Author: admin
ವಿದ್ಯಾಗಿರಿ: ‘ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಗಳು ನಿರ್ಮಾಣಗೊಳ್ಳಬೇಕು’ ಎಂದು ಬಂಟರ ಮಹಿಳಾ ಸಂಘದ ಮೂಡುಬಿದಿರೆ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ವತಿಯಿಂದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ‘ಸಕ್ಷಮ’- ಆಳ್ವಾಸ್ ಮಹಿಳಾ ಸಂಘಟನೆಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಮಹಿಳೆ ಹಲವಾರು ಸಮಸ್ಯೆಗಳನ್ನು ತೋರ್ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಇಂತಹ ವೇದಿಕೆಗಳ ಮೂಲಕ ಆಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬೇಕು ಎಂದು ಅವರು ಆಶಿಸಿದರು. ಮುಂದಿನ ದಿನಗಳಲ್ಲಿ ಸಕ್ಷಮ ಸಂಘಟನೆಯ ಮೂಲಕ ಅನೇಕ ಸಮಾಜಮುಖಿ ಕಾರ್ಯ ನಡೆಯಲಿ. ಸಂಘಟನೆಯ ಎಲ್ಲಾ ನೂತನ ಪದಾಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಮುತುವರ್ಜಿ ಹಾಗೂ ಚಾಕಚಕ್ಯತೆಯಿಂದ ನಿಭಾಯಿಸಬೇಕು ಎಂದು ಸಲಹೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಸರಿಯಾದ ಶಕ್ತಿ ಮತ್ತು ಸಾಮಥ್ರ್ಯದ ಶಕ್ತಿಯೇ ಸಕ್ಷಮ. ಮಹಿಳೆಯರು ತಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕು. ನೈಸರ್ಗಿಕವಾಗಿ ಮಹಿಳೆಯರಲ್ಲಿ…
ಗಣಿತ ನಗರ : ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗವು ದ್ವಿತೀಯ ಪಡೆದು ಮೂವರು ವಿದ್ಯಾರ್ಥಿನಿಯರಾದ ದ್ವಿತೀಯ ವಿಜ್ಞಾನ ವಿಭಾಗದ ಕು.ಗುಣಶ್ರೀ ಆರ್, ಮನಸ್ವಿ.ಎಚ್.ಟಿ, ಪ್ರಥಮ ವಿಜ್ಞಾನ ವಿಭಾಗದ ಕು.ಪೂರ್ಣಶ್ರೀ.ವಿ.ಎಸ್. ಹಾಗೂ ಬಾಲಕರ ವಿಭಾಗದಲ್ಲಿ ಕು.ದಿಗಂತ್.ಎಚ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು, ಸಿ.ಇ.ಒ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರುರವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಉದ್ಯಮಿ, ದರ್ಬೆ ಕಟ್ಟಾವು ಇನ್ಸೂರೆನ್ಸ್ ಸೆಂಟರ್ ಮಾಲಕ ಸತೀಶ್ ರೈ ಕಟ್ಟಾವುರವರಿಗೆ ಐಸಿಐಸಿಐ ಲಾಂಬೋರ್ಡ್ ಇನ್ಶೂರೆನ್ಸ್ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿದೆ. ಇಂಡೋನೇಷ್ಯಾದಲ್ಲಿ ಇನ್ಸೂರೆನ್ಸ್ ಸಂಸ್ಥೆಯ ವತಿಯಿಂದ ನಡೆದ ಸಮ್ಮೇಳನದಲ್ಲಿ ಅತ್ಯಂತ ಹೆಚ್ಚು ಬಿಸಿನೆಸ್ ಮಾಡುವವರಲ್ಲಿ ಒಬ್ಬರಾಗಿ ಪ್ರಶಸ್ತಿ ಪಡೆದುಕೊಂಡರು. ಸತೀಶ್ ರೈ ಕಟ್ಟಾವುರವರ ಕಟ್ಟಾವು ಇನ್ಸೂರೆನ್ಸ್ ಶಾಖೆಗಳು ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿದೆಡೆ ಕಾರ್ಯ ನಿರ್ವಹಿಸುತ್ತಿದೆ.
ಇಂದಿನ ವಿವಾಹಗಳು ತರಕಾರಿಗಳಂತೆ ಆಗಿದ್ದು, ಮಾರುಕಟ್ಟೆಯಿಂದ ಖರೀದಿ ಮಾಡುವಾಗ ಎಲ್ಲವೂ ತಾಜಾವಾಗಿಯೇ ಇರುತ್ತದೆ. ಆದರೆ ದಿನ ಕಳೆದ ಹಾಗೆ ಕೊಳೆತು ನಾರಲು ಪ್ರಾರಂಭವಾಗುತ್ತವೆ. ಬಾಳಿಕೆ ಬಾರದ ಸಂಬಂಧಗಳು! ಒಟ್ಟಿನಲ್ಲಿ ಹೇಳುವುದಾದರೆ ಮೂರು ಗಂಟಿನ ನಂಟಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಪ್ರಸ್ತುತ ನಮ್ಮ ದೇಶದಲ್ಲಿ ನಿರುದ್ಯೋಗಕ್ಕಿಂತ ಹೆಚ್ಚಾಗಿ ಈ ಸಮಸ್ಯೆಯೇ ಕಾಡುತ್ತಿದೆ ಎಂದರೆ ಅತಿಶಯೋಕ್ತಿಯಾಗದು. ಈ ಸಮಸ್ಯೆಗೆ ಕಾರಣ ಹುಡುಕಲು ಹೊರಟರೆ ಹಲವಾರು ಕಾರಣಗಳು ಬಿಚ್ಚಿಕೊಳ್ಳುತ್ತವೆ. ಆದರೆ ಪ್ರತಿಯೊಂದು ಕಾರಣವೂ ಬಾಲಿಷದಂತೆ ಭಾಸವಾಗುತ್ತದೆ ವಿನಃ ಯಾವುದೂ ಗಂಭೀರವಾದದ್ದು ಎಂದು ಅನಿಸುವುದೇ ಇಲ್ಲ. ಮುಂದೊಂದು ದಿನ ಇದರ ಪರಿಣಾಮದಿಂದ ಮದುವೆಯೇ ಬೇಡ ಎಂಬ ಮನಸ್ಥಿತಿ ಬಹುತೇಕರಲ್ಲಿ ಮೂಡಿದರು ಯಾವುದೇ ಸಂದೇಹವಿಲ್ಲ. ಪ್ರತಿಯೊಂದು ಸಂಬಂಧಗಳ ಭದ್ರ ಬುನಾದಿಯೇ ನಂಬಿಕೆ. ಅಡಿಪಾಯ ಭದ್ರವಾಗಿದ್ದರೆ ಆ ಕಟ್ಟಡ ಸುರಕ್ಷಿತವಾಗಿರುತ್ತದೆ. ಅಂತೆಯೇ ಸಂಬಂಧಗಳ ನಡುವೆ ನಂಬಿಕೆ ಎಂಬ ಅಡಿಪಾಯ ಗಟ್ಟಿಯಾಗಿದ್ದರೆ ಆ ಸಂಬಂಧವು ಕಟ್ಟಡದಂತೆಯೇ ಗಟ್ಟಿಯಾಗಿರುತ್ತದೆ. ಆದರೆ ಇತ್ತೀಚಿಗೆ ಯಾಕೋ ನಂಬಿಕೆ ಪ್ರತಿಯೊಂದು ಸಂಬಂಧಗಳ ನಡುವೆಯೂ ಕುಸಿದು ಬೀಳುತ್ತಿದೆ…
ಪಣಂಬೂರು ಬೀಚ್ ಬಳಿಕ ಕುಂದಾಪುರದ ತ್ರಾಸಿಯ ಕಡಲ ಕಿನಾರೆಯು ರಾಜ್ಯದ ಎರಡನೇ ‘ಸ್ಕೈ ಡೈನಿಂಗ್’ (ಗಗನದಲ್ಲಿ ಊಟ) ತಾಣವಾಗಲಿದೆ. ನೆಲ ಮಟ್ಟದಿಂದ ಸುಮಾರು 60-70 ಅಡಿ ಎತ್ತರದಲ್ಲಿ ತ್ರಾಸಿ ಮರವಂತೆ ಕಡಲು ಸೌಪರ್ಣಿಕಾ ನದಿ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಅತ್ಯದ್ಭುತ ಸೊಬಗನ್ನು ಕಣ್ತುಂಬಿಕೊಳ್ಳುವ ಜತೆಗೆ, ರುಚಿಕರವಾದ ತಿನಿಸುಗಳನ್ನು ಸವಿಯುವ ಅವಕಾಶ ಇದಾಗಿದೆ. ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಕಾರ್ಯಾದೇಶ ನೀಡಲಾಗಿದ್ದು, ಅದಕ್ಕೆ ಬೇಕಾದ ಅನುಮತಿ, ಸುರಕ್ಷೆ ಕ್ರಮಗಳ ಪರಿಶೀಲನೆಯೂ ಆಗಿದೆ. ಇದಕ್ಕೆ ಅಗತ್ಯ ಸಿದ್ಧತೆಗಳೂ ನಡೆಯುತ್ತಿದ್ದು, 15-20 ದಿನಗಳೊಳಗೆ ಈ ‘ಸ್ಕೈ ಡೈನಿಂಗ್’ ಆರಂಭಗೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ತ್ರಾಸಿ ಮರವಂತೆ ಬೀಚ್ ಮತ್ತಷ್ಟು ಆಕರ್ಷಣೀಯವಾಗಲಿದೆ. ಟೀಮ್ ಮಂತ್ರಾಸ್ ಇಂಟರ್‌ನ್ಯಾಶನಲ್ ಸಂಸ್ಥೆಯು ಸ್ಕೈ ಡೈನಿಂಗ್ ಯೋಜನೆಯನ್ನು ನಿರ್ವಹಿಸಲಿದೆ. ಪಾರದರ್ಶಕ ಗಾಜು ಮತ್ತು ಕಬ್ಬಿಣದಿಂದ ನಿರ್ಮಿಸಲಾದ ಕ್ಯಾಬಿನ್ ಅನ್ನು ಕ್ರೇನ್ ಬಳಸಿ ಸುಮಾರು 60-70 ಅಡಿ ಎತ್ತರಕ್ಕೆ ಏರಿಸಲಾಗುತ್ತದೆ. ಏಕಕಾಲದಲ್ಲಿ 16 ಮಂದಿ ಕುಳಿತು ಆಹಾರ ಸೇವಿಸುವ ಅವಕಾಶವಿದೆ. ಇಷ್ಟು ಎತ್ತರದಿಂದ…
