ದೇವಾಸ್ಥಾನ ದ ಜೀರ್ಣೋದ್ಧಾರ, ಬೆಳ್ಳಿ ಮುಚ್ಚಳಿಕೆ, ಬಂಗಾರ ಮುಚ್ಚಳಿಕೆ, ಬ್ರಹ್ಮಕಲಶ, ಯಾಗ ಯಜ್ಞ, ದಾನ ಧರ್ಮ ಹೀಗೆ ಎಲ್ಲಾ ವೈದಿಕ ಆಚಾರ ವಿಚಾರದಲ್ಲಿ ಬಂಟರು ಮೊದಲಿಗರು. ಆದುದರಿಂದ ದೈವಾನುಗ್ರಹ ಬಂಟರ ಮೇಲೆ ಅತೀ ಹೆಚ್ಚು. ಎಲ್ಲಿಯವರೆಗೆ ಹೆಚ್ಚೆಂದರೆ ಕರ್ನಾಟಕದಲ್ಲೇ ಡಿವೋರ್ಸ್ ಪ್ರಕರಣದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯು ಪೈಪೋಟಿಯಲ್ಲಿದೆ. ಉಡುಪಿಯಲ್ಲಿ ಯಾವ ಸಮಾಜ ನಂ 1 ಎಂದು ಕೇಳಿದರೆ ಅದು ನಮ್ಮ ಬಂಟ ಸಮಾಜ. ಅಖಂಡ ಕರ್ನಾಟಕದಲ್ಲಿ ಡಿವೋರ್ಸ್ ಪ್ರಕರಣದಲ್ಲಿ ಬಂಟರು ನಂ 1 ..! ನಮ್ಮ ಸಮಾಜದ ಶ್ರೀಮಂತರ ದಾನ ಧರ್ಮದ ಫಲ ಶ್ರುತಿ ಇದೆನ್ನಬಹುದು ..!!

ಒಬ್ಬ ದೇವಾಸ್ಥಾನದ ಅರ್ಚಕ ದಾನ ಧರ್ಮದ ಸೇವೆ ನೀಡುವವನಿಗಿಂತ ಹೆಚ್ಚು ಶ್ರೀಮಂತನಿರಬಹುದು..! ಆದರೆ ಆತ ಒಂದು ರೂಪಾಯಿ ಕೂಡಾ ದಾನ ಮಾಡಲಾರ. ದಾನ ಧರ್ಮಕ್ಕೆ ಬಂಟರಿದ್ದಾರೆ. ಒಂದು ದೇವಸ್ಥಾನ ಊರಿಗೆ ಸಂಬಂಧ ಪಟ್ಟದ್ದು ಅದು ಕೇವಲ ಬಂಟರಿಗೆ ಸೀಮಿತವೇ ..? ಅದೇ ದಾನ ಧರ್ಮ ಮಾಡುವವನಿಗೆ ಆತನ ಕುಟುಂಬಿಕರಾರು ಆಸ್ಪತ್ರೆಯಲ್ಲಿ ಮಲಗಿದ್ದರೆ ಅದು ಕಾಣುವುದಿಲ್ಲ. ಈ ಜೀರ್ಣೋದ್ಧಾರಗಳು ಎಲ್ಲಾ ಬ್ರಾಹ್ಮಣ ಸಮಾಜಕ್ಕೆ ಒಂದು ಉದ್ಯಮ ರಂಗ ಅಷ್ಟೇ …? ಮತ್ತೆ ಹಿಂದಿನಿಂದ ಬಂಟರಿಗೇ ಬೈಯ್ಯುವುದು. ಜೀರ್ಣೋದ್ಧಾರ, ಬ್ರಹ್ಮಕಲಶ ಅಲ್ಲಿ ಕ್ಯೂನಲ್ಲಿ ನಿಂತವ ಕೂಡಾ ಬೈಯ್ಯವುದು ಬಂಟರಿಗೆ. ಹಣ ಕೊಟ್ಟು ಸಮಾಜಕ್ಕೆ ನಿಂದಿಸುವ ಕಾರ್ಯವೇ ಬಂಟರ ದಾನ ಧರ್ಮ. ಇದು ಒಂದು ಬಂಟ ಸಮಾಜಕ್ಕೆ ಈ ಸಮಾಜದ ಶ್ರೀಮಂತರಿಂದ ತಟ್ಟುವ ಪಾಪ ಎಂದೆನ್ನಬಹುದು.
ಸಮಾಜದ ಏಳಿಗೆಗೆ ಈ ಬಂಟ ಬಾಂಧವರು ಬಯಸುವುದಾದರೆ ಅಲ್ಲಿ ಇಲ್ಲಿ ದಾನ ಧರ್ಮ ಮಾಡಿ ದೊಡ್ಡಸ್ಥಿಕೆ ತೋರಿಸುವ ಬದಲು ಆ ಹಣವನ್ನು ಒಂದು ಟ್ರಸ್ಟ್ ಅಥವಾ ಬ್ಯಾಂಕಿನ ಮುಖೇನ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಸಮಾಜದ ಬಡವರ ಏಳಿಗೆಗೆ ಪ್ರಯತ್ನಿಸಬಹುದಲ್ಲವೇ? ಬಂಟ ಸಮಾಜದಲ್ಲಿ ಡಿವೋರ್ಸ್ ಪ್ರಕರಣಕ್ಕೆ ಈ ಸಮಾಜದ ಹೆಣ್ಣು ಮಕ್ಕಳ ಅಹಂಕಾರದ ಜೀವನ, ಹೆತ್ತವರ ಬೆಂಬಲ ಬಹು ಮುಖ್ಯ ಕಾರಣವೂ ಹೌದು..! ಕೇವಲ ಹಣಕ್ಕೆ ಬೆಲೆಯೇ ಹೊರತು ಸಂಬಂಧಕ್ಕೆ ಬೆಲೆ ಇಲ್ಲ. ಇದು ನಮ್ಮ ಸಮಾಜದ ನಡೆ ನುಡಿ. ಬದಲಾಯಿಸುವುದು ಕಷ್ಟವೇ… ಉತ್ತರಗಳನ್ನು ಹುಡುಕುವುದಕ್ಕಿಂತ ಪ್ರಶ್ನೆಗಳಿಗೆಯೇ ಉತ್ತರವಿಲ್ಲ…!!!













































































































