Author: admin

ಘರ್ಷಣೆಗಾಗಿ ಜಾತಿ ಸಂಘಟನೆ ಇರುವುದಲ್ಲ. ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆ ಎತ್ತುವ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಉದ್ದೇಶವನ್ನು ಹೊಂದಿದಾಗ ಮಾತ್ರ ಜಾತಿ ಸಂಘಟನೆಗೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಇಂದು ದಾನಿಗಳ ನೆರವಿನಿಂದ 10 ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ಸಮಾಜದ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ ಹೇಳಿದರು. ಅವರು ಹೆಬ್ರಿ ಶ್ರೀಮತಿ ಶೀಲಾ ಸುಭೋದ್ ಬಲ್ಲಾಳ ಬಂಟರ ಸಭಾಭವನದ ವಠಾರದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವೇದಿಕೆಯಲ್ಲಿ ನಲವತ್ತರ ಸಂಭ್ರಮ ಸಮಾವೇಶದ ಸಮಾರಂಭದಲ್ಲಿ ಬಂಟ ಸಾಧಕರನ್ನು ಸನ್ಮಾನಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹೆಬ್ರಿ ಬಂಟರ ಸಂಘದ ಗೌರವಾಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಜಿ.ಎಂ ಎಜ್ಯುಕೇಶನ್ ಟ್ರಸ್ಟ್ ಇದರ ಅಧ್ಯಕ್ಷ ಪ್ರಕಾಶ್ ಚಂದ್ರ ಶೆಟ್ಟಿ, ಡಿವೈಎಸ್ ಪಿ ರತ್ನಾಕರ್ ಶೆಟ್ಟಿ, ಯು.ಎಸ್.ಕೆ. ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಮಾರಳಿ ಪ್ರತಾಪ್ ಹೆಗ್ಡೆ, ಮುಖ್ಯ ಯೋಜನಾಧಿಕಾರಿ…

Read More

ಮೂಡುಬಿದಿರೆ: ಅನಿವರ‍್ಯ ವೆಚ್ಚಗಳಿಗೆ ಹಣ ವ್ಯಹಿಸಿ ಹಾಗೂ ಐಷರಾಮಿ ವೆಚ್ಚವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನೆಮ್ಮದಿಯ ಜೀವನ ಸಾಧ್ಯ. ಹಣವನ್ನು ಸಂಪಾದಿಸುವುದು ಕಲೆ, ಆದರೆ ಅದನ್ನು ಸಮರ್ಪಕವಾಗಿ ಬಳಸುವುದು ಮಹಾನ್ ಕಲೆ” ಎಂದು ಆರ್ಥಿಕ ಸಾಕ್ಷರತಾ ತಜ್ಞೆ ಸಪ್ನಾ ಶೆಣೈ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ -ಸಕ್ಷಮ ವೇದಿಕೆಯ ಅಡಿಯಲ್ಲಿ ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಹಾಗೂ ಮೂಡುಬಿದಿರೆ ಬಂಟ್ಸ್ ಮಹಿಳಾ ಸಂಘದ ಸಹಯೋಗದಲ್ಲಿ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಬುಧವಾರ ‘ಆರ್ಥಿಕ ಅರಿವಿನ ಮೂಲಕ ಮಹಿಳೆಯರ ಬಲಪಡಿಸುವಿಕೆ” ವಿಶೇಷ ಉಪನ್ಯಾಸ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ಹೆಚ್ಚಿನ ಸಮಯ ಹಣವನ್ನು ಸಂಪಾದಿಸಲು ಮತ್ತು ಖರ್ಚು ಮಾಡಲು ಕಳೆಯುತ್ತೇವೆ. ಬಹುತೇಕ ಜನರು “ಆದಾಯ – ಖರ್ಚು – ಉಳಿವು” ಎಂಬ ನೀತಿಯಂತೆ ಜೀವನ ಸಾಗಿಸುತ್ತಾರೆ. ಆದರೆ, ಇದು ಹೆಚ್ಚು ಆರ್ಥಿಕ ಒತ್ತಡವನ್ನು ತರಬಲ್ಲದು. ಬದಲಾಗಿ, “ಆದಾಯ – ಉಳಿವು – ಖರ್ಚು” ಎಂಬ ತತ್ವವನ್ನು ಅನುಸರಿಸಿದರೆ ಸುಖ ಮತ್ತು ಯಶಸ್ಸಿನ ದಾರಿ ನಮ್ಮದಾಗತ್ತದೆ ಎಂದರು.…

Read More

ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ಮುಂದಿನ ೫ ವರ್ಷಗಳ ಅವಧಿಗೆ ಆಡಳಿತ ಮಂಡಳಿ ಚುನಾವಣೆಯು ಫೆಬ್ರವರಿ ೦೨, ೨೦೨೫ರ ಭಾನುವಾರದಂದು ಶ್ರೀ ರಾಮಕೃಷ್ಣ ವಿದ್ಯಾಲಯ, ಬಂಟ್ಸ್ ಹಾಸ್ಟೆಲ್, ಮಂಗಳೂರಿನಲ್ಲಿ ಜರಗಿತು. ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಸೇರಿದಂತೆ ಅವರ ನೇತೃತ್ವದ ಸಾಮಾನ್ಯ ಸ್ಥಾನದ ಎಲ್ಲಾ ೧೩ ಅಭ್ಯರ್ಥಿಗಳಾದ ಸರ್ವಶ್ರೀ ಕೆ. ಸೀತಾರಾಮ ರೈ ಸವಣೂರು, ಡಾ| ಕೆ. ಸುಭಾಶ್ಚಂದ್ರ ಶೆಟ್ಟಿ, ಪಿ. ಶಿವರಾಮ ಅಡ್ಯಂತಾಯ, ಸಿಎ ಎಚ್. ಆರ್. ಶೆಟ್ಟಿ, ವಿಠಲ ಪಿ. ಶೆಟ್ಟಿ, ಯಂ. ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ರವೀಂದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ್ ಆಳ್ವ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾೈಕ್ ಮತ್ತು ಡಾ. ಬಿ. ಸಂಜೀವ ರೈ ಯವರುಗಳು ಬಹುಮತದಿಂದ ಗೆಲುವು ಸಾಧಿಸಿರುವರು ಹಾಗೂ…

Read More

ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲೊಂದಾದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಯ ಚುನಾವಣೆಯು ಇತ್ತೀಚೆಗೆ ನಡೆದಿದ್ದು, ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಡೆದು, ಮುಂದಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಪ್ರಭಾಕರ ಪ್ರಭು ಅವರು ಪುನರಾಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಸಂದೇಶ್ ಶೆಟ್ಟಿ ಪೊಡುಂಬ ಅವರು ಆಯ್ಕೆಗೊಂಡಿದ್ದಾರೆ. ಸಂಘದ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯು ನಡೆಯಿತು. ಚುನಾವಣಾಧಿಕಾರಿಯಾಗಿದ್ದ ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸೂಪರಿಡೆಂಟ್ ಎ.ಗೋಪಾಲ್ ಅವರು ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಂಘದ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಈ ಸಂಧರ್ಭದಲ್ಲಿ ನೂತನ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದ ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ದಿನೇಶ್ ಪೂಜಾರಿ, ಎ.ಶಿವಗೌಡ, ಸತೀಶ್ ಪೂಜಾರಿ ಅಲಕ್ಕೆ, ಪುಪ್ಪಲತಾ ಎಸ್ ಆರ್., ಮಂದಾರತಿ ಶೆಟ್ಟಿ, ವೀರಪ್ಪ ಪರವ, ಜಾರಪ್ಪ ನಾಯ್ಕ್ ಹಾಗೂ ವಿಶ್ವನಾಥ ಶೆಟ್ಟಿಗಾರ್ ಉಪಸ್ಥಿತರಿದ್ದರು.

Read More

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಇದರ 2025-26 ನೇ ಸಾಲಿನಿಂದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಬಲ್ಲಾಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಯೂನಿಯನ್ ನಿರ್ದೇಶಕ ಹಾಗೂ ಶಾಸಕ ಯಶ್ಪಾಲ್ ಎ ಸುವರ್ಣ, ನಿರ್ದೇಶಕರುಗಳಾದ ಎಚ್. ಗಂಗಾಧರ ಶೆಟ್ಟಿ, ಎನ್.ಮಂಜಯ್ಯ ಶೆಟ್ಟಿ, ಬಿ.ಕರುಣಾಕರ ಶೆಟ್ಡಿ, ಪ್ರಸಾದ್ ಎಸ್.ಶೆಟ್ಟಿ, ಸುಧೀರ್ ವೈ., ಬಿ.ಪ್ರದೀಪ್ ಯಡಿಯಾಳ್, ಅನಿಲ್ ಎಸ್.ಪೂಜಾರಿ, ಅಲೆವೂರು ಹರೀಶ್ ಕಿಣಿ, ಬಿ.ಅರುಣ್ ಕುಮಾರ್ ಹೆಗ್ಡೆ, ಶ್ರೀಧರ್ ಪಿ.ಎಸ್., ಸಹಕಾರ ಸಂಘಗಳ ಉಪ ನಿಬಂಧಕ ಕೆ.ಆರ್.ಲಾವಣ್ಯ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು.ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಕನ್ಯ ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ…

Read More

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ಪರಮ ಭಕ್ತರೂ, ಪಟ್ಲ ಸತೀಶ್ ಶೆಟ್ಟಿಯವರ ಕಟ್ಟಾ ಅಭಿಮಾನಿ ಶ್ರೀ ಶಾರದಾ ಪ್ರಸಾದ್ ರವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನಳಿನಿ ಪ್ರಸಾದ್ ರವರು ಪಟ್ಲ ಸತೀಶ್ ಶೆಟ್ಟಿಯವರ ಗೃಹಪ್ರವೇಶಕ್ಕೆ ಆಗಮಿಸಿ ಅವರು ಮಾಡುವ ಸತ್ಕಾರ್ಯಗಳನ್ನು ಮೆಚ್ಚಿ ಗೃಹಪ್ರವೇಶದ ಶುಭದಿನವೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೆ ಒಂದು ಕೋಟಿ ಇಪ್ಪತ್ತೈದು ಲಕ್ಷ ಮೊತ್ತದ ದೇಣಿಗೆಯನ್ನು ನೀಡಿ ಆಶೀರ್ವದಿಸಿದರು. ಸಂಜೆ ನಡೆದ ಪಾವಂಜೆ ಮೇಳದ ಶ್ರೀ ದೇವಿಮಹಾತ್ಮೆ ಯಕ್ಷಗಾನದ ಸಂದರ್ಭದಲ್ಲಿ ಶ್ರೀ ಶಾರದಾ ಪ್ರಸಾದ್ ಹಾಗೂ ಶ್ರೀಮತಿ ನಳಿನಿ ಶಾರದಾ ಪ್ರಸಾದ್ ದಂಪತಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಆಡಳಿತ ಮೊಕ್ತೇಸರರು ಶಶೀಂದ್ರ ಕುಮಾರ್, ಪಟ್ಲ ಫೌಂಡೇಶನ್ ಪದಾಧಿಕಾರಿಗಳಾದ ಪಟ್ಲ ಗುತ್ತು ಮಹಾಬಲ ಶೆಟ್ಟಿ, ಸಿಎ ಸುದೇಶ್ ಕುಮಾರ್ ರೈ, ಸಿಎ ದಿವಾಕರ್ ರಾವ್, ಡಾ. ಸತೀಶ್ ಭಂಡಾರಿ, ಪ್ರದೀಪ್ ಆಳ್ವ ಕದ್ರಿ, ಲಕ್ಷ್ಮೀಶ್ ಭಂಡಾರಿ (ಭಂಡಾರಿ ಬಿಲ್ಡರ್ಸ್)…

