Author: admin
ಸೇವಾ ಚೇತನ ಟ್ರಸ್ಟ್ (ರಿ.), ಮೂಡುಬಗೆ ಅಂಪಾರು ಇದರ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಜನವರಿ 11ರಂದು ಅಂಪಾರು ಮೂಡುಬಗೆ ಶಾನ್ಕಟ್ಟು ಮೈದಾನದಲ್ಲಿ ನಡೆದ ‘ನಮ್ಮೂರ ಸಂಭ್ರಮ’ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕ, ವಾಗ್ಮಿ ಪ್ರಾಧ್ಯಾಪಕ ಕುಂದಾಪುರದ ಡಾ| ಬಿ. ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ- ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಅವರಿಗೆ 2024ರ ನಮ್ಮೂರ ‘ಶಿಕ್ಷಣ ರತ್ನ’ ಪ್ರಶಸ್ತಿಯನ್ನು ಹಿರಿಯ ಉದ್ಯಮಿ ಶ್ರೀ ಆನಗಳ್ಳಿ ಕರುಣಾಕರ ಹೆಗ್ಡೆ ಪ್ರದಾನ ಮಾಡಿದರು. ಸೌತ್ ಫೀಲ್ಡ್ ಪೇಂಟ್ಸ್ ಆಡಳಿತ ನಿರ್ದೇಶಕ ಶ್ರೀ ಎಸ್.ಎಸ್. ಹೆಗ್ಡೆ ನಮ್ಮೂರ ಸಂಭ್ರಮವನ್ನು ಉದ್ಘಾಟಿಸಿರು. ಈ ಸಂದರ್ಭ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಶೆಟ್ಟಿ ಗಂಟಿಹೊಳೆ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸಿ.ಎ. ಅಶೋಕ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸುಗ್ಗಿ ಸುಧಾಕರ ಶೆಟ್ಟಿ, ಆಸ್ಟ್ರೇಲಿಯಾದ ಉದ್ಯಮಿ ಆಜ್ರಿ…
ವಿದ್ಯಾಗಿರಿ: ಸಂಕಲ್ಪ ಶಕ್ತಿ, ಕ್ರಿಯಾ ಶಕ್ತಿ ಹಾಗೂ ಜ್ಞಾನ ಶಕ್ತಿ ಸಮ್ಮಿಳಿತಗೊಂಡಾಗ ಜಗತ್ತಿನಲ್ಲಿ ಯಾವುದು ಅಸಾಧ್ಯವಲ್ಲ. ನಮ್ಮಿಂದ ಅಸಾಧ್ಯ ಎಂಬ ವಿಚಾರವು ಸೃಷ್ಟಿಯಲ್ಲೇ ಇಲ್ಲ. ಸಕಾರತ್ಮಕ ಮನಸ್ಥಿತಿ ಇಂದಿನ ಯುವ ಸಮುದಾಯದ ಮಂತ್ರವಾಗಬೇಕು ಎಂದು ಗದಗದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಟೀಮ್ ಮ್ಯಾಟ್ರಿಕ್ಸ್ ಸಹಯೋಗದಲ್ಲಿ ಶುಕ್ರವಾರ ನಡೆದ “ನಾಯಕನ ಹೆಜ್ಜೆಯಲ್ಲಿ – ಸ್ವಾಮಿ ವಿವೇಕಾನಂದರ ಭೋದನೆಗಳನ್ನು ಜೀವನದಲ್ಲಿ ಹೇಗೆ ಅಳವಡಿಸುವುದು’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನನ್ನಿಂದ ಅಸಾಧ್ಯ ಎನ್ನುವುದು ಪ್ರಪಂಚದ ಅತ್ಯಂತ ದೊಡ್ಡ ತಪ್ಪು ಎಂದು ವಿವೇಕಾನಂದರು ಹೇಳಿದ್ದಾರೆ. ನಮ್ಮಲ್ಲಿ ಯಶಸ್ಸಿಗೆ ಬೇಕಾದ ಎಲ್ಲಾ ಸತ್ವಗಳು ಇರುತ್ತವೆ. ಅದನ್ನು ನಾವು ಸರಿಯಾದ ರೀತಿಯಲ್ಲಿ ಆಯೋಜಿಸಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ತಮ್ಮ ಎಲ್ಲಾ ನ್ಯೂನತೆಗಳನ್ನು ಮೀರಿ, ಸಾಧನೆ ಮೆರೆದ ಮೇಡಂ ಕ್ಯೂರಿ, ಥಾಮಸ್ ಅಲ್ವಾ ಎಡಿಸನ್, ನೆಪೋಲಿಯನ್, ಅಬ್ರಹಾಂ ಲಿಂಕನ್ ಮತ್ತಿತರರ ಸಾಧನೆಗಳನ್ನು ವಿವರಿಸಿದರು.…
