ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರ ಕಣಾಂಜಾರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆಯು ಮುಂಬಯಿಯ ತುಂಗಾ ಇಂಟರ್ ನ್ಯಾಷನಲ್ ಹೊಟೇಲಿನ ಸಭಾಂಗಣದಲ್ಲಿ ಜರುಗಿತು. ಅಧ್ಯಕ್ಷ ಸ್ಥಾನವನ್ನು ಡಾ. ವೈ. ಎಸ್. ಹೆಗ್ಡೆಯವರು ವಹಿಸಿದ್ದರು.
ವೇದಿಕೆಯಲ್ಲಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಸುಧೀರ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ವಿಕ್ರಂ ಹೆಗ್ಡೆ, ತುಂಗಾ ಇಂಟರ್ ನ್ಯಾಶನಲ್ ಹೊಟೇಲಿನ ಆಡಳಿತ ನಿರ್ದೇಶಕರಾದ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ದಂಪತಿಯವರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ. ಬಿ. ಎನ್. ಪೂಜಾರಿಯವರು, ಬಹುಭಾಷಾ ನಟಿ ಪೂಜಾ ಹೆಗ್ಡೆಯವರ ತಂದೆ ಶ್ರೀ ಮಂಜುನಾಥ ಹೆಗ್ಡೆ ಕಣಾಂಜಾರು, ಮಹಿಷಮರ್ದಿನಿ ದೇವಸ್ಥಾನದ ಶ್ರೀ ಪ್ರದೀಪ್ ಶೆಟ್ಟಿ, ಡಾ.ಅಂಬರೀಷ್ ಹೆಗ್ಡೆ ಇವರು ಆಸೀನರಾಗಿದ್ದರು.
ಕಾರ್ಯಕ್ರಮವನ್ನು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಹೆಗ್ಡೆ ಇವರು ನಡೆಸಿಕೊಟ್ಟರು. ಸಭೆಯಲ್ಲಿ ದಾನಿಗಳಾದ ತ್ರಿವೇಣಿ ಕನ್ಸಲ್ಟೆಂಟ್ ಇದರ ಮೇನೇಜಿಂಗ್ ಡೈರೆಕ್ಟರ್ ಶ್ರೀ ಎನ್.ಬಿ.ಶೆಟ್ಟಿ, ದಯಾನಂದ ಹೆಗ್ಡೆ ಪಣಿಯೂರು, ಜಿತೇಂದ್ರ ಶೆಟ್ಟಿ ಎರ್ಮಾಳು, ಭರತ್ ಶೆಟ್ಟಿ ಶಾಂತಿ ಬೆಟ್ಟು, ಉದಯ್ ಶೆಟ್ಟಿ ಪೆಲತ್ತೂರು, ಸುರೇಶ್ ಹೆಗ್ಡೆ ಕೊಟ್ರಬಾಕ್ಯಾರು, ಶಂಕರ್ ಪೂಜಾರಿ ದರ್ಖಾಸು, ಶಂಕರ್ ಕಂಚು ಪೂಜಾರಿ, ಅಲ್ಲದೇ ಇನ್ನೂ ಅನೇಕ ದಾನಿಗಳು ಹಾಗೂ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷರಾದ ಶ್ರೀ ಮಹೇಶ್ ಶೆಟ್ಟಿ, ಹರಿದಾಸ್ ಹೆಗ್ಡೆ ಅಲ್ಲದೇ ಶ್ರೀ ಸತೀಶ್ ಶೆಟ್ಟಿ ಕಣಾಂಜಾರು, ಪ್ರವೀಣ್ ಶೆಟ್ಟಿ ಕಣಾಂಜಾರು, ಸಂತೋಷ ಶೆಟ್ಟಿ, ಸುಮಂಗಲಾ ಕಣಾಂಜಾರು ಹಾಗೂ ಕಣಾಂಜಾರಿಗೆ ಸಂಬಂಧಪಟ್ಟ ೬ ಮಾಗಣೆಯ ಭಕ್ತಾಭಿಮಾನಿಗಳು ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಿದರು.