Author: admin

ಒಂದು ಕಾಲದಲ್ಲಿ ಮಾಸ್ ಫಿಲಂ, ಲಾಂಗು ಮಚ್ಚಿಗೆ ಮಣೆ ಹಾಕ್ತಿದ್ದ ಸಿನಿಮಾಗೆ ಜೈಕಾರ ಹಾಕ್ತಿದ್ದಾಗ, ಎಮೋಷನ್ಸ್ ಇರುವ ಅದರಲ್ಲೂ ಕರಾವಳಿ ಭಾಗದ ಭಾಷೆಯನ್ನ ಇಡೀ ವಿಶ್ವಕ್ಕೆ ಪರಿಚಯಿಸಿ ಅದರಲ್ಲೂ ವಿಭಿನ್ನವಾಗಿ ಕಥೆಯಿದೆ ಅಂತ ತೋರಿಸಿದ ಹೆಗ್ಗಳಿಕೆ ನಮ್ಮ ಶೆಟ್ಟಿ ಗ್ಯಾಂಗ್ ಗೆ ಸೇರಬೇಕು. ಶಿವಣ್ಣ, ರವಿಚಂದ್ರನ್, ಕಿಚ್ಚ ಸುದೀಪ್, ದರ್ಶನ್ ಇವರೆನ್ನೆಲ್ಲಾ ಇಂತದ್ದೇ ವರ್ಗದವರು ಐ ಮೀನ್ ಈ ಜಿಲ್ಲೆಯವರು ಅಂತ ಹೆಸರಿಸೋಕೆ ಆಗಲ್ಲ ಕಾರಣ ಅವರು ಎಲ್ಲಾ ಕಡೆಯೂ ಸಲ್ಲುವಂಥವರು. ಇತ್ತೀಚೆಗೆ ಇವರನ್ನೆಲ್ಲಾ ಬೀಟ್ ಮಾಡಿ ಮುಂದೆ ಹೆಜ್ಜೆ ಇಟ್ಟಿದ್ದು ಇದೇ RRR ಎಂದೇ ಪ್ರಸಿದ್ಧಿ ಪಡೆದ ಶೆಟ್ಟಿ ಗ್ಯಾಂಗ್. ಒಬ್ಬರಿಗಿಂತ ಒಬ್ಬೊರು ಮೇಲು ಎನ್ನುವ ಹಾಗೆ ಕಥೆ ಬರೆದು ಅದನ್ನ ಅಚ್ಚು ಕಟ್ಟಾಗಿ ಮಾರ್ಕೆಟಿಂಗ್ ಮಾಡಿ ಜನರಿಗೆ ತಲುಪಿಸ್ತಿದ್ದ ಆ ಗ್ಯಾಂಗ್ ಈಗ ಕಾಣೆಯಾಗಿದೆ. ಒಬ್ಬೊರಿಗೊಬ್ಬರ ಸಿನಿಮಾ ಬಂದಾಗ ತಮ್ಮ ಮನೆಯವರ ಸಿನಿಮಾ ಎನ್ನುವಂತೆ ಪೋಸ್ಟ್ ಮಾಡಿ, ಪ್ರೀಮಿಯರ್ ಶೋ ಅಥವಾ ಫಸ್ಟ್ ಡೇ ಫಸ್ಟ್ ಶೋ ನೋಡಿ…

