Author: admin
ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನ ಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ. ಹಸಿ ತೆಂಗಿನಕಾಯಿಯಲ್ಲಿ ತಾಮ್ರ, ಸೆಲೆನಿಯಂ, ಪೊಟ್ಯಾಸಿಯಂ, ಮೆಗ್ನೀಸಿಯಂ, ಸತು, ಫೋಲೇಟ್, ವಿಟಮಿನ್ ಸಿ, ಥಯಾಮಿನ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಫಂಗಲ್ ಗುಣಗಳನ್ನು ಸಹ ಹೊಂದಿದೆ. ಹಾಗಾದರೆ ಬೆಳಿಗ್ಗೆ ಎದ್ದು ಒಂಚೂರು ಹಸಿ ಕೊಬ್ಬರಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಅಂತ ತಿಳಿಯೋಣ. ತೆಂಗಿನಕಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು ಮಲ ಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಅನಾರೋಗ್ಯವನ್ನು ತಡೆಯಲು ಸಹಾಯ ಮಾಡುತ್ತದೆ. ಪದೇ ಪದೇ ವಾಂತಿ ಸಮಸ್ಯೆ ಕಾಡುತ್ತಿದ್ದರೆ ಕೊಬ್ಬರಿಯನ್ನು ಬಾಯಿಯಲ್ಲಿ ಇಟ್ಟುಕೊಂಡು ಸ್ವಲ್ಪ ಹೊತ್ತು ಜಗಿಯಿರಿ. ಇದರಿಂದ ಪ್ರಯೋಜನವಾಗಲಿದೆ. ತೆಂಗಿನಕಾಯಿಯಲ್ಲಿ ಕಂಡು ಬರುವ ಪ್ರೋಟೀನ್ ಮತ್ತು ಕಬ್ಬಿಣ, ಕೂದಲಿನ ಬೆಳವಣಿಗೆಯನ್ನು ಬೆಂಬಲಿಸಿ ಕೂದಲಿಗೆ ಹೊಳಪು ನೀಡುತ್ತದೆ. ಇದರಿಂದ ಕೂದಲು ತೆಳುವಾಗುವುದನ್ನು ಮತ್ತು ಕೂದಲು ಉದುರುವುದನ್ನು ತಡೆಯಬಹುದು. ಹಸಿ ತೆಂಗಿನಕಾಯಿಯ ಲಾರಿಕ್…
ವಿದ್ಯಾಗಿರಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಂಗಳೂರು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಚಾಂಪಿಯನ್ ಆಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಶ್ರಯದಲ್ಲಿ ಮಂಗಳೂರಿನ ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಂದ್ಯಾಟ ನಡೆದಿದ್ದು, ಫೈನಲ್ ನಲ್ಲಿ ಮಂಗಳೂರಿನ ಕರಾವಳಿ ಫಾರ್ಮಸಿ ಕಾಲೇಜಿನ ವಿರುದ್ಧ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅಲೈಡ್ ಹೆಲ್ತ್ ಸೈನ್ಸಸ್ 2-0 ಅಂತರದಿಂದ ಗೆಲುವು ಸಾಧಿಸಿದೆ. ಅತ್ಯುತ್ತಮ ಹೊಡೆತಗಾರ ಪ್ರಶಸ್ತಿಗೆ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನ ವಿದ್ಯಾರ್ಥಿ ರಕ್ಷಿತ್ ಎಸ್. ಕೆ ಭಾಜನರಾಗಿದ್ದಾರೆ . ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಲಿರುವ ಅಂತರ ವಲಯ ಟೂರ್ನಿಗೆ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಅರ್ಹತೆಯನ್ನು ಪಡೆದಿದೆ.
