾಜಿಕ ಶೈಕ್ಷಣಿಕ ಕಾರ್ಯ ಮಾಡುತ್ತಾ, ಸಾಧನೆಯನ್ನು ಗುರುತಿಸಿ ಸಮಾಜದವರನ್ನು ಸಮ್ಮಾನ ಮಾಡುತ್ತಿದೆ ಎಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯ ಸ್ವಾಮೀಜಿಯವರು ಹೇಳಿದರು. ಅವರು ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದೊಂದಿಗೆ ರವಿವಾರ ವಾಮಂಜೂರು ಚರ್ಚ್ ಸಭಾಭವನದಲ್ಲಿ ನಡೆದ ಗುರುಪುರ ಬಂಟರ ಮಾತೃ ಸಂಘದ ದಶಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಬಂಟ ಸಮಾಜದಲ್ಲಿಯೂ ಕಷ್ಟದಲ್ಲಿ ಇದ್ದವರು ಇದ್ದಾರೆ. ಅವರು ಸಮಾಜದ ಅವಿಭಾಜ್ಯ ಅಂಗ. ಎಲ್ಲಾ ಸಮಾಜ ಗಟ್ಟಿಯಾದರೆ, ಸನಾತನ ಧರ್ಮ ಗಟ್ಟಿಯಾಗುತ್ತದೆ. ಎಲ್ಲರಿಗೂ ಬಂಟ ಸಮಾಜ ಆದರ್ಶವಾಗಬೇಕು.…
ಮಾಧ್ಯಮಗಳು ಉತ್ತಮವಾದ ಶಿಸ್ತು ಮತ್ತು ಸಂಸ್ಕಾರವನ್ನು ಹೊಂದಿರುವ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು. ಮಾಧ್ಯಮದಲ್ಲಿ ತಪ್ಪು ಮಾಹಿತಿಯನ್ನು ನೀಡಿದಾಗ ಪತ್ರಿಕೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ. ನೈಜ ಸುದ್ದಿಯನ್ನು ಕೊಡುವ ಮಾಧ್ಯಮವಾಗಿ ದಿನಪತ್ರಿಕೆಯನ್ನು ನೋಡಬಹುದು ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಹೇಳಿದರು. ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಆಶ್ರಯದಲ್ಲಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಸಹಯೋಗದೊಂದಿಗೆ ಜು.12ರಂದು ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಹಾಲ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವಿಶ್ವಾಸಾರ್ಹ ಸುದ್ದಿಗಾಗಿ ಜನರು ಪತ್ರಿಕೆ ಅವಲಂಬಿಸುತ್ತಾರೆ. ಇದರಿಂದ ಪತ್ರಿಕೆಯೂ ಉಳಿಯುತ್ತದೆ. ಇಂದು ಪತ್ರಿಕೆಯಿಂದ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಮೊದಲು ಸುದ್ದಿಗಳು ಬರುತ್ತದೆ. ಇದನ್ನೇ ಸತ್ಯವೆಂದು ಜನರು ನಂಬುತ್ತಾರೆ. ವಿದ್ಯಾರ್ಥಿಗಳಿಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲು ಪಠ್ಯದ ಜೊತೆಗೆ ಪತ್ರಿಕೆಗಳು ಕೂಡ ಸಹಕಾರಿಯಾಗುತ್ತದೆ ಎಂದು ತಿಳಿಸಿ ಪತ್ರಿಕೆಯ ಉಗಮ, ಇತಿಹಾಸ ಮತ್ತು ಸ್ವರೂಪದ ಕುರಿತು ಅವರು ಮಾಹಿತಿ ನೀಡಿದರು. ನಾನು…