ವಿದ್ಯಾಗಿರಿ (ಮೂಡುಬಿದಿರೆ): ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 26ರಂದು ನಡೆದ ದಕ್ಷಿಣ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲ್ಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ತಂಡವು ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ. ಪುರುಷ ಮತ್ತು ಮಹಿಳಾ ಸೇರಿದಂತೆ ಎರಡೂ ವಿಭಾಗಗಳ ಅಥ್ಲೆಟಿಕ್ಸ್‍ನಲ್ಲಿ ಒಟ್ಟು 23 ಚಿನ್ನ, 10 ಬೆಳ್ಳಿ, 02 ಕಂಚಿನ ಪದಕಗಳೊಂದಿಗೆ ಒಟ್ಟು 35 ಪದಕ, ಕುಸ್ತಿಯಲ್ಲಿ 16 ಚಿನ್ನ, 08 ಬೆಳ್ಳಿ, 08 ಕಂಚಿನ ಪದಕಗಳೊಂದಿಗೆ ಒಟ್ಟು 32 ಪದಕ, ಯೋಗದಲ್ಲಿ 05 ಚಿನ್ನ, 04 ಬೆಳ್ಳಿ, 02 ಕಂಚಿನ ಪದಕಗಳೊಂದಿಗೆ ಒಟ್ಟು 11 ಪದಕ ಹಾಗೂ ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್ ಮತ್ತು ಖೋ-ಖೋ ಪಂದ್ಯಾಟಗಳ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಹಾಗೂ ವಾಲಿವಾಲ್ ಪುರುಷರ ವಿಭಾಗದಲ್ಲಿ ದ್ವಿತೀಯ, ತ್ರೋಬಾಲ್ ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಆಳ್ವಾಸ್ ಪಡೆದುಕೊಂಡಿದೆ. ಮಂಗಳೂರು, ಉಡುಪಿ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಳ್ವಾಸ್ ಕಾಲೇಜಿನ…
ಪುತ್ತೂರು ಬಂಟರ ಭವನದಲ್ಲಿ ತಾಲೂಕು ಮಹಿಳಾ ಬಂಟರ ಸಂಘದ ಮಾಸಿಕ ಸಭೆಯು ಸೆಪ್ಟೆಂಬರ್ 10 ರಂದು ಜರಗಿತು. ಕುತ್ತಾಡಿ ಸತೀಶ್ ರೈ ತನ್ನ ಸಹೋದರಿ ಸ್ವರ್ಣಲತಾ ಜೆ ರೈ ರವರ ಮೂಲಕ ಮಹಿಳಾ ಬಂಟರ ವಿಭಾಗದ ನೇತೃತ್ವದಲ್ಲಿ 5 ಜನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಕಳೆದ 6 ವರ್ಷಗಳಿಂದ ನೀಡುತ್ತಿದ್ದು, ಈ ವರ್ಷವೂ ಕೂಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ವೆಚ್ಚವನ್ನು ಮಹಿಳಾ ಬಂಟರ ಮಾಸಿಕ ಸಭೆಯಲ್ಲಿ ವಿತರಿಸಲಾಯಿತು. ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕಿ ವಾಣಿ ಎಸ್ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಸಂಘದ ಪದಾಧಿಕಾರಿ ಜಯಂತಿ ಎಂ ರೈ, ಉಪಸ್ಥಿತರಿದ್ದರು. ಭವ್ಯ ಅಮ್ಮಣ್ಣ ರೈ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ಅರುಣಾ ಡಿ. ರೈ ಆಟಿದ…
