Author: admin
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ವಿಶ್ವವಿದ್ಯಾಲಯ ಸವಿತಾ ಎಸ್ ರೈ ಅವರಿಗೆ ‘ಸಾಂಸ್ಥಿಕ ಬದ್ಧತೆಯ ನಿರ್ಧಾರಕಗಳು, ನೈತಿಕ ನಾಯಕತ್ವವು ಆಟವನ್ನು ಬದಲಾಯಿಸುವವರೇ?’ ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿ ನೀಡಿದೆ. ಮಾಹೆ, ಮಣಿಪಾಲದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಸಹ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ಕೂಡಮಾರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸವಿತಾ ಎಸ್ ರೈಯವರು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ ಅವರ ಪತ್ನಿ ಮತ್ತು ಶಂಕರ ಎನ್ ಶೆಟ್ಟಿ ತಾಳಿಪಾಡಿ ಮೂಡ್ರಗುತ್ತು ಹಾಗೂ ವಿಜಯ ಎಸ್ ಶೆಟ್ಟಿ ಬೇಳೂರು ದನ್ಯಾಡಿ ಮನೆ ದಂಪತಿಯವರ ಪುತ್ರಿ ಮತ್ತು ಬೈಲು ಕೆಳಗಿನಮನೆ ದಿವಂಗತ ಕೋಚ್ಚಣ್ಣ ರೈ ಹಾಗೂ ಮಾಣಿಗುತ್ತು ಪ್ರಫುಲ್ಲ ಕೆ ರೈ ಅವರ ಸೊಸೆ.
ಮುಂಬಯಿ: ಮುಖಪುಟದ ಜಾತೀಯ ಬಳಗಗಳಲ್ಲಿ ಒಂದಾದ ಓನ್ಲಿ ಬಂಟ್ಸ್ ಆರ್ ಅಲೋವ್ಡ್ ಬಳಗದ ಎಂಟನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರುನಲ್ಲಿ ನೆಲೆಸಿರುವ ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಮಹಾಬಲ ಆಳ್ವ ಅವರು ರಚಿಸಿದ `ಜ್ವಾಲಾ ಮೋಹಿನಿ ಎಂಬ ಯಕ್ಷಗಾನ ಪ್ರಸಂಗವನ್ನು ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ (ರಿ.) ಸಾಂತಾಕ್ರೂಜ್, ಮುಂಬಯಿ ಇವರ ಸಂಯೋಜನೆಯಲ್ಲಿ ಇದೇ ಬರುವ ರವಿವಾರ (ಸೆ.೧೪) ಅಪರಾಹ್ನ ೨:೩೦ ಗಂಟೆಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದಲ್ಲಿ, ಅದ್ದೂರಿಯಾಗಿ ಪ್ರದರ್ಶನಗೊಳ್ಳಲಿದೆ. ಬಳಗದ ನಿರ್ವಾಹಕ ಪ್ರವೀಣ್ ಕಯ್ಯ ಹಾಗೂ ಶ್ರೀಮತಿ ಕಾಂತಿ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಕೂಟದ ಸರ್ವ ಸದಸ್ಯರ ಸಹಯೋಗದಿಂದ ನಡೆಯಲಿರುವ ಈ ಯಕ್ಷಗಾನ ಪ್ರದರ್ಶನದ ಹಿಮ್ಮೇಳ ಮುಮ್ಮೇಳದಲ್ಲಿ ಮುಂಬಯಿಯ ಪ್ರಸಿದ್ಧ ಹಾಗೂ ಪ್ರಬುದ್ಧ ಕಲಾವಿದರು ಭಾಗವಹಿಸಲಿರುವರು. ಕಾರ್ಯಕ್ರಮದಲ್ಲಿ ಸದಸ್ಯ ಬಾಂಧವರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಬಳಗದ ಪರವಾಗಿ ನಿರ್ವಾಹಕರು ಮತ್ತು ಸದಸ್ಯರು ವಿನಂತಿಸಿ ಕೊAಡಿದ್ದಾರೆ.