ಸಾಗರ ಬಂಟರ ಸಂಘದ ಆರ್ಥಿಕ ಅಶಕ್ತ ಬಂಟ ಕುಟುಂಬಕ್ಕೆ ಬೆಂಗಳೂರು ಬಂಟರ ಸಂಘದ ವತಿಯಿಂದ ಮಾಂಗಲ್ಯ ಸರವನ್ನು (ಕರಿಮಣಿ) ಆನಂದ್ಪುರ ಭಾಗದ ಎಡೆಹಳ್ಳಿ ಗ್ರಾಮದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ರಘುಪತಿ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ನಿರ್ದೇಶಕರಾದ ಅಮರ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಸದಾನಂದ ಶೆಟ್ಟಿ ಸುರೇಶ್ ಶೆಟ್ಟಿ, ಸುನಿಲ್ ಶೆಟ್ಟಿ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು ಬಂಟರ ಸಂಘದಿಂದ ಮಾಡಲಾಗುವ ಎಲ್ಲಾ ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಸಾಗರ ಬಂಟರ ಸಂಘ ಕೃತಜ್ಞತೆಯನ್ನು ಸಲ್ಲಿಸಿತು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಿಗೆ , ಕಾರ್ಯದರ್ಶಿಗಳಿಗೆ , ಉಪಾಧ್ಯಕ್ಷರಿಗೆ , ಖಜಾಂಚಿಗಳಿಗೆ , ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಹಾಗೂ ಸರ್ವ ಸದಸ್ಯರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಕೊಡಗು ಜಿಲ್ಲಾ ಬಂಟ್ಸ್ ಸಂಘದ ವಾರ್ಷಿಕ ಮಹಾಸಭೆ ನಗರದ ಕಾವೇರಿ ಸಭಾಂಗಣದಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ ಬಿ.ಡಿ.ಜಗದೀಶ ರೈ ಅವಿರೋಧವಾಗಿ ಆಯ್ಕೆಯಾದರು. ಮುಖ್ಯ ಕಾರ್ಯದರ್ಶಿಯಾಗಿ ಕುಶಾಲನಗರದ ಉದ್ಯಮಿ ವಿ ರವೀಂದ್ರ ರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಬಿ.ಕೆ.ರವೀಂದ್ರ ರೈ ಸಂಘ ಮತ್ತು ಟ್ರಸ್ಟ್ ನ ಆಸ್ತಿ ವಿವರ ನೀಡಿದರು. ಸಂಘದ ಆಸ್ತಿಗೆ ಸಂಬಂಧಿಸಿದಂತೆ ಕೆಲವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದರು. ಆ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲ. ಸ್ವತ್ತುಗಳ ನಿಖರವಾದ ದಾಖಲೆಗಳು ಸಂಘದ ಬಳಿ ಇವೆ ಮತ್ತು ಯಾರಾದರೂ ಅದನ್ನು ಯಾವಾಗ ಬೇಕಾದರೂ ಪರಿಶೀಲಿಸಬಹುದು ಎಂದರು. ರವೀಂದ್ರ ರೈ ಮಾತನಾಡಿ, ‘ಹಲವು ವರ್ಷಗಳ ನಂತರ ನಾವು ಒಂದಾಗಿದ್ದೇವೆ. ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಜನರಿಗೆ ಸುಳ್ಳು ಮಾಹಿತಿ ರವಾನಿಸುತ್ತಿದ್ದಾರೆ. ಕೆಲವರು ತಾವಾಗಿಯೇ ಸಂಘವನ್ನು ಘೋಷಿಸಿಕೊಂಡಿದ್ದಾರೆ. ಈ ಹಿಂದೆ ಅವರು ಆಡಳಿತ ಸಮಿತಿಯ ಸಭೆಯನ್ನು ಕೂಡಾ ಕರೆಯಲು ಆಸಕ್ತಿ ತೋರಿಸಿರಲಿಲ್ಲ ಎಂದರು. ನೂತನ ಅಧ್ಯಕ್ಷ ಜಗದೀಶ ರೈ ಮಾತನಾಡಿ, ‘ಭವಿಷ್ಯದಲ್ಲಿ…