Read More

ಆಳ್ವಾಸ್ ಸ್ವಾಯತ್ತಾ ಕಾಲೇಜಿನ ಮಾನವಿಕ ವಿಭಾಗದ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಕುವೆಂಪು ಸಭಾಂಗಣದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್, ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿನ್ನೆ ಪಡೆದ ಅನುಭವಗಳನ್ನು ಮಾರ್ಗದರ್ಶಿಯಾಗಿ ತೆಗೆದುಕೊಂಡು, ನಾಳೆಯ ಸವಾಲುಗಳನ್ನು ಸ್ವೀಕರಿಸಿ, ಜವಾಬ್ದಾರಿಯುತ ನಾಗರೀಕರಾಗಿ ರೂಪುಗೊಳ್ಳಬೇಕು ಎಂದರು. ಸ್ಪರ್ಧೆಗಳು, ಚರ್ಚೆಗಳು ಮತ್ತು ಸಂವಾದಗಳ ಮೂಲಕ ಸಂವಿಧಾನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಸಂವಿಧಾನದ ಮೌಲ್ಯಗಳನ್ನು ಗೌರವಿಸಿ, ಪಾಲಿಸಿ, ಮುಂದಿನ ಪೀಳಿಗೆಗೆ ಬಲಿಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಎಲ್ಲರೂ ಸೇರಿ ಕೈಗೊಳ್ಳೋಣ ಎಂದರು. ಸಂವಿಧಾನವು ಎಲ್ಲವನ್ನೂ ನೀಡಿದ್ದರೂ, ನಾವು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿ ಎಡವಿದ್ದೇವೆ. ಸಮಾಜದಲ್ಲಿ ಇನ್ನೂ ಅಸಮಾನತೆ, ಬಡತನ ಮತ್ತು ಅನ್ಯಾಯಗಳು ನಡೆಯುತ್ತಿವೆ. ಕೆಲವರಲ್ಲಿ ಸಂಪತ್ತಿನ ಅತಿಯಾದ ಸಂಗ್ರಹಣೆಯಾದರೆ, ಇನ್ನೂ ಹಲವರು ಮೂಲಭೂತ ಅಗತ್ಯಗಳಿಗೂ ಹೋರಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳನ್ನು ನೆನಪಿಸಿಕೊಳ್ಳುವುದು ಅಗತ್ಯ ಎಂದರು. ಸಂವಿಧಾನ ದಿನಾಚರಣೆಯ ಅಂಗವಾಗಿ ಟ್ರೇಷರ್ ಹಂಟ್, ಕ್ವಿಜ್, ರೀಲ್ಸ್ ಮೇಕಿಂಗ್,…

Read More

ಬಂಟರ ಯಾನೆ ನಾಡವರ ಮಾತೃ ಸಂಘ ದ.ಕ. ಮಂಗಳೂರು ಇದರ ವತಿಯಿಂದ ನಡೆಸಲ್ಪಡುವ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ವಾರ್ಷಿಕೋತ್ಸವ ಡಿಸೆಂಬರ್ 20 ರಂದು ಜರಗಲಿದೆ. ಸಂಜೆ 4 ಗಂಟೆಗೆ ಮಕ್ಕಳ ನೃತ್ಯೋತ್ಸವ ಆರಂಭವಾಗಲಿದೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಸಂಸ್ಥೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಉಪವಿಭಾಗದ ಎ.ಸಿ ಸ್ಟೆಲ್ಲಾ ವರ್ಗೀಸ್ ಕಾರ್ಯಕ್ರಮವನ್ನು ಉದ್ಘಾಟನೆ ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಗಾಗಿ ಸುಳ್ಯ ಶಾರದಾ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಸ್ಪರ್ಣಕಲಾ, ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಹಿರಿಯ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಪೈ ಹಾಗೂ ದತ್ತಿನಿಧಿ ಪ್ರಾಯೋಜಕರಾದ ಸಂಜೀವ ಆಳ್ವ ಮಾಲಕರು ಮೂಕಾಂಬಿಕ ಗ್ಯಾಸ್ ಏಜೆನ್ಸಿಸ್ ಪುತ್ತೂರು, ಮನೋಹರ ರೈ ಎನ್ (ವಿಶ್ರಾಂತ…

Read More

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡುತ್ತಾ, “ಭಗವಂತನನ್ನು ನೆನೆಯುವುದೇ ಜಪ. ಜಪ ಆಧ್ಯಾತ್ಮದ ಜೀವಾಳ. ದತ್ತ ಎಂದರೆ ಕೊಡಲ್ಪಟ್ಟದ್ದು ಎಂದರ್ಥ. ಭಗವಾನ್ ದತ್ತಾತ್ರೇಯರು ವಿಶ್ವವನ್ನೇ ವಿದ್ಯಾಲಯವಾಗಿಸಿದವರು. ಭಗವಂತನ ಅವತಾರ ಸಮರಸ ತತ್ವದ ಅವತಾರ. ದತ್ತಾವತಾರ ಜ್ಞಾನದ ಅವತಾರ. ಅಂತರಂಗದ ಅಂಧಕಾರ ದೂರವಾಗಲು ಜ್ಞಾನದ ಬೆಳಕು ಅವಶ್ಯ. ಧ್ಯಾನ, ಜ್ಞಾನ ಮತ್ತು ಮಾನವನ್ನು ಗೌರವಿಸುವುದು ಶ್ರೇಷ್ಠತೆ. ಮಮಕಾರ ಮತ್ತು ಅಹಂಕಾರವನ್ನು ದೂರಗೊಳಿಸಲು ಜ್ಞಾನ ಸಹಕಾರಿ. ನಮ್ಮೊಳಗಿನ ಅಂತರಂಗದ ಕತ್ತಲೆ ದೂರಮಾಡಲು ದೀಪಾವಳಿಯ ಆಚರಣೆ” ಎಂದರು. ​ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ, ಶ್ರೀ ದತ್ತ ಕೋಟಿ ನಾಮಜಪಯಜ್ಞದ ಸಮಾಪ್ತಿ ಹಾಗೂ ಶ್ರೀ ಗುರುದೇವದತ್ತ ಲಕ್ಷದೀಪಾವಳಿಯ ಸಮಾರಂಭದಲ್ಲಿ ದಿವ್ಯ ಉಪಸ್ಥಿತಿ ನೀಡಿ ಆಶೀರ್ವಚನವಿತ್ತ ಪೂಜ್ಯ ಶ್ರೀಗಳವರು, “ಸಮಾಜದ ಹಿತ ಕಾಪಾಡುವವರು ಸಂತರು. ಸಂತ ಮತ್ತು ಸಮಾಜ ಬದುಕಿನ ಎರಡು ಮುಖಗಳಿದ್ದಂತೆ. ವಿಶ್ವವನ್ನೇ ತನ್ನದೆನ್ನುವವನು ಗುರು.…