ಮಂಗಳೂರು – ಮಳೆಗಾಲ ಬರುವಾಗ ತಂಪಾದ ವಾತಾವರಣ, ಮಳೆ ಹನಿ, ಸುತ್ತ ಮುತ್ತ ಹಸಿರಿನಿಂದ ತುಂಬಿದ ಪರಿಸರ ಇವುಗಳೆಲ್ಲ ನಮ್ಮ ಮನಸ್ಸಿಗೆ ಮುದ ನೀಡುತ್ತವೆ. ಆದರೆ ಈ ಮಳೆಯೊಂದಿಗೆ ನಮ್ಮ ಆರೋಗ್ಯಕ್ಕೆ ಸವಾಲುಗಳೂ ಬರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ Covid-19 ಮಹಾಮಾರಿ ನಂತರ, ಜನರ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂಬುದು ನಂಬಲೆ ಬೇಕಾದ ವಿಷಯ . ಅದರ ಪರಿಣಾಮವಾಗಿ, ಸಾಮಾನ್ಯ ಶೀತ-ಜ್ವರದಿಂದ ಹಿಡಿದು ಕೆಮ್ಮು, ಫ್ಲೂ ಮುಂತಾದ ಸೋಂಕುಗಳು ಹಿಂದಿನಿಗಿಂತ ಹೆಚ್ಚು ಕಾಡುತ್ತಿರುವುದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಇರುವುದು ಅಷ್ಟೇ ಸತ್ಯ ಸಂಗತಿ. Covid ನಂತರದ ಪರಿಸ್ಥಿತಿ – ರೋಗ ನಿರೋಧಕ ಶಕ್ತಿ ಕುಸಿತ Covid ನಂತರ ಅನೇಕರು ಶಾರೀರಿಕ ಸುಸ್ತು, ಶ್ವಾಸಕೋಶ ಸಂಬಂಧಿಸಿದತ ಖಾಯಿಲೆ, ಅಲರ್ಜಿ ಹೆಚ್ಚಳ ಮತ್ತು ದೀರ್ಘಕಾಲೀನ ಕೆಮ್ಮು ಮುಂತಾದ ಲಕ್ಷಣಗಳಿಂದ ಬಳಲುತ್ತಿದ್ದಾರೆ. . ಹಿಂದಿನಂತೆಯೇ ಒಂದು ವಾರದಲ್ಲಿ ಶೀತ-ಜ್ವರದಿಂದ ಚೇತರಿಸಿಕೊಳ್ಳುವ ಬದಲು, ಈಗ ಕೆಲವರಿಗೆ 3-4 ವಾರಗಳವರೆಗೆ ಕೆಮ್ಮು ಅಥವಾ ಫ್ಲೂ ಲಕ್ಷಣಗಳು…
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸುಜ್ಞಾನ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ಕಬಡ್ಡಿ ಪಂದ್ಯಾಟವು ಬುಧವಾರ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಕಾಲೇಜಿನ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಅವರು ಮಾತನಾಡಿ, ಕ್ರೀಡೆಯನ್ನು ಪ್ರೀತಿಸಿ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಕ್ರೀಡಾಂಗಣದಲ್ಲಿ ಆಡುವವರಿಗಿಂತ ಮೊಬೈಲ್‌ನಲ್ಲಿಯೇ ಆಡುವವರ ಸಂಖ್ಯೆ ಹೆಚ್ಚಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಶಾರೀರಿಕ ಕ್ರೀಡೆಯಿಂದ ವ್ಯಕ್ತಿಯ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಹೇಳಿದರು. ಮಹಾತ್ಮಗಾಂಧಿ ಪ್ರೌಢಶಾಲೆ ಸಾಬ್ರಕಟ್ಟೆಯ ದೈಹಿಕ ಶಿಕ್ಷಣ ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ, ಸೋಲು, ಗೆಲುವಿನ ಬಗ್ಗೆ ಗಮನ ಹರಿಸದೆ ಕ್ರೀಡೆಯಲ್ಲಿ ಖುಷಿಯಿಂದ ತೊಡಗಿಸಿಕೊಳ್ಳಿ. ಕ್ರೀಡೆಯಲ್ಲಿ ಗೆದ್ದಾಗ ಅಹಂಕಾರ ಪಡದೇ ಸೋತಾಗ ನಿರಾಸಕ್ತಿ ಹೊಂದದೆ ಭಾಗವಹಿಸುವಿಕೆಯ ಬಗ್ಗೆ ಗಮನಹರಿಸಿ ಎಂದು ಕಿವಿಮಾತು ನುಡಿದರು. ದೇಶೀ ಕ್ರೀಡೆಯಾದ ಕಬಡ್ಡಿಯು…