ಬಂಟರ ಸಂಘದ ಮಾಜಿ ಅಧ್ಯಕ್ಷರು, ದಕ್ಷ ಆಡಳಿತಗಾರ, ಉತ್ತಮ ನಾಯಕತ್ವ ಹಾಗೂ ಸೇವಾ ಮನೋಭಾವನೆಯುಳ್ಳವರಾಗಿದ್ದ ಡಾ. ಎಂ. ತಿಮ್ಮಪ್ಪ ರೈ ಯವರು ದಿನಾಂಕ 21.02.2023ರಂದು ದೈವಾಧೀನರಾದರು. ಶ್ರೀಯುತರ ಗೌರವಾರ್ಥವಾಗಿ ನುಡಿನಮನ ಕಾರ್ಯಕ್ರಮವನ್ನು ದಿನಾಂಕ 03.03.2023 ಶುಕ್ರವಾರ ಸಂಜೆ 5.30 ಕ್ಕೆ ಸಂಘದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ಸಂಘದ ವತಿಯಿಂದ ಏರ್ಪಡಿಸಲಾಗಿತ್ತು. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಡಾ. ಎಂ. ತಿಮ್ಮಪ್ಪ ರೈ ಯವರ ಕುಟುಂಬ ವರ್ಗದವರು, ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಅಧ್ಯಕ್ಷರಾದ ಶ್ರೀ. ಡಿ. ಚಂದ್ರಹಾಸ ರೈಯವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಗೌರವ ಕಾರ್ಯದರ್ಶಿಗಳಾದ ಶ್ರೀ ಬಿ.ಆನಂದರಾಮ ಶೆಟ್ಟಿಯವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಮಾಜಿ ಅಧ್ಯಕ್ಷರುಗಳಾದ ಶ್ರೀ ಬಿ. ಎಲ್. ಎನ್. ಹೆಗ್ಡೆ, ಶ್ರೀ ಹರೀಶ್ ಕುಮಾರ್ ಶೆಟ್ಟಿ, ಶ್ರೀ ಭಗವಾನ್ ದಾಸ್ ರೈ, ಡಾ. ನರೇಶ್ ಶೆಟ್ಟಿ, ಶ್ರೀ ಆರ್. ಉಪೇಂದ್ರ ಶೆಟ್ಟಿ ಹಾಗೂ ಮಾಜಿ ಗೌರವ ಕಾರ್ಯದರ್ಶಿಗಳಾದ ಶ್ರೀ ಶ್ರೀಧರ್ ಹೆಗ್ಡೆಯವರು ನುಡಿನಮನ…
ಕುವೆಂಪು, ಶಿವರಾಮ ಕಾರಂತರು ನನ್ನ ಊರಿನ ಸೊಗಡಿಗೆ ಬರಹದ ರೂಪ ಕೊಟ್ಟಿದ್ದಾರೆ. ಅದೇ ರೀತಿ ರಾಜ್ಯದ ಎಲ್ಲ ಪ್ರದೇಶಗಳಲ್ಲಿಯೂ ಆಯಾಯ ಊರಿನ, ನೆಲದ ಸೊಗಡು ಬಿಂಬಿಸುವ ಕಥೆಗಾರರು ಮೂಡಿಬರಬೇಕು ಎಂದು “ಕಾಂತಾರ’ ಖ್ಯಾತಿಯ ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದರು. ಮಂಗಳೂರು ಸಾಹಿತ್ಯ ಉತ್ಸವ ದಲ್ಲಿ ರವಿವಾರ ಮಾತನಾಡಿದ ಅವರು, ಕಾಂತಾರ ದೈವರಾಧನೆಯ ಸಿನೆಮಾವಲ್ಲ. ಅಲ್ಲಿ ಹಿಂದುಳಿದ ವರ್ಗದ ಧ್ವನಿ, ಕಾಡಂಚಿನ ಮಕ್ಕಳ ಕಥೆಯಿದೆ. ಕಾಂತಾರದ ಗೆಲುವು ನಿರೀಕ್ಷೆ ಮಾಡಿರಲಿಲ್ಲ. ರೀಜನಲ್ ವಿಚಾರದಿಂದ ಗ್ಲೋಬಲ್ ಮಟ್ಟದಲ್ಲಿ ಕನೆಕ್ಟ್ ಆಗಿದ್ದೇವೆ ಎನ್ನುವುದಕ್ಕೆ ಈ ಸಿನೆಮಾ ಉದಾಹರಣೆ ಎಂದರು. ಮಂಗಳೂರು ಕನ್ನಡ ಭಾಷೆಯನ್ನು ಈ ಹಿಂದೆ ಸಿನೆಮಾದ ಹಾಸ್ಯದ ವಿಚಾರದಲ್ಲಿ ಮಾತ್ರ ಬಳಸಲಾಗುತ್ತಿತ್ತು. ಆದರೆ ನನ್ನ ಸಿನೆಮಾದಲ್ಲಿ ಕಾಸರಗೋಡಿನಿಂದ ಕುಂದಾಪುರದ ತನಕದ ಕನ್ನಡವನ್ನು ಬಳಕೆ ಮಾಡಿದ್ದೇನೆ. ಅದು ಮಣ್ಣಿನ ಸೊಗಡನ್ನು ಹೊಂದಿದೆ ಎಂದರು. ಬರಲಿದೆ ಕಾಂತಾರ 1 ಈಗ ಬಂದಿರುವುದು ಕಾಂತಾರ-2. ಇನ್ನು ಬರಬೇಕಾಗಿರುವುದು ಕಾಂತಾರ-1. ಇದಕ್ಕಾಗಿ ಸಂಶೋಧನೆ ಸಾಗುತ್ತಿದೆ. ದೊಡ್ಡ ಬಜೆಟ್ ಸಿನೆಮಾ,…
ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ಮುಖ್ಯ ರಸ್ತೆಯ ಶಿರ್ವ ಗ್ರಾ.ಪಂ. ವ್ಯಾಪ್ತಿಯ ಪಂಜಿಮಾರು ಬಸ್ ನಿಲ್ದಾಣದಿಂದ ರಾಬಿನ್ ಬಸ್ ನಿಲ್ದಾಣದವರೆಗಿನ ರಸ್ತೆಯಲ್ಲಿ ಹಲವಾರು ಅಪಘಾತಗಳು ನಡೆದು ಜೀವಬಲಿ ಪಡೆಯುತ್ತಿದ್ದು,ಅಪಘಾತ ವಲಯವಾಗಿ ಪರಿಣಮಿಸಿದೆ. ದಿನವೊಂದಕ್ಕೆ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.ವಾಹನ ದಟ್ಟಣೆಯಿರುವ ರಸ್ತೆಯ ರಾಬಿನ್ ಬಸ್ ನಿಲ್ದಾಣದ ತಿರುವು ಮತ್ತು ಪಂಜಿಮಾರು ಬಸ್ ನಿಲ್ದಾಣದಿಂದ ಮುಂದಕ್ಕೆ ಇರುವ ಕೋಡು-ಪಂಜಿಮಾರು ತಿರುವಿನಲ್ಲಿ ಆಗಾಗ್ಗೆ ರಸ್ತೆ ಅಪಘಾತಗಳು ನಡೆಯುತ್ತಿದ್ದು ವಾಹನ ಸವಾರರ ಜೀವಕ್ಕೆ ಸಂಚಕಾರವಿದೆ. ವೇಗವಾಗಿ ಬರುವ ವಾಹನಗಳು ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸುತ್ತಿರುತ್ತಿದೆ. ದ್ವಿಪಥ ರಸ್ತೆ ವಿಸ್ತರಣೆ ಯಾವಾಗ? ಕಟಪಾಡಿ-ಶಿರ್ವ 10.5 ಕಿ.ಮೀ. ರಾಜ್ಯ ಹೆದ್ದಾರಿಯ 8.5 ಕಿ.ಮೀ. ರಸ್ತೆ ಕಾಪು ಶಾಸಕರ ಅನುದಾನದ ಸುಮಾರು 7 ಕೋ.ರೂ. ವೆಚ್ಚದಲ್ಲಿ ಪಂಜಿಮಾರು ಫಲ್ಕೆಯವರೆಗೆ 2018ರಲ್ಲಿ ದ್ವಿಪಥಗೊಂಡು ವಿಸ್ತರಣೆಯಾಗಿತ್ತು. ಮಾಣಿಪ್ಪಾಡಿ ಫಲ್ಕೆಯಿಂದ ಶಿರ್ವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದವರೆಗಿನ ಸುಮಾರು 2 ಕಿ.ಮಿ. ರಸ್ತೆಯು ಅಂಕುಡೊಂಕಾಗಿದ್ದು 4 ವರ್ಷ…
ತುಳುನಾಡಿನ ಧಾರ್ಮಿಕ ಆಚರಣೆಗಳ ಹಿನ್ನೆಲೆಯಿರುವ 27ನೇ ವರ್ಷದ ಐತಿಹಾಸಿಕ ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಸಂಪ್ರದಾಯಬದ್ಧ ಜೋಡುಕರೆ ಕಂಬಳವು ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಿತು. ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕೇ¤ಸರ ಎಲ್ಲೂರುಗುತ್ತು ಪ್ರಫುಲ್ಲ ಶೆಟ್ಟಿ ದೀಪ ಬೆಳಗಿಸಿ ಜೋಡುಕರೆಗೆ ಕಾಯಿ ಒಡೆಯುವುದರ ಮೂಲಕ ಕಂಬಳವನ್ನು ಉದ್ಘಾಟಿಸಿದರು.ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಶಿರ್ವ ನಡಿಬೆಟ್ಟು ಕಂಬಳವು ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆದ ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು, ವಾದ್ಯಘೋಷಗಳೊಂದಿಗೆ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಯಿತು. ಹಗ್ಗ ಕಿರಿಯ ವಿಭಾಗದಲ್ಲಿ 30 ಜತೆ ಕೋಣಗಳು ಮತ್ತು ಸಬ್ಜೂನಿಯರ್ ವಿಭಾಗದಲ್ಲಿ 48 ಜತೆ ಒಟ್ಟು 78 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು. ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನಗೊಂಡಿತು.ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ,…