ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಹಿರಿಯ ವಿದ್ಯಾರ್ಥಿನಿ ಕ್ಯಾಪ್ಟನ್ ಶರಣ್ಯಾ ರಾವ್ ಎಚ್ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭೂಸೇನೆಯ ‘ನಾರಿಶಕ್ತಿ’ ತಂಡವನ್ನು ಕರ್ತವ್ಯ ಪಥ್ನಲ್ಲಿ
ಮುನ್ನಡೆಸಲಿದ್ದಾರೆ. ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುವ ಗೌರವವು ದೇಶದ ಅತ್ಯುನ್ನತ ಸೇವೆ ಸಲ್ಲಿಸುವ ಅವಕಾಶಗಳಲ್ಲಿ ಒಂದಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆಯ ಕುಕ್ಕಲೂರು ಗ್ರಾಮದ ಹರೀಶ್ ರಾವ್ ಮತ್ತು ಮೈತ್ರಿ ರಾವ್ ಪುತ್ರಿ ಶರಣ್ಯಾ ರಾವ್
2020-21ರಲ್ಲಿ ಆಳ್ವಾಸ್ನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದರು. ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದ ಅವರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ ಕ್ರೀಡಾ ದತ್ತು ಶಿಕ್ಷಣದ ವಿದ್ಯಾರ್ಥಿನಿಯಾಗಿದ್ದರು. ಮೂರು ವರ್ಷಗಳ ಹಿಂದೆ ಸೇನೆಗೆ ಆಯ್ಕೆಗೊಂಡ ಅವರು ಪ್ರಸ್ತುತ ಸೇನೆಯಲ್ಲಿ ಸೂಪರ್ನ್ಯೂಮರರಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾ.ಶರಣ್ಯಾ ರಾವ್ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ್ಯ ಡಾ ಕುರಿಯನ್ ಅಭಿನಂದಿಸಿದ್ದಾರೆ.