ಲಯನ್ ಪ್ರಥಮ ಉಪ ಜಿಲ್ಲಾ ಗವರ್ನರ್ ಗೌರವಾನ್ವಿತ ಲಯನ್ ನೇರಿ ಕರ್ನೇಲಿಯೋ MJF ಇವರು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಗೆ ಅಧೀಕೃತ ಭೇಟಿ ನೀಡಿದರು.
ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನ ದಲ್ಲಿ ಜರುಗಿದ ಕಾರ್ಯಕ್ರಮಕ್ಕೆ, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ, ಕಾರ್ಯದರ್ಶಿ ಲಯನ್ ಅಜಿತ್ ಕುಮಾರ್ ಶೆಟ್ಟಿ ಕೊತ್ತಾಡಿ, ಕೋಶಾಧಿಕಾರಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ & ಪದಾಧಿಕಾರಿಗಳು ಹಾಗೂ ಸದಸ್ಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡರು.
ಲಯನ್ ಬನ್ನಾಡಿ ಪ್ರಭಾಕರ ಶೆಟ್ಟಿ ಯವರ ಪ್ರಾರ್ಥನೆ ಮೂಲಕ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಕ್ಲಬ್ ನ ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ ಇವರು ಕ್ಲಬ್ ನ ಸೇವಾ ಚಟುವಟಿಕೆಗಳ ವರದಿ ಯನ್ನು ವಾಚಿಸಿದರು.
ಲಯನ್ ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ ಕೆ ಇವರು ಲಯನ್ ಫ್ಲಾಗ್ ಸೆಲ್ಯುಟೇಷನ್ ಹಾಗೂ ಲಯನ್ ಸುಭಾಸ್ ಶೆಟ್ಟಿ ಮಧುವನ ಇವರು ಲಯನ್ ಕೋಡ್ ಆಫ್ ಕಂಡಕ್ಟ್ ವಾಚಿಸಿದರು.
ಸಭಾ ಕಾರ್ಯಕ್ರಮದ ಸೇವಾ ಚಟುವಟಿಕೆಯ ಅಂಗವಾಗಿ ನೆರೆ ಪರಿಹಾರದ ಅಂಗವಾಗಿ ಜಿಲ್ಲಾ ಲಯನ್ಸ್ ನವರು ನೀಡಿದ 10 ಆಹಾರದ ಕಿಟ್ ಗಳನ್ನು ಮತ್ತು ಕಾಳಾವರ ವರದರಾಜ್ ಶೆಟ್ಟಿ ಯವರು ಕೋಟೇಶ್ವರ ಲಯನ್ಸ್ ಕ್ಲಬ್ ನ ಲಯನ್ ಜೆ.ಪಿ ಶೆಟ್ಟಿ ಯವರ ಮುಖಾಂತರ ನೀಡಿದ ರೂ. 10,000/= & ರೂ. 25,000/= ಚೆಕ್ಕುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಲಯನ್ ಪ್ರೊ|ಯಾಳಕ್ಲು ಚಂದ್ರಶೇಖರ್ ಶೆಟ್ಟಿ ಇವರು ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ನೇರಿ ಕರ್ನೇಲಿಯೋ ಇವರ ಪರಿಚಯ ವಾಚಿಸಿದರು.
ಗೌರವಾನ್ವಿತ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ನೇರಿ ಕರ್ನೇಲಿಯೋ ರವರು, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಉತ್ತಮ ಸದಸ್ಯರನ್ನು ಹೊಂದಿದ್ದು, ಅತೀ ಕಡಿಮೆ ಅವಧಿಯಲ್ಲಿ ಕ್ಲಬ್ ನ ಸೇವಾ ಚಟುವಟಿಕೆಯಿಂದ ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಕಲ್ಯಾಣಪುರ ಇದರ ಅಧ್ಯಕ್ಷರಾದ ಲಯನ್ ಜಾರ್ಜ್ ಡಿಸೋಜಾ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಕ್ಲಬ್ ನ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿ ಅತಿಥಿ, ಅಭ್ಯಾಗತರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ಕೋಶಾಧಿಕಾರಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಯವರು ವಂದಿಸಿದರು.