ಜೈನ ಜಟ್ಟಿಗೇಶ್ವರ ದೇವಸ್ಥಾನ ಅರಸನಕೆರೆ ಮೆಟ್ಟಿನಹೊಳೆ ಇದರ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಆಡಳಿತ ಮೋಕ್ತೆಸರರಾದ ಕರುಣಾಕರ ಶೆಟ್ಟಿ ನೆಲ್ಯಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲ್ತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಶುಭ ಸಂಶನೆಗೈದರು. ಬೈಂದೂರು ಬಂಟರ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಸಾಲ್ಗದ್ದೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವೇದಿಕೆಯಲ್ಲಿ ಉದ್ಯಮಿ ಬಿಎಸ್ ಸುರೇಶ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಮಹಾಲಿಂಗ ನಾಯ್ಕ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶೇಖರ ಪೂಜಾರಿ ಇವರುಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಮೆಟ್ಟಿನಹೊಳೆ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಈಗ ಬಿ ಆರ್ ಪಿ ಆಗಿರುವ ಮಂಜುನಾಥ ದೇವಾಡಿಗ ಅನ್ನ ಸಂತರ್ಪಣೆ ಸೇವಾಕರ್ತರಾದ ಮೋಹಿನಿ ಶೆಟ್ಟಿ ನೆಲ್ಯಾಡಿ, ರಾಘವೇಂದ್ರ ಕುಲಾಲ್ ಸಿದ್ದು ಮನೆ, ಮುತ್ತು ನಾರಾಯಣ ದೇವಾಡಿಗ ಅಂಬಾಗಿಲು, ಅನುಷಾ ಅಭಿಷೇಕ್ ದೇವಡಿಗ ಬಿಜೂರು ಹಾಗೂ ಯೋಗಾಸನದ ಪ್ರತಿಭೆ…
ಬ್ರಹ್ಮಾವರ ವ್ಯ.ಸೇ.ಸ. ಸಂಘದ ನೂತನ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಬಿರ್ತಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ಸಾಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲೂ ಜಯ ಗಳಿಸಿದ್ದರು. ಇದೀಗ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿರ್ತಿ ರಾಜೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಗಣೇಶ್ ಶೆಟ್ಟಿ ಹಂದಾಡಿ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಪದಗ್ರಹಣ ಕಾರ್ಯಕ್ರಮವು ಜನವರಿ 16 ರಂದು ಸಂಜೆ 4ಗಂಟೆಗೆ ನಡೆಯಿತು.
ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾಬಂಧು ವತಿಯಿಂದ ಕರಾವಳಿ ಕಲೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರಪಾಡಿ ಯಕ್ಷಗಾನ ಅಭಿಮಾನಿ ಬಳಗದ ಸಹಕಾರದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿಯವರ ಯಕ್ಷ ಪಯಣದ 50ರ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ‘ಸುವರ್ಣ ಸರಪಾಡಿ’ ಕಾರ್ಯಕ್ರಮ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಿತು.