Author: admin
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಕೇಂದ್ರ ಮಹಿಳಾ ಫಟಕದ ನವಮ ವಾರ್ಷಿಕೋತ್ಸವ ಪಾವಂಜೆ ದೇವಸ್ಥಾನದ ಆವರಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ತಡಂಬೈಲ್ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಗುತ್ತು ಸತೀಶ್ ಶೆಟ್ಟಿ ಅವರು ಅಶಕ್ತ ಕಲಾವಿದರ ಬದುಕಿಗೆ ಶಕ್ತಿ ತುಂಬಿದ್ದಾರೆ. ಕಲಾವಿದರ ವೈಯಕ್ತಿಕ ಬದುಕಿನ ಸತ್ಯವನ್ನು ಶೋಧಿಸಿದ ಪಟ್ಲರವರು ಆ ಕಾರಣಕ್ಕಾಗಿಯೇ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕಲಾವಿದರಿಗೆ ಆಸರೆಯಾದರು ಎಂದವರು ತಿಳಿಸಿದರು. ಕಲಾವಿದರಿಗೆ ಮನೆ ನಿರ್ಮಾಣಕ್ಕೆ, ಕಲಾವಿದರ ಮಕ್ಕಳಿಗೆ ಶಿಕ್ಷಣ ಮತ್ತು ಕಲಾವಿದರ ಆರೋಗ್ಯಕ್ಕೆ ಟ್ರಸ್ಟ್ ನಿಂದ ಸಹಾಯ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಟ್ರಸ್ಟ್ ಮೂಲಕ ನಿರಂತರ ಕಾರ್ಯ ಯೋಜನೆಗಳನ್ನು ಕೈಗೊಳ್ಳುತಿರುವ ಪಟ್ಲರ ಸಾಧನೆ ಶ್ಲಾಘನೆಗೆ ಪಾತ್ರವಾಗಿದೆ ಎಂದರು. ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಕೇಂದ್ರೀಯ ಮಹಿಳಾ ಘಟಕ ಕಳೆದ ಒಂಬತ್ತು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿರುತ್ತದೆ.…
ನಮ್ಮಲ್ಲಿ ಕೋಲ, ಕಂಬಳದ ಆಚರಣೆ, ಮಾರಿ, ಗೆಂಡ ಸೇವೆ ಇವುಗಳೆಲ್ಲವೂ ಇಡೀ ಊರಿನವರು ಒಂದಾಗಿ ಆಚರಿಸುವ ಸಂಪ್ರದಾಯ. ಸಿರಿಬೈಲು ಕೋಲ ಎಂದರೆ ಕೇವಲ ಕಾರ್ಯಕ್ರಮವೆಂದರೂ ತಪ್ಪಲ್ಲ, ಅದು ಊರಿನ ನಂಬಿಕೆಯನ್ನು ಉಳಿಸುವ ಸಂಪ್ರದಾಯ. ಕೆಲವು ವರ್ಷಗಳ ಹಿಂದೆ, ಸುಮಾರು 90ರ ದಶಕದಲ್ಲಿ ಸಿರಿಬೈಲು ಕೋಲಕ್ಕೆ ಹೋಗಬೇಕೆಂದರೆ ಸರಿಯಾದ ಬಸ್ ವ್ಯವಸ್ಥೆಯೇ ಸರಿ ಇರಲಿಲ್ಲ. ನಡೆದುಕೊಂಡೇ ಹೋಗಬೇಕು. ಆಗ ನಮ್ಮೂರಲ್ಲಿ ಕರೆಂಟ್ ಬಂದಿತ್ತಾದರು ಇನ್ನೂ ಕೆಲವು ಕಡೆ ಬಂದಿರಲಿಲ್ಲ. ರಸ್ತೆ ಬದಿಯ ದೀಪಗಳಂತೂ ಕನಸೇ. ಅಭಿವೃದ್ಧಿ ಎಂಬುದು ಅಷ್ಟೊಂದು ಕಾಣಿಸಿಕೊಳ್ಳದ ದಿನಗಳು. ಈಗ ಕಾಲ ಬದಲಾಗಿದೆ. ಆದರೆ ಅಂದಿನ ಕಾಲದ ಸುಖ ಇಂದಿನ ಜೆನ್ ಜಿ ಜನರೆಶನ್ ಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಹೌದೆ ? ಓಹೋ ಎಂದು ಪ್ರಶ್ನಿಸುವ ಕಾಲ. ಆ ದಿನಗಳಲ್ಲಿ ಕೋಲಕ್ಕೆ ಹೋಗುವಾಗ ಗ್ಯಾಸು ಲೈಟ್ ಹಿಡಿದು ಸಾಗುತ್ತಿದ್ದರೆ, ಅವನು ಶ್ರೀಮಂತನೆಂದು ಪರಿಗಣಿಸುವ ಕಾಲ. ಅದರಲ್ಲೂ ಲ್ಯಾಟನ್ ಇದ್ದರೆ, ಮಿಣಿಮಿಣಿ ಮಿಣುಕುತ್ತ ಮಿನುಗುವ ಬೆಳಕು, ಸೀಮೆ ಎಣ್ಣೆ ಲ್ಯಾಟನ್…
ಟೀಮ್ ಈಶ್ವರ್ ಮಲ್ಪೆ ಅವರ ವೈದ್ಯಕೀಯ ತಂಡ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಕಾರದೊಂದಿಗೆ ಕಳೆದ ಸಲದಂತೆ ಈ ಬಾರಿಯೂ ಫೆಬ್ರವರಿ 7 ಮತ್ತು 8 ರಂದು ಉಚಿತ ಶ್ರವಣ ತಪಾಸಣಾ ಶಿಬಿರವನ್ನು ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಸಲಿದೆ. ಈ ಶಿಬಿರದಲ್ಲಿ ಉಚಿತವಾಗಿ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ನಡೆಯಲಿದೆ ಎಂದು ತಂಡದ ಸಂಚಾಲಕ ಲವ ಬಂಗೇರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಶಿಬಿರದಲ್ಲಿ ಪತ್ರಕರ್ತರ ಕುಟುಂಬದ ಸದಸ್ಯರ ಜೊತೆ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಉಚಿತ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಟೀಮ್ ಈಶ್ವರ್ ಮಲ್ಪೆಯವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು, ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಟೀಮ್ ಈಶ್ವರ್…
