ಹೋಟೆಲು ಉದ್ಯಮಿ, ಸಮಾಜ ಸೇವಕ, ಥಾಣೆ ಬಂಟ್ಸ್ ಎಸೋಸಿಯೇಶನ್ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ರೇವತಿ ಸದಾನಂದ ಶೆಟ್ಟಿಯವರ ಪತಿ ಮುಂಡಾಡಿ ಗುತ್ತು ಸದಾನಂದ ಶೆಟ್ಟಿ (72) ಅಲ್ಪಕಾಲದ ಅಸೌಖ್ಯದಿಂದ ನವೆಂಬರ್ 12ರ ಗುರುವಾರದಂದು ನಿಧನರಾದರು. ಸರಳ ಸಜ್ಜನ ವ್ಯಕ್ತಿತ್ವದೊಂದಿಗೆ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದ ಮತ್ತು ಸಮಾಜಪರ ಸೇವಾ ಕಾರ್ಯದೊಂದಿಗೆ ಚಿರಪರಿಚಿತರಾಗಿದ್ದ ಅವರು, ಪತ್ನಿ ರೇವತಿ ಸದಾನಂದ ಶೆಟ್ಟಿ, ಈರ್ವರು ಪುತ್ರರು, ಸೊಸೆ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಥಾಣೆ ಬಂಟ್ಸ್ ಎಸೋಸಿಯೇಶನ್ ಇದರ ಸಮಾಜಪರ ಕೆಲಸ ಕಾರ್ಯಗಳಿಗೆ ನಿರಂತರ ಸಹಾಯ, ಸಹಕಾರವನ್ನು ನೀಡುತ್ತಾ ಬಂದಿದ್ದ ಅವರ ನಿಧನಕ್ಕೆ ಥಾಣೆ ಬಂಟ್ಸ್ ಎಸೋಸಿಯೇಶನ್ ಅಧ್ಯಕ್ಷ ಡಾ| ಚಂದ್ರಶೇಖರ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ನಾರಾಯಣ ಶೆಟ್ಟಿ ಮತ್ತು ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.





















































































