ಅಮೇರಿಕ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜೊತೆ ಮಂಗಳವಾರ ರಾತ್ರಿ ತಾಯ್ನಾಡಿಗೆ ಮರಳಿದ್ದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತ ಕೋರಿದರು. ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೇರಿಕ ದೇಶದ ಬೇರೆ ಬೇರೆ ತಾಣಗಳಲ್ಲಿ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದ್ದಾರೆ. ಈ ವೇಳೆ ತಮ್ಮ ಅಮೇರಿಕ ಪ್ರವಾಸದ ಕಥನವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡ ಅವರು, “ವಿದೇಶಗಳಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ” ಎಂದರು. “ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ.…
ಜೆಸಿಐ ಉಪ್ಪುಂದದ 2023 ರ ಅಧ್ಯಕ್ಷ, ತನ್ನ 100 ನೇ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತರಾದ ಹರೆಕಳ ಹಾಜಬ್ಬನವರನ್ನು ಹಾಗೂ ವೃಕ್ಷ ಮಾತೆ ತುಳಸಿ ಗೌಡ ಅವರನ್ನು ಕರೆಸಿ ಗೌರವಿಸುವ ಮೂಲಕ ಕಳೆದ ವರ್ಷದ ಜೇಸಿ ವಲಯದ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಪ್ರಶಸ್ತಿ ಪುರಸ್ಕೃತ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಅವರಿಗೆ ಜೆಸಿ ಸಂಸ್ಥೆಗೆ ಹಾಗೂ ಇತರ ಸಂಘ ಸಂಸ್ಥೆಗಳಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ, ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಅವರ ಗುಣಗಾನ ಮಾಡುತ್ತಾ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಇವರ ಸಾಧನೆ ಖಂಡಿತವಾಗಿಯೂ ಜೇಸಿ ಬುಕ್ ಆಫ್ ರೆಕಾರ್ಡ್. ಸಂಘ ಸಂಸ್ಥೆಗಳ ಮೂಲಕ ಸಂಘಟನಾ ಕಾರಣಕ್ಕಾಗಿ ಬೆಳೆದು ಅನೇಕ ಸಂಸ್ಥೆಗಳಿಗೆ ತನ್ನದೇ ಆದ ವಿಶೇಷವಾದ ಕೊಡುಗೆಯನ್ನು ನೀಡುತ್ತಾ, ಅದರ ಏಳಿಗೆಗೆ ಶ್ರಮಿಸಿದವರು. ಅವರಿಗೆ ಕಮಲ ಪತ್ರ ಪ್ರಶಸ್ತಿ ನೀಡುತ್ತಿರುವುದು ಪ್ರಸ್ತುತವಾಗಿದೆ ಎಂದರು. ಜೇಸಿ ಅಧ್ಯಕ್ಷ ಮಂಜುನಾಥ್ ದೇವಾಡಿಗ ಸಭಾಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗೋವಿಂದ ಬಾಬು ಪೂಜಾರಿ ಕೊಲ್ಲೂರು…