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) : 25ನೇ ಸಂಸ್ಥಾಪನಾ ದಿನಾಚರಣೆ, 25 ಸಂಘ ಸಂಸ್ಥೆಗಳಿಗೆ ವಿಶೇಷ ಪುರಸ್ಕಾರ
ಕಳೆದ 25 ವರ್ಷಗಳಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸರ್ವತೋಮುಖ ಅಭಿವೃದ್ದಿಯ ಬಗ್ಗೆ ಯಶಸ್ವಿಯಾಗಿ ಹೋರಾಟ ನಡೆಸುತ್ತಾ ಬಂದಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಯ 25ನೇ ಸಂಸ್ಥಾಪನಾ ದಿನಾಚರಣೆಯು ಸೆಪ್ಟೆಂಬರ್ 5 ರಂದು ಸಂಜೆ ಮುಂಬಯಿ ಸಾಕೀನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್ ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಇವರ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಶ್ರೀ ದಿಗಂಬರ ಜೈನ ಮಠ ಮೂಡಬಿದಿರೆ ಇದರ ಜಗದ್ಗುರು ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವಾರ್ಯ ಮಹಾಸ್ವಾಮಿಜಿ, ಕರ್ನಾಟಕ ಸರಕಾರದ ಮಾನ್ಯ ಸ್ವೀಕರ್ ಯು.ಟಿ ಖಾದರ್ ಅವರು ಇತರ ಗಣ್ಯರಾದ ಖ್ಯಾತ ಉದ್ಯಮಿ ಸಮಾಜ ಸೇವಕ ಡಾ| ಕನ್ಯಾನ ಸದಾಶಿವ ಶೆಟ್ಟಿ, ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ದ.ಕ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ ಶೆಟ್ಟಿ…
ಶಿವಾಯ ಫೌಂಡೇಶನ್ ಅವರ ಸೇವೆಯ ಸದ್ವಿಚಾರವು ಸಮೃದ್ಧ ಬದುಕಿನ ಸಾಧನವಾಗಿದೆ. ಕ್ರಿಯಾಶೀಲತೆ ಇವರಲ್ಲಿದ್ದು, ನಿಮ್ಮ ಬದುಕು ಹಸನಾಗಲಿ ಎಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಶಿವಾಯ ಫೌಂಡೇಶನ್ ನ ವತಿಯಿಂದ ಪಡುಬಿದ್ರೆಯ ಬಂಟರ ಸಂಘದ ಕೃಷ್ಣ ಸುಧಾಮ ವೇದಿಕೆಯಲ್ಲಿ ನಡೆದ ಗಣ್ಯರ ಸನ್ಮಾನ, ಪ್ರೇರಣಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚಿಸಿದರು. ಮುಖ್ಯ ಅತಿಥಿಯಾಗಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ನಮ್ಮ ಬದುಕು ಅರ್ಥಪೂರ್ಣವಾಗಲು ಸಮಾಜ ಸೇವೆ ಮುಖ್ಯ. ಶಿವಾಯ ಫೌಂಡೇಶನ್ ಇದನ್ನೇ ಅಡಿಪಾಯವಾಗಿಸಿ ಸಂಪಾದನೆಯ ಒಂದು ಭಾಗವನ್ನು ವ್ಯಯಿಸುತ್ತಲೇ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಇದು ಪುಣ್ಯದ ಕಾರ್ಯವೆಂದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಶಿವಾಯ ಸಂಸ್ಥೆ ನಡೆಸಿದ ತುಳು ಭಾಷೆ, ಕೌಶಲಾಭಿವೃದ್ದಿಗಳ ಸಾಧಕರಿಗೆ ಮಾನವೀಯತೆಯ ನೆಲೆಯ ಗೌರವಗಳು ಶ್ಲಾಘನೀಯವೆಂದರು. ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಸಂಸ್ಥೆಯ ಮೂಲಕ ವಿದ್ಯಾರ್ಥಿ ವೇತನ ಪಡೆಯುತ್ತಿರುವ ಯುವಶಕ್ತಿಯ ಬಾಳು ಬೆಳಗಲಿ ಎಂದರು. ಸಂಸ್ಥೆಯ…
ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆಯ ಸಹ ಶಿಕ್ಷಕರಾದ ವಸಂತರಾಜ ಶೆಟ್ಟಿ ಅವರನ್ನು ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ಸನ್ಮಾನಿಸಿ ಗೌರವಿಸುವ ಮೂಲಕ ಆಚರಣೆ ಮಾಡಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವಸಂತರಾಜ ಶೆಟ್ಟಿಯವರು, ಯುವ ಬಂಟರ ಸಂಘದ ಪ್ರತಿಯೊಂದು ಕಾರ್ಯಕ್ರಮಗಳನ್ನು ಬಹಳ ಹತ್ತಿರದಿಂದ ನೋಡಿಕೊಂಡಿದ್ದೇನೆ. ಅವರು ಮಾಡುವ ಪ್ರತಿಯೊಂದು ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾದದ್ದು. ಅದರಲ್ಲೂ ನಮ್ಮಂತಹ ಸಾಮಾನ್ಯ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಈ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು. ಸಂಘದ ಸ್ಥಾಪಕಾಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಪ್ರಶಾಂತ್ ಶೆಟ್ಟಿ ಶಿರೂರು, ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು, ಸುಕುಮಾರ ಶೆಟ್ಟಿ ಹೇರಿಕುದ್ರು, ರಾಜೀವ ಶೆಟ್ಟಿ ಹೆಂಗವಳ್ಳಿ, ರತ್ನಾಕರ ಶೆಟ್ಟಿ ಕಂದಾವರ, ಸಂತೋಷ್ ಕುಮಾರ್ ಶೆಟ್ಟಿ ವಡೇರಹೋಬಳಿ, ಪ್ರಭಾಕರ ಶೆಟ್ಟಿ ಯಳಂತೂರು, ಸಂದೇಶ ಶೆಟ್ಟಿ ಗುಳ್ವಾಡಿ, ಪ್ರಕಾಶ್ ಶೆಟ್ಟಿ ಬಗ್ವಾಡಿ,…
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 05 ರಂದು ಸಂಜಯ ಗಾಂಧಿ ಪ್ರೌಢಶಾಲೆಯ ನಿವೃತ್ತ ಸಹ ಶಿಕ್ಷಕರಾದ ಜಯಂತ ಶೆಟ್ಟಿ ದಂಪತಿಗಳನ್ನು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿ ಗೌರವಿಸುವ ಮೂಲಕ ಆಚರಣೆ ಮಾಡಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಜಯಂತ ಶೆಟ್ಟಿ ಅವರು ಮಾತನಾಡುತ್ತಾ, ನಾವು ಕಲಿಸಿದ ವಿದ್ಯಾರ್ಥಿಗಳು ಸಮಾಜದ ಶ್ರೇಷ್ಠ ವ್ಯಕ್ತಿಗಳಾಗಿ ಗುರುತಿಸಿಕೊಂಡಾಗ ನಮಗೆ ಅದರಷ್ಟು ಸಂತೋಷದ ಉಡುಗೊರೆ ಬೇರೆ ಯಾವುದೂ ಇಲ್ಲ ಎಂದು ಹೇಳಿದರು. ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಲ. ರತ್ನಾಕರ ಶೆಟ್ಟಿ ಕಂದಾವರ, ಲ. ವಸಂತರಾಜ ಶೆಟ್ಟಿ ವಂಡ್ಸೆ, ಲ. ನಾರಾಯಣ ಶೆಟ್ಟಿ ಕಡ್ರಿ, ಲ. ಸುಕುಮಾರ ಶೆಟ್ಟಿ ಹೇರಿಕುದ್ರು, ಲ. ಕಿರಣ್ ಹೆಗ್ಡೆ ಅಂಪಾರು, ಲ. ಅರುಣ್ ಕುಮಾರ್ ಶೆಟ್ಟಿ ಅಂಪಾರು, ಲ. ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಲ. ಪ್ರಭಾಕರ ಶೆಟ್ಟಿ ಯಳಂತೂರು, ಲ. ನಿತೀಶ್ ಶೆಟ್ಟಿ ಬಸ್ರೂರು,…
ಆಲ್ ಅಮೇರಿಕಾ ಅಸೋಸಿಯೇಷನ್ ಸಹಕಾರದಲ್ಲಿ ಐಲೇಸಾದಿಂದ ‘ಎನ್ನ ತಂಗಡಿ’ ಮೊದಲ ತುಳು ಚಿತ್ರದ ಪುನರ್ ಸೃಷ್ಠಿಯ ಹಾಡಿನ ಬಿಡುಗಡೆ