ದೈಹಿಕ ಶಕ್ತಿ ಆರೋಗ್ಯಪೂರ್ಣ ಜೀವನಕ್ಕೆ ಕ್ರೀಡೆ ಒಂದು ರೀತಿಯಲ್ಲಿ ಉತ್ತಮ ವ್ಯಾಯಾಮ ಇದ್ದ ಹಾಗೆ. ಜಾತಿ ಧರ್ಮ ಎನ್ನದೇ ಬೇಧ ಭಾವ ಇಲ್ಲದೆ ನಡೆಯುವ ಇಂತಹ ಕ್ರೀಡಾ ಅಯೋಜನೆಗಳು ದ್ವೇಷ ಭಾವವನ್ನು ಕೂಡಾ ದೂರ ಮಾಡುವ ವೇದಿಕೆ ಇದು. ಕ್ರೀಡೆಯ ಮೇಲಿನ ಪ್ರೀತಿ, ಆಸಕ್ತಿ ತೋರುವ ಮಕ್ಕಳು ಕಠಿನ ಪರಿಶ್ರಮದಿಂದ ಸಾಧನೆ ಮಾಡಬೇಕು. ಹೆಚ್ಚೆಚ್ಚು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗಿಗಲಾಗಬೇಕು. ತುಳುಕೂಟದ ರಜತ ಮಹೋತ್ಸವದ ಅಂಗವಾಗಿ ತುಳುಕೂಟದ ಎಲ್ಲಾ ಸದಸ್ಯರ ಸಹಕಾರದಿಂದ ತುಳುವರನ್ನು ಒಟ್ಟು ಸೇರಿಸಿಕೊಂಡು ಹೊಸ ರೂಪದಲ್ಲಿ ಪಂದ್ಯಾಟಗಳನ್ನು ಆಯೋಜಿಸಿದ್ದಾರೆ. ತುಳುವರಿಗಾಗಿ ಸಮಾಜಕ್ಕಾಗಿ ಆಯೋಜನೆ ಮಾಡುವ ಕೂಟಗಳಲ್ಲಿ ಎಲ್ಲಾ ತುಳು ಬಾಂಧವರು ಭಾಗಿಗಳಾಗಬೇಕು. ಇಲ್ಲಿ ಸೇರಿರುವ ಎಲ್ಲರಲ್ಲಿಯೂ ಪ್ರೀತಿಯ ಸಾಮರಸ್ಯ ಬೆಳೆಯಲಿ ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್ ನುಡಿದರು. ಪುಣೆ ತುಳುಕೂಟದ ರಜತ ಮಹೋತ್ಸವಕ್ಕೆ ಪೂರಕವಾಗಿ 25 ವಿವಿಧ ಕಾರ್ಯಕ್ರಮಗಳು ನಡೆಯಯುತ್ತಿದ್ದು ಅದರ ಭಾಗವಾಗಿ ಸೆಪ್ಟೆಂಬರ್ 21 ಮತ್ತು 22 ರಂದು…
ಉಡುಪಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಕುಂದಾಪುರದ ವಿದ್ಯಾರ್ಥಿನಿ ನವಮಿ ಎಸ್ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ:
ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಎಸ್.ಎನ್.ವಿ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕಾಲೇಜು ವಿಭಾಗದ ಬಾಲಕ-ಬಾಲಕಿಯರ ಕರಾಟೆ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಕುಂದಾಪುರದ ವಿದ್ಯಾರ್ಥಿನಿ ನವಮಿ ಎಸ್ ಶೆಟ್ಟಿ ವಿಜಯಶಾಲಿಯಾಗುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಮತ್ತು ಆಶಿತ್ ಶೆಟ್ಟಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾನೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಯುವ ಉದ್ಯಮಿ, ಸಮಾಜಸೇವಕ, ಪುತ್ತೂರು ಕಂಬಳ ಸಮಿತಿಯ ಉಪಾಧ್ಯಕ್ಷ ರೋಶನ್ ರೈ ಬನ್ನೂರು ಅವರನ್ನು ಪುತ್ತೂರು ನಗರಸಭೆ ಸದಸ್ಯರನ್ನಾಗಿ ಸರಕಾರವು ನಾಮ ನಿರ್ದೇಶನ ಮಾಡಿ ಆದೇಶಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಸಭೆಗೆ ಈಗಾಗಲೇ 4 ಅಭ್ಯರ್ಥಿಗಳನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಉಳಿದ 1 ಸ್ಥಾನಕ್ಕೆ ಬನ್ನೂರು ನಿವಾಸಿ ರೋಶನ್ ರೈರವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.