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಪ್ರಜ್ವಲನೆ ಮಾಡಿ ಮಾತನಾಡಿ, ‘ಇಂದು ಯಕ್ಷಗಾನದಲ್ಲಿ ಪಾತ್ರೋಚಿತವಾದ ಮಾತುಗಳನ್ನು ಅದ್ಭುತ ಅಭಿನಯದ ಮೂಲಕ ಮಾಡುವ ಕಲಾವಿದರ ಪೈಕಿ ಸರಪಾಡಿ ಅಶೋಕ ಶೆಟ್ಟರು ಅಗ್ರಪಂಕ್ತಿಗೆ ಸೇರುತ್ತಾರೆ. ಅವರು ಯಕ್ಷಗಾನವಷ್ಟೇ ಅಲ್ಲ, ರಾಜಕೀಯ, ಸಮಾಜ ಸೇವೆಯಲ್ಲೂ ಮಿಂಚಿದವರು, ಕಲಾವಿದರಿಗಾಗಿ ಸ್ಪಂದಿಸಿದವರು’ ಎಂದು ಶ್ಲಾಘಿಸಿದರು. ಅಭಿನಂದನಾ ಭಾಷಣದಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ,…
ನಮ್ಮ ಕಾಲೇಜಿನಲ್ಲಿ ಹಳ್ಳಿಯ ಪ್ರದೇಶಗಳಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಿದ್ದರು. ಆಗ ಹೆಣ್ಣು ಮಕ್ಕಳು ಉನ್ನತ ಅಧ್ಯಯನ ಮಾಡುತ್ತಿದ್ದುದೇ ಕಡಿಮೆ. ನಾವು ಆಪ್ತತೆಯಿಂದಲೇ ಕಲಿಸಿದೆವು. ಅದರ ಪರಿಣಾಮ ಇಂದು ಈ ಮಕ್ಕಳಿಂದ ಇಂದಿಗೂ ನಮಗೆ ಆ ಪ್ರೀತಿ ಸಿಕ್ಕಿದೆ. ನಾವು ಗಳಿಸಿದ್ದು ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸವನ್ನು ಮಾತ್ರ. ಒಬ್ಬ ಶಿಕ್ಷಕಿಯಾಗಿ ವಿದ್ಯಾರ್ಥಿಗಳೇ ನನ್ನ ಆಸ್ತಿ. ಇಷ್ಟು ಅಲ್ಪ ಸಮಯದಲ್ಲಿ ಇವರು ಅಭಿನಂದನೆ, ಗುರುವಂದನೆಯಲ್ಲಿ ತೊಡಗಿಸಿಕೊಂಡ ರೀತಿಗೆ ಬೆರಗಾಗಿದ್ದೇನೆ. ಈ ವಿದ್ಯಾರ್ಥಿಗಳೆಲ್ಲರೂ ದೂರ ದೂರದಿಂದ ಇಂದು ಇಲ್ಲಿಗೆ ಬಂದು ತೋರಿದ ಆದರಾಭಿಮಾನಕ್ಕೆ ಮೂಕಳಾಗಿದ್ದೇನೆ ಎಂದು ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಉಪನ್ಯಾಸಕಿ, ಪ್ರಾಂಶುಪಾಲರಾಗಿದ್ದ ಪ್ರೊ. ಮಿತ್ರಪ್ರಭಾ ಹೆಗ್ಡೆ ನುಡಿದರು. ಅವರು ಜನವರಿ 12 ಆದಿತ್ಯವಾರದಂದು ನವೋದಯ ಕನ್ನಡ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ಎಸ್.ವಿ.ಟಿ ಹಳೆ ವಿದ್ಯಾರ್ಥಿ ಬಳಗ ಮುಂಬಯಿ ಸಮಾಗಮದಲ್ಲಿ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದರು. ಅವರು ಮಾತನ್ನು ಮುಂದುವರೆಸುತ್ತಾ, ನನ್ನ ವಿದ್ಯಾರ್ಥಿನಿಯರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದ್ದಾರೆ ಎನ್ನಲು ಅಭಿಮಾನವಾಗುತ್ತದೆ.…
ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪ್ರಕಟ : ಮಂಗಳ ಎಂ.ಸಿ ವರ್ಗೀಸ್ ಪ್ರಶಸ್ತಿಗೆ ನಾರಾಯಣ ರೈ ಕುಕ್ಕುವಳ್ಳಿ ಆಯ್ಕೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದ ವಾರ್ಷಿಕ ಪ್ರಶಸ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ತುಮಕೂರಿನಲ್ಲಿ ಜನವರಿ 18 ಮತ್ತು 19ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ವಾರಪತ್ರಿಕೆಯಲ್ಲಿ ಪ್ರಕಟವಾದ ಚಿತ್ರಲೇಖನಕ್ಕೆ ಕೊಡಮಾಡುವ ‘ಮಂಗಳ ಎಂ.ಸಿ ವರ್ಗಿಸ್ ಪ್ರಶಸ್ತಿ’ಗೆ ಸುದ್ದಿ ಬಿಡುಗಡೆ ಅಂಕಣಕಾರ ಹಾಗೂ ಮಧುಪ್ರಪಂಚ ಪತ್ರಿಕೆಯ ಸಂಪಾದಕರೂ ಆಗಿರುವ ನಾರಾಯಣ ರೈ ಕುಕ್ಕುವಳ್ಳಿ ಆಯ್ಕೆಯಾಗಿದ್ದಾರೆ.ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರೂ ಆಗಿರುವ ನಾರಾಯಣ ರೈ ಕುಕ್ಕುವಳ್ಳಿ ಅವರು ಸಾಹಿತಿಯೂ ಆಗಿದ್ದಾರೆ. ಇವರ ಸೇವೆ ಸಾಧನೆಯನ್ನು ಗುರುತಿಸಿ ಈಗಾಗಲೇ ಹಲವು ಪ್ರಶಸ್ತಿ, ಸನ್ಮಾನಗಳೊಂದಿಗೆ ಪುರಸ್ಕೃತರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಸುದ್ದಿ ಬಿಡುಗಡೆ ಪತ್ರಿಕೆಯ ಅಂಕಣಕಾರರಾಗಿರುವ ಇವರು ಪತ್ರಿಕೆಯಲ್ಲಿ ಪ್ರಕಟವಾಗುವ ‘ಪ್ರತಿಭಾರಂಗ’ದ ನಿರ್ವಾಹಕರೂ ಆಗಿದ್ದು, ಈಗಾಗಲೇ ಹಲವು ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದಾರೆ.
ಏಷ್ಯನ್ ಮಾಸ್ಟರ್ಸ್ ವೆಯ್ಟ್ ಲಿಫ್ಟಿಂಗ್ ಕಮಿಟಿ (ಎಂಎಂಡಬ್ಲ್ಯೂ) ಗೆ ಮುಂಬಯಿಯ ಉದಯ ಶೆಟ್ಟಿ ಅವರನ್ನು ಎಂಎಂಡಬ್ಲ್ಯೂ ಗೆ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ. ಉದಯ ಶೆಟ್ಟಿಯವರು ವೆಯ್ಟ್ ಲಿಫ್ಟಿಂಗ್ ನಲ್ಲಿ ಉನ್ನತ ಮಟ್ಟದ ಅನುಭವವನ್ನು ಹೊಂದಿದ್ದು, ಓರ್ವ ಯಶಸ್ವಿ ವೆಯ್ಟ್ ಲಿಫ್ಟರ್ ಆಗಿ ಎಲ್ಲೆಡೆ ಮಿಂಚಿದ್ದಾರೆ.ಇವರು ಹಲವಾರು ವರ್ಷಗಳಿಂದ ಭಾರತೀಯ ಮಾಸ್ಟರ್ಸ್ ವೆಯ್ಟ್ ಲಿಫ್ಟಿಂಗ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ ಇವರು ಭಾರತದಲ್ಲಿ ವೆಯ್ಟ್ ಲಿಫ್ಟಿಂಗ್ ಕ್ರೀಡೆಯನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಮತ್ತು ದೇಶದಲ್ಲಿ ಮಾಸ್ಟರ್ಸ್ ವೆಯ್ಟ್ ಲಿಫ್ಟಿಂಗ್ ಸಮುದಾಯದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ.ಪೋಲೆಂಡ್ ನ ಕ್ರಾಕೋವ್ ನಲ್ಲಿ ನಡೆದ ಮಾಸ್ಟರ್ಸ್ ವರ್ಲ್ಡ್ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಉದಯ ಎಸ್. ಶೆಟ್ಟಿಯವರು ತನ್ನ ತಂಡದ ಏಳು ಮಂದಿ ವೆಯ್ಟ್ ಲಿಫ್ಟರ್ಸ್ ನೊಂದಿಗೆ ಭಾರತವನ್ನು ಪ್ರತಿನಿಧಿಸಿದ್ದಾರೆ. 1994 ರಿಂದ ಭಾರತೀಯ ವೆಯ್ಟ್ ಲಿಫ್ಟಿಂಗ್ ಫೆಡರೇಶನ್ ನ…
