Author: admin
ವ್ಯಕ್ತಿತ್ವ ವಿಕಸನ ಹಾಗೂ ತರಬೇತಿಗಾಗಿಯೇ ಇರುವ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಇದರ ಪುತ್ತೂರು ಘಟಕದ ಅಧ್ಯಕ್ಷರಾದ ಭಾಗ್ಯೇಶ್ ರೈಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕುರಿತಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಕರ್ನಾಟಕ ಪೊಲೀಸ್, ಆರೋಗ್ಯ ಇಲಾಖೆಗಳ ಸಹಕಾರದೊಂದಿಗೆ ಪುತ್ತೂರು ತಾಲೂಕು ವ್ಯಾಪ್ತಿಯ 100 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಪುತ್ತೂರಿನ ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನ ಕೊಂಬೆಟ್ಟು ಇಲ್ಲಿ ಚಾಲನೆಯನ್ನು ನೀಡಲಾಯಿತು. ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದ ಅವರು ಜೆಸಿಐ ಪುತ್ತೂರಿನ ವಿಭಿನ್ನ ಪ್ರಯತ್ನಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್. ಆರ್, ತಾಲೂಕು ವೈದ್ಯಾಧಿಕಾರಿ ದೀಪಕ್ ರೈ, ಪುತ್ತೂರು ನಗರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಅವರು ಮಾದಕ…
ಮೂಡುಬಿದಿರೆ: ಬಳ್ಳಾರಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಶ್ರವಣ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಶ್ರವಣ ಕಪ್ ಅಖಿಲ ಭಾರತ ಆಹ್ವಾನಿತ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿತು. ರಾಷ್ಟ್ರದ 10 ಆಹ್ವಾನಿತ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಫೈನಲ್ನಲ್ಲಿ ಆಳ್ವಾಸ್ ತಂಡವು ತಮಿಳುನಾಡಿನ ಪಿಎಸ್ಎನ್ಎ ದಿಂಡಿಗಲ್ ತಂಡವನ್ನು 35-31, 35-18 ನೇರ ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸೆಮಿಫೈನಲ್ಸ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಶ್ರವಣ ಬಳ್ಳಾರಿ ತಂಡವನ್ನ ನೇರ ಸೆಟ್ಟುಗಳಿಂದ ಸೋಲಿಸಿ ಫೈನಲ್ಸಿಗೆ ಅರ್ಹತೆಯನ್ನು ಪಡೆದಿತ್ತು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.