ವಯೋ ಸಮ್ಮಾನ್ ಪುರಸ್ಕೃತ ಸಾಹಿತಿ ಭೋಜ ಸುವರ್ಣ ಅವರ ಸಾಹಿತ್ಯದ 1971 ಫೆಬ್ರವರಿ 19 ರಂದು ಇತಿಹಾಸದಲ್ಲಿ ಮೊದಲ ತುಳು ಚಿತ್ರವಾಗಿ ಎನ್ನ ತಂಗಡಿ ಬಿಡುಗಡೆ ಕಂಡಿತ್ತು. ಆದರೆ ಆರ್ಥಿಕ ಕಾರಣಗಳಿಂದ ಅಂದಿನ ಗ್ರಾಮೋಪೋನ್ ನಲ್ಲಿ ಅದರ ಹಾಡುಗಳು ಬಿಡುಗಡೆಯಾಗದೆ ಜನ ಸಾಮಾನ್ಯರನ್ನು ಈ ಹಾಡುಗಳು ತಲುಪಲು ಸಾಧ್ಯವಾಗಲಿಲ್ಲ. ಈ ಕೊರಗು ಸಾಹಿತಿ ಭೋಜ ಸುವರ್ಣರನ್ನು ಸದಾ ಕೊರೆಯುತ್ತಿತ್ತು. ವಯೋ ಸಮ್ಮಾನ್ ಸಮಯದಲ್ಲಿ ಇದನ್ನು ಮನಗಂಡ ಐಲೇಸಾ ಆ ಹಾಡಿನ ಪುನರ್ ಸೃಷ್ಟಿಗೆ ಸಂಕಲ್ಪ ಮಾಡಿತ್ತು. ಅದೀಗ ನನಸಾಗುತ್ತಿದೆ. ‘ಮನಸ್ಸ್ ನ್ ನಿರ್ಮಲ ದೀದ್ ಬಾಳ್ಂಡ ಅವ್ವೇ ಒಂಜಿ ಮಂದಿರಾ’ ಎನ್ನುವ ಸಮಾಜಮುಖಿ ಸಂದೇಶದ ಆ ಹಾಡನ್ನು ವಿ. ಮನೋಹರ್ ಭೋಜ ಸುವರ್ಣ ಅವರ ಧ್ವನಿಯಲ್ಲೇ ಹಾಡಿಸಿ ಧ್ವನಿ ಮುದ್ರಿಸಿದ್ದಾರೆ. ಮೂಲ ಹಾಡಿನ ರಾಗ ಸಂಯೋಜನೆಯಲ್ಲಿಯೇ ಹಾಡು ಮೂಡಿ ಬಂದಿದ್ದು ಎಂಭತ್ತೈದರ ಹರೆಯದ ಭೋಜ ಸುವರ್ಣ ಶಕ್ತಿಮೀರಿ ಹಾಡಿ ಅದಕ್ಕೊಂದು ನ್ಯಾಯ ಒದಗಿಸಿದ್ದಾರೆ. ಇದರ ಜೊತೆಗೆ ಅವರೇ ಸಾಹಿತ್ಯ ನೀಡಿದ ‘ಎನ್ನ…
ಮೂಡುಬಿದಿರೆ: ಇಂದಿನ ಶಿಕ್ಷಣದಲ್ಲಿ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಾತ್ರ ಅವಕಾಶಗಳಿವೆ ಎಂಬ ತಪ್ಪು ಕಲ್ಪನೆ ಬೆಳೆಯುತ್ತಿದೆ. ಆದರೆ ವಿದ್ಯಾರ್ಥಿಯೂ ತನ್ನ ಆಸಕ್ತಿ, ಸಾಮರ್ಥ್ಯ ಮತ್ತು ಕನಸುಗಳಿಗೆ ತಕ್ಕಂತೆ ವಿಭಿನ್ನ ವೃತ್ತಿ ಕ್ಷೇತ್ರಗಳನ್ನು ಆರಿಸಿಕೊಳ್ಳಬಹುದು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಸಕ್ಷಮ್ ಜೈನ್ ನುಡಿದರು. ಅವರು ಆಳ್ವಾಸ್ ಪದವಿಪೂರ್ವ ಕಾಲೇಜು ಆಯೋಜಿಸಿದ್ದ “ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಕಾರ್ಯಗಾರ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಮುಂತಾದ ಅನೇಕ ಸೃಜನಾತ್ಮಕ ಕ್ಷೇತ್ರಗಳು ವಿದ್ಯಾರ್ಥಿಗಳಿಗೆ ದೊಡ್ಡ ಯಶಸ್ಸನ್ನು ನೀಡಬಲ್ಲವು. ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವುದು, ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ವಿದ್ಯಾರ್ಥಿಗಳಿಗೆ ಲಭ್ಯವಿರುವ ಇನ್ನೊಂದು ದೊಡ್ಡ ಅವಕಾಶ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಆಸಕ್ತಿ ಮತ್ತು ಕನಸುಗಳಿಗೆ ತಕ್ಕಂತೆ ಶಿಕ್ಷಣದ ಅನೇಕ ದಾರಿಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕು ಎಂದರು. ರಾಷ್ಟç ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ CAT, BITSAT, UCEED, VITEEE,…