ಮಂದಾರ್ತಿ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್ ಗಂಗಾಧರ ಶೆಟ್ಟಿ ಮಂದಾರ್ತಿ ನೇತೃತ್ವದ ಬಿಜೆಪಿ ಬೆಂಬಲಿತ ಸದಸ್ಯರು ಎಲ್ಲಾ 12 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಸಾಮಾನ್ಯ ಸ್ಥಾನದಿಂದ ಎಚ್. ಗಂಗಾಧರ ಶೆಟ್ಟಿ ಮಂದಾರ್ತಿ, ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ, ಗಣೇಶ ಶೆಟ್ಟಿ ಮಂದಾರ್ತಿ, ಜಂಲಧರ ಶೆಟ್ಟಿ ನಡೂರು, ದಿನೇಶ ಮರಕಾಲ ಮಂದಾರ್ತಿ, ಚಂದ್ರಶೇಖರ ಪೂಜಾರಿ ಶಿರೂರು, ಹಿಂದುಳಿದ ವರ್ಗ ಬಿ ಸ್ಥಾನದಿಂದ ಸುರೇಶ ಶೆಟ್ಟಿ ಕಾಡೂರು, ಹಿಂದುಳಿದ ವರ್ಗ ಎ ಸ್ಥಾನದಿಂದ ಕೆ. ಶಂಭುಶಂಕರ ರಾವ್ ಹೆಗ್ಗುಂಜೆ, ಮಹಿಳಾ ಮೀಸಲು ಸ್ಥಾನದಿಂದ ಗುಲಾಬಿ ಬಾಯಿ ಹೆಗ್ಗುಂಜೆ, ಪ್ರೇಮಾ ಮರಕಾಲ್ತಿ ಹೆಗ್ಗುಂಜೆ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಬಸವ ನಾಯ್ಕ್ ಕಾಡೂರು, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ರಾಧಾ ಹೆಗ್ಗುಂಜೆ ಆಯ್ಕೆಯಾದರು. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಕೆ.ಆರ್ ರೋಹಿತ್ ಚುನಾವಣಾ ಅಧಿಕಾರಿಯಾಗಿದ್ದರು.
“ಮಕ್ಕಳು ತಮ್ಮ ಶೈಕ್ಷಣಿಕ ಬದುಕಿನಲ್ಲಿ ಸವಾಲುಗಳನ್ನು ಸ್ವೀಕರಿಸಿ ಎದುರಿಸಲು ಚೆಸ್ ಆಟ ಬಹಳ ಸಹಕಾರಿಯಾಗಿದೆ. ಚೆಸ್ ಆಟದ ಮೂಲಕ ಮಕ್ಕಳು ತಮ್ಮ ಏಕಾಗ್ರತೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಚೆಸ್ ಆಟದಿಂದ ಮಕ್ಕಳ ಸ್ಮರಣ ಶಕ್ತಿ ವೃದ್ಧಿಯಾಗುತ್ತದೆ ಮತ್ತು ಇದು ಕಲಿಕೆಯ ಮೇಲೆ ಉತ್ತಮ ಧನಾತ್ಮಕ ಪ್ರಭಾವವನ್ನು ಬೀರುತ್ತದೆ. ಚೆಸ್ ಆಟದಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ದೊರೆತರೆ ಅವರು ಮುಂದೆ ದೊಡ್ಡ ಸಾಧಕರಾಗಬಹುದು. ಏಕಾಗ್ರತೆ ಸ್ಮರಣಶಕ್ತಿ ಉತ್ತಮ ಭಾವನಾತ್ಮಕ ಕೌಶಲ್ಯಗಳನ್ನು ಚೆಸ್ ಆಟ ವೃದ್ಧಿಸುವುದರಿಂದ ಮಕ್ಕಳು ಬಹಳ ಉತ್ಸುಕತೆಯಿಂದ ಕಲಿಕೆಯಲ್ಲಿ ಸಾಗಲು ಸಾಧ್ಯವಾಗುತ್ತದೆ. ಈ ಸಂಸ್ಥೆಯ ಮಕ್ಕಳು ಕೂಡ ಉತ್ತಮ ಚೆಸ್ ಆಟಗಾರರಾಗಿ ಸಾಧನೆಯನ್ನು ಮಾಡಲಿ” ಎಂದು ಅರ್ಜುನ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಗ್ರಾಂಡ್ ಮಾಸ್ಟರ್ ಪ್ರವೀಣ್ ಎಂ. ತಿಪ್ಸೆ ಹೇಳಿದರು. ಯಡಾಡಿ ಮತ್ಯಾಡಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಚೆಸ್ ಒರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ…