ಯುವಕರು ಸೇನೆಗೆ ಸೇರಿ ಇತರರಿಗೆ ಸ್ಫೂರ್ತಿಯಾಗಬೇಕು, ದೇಶ ಸೇವೆ ಮಾಡುವುದು ಹೆಮ್ಮೆಯ ಸಂಗತಿ. ಅಂತಹ ಸೈನಿಕರನ್ನು ಜನ ಅತ್ಯಂತ ಗೌರವದಿಂದ ಕಾಣುತ್ತಾರೆ ಎಂದು ನಿವೃತ್ತ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು. ಅವರು ರೋಟರಿ ಬಾಲ ಭವನದಲ್ಲಿ ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ಬಿನ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿಯವರು ಎಲ್ಲರನ್ನೂ ಸ್ವಾಗತಿಸಿ, ಮಾತನಾಡುತ್ತಾ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ನಮ್ಮೂರಿನವರೆಂಬುದು ಹೇಳಲು ನಮಗೆ ಹೆಮ್ಮೆ. ಅವರು ನಮ್ಮ ಯುವಕರಿಗೆ ಸ್ಫೂರ್ತಿಯಾಗಲಿ ಎಂದರು. ರೋಟರಿಯ ಹಿರಿಯ ಸದಸ್ಯರೂ ದಾನಿಗಳೂ ಆದ ತುಕಾರಾಮ ನಾಯಕ್, ಸುವರ್ಣ ತುಕಾರಾಮ್ ನಾಯಕ್, ಡಾ. ಭರತೇಶ್ ಆಧಿರಾಜ್ ವೀರ ಯೋಧ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಿದರು.


ಪ್ರವೀಣ್ ಕುಮಾರ್ ಶೆಟ್ಟಿಯವರ ಧರ್ಮಪತ್ನಿ, ಹೆತ್ತವರು ಹಾಗೂ ರೋಟರಿ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ. ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.
















































































































