ಶಾಲಾಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ವತಿಯಿಂದ ಕೊಪ್ಪಳದಲ್ಲಿ ಜರುಗಿದ ರಾಜ್ಯಮಟ್ಟದ ಜಂಪ್ರೋಪ್ ಸ್ಪರ್ಧೆಯ 30ಸೆಕೆಂಡ್ ಡಬಲ್ ಅಂಡರ್ ರಿಲೇ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಿಖಿಲ್ ಎಂ.ವಿ, ಪೂರ್ವಜ್ ಗೌಡ ವಿ, ಪ್ರಥಮೇಶ್ ಡಿ.ಪಿ, ಎನ್.ನಿಖಿಲ್, ಶಾನ್ವಿ ಎಸ್ ಹಾಗೂ ಕಾಜೊಲ್.ಎಂ.ಪಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
















































































































