ಸಜೀಪ ದಸರಾ – 2026 ಶತಮಾನೋತ್ಸವಕ್ಕೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿದೆ. 100ನೇ ವರ್ಷದ ಈ ಸುಂದರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಸಮಾಲೋಚನ ಸಭೆಗಳನ್ನು ನಡೆಸಲಾಗುತ್ತಿದೆ. ಶತಮಾನೋತ್ಸವ ಸಮಿತಿ, ಶಾರದಾ ಪೂಜಾ ಸಮಿತಿ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಯೋಚನೆಯನ್ನೂ ಮಾಡಲಾಗುತ್ತಿದೆ. ಇನ್ನು 5 ದಿನ ಶತಮಾನೋತ್ಸವನ್ನು ಆಚರಿಸುವ ಯೋಚನೆಗೆ ಬಂದಿದ್ದು ಈಗಾಗಲೇ ಸಮಿತಿಯನ್ನು ರಚಿಸಿ ಎಲ್ಲರಿಗೂ ಜವಾಬ್ದಾರಿಯನ್ನು ನೀಡಲಾಗಿದೆ ಹಾಗೂ ಸಮಾಜಸೇವೆಯ ಮುಖೇನ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಾ, 100ನೇ ವರ್ಷದ ಸಜೀಪ ದಸರಾ ಕಾರ್ಯಕ್ರಮವನ್ನು ಇನ್ನಷ್ಟು ಚಂದಗಾಣಿಸುವ ಕೆಲಸ ಕಾರ್ಯಗಳು ನಡೆಯುತ್ತಿದೆ.

ಇನ್ನು ಶತಮಾನೋತ್ಸವದ ಈ 100ನೇ ವರ್ಷದ ಶಾರದಾ ಪೂಜಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಜೀಪ ಮೂಡ ಗ್ರಾ.ಪಂ ನ ಮಾಜಿ ಅಧ್ಯಕ್ಷರಾದ, ಪ್ರತೀ ಬಾರಿಯೂ ಕಾರ್ಯಕ್ರಮದ ಯಶಸ್ಸಿಗಾಗಿ ಜೊತೆಯಾಗಿ ನಿಲ್ಲುವ ದೇವಿಪ್ರಸಾದ್ ಪೂಂಜ ಆಯ್ಕೆಯಾಗಿದ್ದಾರೆ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಪುಷ್ಪಾವತಿ ರಮೇಶ್ ಸುವರ್ಣ, ಉಪಾಧ್ಯಕ್ಷರಾಗಿ ಗಿರೀಶ್ ಕುಮಾರ್ ಪೆರ್ವ, ಅಶ್ವಿತ್ ಬೇಂಕ್ಯ ಮತ್ತು ಗಂಗಾಧರ ಕೊಲ್ಯ ಹಾಗೂ ಕಾರ್ಯದರ್ಶಿಗಳಾಗಿ ಪ್ರಹ್ಲಾದ್ ಬೇಂಕ್ಯ ಮತ್ತು ಕಿಶೋರ್ ಅಗರಿ, ಜತೆ ಕಾರ್ಯದರ್ಶಿಗಳಾಗಿ ಯೋಗೀಶ್ ವಿದ್ಯಾನಗರ ಮತ್ತು ಕಾರ್ತಿಕ್ ಶೆಟ್ಟಿ ಬೇಂಕ್ಯ, ಕೋಶಾಧಿಕಾರಿಗಳಾಗಿ ಕೀರ್ತನ್ ಆಳ್ವ ಮತ್ತು ಶ್ರೀನಾಥ್ ಅರಸ, ಮಹಿಳಾ ಮಂಡಲದ ಉಪಾಧ್ಯಕ್ಷರಾಗಿ ಮಮತಾ ಡಿ ಶೆಟ್ಟಿ ಮತ್ತು ಸುಜಾತಾ, ಕಾರ್ಯದರ್ಶಿಯಾಗಿ ವಾಣಿ ಹರೀಶ್, ಜತೆ ಕಾರ್ಯದರ್ಶಿಯಾಗಿ ಹರಿಣಾಕ್ಷಿ ಸುರೇಶ್, ಕೋಶಾಧಿಕಾರಿಯಾಗಿ ಶಶಿಕಲಾ ಇವರುಗಳು ಆಯ್ಕೆಯಾಗಿದ್ದಾರೆ.

















































































