Read More

ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ನ 2025-26 ನೇ ಸಾಲಿನ ನಿಯೋಜಿತ ಅಧ್ಯಕ್ಷರಾಗಿ ಮಂಗಳೂರಿನ ಡಾ. ಬಿ. ಸಚ್ಚಿದಾನಂದ ರೈಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.‌ ಬೆಂಗಳೂರಿನಲ್ಲಿ ಫೆಬ್ರವರಿ 2 ರಂದು ನಡೆದ ಅಸೋಸಿಯೇಷನ್ ನ 49ನೇ ವಾರ್ಷಿಕ ಸಮಾವೇಶದಲ್ಲಿ ಈ ಆಯ್ಕೆ ನಡೆಯಿತು. ಡಾ.ಸಚ್ಚಿದಾನಂದ ರೈ ಅವರು ಕೆನರಾ ಆರ್ಥೋಪೆಡಿಕ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನ ಮಂಗಳೂರು ಘಟಕದ ಅಧ್ಯಕ್ಷರಾಗಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ.

Read More

‘ಮನೆಗೊಂದು ಗ್ರಂಥಾಲಯ’ ಪರಿಕಲ್ಪನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಮನೆಯಲ್ಲಿ ಪುಸ್ತಕಾಲಯವೊಂದನ್ನು ತೆರೆದಿದೆ. ನಾಡಿನ ದೊರೆಯ ಮನೆಯಲ್ಲಿ ಈಗ ಕನ್ನಡದ 500 ಪುಸ್ತಕಗಳು ತುಂಬಿವೆ. ತುಳು ಸಾಹಿತ್ಯ ಅಕಾಡೆಮಿ ಕೂಡಾ ವಾಚನಾಭಿರುಚಿಯನ್ನು ವೃದ್ಧಿಸುವ ಸದಾಶಯದಿಂದ ಇಂಥದ್ದೇ ಒಂದು ಕಾರ್ಯಕ್ರಮವನ್ನು ಇತ್ತೀಚಿಗೆ ಆರಂಭಿಸಿದಾಗ ಉಪಸ್ಥಿತರಿದ್ದ ಪುತ್ತೂರಿನ ಶಾಸಕರು ಹತ್ತು ಸಾವಿರ ಮೊತ್ತದ ತುಳು ಪುಸ್ತಕವನ್ನು ಖರೀದಿಸಿದ್ದು ದೊಡ್ಡ ಸುದ್ದಿಯಾಯಿತು. ತಮ್ಮ ಮನೆಯೊಳಗಡೆಯೇ ಕನ್ನಡ ಪುಸ್ತಕಗಳನ್ನು ಎದೆಗೇರಿಸಿ ವಾಚನಾಲಯವನ್ನು ಉದ್ಘಾಟಿಸಿದ್ದ ಈ ನಾಡಿನ ಮುಖ್ಯಮಂತ್ರಿಗಳು ಒಂದು ವಿಷಯವನ್ನು ಗಮನಿಸಬೇಕು. ಸಾಹಿತ್ಯ ಸಂಸ್ಕೃತಿ ವ್ಯಾಕರಣ ಕಲೆ ನೆಲಪ್ರೀತಿಯನ್ನು ಆಗಾಗ ಬಹಿರಂಗವಾಗಿಯೇ ವ್ಯಕ್ತಪಡಿಸುವ ಮತ್ತು ಆ ಪರವಾಗಿ ಇದ್ದೇನೆ ಎಂದು ತೋರಿಸಿಕೊಳ್ಳುವ ಮುಖ್ಯಮಂತ್ರಿಗಳು ಕಳೆದ ಮೂರು ವರ್ಷಗಳಿಂದ ಪುಸ್ತಕ ಖರೀದಿ ಯಾಕೆ ಸ್ಥಗಿತಗೊಂಡಿದೆ ಎಂಬ ವಿಷಯವನ್ನು ಪ್ರಾಸ್ತಾಪಿಸಿ, ಬೆಂಬಲವಾಗಿ ನಿಲ್ಲುವ ಭರವಸೆ ನೀಡಬೇಕಾಗಿತ್ತು. ಇವು ಯಾವುದನ್ನೂ ಮುಖ್ಯಮಂತ್ರಿಗಳು ಆ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದಂತಿಲ್ಲ. ಯಾವ ಪತ್ರಿಕೆಗಳಲ್ಲೂ ಇಂಥ ಭರವಸೆ ವರದಿಯಾದುದನ್ನು ನಾನು ಕಂಡಿಲ್ಲ. ಕನ್ನಡ ಪುಸ್ತಕೋದ್ಯಮವನ್ನು…