“ಮೇರು ಸಾಹಿತಿ, ಕಾದಂಬರಿಕಾರರಾದ ಡಾ. ಶಿವರಾಮ ಕಾರಂತ, ಎಸ್ ಎಲ್ ಭೈರಪ್ಪ ಮತ್ತು ನಾಟಕಕಾರರಾದ ಗಿರೀಶ್ ಕಾರ್ನಾಡ್ ಮೊದಲಾದವರ ಸಾಹಿತ್ಯ ತನ್ನನ್ನು ಬರವಣಿಗೆಯತ್ತ ಸೆಳೆಯಿತು. ಶಾಲಾ ದಿನಗಳಲ್ಲಿ ಸಣ್ಣ ಕತೆಗಳನ್ನು ಬರೆಯಲು ಆರಂಭಿಸಿ ನನ್ನದೇ ಆದ ಶೈಲಿಯನ್ನು ರೂಢಿಸಿಕೊಂಡಿರುವುದರಿಂದ ಓದುಗರನ್ನು ಸೆಳೆಯಲು ಸಾಧ್ಯವಾಯಿತು” ಎಂದು ಹಿರಿಯ ಕತೆಗಾರ ರಾಜೇಂದ್ರ ಬಿ ಶೆಟ್ಟಿ ಅವರು ನುಡಿದರು. ಅವರು ಸೆಪ್ಟೆಂಬರ್ 21ರ ಶನಿವಾರದಂದು ಕಲೀನಾ ಕ್ಯಾಂಪಸ್ ನ ಕನ್ನಡ ವಿಭಾಗಕ್ಕೆ ಭೇಟಿ ನೀಡಿ ಸಾಹಿತ್ಯ ಸಂವಾದದಲ್ಲಿ ಪಾಲ್ಗೊಂಡು ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಸಾಹಿತ್ಯ ಪಯಣದ ಹೆಜ್ಜೆ ಗುರುತುಗಳ ಕುರಿತಾಗಿ ಹಲವಾರು ವಿಷಯಗಳನ್ನು ಹಂಚಿಕೊಂಡರು. “ಅಧ್ಯಾಪಕರ ಪ್ರೋತ್ಸಾಹ ಕಥನ ಸಾಹಿತ್ಯದಲ್ಲಿ ಮುಂದುವರೆಯಲು ಕಾರಣೀಭೂತವಾಯಿತು. ಇಂಜಿನಿಯರ್ ವೃತ್ತಿಯೊಂದಿಗೆ ತನ್ನ ಮೆಚ್ಚಿನ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡು ಸಾಹಿತ್ಯದ ಸೇವೆ ಮಾಡಲು ಸಂತೋಷವೆನಿಸುತ್ತಿದೆ” ಎಂದು ಅವರು ನುಡಿದರು. ಸಾಹಿತ್ಯದ ಜೊತೆಗೆ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಥನ ಸಾಹಿತ್ಯದಲ್ಲಿ ತಮ್ಮ ವಿಭಿನ್ನ ಶೈಲಿಗೆ ಹೆಸರಾಗಿರುವ ರಾಜೇಂದ್ರ ಶೆಟ್ಟಿ ಅವರಿಗೆ ವಿಭಾಗದ ಮುಖ್ಯಸ್ಥ…
ಬಂಟರ ಚಾವಡಿ ಪರ್ಕಳ (ರಿ) ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 29 ರಂದು ಆದಿತ್ಯವಾರ ಪರ್ಕಳದ ಸುರಕ್ಷಾ ಸಭಾಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಚಾವಡಿಯ ಅಧ್ಯಕ್ಷರಾದ ಅರುಣಾಚಲ ಹೆಗ್ಡೆಯವರು ವಹಿಸಿದ್ದರು. ಸಂಘದ ಗೌರಾವಾಧ್ಯಕ್ಷರಾದ ಜಯರಾಜ್ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷರಾದ ವಸಂತ ಶೆಟ್ಟಿ ಹಿರೇಬೆಟ್ಟು, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಕೋಶಾಧಿಕಾರಿ ವಸಂತ ಶೆಟ್ಟಿ ಚೆನ್ನಿಬೆಟ್ಟು, ಸಂಘಟನಾ ಕಾರ್ಯದರ್ಶಿ ದಿವಾಕರ ಶೆಟ್ಟಿ ಹೆರ್ಗ ವೇದಿಕೆಯಲ್ಲಿ ಆಸೀನರಾಗಿದ್ದರು. ವಸಂತ ಶೆಟ್ಟಿ ಚೆನ್ನಿಬೆಟ್ಟು ಪ್ರಾರ್ಥನೆ ಮಾಡಿದರು. ಅಧ್ಯಕ್ಷರಾದ ಅರುಣಾಚಲ ಹೆಗ್ಡೆಯವರು ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆಯವರು ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಮಾಜಿ ಕಾರ್ಯಾಧ್ಯಕ್ಷ ದಿನಕರ ಶೆಟ್ಟಿಯವರು ಸಂಘದ ಧ್ಯೇಯೋದ್ದೇಶದ ಬಗ್ಗೆ ಪ್ರಾಸ್ಥಾವಿಕವಾಗಿ ಮಾತಾಡಿದರು. ಕೋಶಾಧಿಕಾರಿ ವಸಂತ ಶೆಟ್ಟಿ ಚೆನ್ನಿಬೆಟ್ಟು 2023-24ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ಮತ್ತು ಅದಕ್ಕೆ ಸಭೆಯ ಸದಸ್ಯರ ಅನುಮೋದನೆಯನ್ನು ಪಡೆದುಕೊಂಡರು. ಹಾಜರಿದ್ದ ಸದಸ್ಯರ ಅನುಮತಿ ಮೇರೆಗೆ 2024-25ನೇ…
ವಿದ್ಯಾಗಿರಿ : ಕಡ್ಡಾಯ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಜಾರಿ ಹೆಣ್ಣುಮಕ್ಕಳಿಗೆ ಶಾಲೆ ಆರಂಭ, ಶೇ100 ಪರಿಶುದ್ಧ ಶ್ರೀಗಂಧದ ಎಣ್ಣೆಯ ಸಾಬೂನು (ಮೈಸೂರು ಸ್ಯಾಂಡಲ್ ಸೋಪ್) ಉತ್ಪಾದನೆ, ಭಾರತದ ಮೊತ್ತಮೊದಲ ಚುನಾವಣೆ, ಮೊದಲ ವಿಮಾನ ನಿರ್ಮಾಣ, ಕುಟುಂಬ ಕಲ್ಯಾಣ ಯೋಜನೆ ಜಾರಿಗೊಳಿಸಿದ ಹೆಗ್ಗಳಿಕೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ಸಿವಿಲ್ ಎಂಜಿನಿಯರ್, ಮೆಟ್ರೋ ಪೆÇಲಿಟನ್ ಇತಿಹಾಸಕಾರ ಮತ್ತು ಸೋಶಿಯಲ್ ಮೀಡಿಯಾ ಇನ್‍ಫ್ಲ್ಯೂವೆನ್ಸರ್ ಧರ್ಮೇಂದ್ರ ಕುಮಾರ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ರೋಸ್ಟ್ರಮ್- ವಾಗ್ಮಿಗಳ ವೇದಿಕೆ’ ವತಿಯಿಂದ ಮಂಗಳವಾರ ನಡೆದ ‘ಕರ್ನಾಟಕದ ಇತಿಹಾಸ’ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವಿದ್ಯೆಗೆ ನೀಡಿದ ಪ್ರಾಮುಖ್ಯತೆ, ಪರಿಚಯಿಸಿದ ಲಸಿಕೆ, ಕುರುಡರಿಗಾಗಿ ಬ್ರೈಲ್ ಲಿಪಿ ತಂದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದರು. ಕನ್ನಂಬಾಡಿ ಕಟ್ಟೆಯ ನಿರ್ಮಾಣ, ಮಹಾಯುದ್ಧದ ಖರ್ಚು ಭರಿಸಿರುವುದು, ಸ್ವಾತಂತ್ರ್ಯದತ್ತ ಇಟ್ಟ ಹೆಜ್ಜೆ, ಸ್ವತಂತ್ರ ಭಾರತದಲ್ಲಿ ಸರ್ಕಾರ ರಚನೆಗೆ 30…