Read More

ಕ್ಲಾಟ್ ಒಕ್ಕೂಟವು ಡಿಸೆಂಬರ್ 7ರಂದು ನಡೆಸಿದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್) 2025 ರಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಳ್ವಾಸ್‌ನ ದರ್ಶನ್ ಹೆಚ್‌.ಜೆ, ಮಧು, ರಕ್ಷಾ ಕೆ, ರಾಜ್‌ದೀಪ್ ಎಸ್ ನಾಯಕ್, ಕುಂದನಿಕ ಗೌಡ, ಭೂಮಿ, ಗೌರಿ ಎಸ್ ಪಾಟೀಲ್, ಅರ್ವಿನ್, ಅನನ್ಯ ಡಿ, ಅನ್ನಾ ಲಹರಿ, ಮಿಥಾಲಿ ನಾಯ್ಕ ಕ್ಲಾಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಚಾರ‍್ಯ ಮಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್‌.ಡಿ ಅಭಿನಂದಿಸಿದ್ದಾರೆ.

Read More

ಶಿಕ್ಷಣ ಕ್ಷೇತ್ರದ ಮಹೋನ್ನತ ಗುರಿಯೊಂದಿಗೆ ಏಳು ಜನ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ಸ್ಥಾಪಿಸಿದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ 2022ರಲ್ಲಿ ತನ್ನ ಶಿಕ್ಷಣ ಸೇವೆಯನ್ನು ಉಡುಪಿಗೂ ವಿಸ್ತರಿಸುವ ಯೋಜನೆಯೊಂದಿಗೆ ಕಲ್ಯಾಣಪುರದ ತ್ರಿಶಾ ಪ. ಪೂ. ಕಾಲೇಜಿನ ಶೈಕ್ಷಣಿಕ ಸಹಭಾಗಿತ್ವ ವಹಿಸಿಕೊಂಡಿತು. ಈಗಾಗಲೇ ಪಿ. ಯು ಫಲಿತಾಂಶದಲ್ಲಿ ಆರಂಭಿಕ ವರ್ಷದಲ್ಲೇ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಸಂಸ್ಥೆ ಉಡುಪಿಯ ಶಾಖೆಯಲ್ಲೂ ಆ ಯಶಸ್ಸನ್ನು ಮುಂದುವರೆಸಿದೆ. ತನ್ನ ಪ್ರಥಮ ವರ್ಷದ ಫಲಿತಾಂಶದಲ್ಲೇ 100% ಗಳಿಸುವುದರ ಜೊತೆಗೆ ಪಿ. ಯು. ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರ್ಯಾಂಕ್ ಗಳಿಸುವ ಮೂಲಕ ಸಂಸ್ಥೆ ಕೀರ್ತಿ ಗಳಿಸಿದೆ. 94 ಮಕ್ಕಳೊಂದಿಗೆ ಪ್ರಾರಂಭವಾದ ವಿದ್ಯಾಸಂಸ್ಥೆಯಲ್ಲಿ ಇಂದು 400ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಕೇವಲ ಅಂಕ ಗಳಿಕೆಯ ಹಸಿವನ್ನು ಮಾತ್ರ ಬೆಳೆಸದೆ ಜೀವನ ಮೌಲ್ಯಗಳು, ನೈತಿಕತೆ, ಸದ್ವಿಚಾರಗಳನ್ನು ಪ್ರತಿನಿತ್ಯ ಬೋಧಿಸುತ್ತಿರುವುದು ಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಉಡುಪಿಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಯಶಸ್ಸಿನ ಪಯಣ · ಸಂಸ್ಥೆ ಪ್ರಾರಂಭದ ವರ್ಷದಲ್ಲೇ…

