ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಅಧ್ಯಕ್ಷ, ಹಿಂದೂ ಜಾಗರಣ ವೇದಿಕೆ ಪುತ್ತೂರು ನಗರದ ಮಾಜಿ ಗೌರವಾಧ್ಯಕ್ಷ, ಹಿರಿಯ ಧಾರ್ಮಿಕ ಮುಂದಾಳು ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು (72 ವ)ರವರು ಡಿಸೆಂಬರ್ 7 ರಂದು ನಿಧನರಾದರು. ಮೃತರು ಪತ್ನಿ ರಮಾ ಪ್ರಕಾಶ್ಚಂದ್ರ ರೈ, ಪುತ್ರ ಕೆಪಿಟಿಸಿಎಲ್ ನಲ್ಲಿ ಉನ್ನತ ಅಧಿಕಾರಿಯಾಗಿರುವ ಶಶಾಂಕ್ ರೈ, ಸೊಸೆ ಇಂಚರ ರೈ, ಸಹೋದರ ಕುಂಜಾಡಿ ಪ್ರಪುಲ್ಲಚಂದ್ರ ರೈ, ಸಹೋದರಿಯರಾದ ಸುಪ್ರಭಾ ರೈ, ಲತಾ ಶೆಟ್ಟಿ ಹಾಗೂ ಸುಧಾ ಶೆಟ್ಟಿ ಅವರನ್ನು ಅಗಲಿದ್ದಾರೆ.












































































