“ತುಳುನಾಡು ಮತ್ತು ತುಳುನಾಡಿನಾದ್ಯಂತ ಆರಾಧನೆಗೊಳ್ಳುತ್ತಿರುವ ಸಾರತ್ತೊಂಜಿ ದೈವಗಳು ಹಾಗೂ ಅರುವತ್ತಾರು ಕೋಟಿ ನಾಗಗಳು ಬೆರ್ಮೆರ್ ನ ಸೃಷ್ಟಿ” ಎಂಬುದು ತುಳುನಾಡಿನ ಮೂಲ ಧರ್ಮ ನಾಗ ಮೂಲ ಪರಂಪರೆಯ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಮೂರು ಮೂಲ ಧಾರ್ಮಿಕ ಆಚರಣೆಗಳಾದ ಬೆರ್ಮೆರಾಧನೆ, ನಾಗಾರಾಧನೆ ಹಾಗೂ ದೈವರಾಧನೆಗಳ ಹಿಂದಿರುವ ಮೂಲ ಧಾರ್ಮಿಕ ನಂಬಿಕೆ ಹಾಗೂ ವಿಶ್ವಾಸ. “ತುಳುನಾಡು ಬೆರ್ಮೆರ್ ನ ಸೃಷ್ಟಿ” ಎಂದು ಬೆರ್ಮೆರ್ ನ ಪಾಡ್ದನ ಹಾಗೂ ದೈವಗಳ ಸಂಧಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿದೆ. “ತುಳುನಾಡು ಬಲಿಯೇಂದ್ರನ ರಾಜ್ಯ” ಎಂಬುದು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ತುಳುವರ ಮೂಲ ಧಾರ್ಮಿಕ ನಂಬಿಕೆ ಹಾಗೂ ವಿಶ್ವಾಸ. ತುಳುನಾಡಿನಾದ್ಯಂತ ತುಳುವರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಆಟಿ ಅಮಾವಾಸ್ಯೆ, ಸೋಣ ಸಂಕ್ರಾಂತಿ ಹಾಗೂ ದೀಪಾವಳಿ ಅಮಾವಾಸ್ಯೆಯ ಧಾರ್ಮಿಕ ಆಚರಣೆಗಳು ಪ್ರಾಚೀನ ಕಾಲದಲ್ಲಿ ತುಳುನಾಡು ಬಲಿಯೇಂದ್ರನ ರಾಜ್ಯವಾಗಿತ್ತು ಎಂಬುದನ್ನು ನಿಸ್ಸಂದೇಹವಾಗಿ ದೃಢಪಡಿಸುತ್ತವೆ. ತುಳುವರ ನಂಬಿಕೆಯಂತೆ ಆಟಿ ಅಮಾವಾಸ್ಯೆಯ ದಿನ ಬಲಿಯೇಂದ್ರನ ಆಳು ಸೋಣ ತಿಂಗಳ ಸಂಕ್ರಮಣದಂದು ಬಲಿಯೇಂದ್ರನ ತಾಯಿ ಹಾಗೂ…
ಸಾಧನೆ ಎಂದರೆ ಯಾವುದೇ ವಿಷಯದಲ್ಲಿ ಪ್ರಯತ್ನ, ಕೌಶಲ ಮತ್ತು ಧೈರ್ಯದಿಂದ ಯಶಸ್ಸನ್ನು ಗಳಿಸುವುದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶಿಷ್ಟ ಮತ್ತು ವಿಭಿನ್ನ ಪ್ರತಿಭೆಯಿರುತ್ತದೆ. ಹಾಗಾಗಿ ಸಾಧನೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ಸಾಧಿಸಲು ಅಗತ್ಯವಾಗಿ ಇರಬೇಕಾದದ್ದು ಸ್ಪಷ್ಟತೆ. ಸ್ಪಷ್ಟತೆ ಸಾಧನೆಯ ಹಾದಿಗೆ ತಲುಪಲು ಸಹಕಾರಿಯಾಗಿರುತ್ತದೆ. ಸ್ಪಷ್ಟತೆ ಎಂದರೆ ವ್ಯಕ್ತಿ ತನ್ನ ಸಾಧ್ಯತೆ ಮತ್ತು ಮಿತಿಗಳನ್ನು ಅರಿತು, ಸ್ವಯಂ ಅವಲೋಕಿಸಿ ತನ್ನ ಸಾಧ್ಯತೆ ಮತ್ತು ಮಿತಿಗಳಿಗೆ ಅನುಸಾರವಾಗಿ ಸೂಕ್ತ ಕ್ಷೇತ್ರಗಳನ್ನು ಆಯ್ಕೆ ಮಾಡಿ ಸ್ಪಷ್ಟ ನಿಲುವು ತೆಗೆದುಕೊಂಡು ಅದರೆಡೆಗೆ ಪ್ರಾಮಾಣಿಕವಾಗಿ ಶ್ರಮಿಸುವುದು. ಆದರೆ ಇಂದಿನ ಯುವ ಜನಾಂಗ ಸಾಧನೆಯ ವಿಷಯದಲ್ಲಿ ತಾತ್ಕಾಲಿಕ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಯಾವುದೋ ಮೋಟಿವೇಷನಲ್ ವೀಡಿಯೋವನ್ನು ವೀಕ್ಷಿಸಿ ತಾತ್ಕಾಲಿಕವಾಗಿ ಎರಡು ದಿನ ಪ್ರೇರಣೆಗೊಂಡು ಮೂರನೆಯ ದಿನಕ್ಕೆ ಮೊದಲಿನಂತೆ ಅದೇ ಅಲಸ್ಯತನಕ್ಕೆ ಒಳಗಾಗುತ್ತಿದ್ದಾರೆ. ಇಂತವರನ್ನು ಆರಂಭಿಕ ವೀರರೆಂದು ಕರೆಯಬಹುದು. ಇದರಿಂದ ಯಶಸ್ಸು ದಕ್ಕುವುದಿಲ್ಲ. ಈ ರೀತಿಯ ತಾತ್ಕಾಲಿಕ ಪ್ರೇರಣೆ ಸಾಧನೆಗೆ ಪೂರಕವಲ್ಲ, ಹೆಚ್ಚಾಗಿ ಸಾಧನೆಗೆ ಸ್ಪೂರ್ತಿ ಮತ್ತು ಪ್ರೇರಣೆಗಿಂತ…
ಶ್ರೀ ಮೂಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿ ಭಾಂಡೂಪ್ : ‘ಅಜ್ಜ ಅಜ್ಜ ಕೊರಗಜ್ಜ’ ಯಕ್ಷಗಾನ ಪ್ರದರ್ಶನ, ಸಾಧಕರಿಗೆ ಸನ್ಮಾನ
ಯಕ್ಷಗಾನ ಕಲೆ ಅಂದರೆ ನಮ್ಮ ಭಾರತದ ಸಂಸ್ಕೃತಿಯನ್ನು ವಿಶ್ವವ್ಯಾಪಿ ಪಸರಿಸಿದ ಒಂದು ಶ್ರೇಷ್ಠ ಕಲೆ. ದೇವರ ಪೂಜೆಯೊಂದಿಗೆ ಆರಂಭವಾಗಿ ದೇವರ ಪೂಜೆಯೊಂದಿಗೆ ಮುಕ್ತಾಯಗೊಳ್ಳುವ ಕಲೆಯೊಂದಿದ್ದರೆ ಅದು ಯಕ್ಷಗಾನ ಕಲೆ. ಕಲಾವಿದರ ಮುಖಾಂತರ ಕಲೆಯ ಆರಾಧನೆಯೊಂದಿಗೆ ದೇವರನ್ನು ಸ್ಮರಿಸುವ, ಆರಾಧಿಸುವ ಕಲೆಯೊಂದಿದ್ದರೆ ಯಕ್ಷಗಾನ ಕಲೆ. ಅಂತಹ ಯಕ್ಷಗಾನ ಹಾಗೇ ತಾಳಮದ್ದಲೆ ಕಲೆಯನ್ನು ಉಳಿಸುವ ಕಾಯಕದಲ್ಲಿ ಕಳೆದ ಹಲವಾರು ವರ್ಷಗಳಿಂದ ತವರೂರ ಕಲಾವಿದರನ್ನು ಮುಂಬಯಿಗೆ ಆಹ್ವಾನಿಸಿ ಅಲ್ಲಲ್ಲಿ ಪ್ರತೀ ವರ್ಷ ಯಕ್ಷಗಾನ, ತಾಳಮದ್ದಳೆ ಕಲಾ ಪ್ರದರ್ಶನವನ್ನು ಆಯೋಜಿಸಿ, ಕಲಾ ರಸಿಕರನ್ನು ರಂಜಿಸುತ್ತಾ ಬಂದಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಕಾರ್ಯ ನಿಜವಾಗಿಯೂ ಮೆಚ್ಚುವಂತದ್ದು. ಯಕ್ಷಗಾನ ಮತ್ತು ತಾಳಮದ್ದಲೆ ಕಲೆಯನ್ನು ರಕ್ಷಿಸುವಲ್ಲಿ ಮತ್ತು ಪೋಷಿಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಶ್ರಮ ಶ್ಲಾಘನೀಯ ಎಂದು ಘಾಟ್ಕೋಪರ್ ದೇವಾಲಯದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಅಭಿಮಾನದ ನುಡಿಗಳನ್ನಾಡಿದರು. ಅವರು ಸೆಪ್ಟೆಂಬರ್ 21ರ ಶನಿವಾರ ಸಂಜೆ ನಾಹುರ್ ರಾಯಲ್ ಸೆಲೆಬ್ರೇಶನ್ ಹಾಲ್ ನಲ್ಲಿ ಶ್ರೀ ಮುಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿ ಭಾಂಡೂಪ್…