ಧರ್ಮ ಶಿಕ್ಷಣ ಸಿಗುವ ಜಾಗದಲ್ಲಿ ಜಾತ್ರೆಗೆ ಮಾರ್ಗದರ್ಶನ ಸಿಗಬೇಕು. ಜಾತ್ರೆಯಲ್ಲಿ ಸಾಗುವ ರಥ ಜೀವನ ಪಯಣಕ್ಕೆ ಸ್ಪೂರ್ತಿ ನೀಡಬೇಕು. ಸಂಪತ್ತಿನ ಸದ್ಬಳಕೆಯಿಂದ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಪ್ರಯುಕ್ತ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಸಂಸ್ಕೃತಿಯ ಕೊರತೆಯಿಂದ ವಿಕೃತಿ ಹೆಚ್ಚುತ್ತಿರುವುದು ಆತಂಕದ ಸಂಗತಿ. ಸಂಸ್ಕಾರಭರಿತ ಶಿಕ್ಷಣ ಕೊಡುವ ವ್ಯವಸ್ಥೆ ಆಗಬೇಕು. ಸಾಮಾಜಿಕ ಸಮತೋಲಕ್ಕೆ ಆಧ್ಯಾತ್ಮಕ ಹಾದಿಯೇ ಸೂಕ್ತ ಎಂದರು. ದಿವ್ಯ ಸಾನಿದ್ಯ ವಹಿಸಿದ್ದ ಶ್ರೀ ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡಿ, “ಗುರುಗಳ ಕೃಪೆಯಿಂದ ಎಲ್ಲವೂ ಸಾಧ್ಯ. ಗುರುಗಳ ಸಾನಿಧ್ಯದಲ್ಲಿ ಆಧ್ಯಾತ್ಮಿಕ ಚಿತ್ತಹರಿಸಿ ಆನಂದ ಹೊಂದೋಣ. ಒತ್ತಡ ರಹಿತ ಸಂತೃಪ್ತ ಜೀವನ ಸಾಗಿಸೋಣ” ಎಂದರು. ನಾನಾ ಕ್ಷೇತ್ರಗಳ ಗಣ್ಯರಾದ ವೀರೇಂದ್ರ ಮೋಹನ್ ಜೋಶಿ, ಡಾ. ಅವಿನ್ ಆಳ್ವ, ಮಲ್ಲಿಕಾ ಪ್ರಶಾಂತ ಪಕ್ಕಳ, ತಮನ್ನಾ ಪ್ರಭಾಕರ ಶೆಟ್ಟಿ, ಶ್ವೇತಾ ಸಿ. ರೈ, ಪಿ.…
ಕಾವಡಿ ಶ್ರೀವಾಣಿ ಯಕ್ಷಗಾನ ಕಲಾಮಂಡಳಿಯ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಉದಯ ಚಂದ್ರ ಶೆಟ್ಟಿಯವರು ಇತ್ತೀಚಿಗೆ ನೆರವೇರಿಸಿದರು. ಈ ಸಂಧರ್ಭದಲ್ಲಿ ಬಳ್ಳಾರಿಯ ಉದ್ಯಮಿ, ಸಮಾಜಸೇವಕ ರೇಣುಕಾ ಬೇಕರಿ ಮಾಲೀಕ ವಸಂತ ಶೆಟ್ಟಿ, ಕಲಾ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಮಾತನಾಡಿದ ವಸಂತ ಶೆಟ್ಟಿಯವರು ಮಾತನಾಡಿ ಯಕ್ಷಗಾನ ಒಂದು ಅದ್ಭುತವಾದ ಕಲೆ, ಯಕ್ಷಗಾನವನ್ನು ಉಳಿಸಿ ಬೆಳೆಸೋಣ ಎಂದು ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಆಹ್ವಾನ ಪತ್ರ (ಇನ್ವಿಟೇಶನ್ ಕಾರ್ಡ್) ಮದುವೆಗೆಂದು ಆಹ್ವಾನಿಸಲು ನೀಡುವ ಪತ್ರಕ್ಕೆಂದೇ ಸಾವಿರಾರು ರೂಪಾಯಿಗಳ ಖರ್ಚು ಮಾಡಿ ಕೊಡುವ ಕಾರ್ಡ್ ಗಳನ್ನು ಬಹುತೇಕರು ತೆರೆದು ಕೂಡಾ ನೋಡುವುದಿಲ್ಲ. ಇಲ್ಲಿಂದ ಶುರುವಾಗುವ ಈ ದುಂದು ವೆಚ್ಚ ಹೇಗಿರುತ್ತದೆ ನೀವೇ ನೋಡಿ. ಸಾವಿರಾರು ಜನರನ್ನು ಮದುವೆಗೆ ಕರೆಯುವುದು (ಕರೆದವರಿಗೆ ಯಾರು ಬಂದಿದ್ದಾರೆ ಎಂದು ಗಮನಿಸಲೂ ಸಮಯವಿಲ್ಲ. ಹಾಜರಾದವರಿಗೆ 6 ತಿಂಗಳ ನಂತರ ಯಾವ/ಯಾರ ಮದುವೆಗೆ ಹೋಗಿರುವುದು ಸಹ ನೆನಪಿರುವುದಿಲ್ಲ) ನಿಶ್ಚಿತಾರ್ಥದ ಹೆಸರಿನಲ್ಲಿ ವಿವಾಹವಾಗುವ ಮೊದಲೇ ಭವಿಷ್ಯದ ವಧು ವರರನ್ನು ಅಕ್ಕ ಪಕ್ಕ ಕೂರಿಸಿ ಇನ್ನಿಲ್ಲದ ಆರ್ಭಾಟ ಮಾಡುವುದು, ಮದುವೆಯ ಮೊದಲು ನಡೆಸುವ ಪ್ರೀ ವೆಡ್ ಫೋಟೋ ಶೂಟ್ ಒಂದು ಚಲನಚಿತ್ರ ಮಟ್ಟದಲ್ಲಿದ್ದು, ವಧು ಮತ್ತು ವರರು ವಿಚಿತ್ರ ಮತ್ತು ಪ್ರಜ್ಞಾಹೀನ ಭಂಗಿಗಳಲ್ಲಿ ಫೋಟೋಗಳಿಗೆ ಪೋಸ್ ನೀಡುತ್ತಾರೆ. ಅಲ್ಲದೆ, ಆ ಫೋಟೋಗಳನ್ನು (ಕೆಲವು ನಿಕಟವಾದವುಗಳು) ಮದುವೆ ಸಮಾರಂಭದಲ್ಲಿ ದೊಡ್ಡ ಟಿವಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಮದುವೆಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ ಹೂವಿನ ಅಲಂಕಾರ, ಬಗೆ…
ಪುಣೆ ಬಂಟ್ಸ್ ಅಸೋಸಿಯೇಷನ್ ನ 12ನೇ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 8ರ ಶನಿವಾರದಂದು ಬಂಟರ ಭವನ, ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಭವನ, ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ಅಪರಾಹ್ನ ಗಂಟೆ 2:30 ರಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈಭವ, ‘ಬಲೆ ತೆಲಿಪುಲೆ’ ಹಾಸ್ಯ ಪ್ರದರ್ಶನ, ಸಭಾ ಕಾರ್ಯಕ್ರಮ ಸಾಧಕರಿಗೆ ಸತ್ಕಾರಗಳೊಂದಿಗೆ ಜರಗಲಿದೆ. ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆಯಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಸಂಭ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭವಾನಿ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮುಂಬೈಯ ಕಾರ್ಯಾಧ್ಯಕ್ಷ ಕೆ.ಡಿ. ಶೆಟ್ಟಿ, ಗೌರವ ಅತಿಥಿಗಳಾಗಿ ಕರ್ನಾಟಕ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಬಾಲಿವುಡ್ ನ ಹೆಸರಾಂತ ನಟಿ ಅಮೃತಾ ರಾವ್ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಬಂಟ ಸಮಾಜದ ಸಾಧಕರಿಗೆ ಸತ್ಕಾರ ನಡೆಯಲಿದೆ. ಬಂಟ್ಸ್ ಅಸೋಸಿಯೇಷನ್ ನ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಅಪರಾಹ್ನ ಗಂಟೆ 2:30 ರಿಂದ ಆರಂಭಗೊಳ್ಳಲಿದ್ದು, ಸಾಂಸ್ಕೃತಿಕ…
ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ಶ್ರೀಮತಿ ಸವಿತಾ ಅರುಣ್ ಶೆಟ್ಟಿಯವರು ಮಂಡಿಸಿರುವ ಸಂಶೋಧನಾತ್ಮಕ ಪ್ರಬಂಧ “ಬೆಳಕಿಂಡಿ”. ಇದು ಖ್ಯಾತ ಸಾಹಿತಿ ಶ್ರೀಮತಿ ಮಿತ್ರಾ ವೆಂಕಟ್ರಾಜ್ ರವರ ಬದುಕು, ಬರಹಗಳ ಮೇಲೆ ಬೆಳಕು ಚೆಲ್ಲುವ, ಅವರ ಸಾಹಿತ್ಯ ಕೃಷಿಯ ಸಮೃದ್ಧ ಮಾಹಿತಿ ನೀಡುವ ಕೃತಿ. ಓದಿ ಅಭಿಪ್ರಾಯ ಬರೆಯಲು ತಡವಾದುದಕ್ಕೆ ವಿಷಾದಿಸುತ್ತೇನೆ. ಉತ್ಕೃಷ್ಟ ಕನ್ನಡದಲ್ಲಿ ಸೊಗಸಾಗಿ ರಚಿಸಿದ ಸಾಹಿತ್ಯಾವಲೋಕನದ ಈ ಕೃತಿ ಸವಿತಾರವರ ಅಪ್ರತಿಮ ಪ್ರತಿಭೆಗೆ ಹಿಡಿದ ಕನ್ನಡಿ. ಆಧುನಿಕ ಕನ್ನಡ ಸಾಹಿತ್ಯದ ಪ್ರಸಿದ್ಧ ಮಹಿಳಾ ಕತೆಗಾರರಲ್ಲಿ ಮಿತ್ರಾ ವೆಂಕಟ್ರಾಜ್ ರವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಹೊರನಾಡು ಮುಂಬೈನಲ್ಲಿ ವಾಸವಿದ್ದರೂ ಹಳ್ಳಿಯ ಮತ್ತು ನಗರ ಜೀವನದ ಬದುಕು ಬವಣೆಗಳನ್ನು ಕಂಡು ಅನುಭವಿಸಿ ಅದನ್ನು ಕತೆಯಾಗಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು ಮಿತ್ರಾ ವೆಂಕಟ್ರಾಜ್ ರವರು. ಇವರು ಬರೆದಿರುವ ಕಥಾ ಸಂಕಲನಗಳಾದ “ರುಕುಮಾಯಿ”, “ಹಕ್ಕಿ ಮತ್ತು ಅವಳು” ಹಾಗೂ “ಮಾಯಕದ ಸತ್ಯ” ಅಲ್ಲದೆ ಅನೇಕ ಪತ್ರಿಕೆ, ಸಾಪ್ತಾಹಿಕಗಳಿಗೆ ಬರೆದ…
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮೇ 6 ರಿಂದ 11 ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ನಡೆಯಲಿರುವ ಜೀರ್ಣೋದ್ಧಾರ, ಇತರ ಅಭಿವೃದ್ಧಿ ಕಾರ್ಯಗಳು ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಸಂಬಂಧಿಸಿ ಫೆ. 23ರಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಕ್ಷೇತ್ರದ ತಂತ್ರಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ‘ಪರ್ವ ಸನ್ನಾಹ’ ಎಂಬ ವಿಶೇಷ ಕಾರ್ಯಕ್ರಮಕ್ಕೆ ಎಡನೀರು ಸ್ವಾಮೀಜಿಯವರನ್ನು ಆಹ್ವಾನಿಸಲಾಯಿತು.ಕಾಟುಕುಕ್ಕೆ ಕ್ಷೇತ್ರದ ಆಡಳಿತ ಮೊಕ್ತೇಸರ ತಾರಾನಾಥ ರೈ ಪಡ್ಡಂಬೈಲು ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶಾಸ್ತ್ರಿ, ಮಾತೃ ಸಮಿತಿ ಅಧ್ಯಕ್ಷೆ ರಾಜಶ್ರೀ ಟಿ. ರೈ, ಆಡಳಿತ ಮಂಡಳಿ ಸದಸ್ಯ ಗಿರೀಶ್ ಕುಮಾರ್ ಮಯ್ಯ, ಸುಧಾಕರ ಕಲ್ಲಗದ್ದೆ, ಪ್ರಶಾಂತ್ ಭಟ್ ಬಟ್ಯಮೂಲೆ ಶ್ರೀಮಠಕ್ಕೆ ತೆರಳಿ ಸ್ವಾಮೀಜಿಯ ಆಶೀರ್ವಾದ ಪಡೆದು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸುಮಾರು 1500 ಕೆ.ಜಿ. ಭಾರದ ಹಾಗೂ ಐದು ಅಡಿ ಎತ್ತರದ ಕಂಚಿನ ಗಂಟೆ ಸ್ಥಾಪನೆಯಾಗಲಿದೆ. ದೇಶದಲ್ಲೇ ದ್ವಿತೀಯ ಅತ್ಯಂತ ದೊಡ್ಡ ಗಂಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯ ಅಯೋದ್ಯೆ ಶ್ರೀರಾಮ ಮಂದಿರದಲ್ಲಿ ಇರುವ 2200 ಕೆ.