Read More

ಕರ್ಮಾಯಿಗುತ್ತು ದಿವಂಗತ ಕೆ. ಕರಿಯಪ್ಪ ರೈ ಅವರ ಪತ್ನಿ, ಮಂಗಳೂರಿನ ಖ್ಯಾತ ನ್ಯಾಯವಾದಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಕೆ. ದಯಾನಂದ ರೈ ಅವರ ಮಾತೃಶ್ರೀ ಆದೂರು ಏಳ್ನಾಡುಗುತ್ತು ಲಲಿತಾ ರೈಯವರು ಅನಾರೋಗ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪುತ್ರರಾದ ದಯಾನಂದ ರೈ ಸಹಿತ ಕಡಬ ಕಾಂಗ್ರೆಸ್ ಮುಖಂಡ ಕೆ. ವಿಜಯಕುಮಾರ್ ರೈ, ಮಾಜಿ ಸೈನಿಕ ಕೆ. ಸನತ್ ಕುಮಾರ್ ರೈ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಇವರು ಸಾಮಾಜಿಕ ಕಾರ್ಯಕರ್ತೆಯಾಗಿ ಪುತ್ತೂರು ಆಸುಪಾಸಿನಲ್ಲಿ ಜನಾನುರಾಗಿಯಾಗಿದ್ದರು.

Read More

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ ಫೆಬ್ರವರಿ 13 ರಂದು ನಡೆಯಲಿದೆ. ಫೆ.9 ರಂದು ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಬಾರಾಳಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಹೋಮ, ರಾತ್ರಿ 8 ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ವಿಘ್ನೇಶ್ವರ ಪ್ರಾರ್ಥನೆ, ರಂಗ ಪೂಜೆ (ದೊಡ್ಡ ಮನೆಯವರಿಂದ ಕಟ್ಟುಕಟ್ಟಳೆ) ಫೆಬ್ರವರಿ 10 ಸೋಮವಾರ ರಾತ್ರಿ ಎಂಟು ಗಂಟೆಯಿಂದ ವಿಶೇಷ ಪೂಜೆ, ರಂಗ ಪೂಜೆ (ಹೆಗ್ಗುಂಜೆ ದೊಡ್ಡ ಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆಪೂಜೆ.ಫೆ.11 ಮಂಗಳವಾರ ರಾತ್ರಿ 8 ಗಂಟೆಗೆ ರಂಗ ಪೂಜೆ (ಹೆಗ್ಗುಂಜೆ ಹೊಸ ಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆ ಪೂಜೆ, ವಸಂತ ಪೂಜೆ ನಡೆಯಲಿದೆ. ಫೆಬ್ರವರಿ 12 ಬುಧವಾರ ಕುಂಭ ಸಂಕ್ರಮಣ, ರಾತ್ರಿ 9ಗಂಟೆಯಿಂದ ಕೆಂಡಸೇವೆ, ರಾತ್ರಿ 3 ಗಂಟೆಯಿಂದ ಹಾಲಿಟ್ಟು ಸೇವೆ, ನಾಗದರ್ಶನ, ರಾತ್ರಿ 4 ರಿಂದ ಹಿರೇ ರಂಗಪೂಜೆ, ಬಲಿ ಉತ್ಸವ, ದಕ್ಕೆ ಬಲಿ ನಡೆಯಲಿದೆ. ಫೆ. 13 ಗುರುವಾರ ಮಧ್ಯಾಹ್ನ 12:30ಕ್ಕೆ ಶ್ರೀ ಮನ್ಮಹಾರಥಾರೋಹಣ ನಡೆಯಲಿದೆ. ಸಂಜೆ ಆರು ಗಂಟೆಗೆ ರಥೋತ್ಸವ, ರಾತ್ರಿ…

Read More