ಗಣಿತನಗರ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ‘ಮೌಲ್ಯಸುಧಾ’ ಜರುಗುತ್ತಾ ಬರುತ್ತಿದೆ. ಡಿಸೆಂಬರ್ ತಿಂಗಳ ಮೌಲ್ಯಸುಧಾ ಮಾಲಿಕೆ-೪೩ ತಾರೀಕು ೧೮, ಗುರುವಾರ ಸಂಜೆ ೬ ಗಂಟೆಗೆ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಯಾಗಿ ನಾಡಿನ ಪ್ರಸಿದ್ಧ ಮೈಸೂರಿನ ಜೆ. ಎಸ್. ಎಸ್ ಸಂಸ್ಥೆಗಳು ಸುತ್ತೂರು ಇಲ್ಲಿನ ಸಂಯೋಜನಾಧಿಕಾರಿ, ಲೇಖಕರು ಹಾಗೂ ವಾಗ್ಮಿಗಳು ಆಗಿರುವ ಶ್ರೀ ಜಿ. ಎಲ್. ತ್ರಿಪುರಾಂತಕರವರು ಆಗಮಿಸಲಿದ್ದು ‘ಆಕಾಂಕ್ಷೆಗಳು ಮತ್ತು ಕನಸುಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರಿಗೆ ಬಾಗವಹಿಸಲು ಮುಕ್ತ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















































































