ಜಿ. ಗಂಟೆ ದೇಶದಲ್ಲೇ ಅತ್ಯಂತ ದೊಡ್ಡ ಗಂಟೆಯಾಗಿದೆ. ಕಾಪುವಿನಲ್ಲಿ ಸ್ಥಾಪಿಸಲಾಗುವ ಈ ಗಂಟೆ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ದೊಡ್ಡ ಗಂಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಫೆಬ್ರವರಿ 9ರಂದು ನಡೆಯಲಿರುವ ಕಾಪು ಹೊಸ ಮಾರಿಗುಡಿಯ ನೂತನ ಸ್ವರ್ಣ ಗದ್ದುಗೆ, ಬೆಳ್ಳಿರಥ ಮತ್ತಿತರ ಕೊಡುಗೆಗಳನ್ನು ಬರಮಾಡಿಕೊಳ್ಳಲು ವೈಭವದ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಆ ಸಂದರ್ಭದಲ್ಲಿ ಈ ಗಂಟೆಯನ್ನು ಅದ್ದೂರಿ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಗುವುದು.ಮುಂಬೈಯ ಮಿರಾರೋಡ್ ನಲ್ಲಿ ಅಲಯನ್ಸ್ ಇನ್ಫ್ರಾಸ್ಟ್ರಕ್ಟರ್ ಆಂಡ್ ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಉದ್ಯಮ ಸಂಸ್ಥೆ ಹೊಂದಿರುವ ಅರವಿಂದ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಮಾರಿಯಮ್ಮನ ನೂತನ ದೇಗುಲಕ್ಕೆ ಇದನ್ನು ಕೊಡುಗೆಯಾಗಿ ನೀಡಲಿದ್ದಾರೆ. ಆಂಧ್ರಪ್ರದೇಶದ ಬಿ.ಎಸ್.ಎಂ ಫೌಂಡ್ರಿ…
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ವತಿಯಿಂದ ಫೆಬ್ರವರಿ 6 ರಂದು ಶ್ರೀ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆ ಮತ್ತು ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರದ ಲೋಕಾರ್ಪಣೆ, ತುಳು ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪೋಜ್ವಲನ ಮಾಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಸಾದ್ವಿ ಶ್ರೀ ಮಾತನಂದಮಯಿ, ಸುಳ್ಯ ಕ್ಷೇತ್ರ ವಿಧಾನಸಭಾ ಶಾಸಕಿ ಭಾಗೀರತಿ ಮುರುಳ್ಯ, ಮೂಲ್ಕಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ವಾಮಯ್ಯ ಶೆಟ್ಟಿ ದಂಪತಿಗಳು, ದಾಮೋದರ್ ಶೆಟ್ಟಿ, ವಿಕ್ರಂ ಹೆಗ್ಡೆ, ಸುರೇಶ್ ರೈ ಮಕರಜ್ಯೋತಿ, ನವನೀತ್ ಶೆಟ್ಟಿ ಕದ್ರಿ, ಡಾ ಅದೀಪ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪೇಟೆಮನೆ, ಒಡಿಯೂರು ಶ್ರೀ ಗುರುದೇವಾನಂದ ಸಂಸ್ಥಾನಮ್ ನ ಎಲ್ಲಾ ಪದಾಧಿಕಾರಿಗಳು, ಸಮಿತಿ ಸದಸ್ಯರುಗಳು ಹಾಗೂ ಇತರರು ಉಪಸ್ಥಿತರಿದ್ದರು.