ಯುವ ಬಂಟರ ಸಂಘ ಮೂಡಬಿದರೆ ಇದರ ಯುವ ಬಂಟರ ಸಂಘ ಗ್ರಾಮ ಸಮಿತಿ ದರೆಗುಡ್ಡೆ ರಚನೆಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಧರೆಗುಡ್ಡೆ ನರನ್ಗೊಟ್ಟು ಗುತ್ತು ಗೋಪಾಲ್ ಶೆಟ್ಟಿಯವರ ಮನೆಯಲ್ಲಿ ಗ್ರಾಮ ಸಮಿತಿಯ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಮ್. ಮೋಹನ್ ಆಳ್ವ, ಯುವ ಮುಖಂಡರಾದ ಮಿಥುನ್ ರೈ, ಕೆಪಿ ಸುಚರಿತ ಶೆಟ್ಟಿ, ಯುವ ಬಂಟರ ಸಂಘ ಮೂಡಬಿದ್ರೆ ಇದರ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿ, ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಶೆಟ್ಟಿ, ಅಶೋಕ್ ಶೆಟ್ಟಿ ಬೇಲೋಟ್ಟು, ಆನಂದ ಶೆಟ್ಟಿ, ಗೋಪಾಲ ಶೆಟ್ಟಿ, ರವೀಂದ್ರ ಶೆಟ್ಟಿ ಹಾಗೂ ಯುವ ಬಂಟರ ಸಂಘ ಮೂಡಬಿದ್ರೆ ಇದರ ಪದಾಧಿಕಾರಿಗಳಾದ ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಸಂದೀಪ್ ಶೆಟ್ಟಿ ಬೆಳುವಾಯಿ, ಶ್ರೀನಿತ್ ಶೆಟ್ಟಿ, ಭರತ್ ಶೆಟ್ಟಿ ಬೆಳುವಾಯಿ, ಆದರ್ಶ ಶೆಟ್ಟಿ, ದೀಪಕ್ ಶೆಟ್ಟಿ, ಸುಕುಮಾರ್ ಶೆಟ್ಟಿ, ಶೃತಿ ಶೆಟ್ಟಿ, ಶ್ರೀಮತಿ ರಚನಾ ಶೆಟ್ಟಿ, ಶ್ರೀಮತಿ ರಶ್ಮಿ ಶೆಟ್ಟಿ, ಆದಿತ್ಯ ಶೆಟ್ಟಿ ಹಾಗೂ ಯುವ ಬಂಟರ ಸಂಘ ಗ್ರಾಮ ಸಮಿತಿ ಧರೆಗುಡ್ಡೆ ಇದರ ಪದಾಧಿಕಾರಿಗಳಾದ ಶ್ರೀಯಾ ಶೆಟ್ಟಿ, ಮೋಹನ್ ಶೆಟ್ಟಿ, ರಘು ಶೆಟ್ಟಿ, ಪ್ರತಿಕ್ಷ ಶೆಟ್ಟಿ, ದೀಕ್ಷಾ ಶೆಟ್ಟಿ, ದಿನೇಶ್ ಶೆಟ್ಟಿ, ಸುನಿಲ್ ಶೆಟ್ಟಿ, ಸುನಿಲ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ರಾಜೇಶ್ ಶೆಟ್ಟಿ, ಸಂಪತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಯುವ ಬಂಟರ ಸಂಘ ಗ್ರಾಮ ಸಮಿತಿ ದರೆಗುಡ್ಡೆ ಸಂಘದ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಸಂಘಕ್ಕೆ ಪ್ರತ್ಯೇಕವಾದ ಕಟ್ಟಡ ರಚನೆಯ ಕುರಿತು ಹಾಗೂ ಜಮೀನು ಖರೀದಿಯ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿದಾಗ ಡಾ.ಎಮ್. ಮೋಹನ್ ಆಳ್ವ ಅವರು ಇಂದಿನ ಸಮಾರಂಭದಲ್ಲಿ ತನ್ನ ವೈಯಕ್ತಿಕ ನೆಲೆಯಿಂದ ಸುಮಾರು ಒಂದು ಲಕ್ಷ ದೇಣಿಗೆಯನ್ನು ಜಮೀನು ಖರೀದಿಸಲು ನೀಡುವುದಾಗಿ ಭರವಸೆ ನೀಡಿದರು. ಜೊತೆಗೆ ಯುವ ನಾಯಕರಾದ ಮಿಥುನ್ ರೈ ಸಂಘಕ್ಕೆ ಜಮೀನು ಖರೀದಿ ಹಾಗೂ ಕಟ್ಟಡ ನಿರ್ಮಾಣ ಮತ್ತು ಅದರ ಲೋಕಾರ್ಪಣೆಯವರೆಗೂ ನಾನು ನಿಮ್ಮೊಂದಿಗೆ ಇದ್ದು ನನ್ನಿಂದ ನಿಮಗೆ ಯಾವ ರೀತಿಯ ಸಹಾಯ ಬೇಕು ಅದನ್ನು ಮಾಡಲು ನಾನು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸುಷ್ಮಾ ಶೆಟ್ಟಿ ಮಾಡಿದರು ಹಾಗೂ ವರದಿ ವಾಚನವನ್ನು ಶ್ರೀಯಾ ಶೆಟ್ಟಿ ಮತ್ತು ಸ್ವಾಗತ ಭಾಷಣವನ್ನು ಪ್ರತಿಕ್ಷ ಶೆಟ್ಟಿ, ಪ್ರಾಸ್ತಾವಿಕ ನುಡಿಯನ್ನು ಜಯಕುಮಾರ್ ಶೆಟ್ಟಿ ಹಾಗೂ ಧನ್ಯವಾದ ಸಮರ್ಪಣೆಯನ್ನು ದೀಕ್ಷಾ ಶೆಟ್ಟಿ ಅವರು ಸಲ್ಲಿಸಿದರು.