Read More

ಬ್ರಹ್ಮಾವರ: ಅಂತಿಮ ಪರೀಕ್ಷೆಯ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಡಿ. 18 ರಂದು ಪರೀಕ್ಷಾಪೂರ್ವ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಾಗ್ಮಿ, ವ್ಯಕ್ತಿತ್ವ, ಕಲಿಕಾ, ಪ್ರೇರಣಾ ಗುರು ಮೈಸೂರಿನ ಶ್ರೀ ಚೇತನ್ ರಾಮ್ ಆರ್. ಎ. ಆಗಮಿಸಿದ್ದರು. ಅವರು ವಿದ್ಯಾರ್ಥಿಗಳಿಗೆ ವೈಯಕ್ತಿಕ ಅಧ್ಯಯನ ಸಮಸ್ಯೆ, ಹೇಗೆ ಓದಬೇಕು, ಆಹಾರ ಮತ್ತು ಆರೋಗ್ಯ ನಿರ್ವಹಣೆ, ಮೆದುಳಿನ ನಿರ್ವಹಣ ತಂತ್ರ, ಪಂಚೇಂದ್ರಿಯಗಳ ನೆರವಿನಿಂದ ವಿಷಯ ಸಂಗ್ರಹಣೆ, ಸಕಾರಾತ್ಮಕ ಚಿಂತನೆ, ಜ್ಞಾನ ಕೌಶಲ ಮನೋಭಾವದ ಕುರಿತು ಮಾಹಿತಿ ನೀಡಿ ಪಠ್ಯ ಪುಸ್ತಕವೇ ತಾಯಿ ಅದನ್ನು ಕೇಳಿ ತಿಳಿದು ನಿರಂತರ ಓದುವುದೇ ಸಾಧನೆಯ ಮಂತ್ರವೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ಸರಿಯಾದ ಸಮಯದಲ್ಲಿ ಸೂಕ್ತ ವ್ಯಕ್ತಿಯಿಂದ ಮಕ್ಕಳಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದರು. ಕಾರ್ಯಾಗಾರದಲ್ಲಿ ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್, ಜಿ ಎಮ್ ಗ್ಲೋಬಲ್ ಸ್ಕೂಲ್‍ನ ಪ್ರಾಂಶುಪಾಲೆ ದೀಪ್ತಿ ಶೆಟ್ಟಿ,…

Read More

ಸರ್ವಶಕ್ತ ಭಗವಂತನ ಆಶೀರ್ವಾದದಿಂದ ಈ ಕ್ಷೇತ್ರದ ಜೊತೆಯಲ್ಲಿ ಋಣಾನುಬಂಧವಿದೆ. ಇಲ್ಲಿ ಸಣ್ಣ ಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಸಂದರ್ಭದ ನಂತರ ಇಲ್ಲಿ ದೇವಸ್ಥಾನದ ಶಂಕುಸ್ಥಾಪನೆಯನ್ನು ಕೂಡ ಮಾಡುವ ಯೋಗ ನನಗೆ ಸಿಕ್ಕಿದೆ. ನಂತರ ನಡೆದ ಜೀರ್ಣೋದ್ದಾರ ಮತ್ತು ಬ್ರಹ್ಮ ಕಲಶೋತ್ಸವದ ಗೌರವಾಧ್ಯಕ್ಷನಾಗಿ ನನ್ನಿಂದಾಗುವ ದೇವತಾ ಕಾರ್ಯವನ್ನು ಮಾಡಿ ಸಂತೃಪ್ತಿಯನ್ನು ಪಡೆದಿದ್ದೇನೆ. ಕ್ಷೇತ್ರದ ವಿಶ್ವಸ್ಥ ಮಂಡಳಿಯ ಗೌರವಾಧ್ಯಕ್ಷನಾಗಬೇಕೆಂಬ ನಿಮ್ಮೆಲ್ಲರ ಪ್ರೀತಿಯ ಮಾತಿಗೆ ಒಪ್ಪಿ ನನ್ನಿಂದಾಗುವ ಸೇವೆಯನ್ನು ನೀಡಲು ಸದಾ ಸಿದ್ದನಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ. ಹಾಗೆಯೇ ಜನವರಿಯಲ್ಲಿ ನಡೆಯುವ ವಾರ್ಷಿಕೋತ್ಸವ ಮಹಾಪೂಜೆಯ ಆಮಂತ್ರಣ ಪತ್ರಿಕೆ ಬಿಡಗಡೆ ಆಗಿದೆ. ಪುಣೆಯ ಸರ್ವ ತುಳು ಕನ್ನಡಗಿರ ಮತ್ತು ಇತರೆ ಬಾಷಿಕರ ಭಕ್ತಿಯ ಪುಣ್ಯ ಕ್ಷೇತ್ರವಾಗಿದೆ ಇದು. ಕಾಲಾನುಸಾರ ಕ್ಷೇತ್ರದ ಜೀರ್ಣೋದ್ದಾರದ ಕಾರ್ಯಗಳು ಸಂಕಲ್ಪದಂತೆ ಆಗಿ ದೇವಸ್ಥಾನ ಕಂಗೊಲಿಸುತ್ತಿದೆ. ಯಾವುದೇ ಆಡಂಬರ ಇಲ್ಲದೆ ಎಲ್ಲರ ಸೇವೆ ನಿಸ್ವಾರ್ಥವಾಗಿ ನಡೆದಾಗ ಸ್ವಾಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮುಂದಿನ ವಾರ್ಷಿಕೋತ್ಸವಕ್ಕೆ ಬಹಳಷ್ಟು ತಯಾರಿ ನಡೆಯಲಿಕ್ಕಿದೆ. ಕ್ಷೇತ್ರದ ಧಾರ್ಮಿಕ, ಸಾಂಸ್ಕ್ರತಿಕ ಮತ್ತು ಎಲ್ಲಾ ಸೇವಾ…

Read More

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಬೆಳ್ತಂಗಡಿ ತಾಲೂಕು ನಾರಾವಿಯ ಬಡ ರೋಗಿಯ ಶಸ್ತ್ರಚಿಕಿತ್ಸೆಗೆ 25,000 ರೂಪಾಯಿ ಆರ್ಥಿಕ ನೆರವನ್ನು ಚೆಕ್ ಮುಖಾಂತರ ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ಹಿರಿಯ ದಾನಿಗಳಾದ ತುಕಾರಾಮ ನಾಯಕ್, ಡಾ. ಭರತೇಶ್ ಆದಿರಾಜ್, ಮಾಜಿ ಸಹಾಯಕ ಗವರ್ನರ್ ಗಳಾದ ಹರಿಪ್ರಕಾಶ್ ಶೆಟ್ಟಿ, ಪ್ರಕಾಶ್ ಆಚಾರ್ಯ, ಶೈಲೇಂದ್ರ ರಾವ್ ಹಾಗೂ ರೋಟರಿಯ ಸದಸ್ಯರು ಉಪಸ್ಥಿತರಿದ್ದರು.

Read More

ಸುಜ್ಞಾನ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ಡಿಸೆಂಬರ್ 16 ರಂದು ವಂಡಾರಿನ ‘ಕೃಷ್ಣ ಪ್ರಸಾದ್ ಕ್ಯಾಶ್ಯೂಸ್ ಪ್ರೈವೇಟ್ ಲಿಮಿಟೆಡ್’ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳಿಗೆ ಕೈಗಾರಿಕಾ ಕಾರ್ಯಾಚರಣೆಗಳ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ನೀಡುವ ಉದ್ದೇಶದಿಂದ ಈ ಭೇಟಿಯನ್ನು ಆಯೋಜಿಸಲಾಗಿತ್ತು. ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗೋಡಂಬಿ ಸಂಸ್ಕರಣೆಯ ಸಂಪೂರ್ಣ ಹಂತಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು. ಕಾರ್ಖಾನೆಯ ಅಧಿಕಾರಿಗಳು ಅಲ್ಲಿನ ವಿವಿಧ ಯಂತ್ರೋಪಕರಣಗಳ ಕಾರ್ಯವೈಖರಿ, ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಮತ್ತು ಒಟ್ಟಾರೆ ಉತ್ಪಾದನಾ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸಂಪತ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವೃತ್ತಿಜೀವನದ ಅವಕಾಶಗಳು, ವೃತ್ತಿಪರ ಬೆಳವಣಿಗೆ ಹಾಗೂ ಜೀವನದಲ್ಲಿ ಶಿಸ್ತು ಮತ್ತು ಸಮರ್ಪಣಾ ಭಾವದ ಮಹತ್ವದ ಬಗ್ಗೆ ಅಮೂಲ್ಯವಾದ ಸಲಹೆಗಳನ್ನು ನೀಡಿ ಪ್ರೇರೇಪಿಸಿದರು. ಈ ಸಂದರ್ಭದಲ್ಲಿ ಸುಜ್ಞಾನ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಮತ್ ಶೆಟ್ಟಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.

Read More