ಜಯಕಿರಣ ಫಿಲಂಸ್ ಲಾಂಛನದಲ್ಲಿ, ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಅದ್ಭುತವಾಗಿ ಸಿದ್ಧಗೊಂಡಿರುವ ‘ನಾನ್ ವೆಜ್’ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಈ ಸಿನಿಮಾವನ್ನು ಎಲ್ಲಾ ಮಲ್ಟಿಪ್ಲೆಕ್ಸ್‌ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ. ದುಬಾರಿ ಟಿಕೆಟ್ ಕೊಟ್ಟು ಸಿನಿಮಾ ನೋಡಲು ಸಾಧ್ಯವಾಗದವರು ಇಂಥದ್ದೊಂದು ಸುಂದರ ಹಾಗೂ ಅತ್ಯುತ್ತಮ ಸಿನಿಮಾವನ್ನು ನೋಡದೆ ಇರಬಾರದು ಎಂಬ ಉದ್ದೇಶದಿಂದ ಕೇವಲ 99 ರೂ. ಟಿಕೆಟ್ ನಿಗದಿಪಡಿಸಿದ್ದು, ಇದು ತುಳು ಚಿತ್ರರಂಗದಲ್ಲಿ ಒಂದು ಹೊಸ ಸಂಚಲನ ಉಂಟು ಮಾಡಿದೆ. ಸಿಂಗಲ್ ಥಿಯೇಟರ್‌ಗಿಂತಲೂ ಕಡಿಮೆ ದರದಲ್ಲಿ ಈ ಸಿನಿಮಾವನ್ನು ತುಳು ಪ್ರೇಮಿಗಳು ಮಲ್ಟಿಫ್ಲೆಕ್ಸ್ ಗಳಲ್ಲಿ ನೋಡುವಂತಹ ಅವಕಾಶ ಇದಾಗಿದೆ ಎಂದು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ ನಾನ್‌ವೆಜ್ ಒಂದು ಅತ್ಯುತ್ತಮ ಹಾಗೂ ಭಿನ್ನ ಕಥಾವಸ್ತುವನ್ನು ಹೊಂದಿದೆ. ಸು ಫ್ರಂ ಸೋ ಸಿನಿಮಾದ ಹೆಚ್ಚಿನ ಕಲಾವಿದರು ನಾನ್‌ವೆಜ್ ಸಿನಿಮಾದಲ್ಲೂ ಇದ್ದಾರೆ. ಚಿತ್ರದ…
ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ ಜಿಲ್ಲಾ ಘಟಕ ಮತ್ತು ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯದ ವತಿಯಿಂದ ಲೇಡಿಗೋಶನ್ ಅಸ್ಪತೆಯಲ್ಲಿ ಇತ್ತೀಚಿಗೆ ರಕ್ತದಾನ ಶಿಬಿರ ನಡೆಯಿತು. ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಶಿಬಿರವನ್ನು ಉದ್ಘಾಟಿಸಿದರು. ಲೇಡಿಗೋಶನ್ ಅಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿಬಿ ಹರೀಶ್ ರೈ, ರೆಡ್‌ಕ್ರಾಸ್ ಜಿಲ್ಲಾ ಘಟಕದ ನಿರ್ದೇಶಕ ಗುರುದತ್ ಕಾಮತ್, ಲೇಡಿಗೋಶನ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್, ಕೆಎಂಸಿ ಅಸ್ಪತ್ರೆಯ ಡಾ. ಅನುಪಮ ಸುರೇಶ್ ಮುಖ್ಯ ಅತಿಥಿಗಳಾಗಿದ್ದರು.
ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರ ಎ.ವಿ ಯವರಿಗೆ ದಾವಣಗೆರೆ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರಧಾನ ಮಾಡಿದೆ. ಪವಿತ್ರ ಎ.ವಿಯವರು ‘ಸೈಕೋಸೋಷಿಯಲ್ ಡೈಮೆನ್ಶನ್ಸ್ ಆಫ್ ಸುಸೈಡಲ್ ಬಿಹೇವಿಯರ್ ಅಮಾಂಗ್ ರೂರಲ್ ಅಡೊಲೆಸೆಂಟ್ಸ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಗವರ್ನ್ಮೆಂಟ್ ಪ್ರಿಯುನಿವರ್ಸಿಟಿ ಕಾಲೇಜಸ್ ಇನ್ ಕರ್ನಾಟಕ’ ಎಂಬ ವಿಷಯದ ಕುರಿತು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ಲೋಕೇಶ್ ಎಂ.ಯು ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪಡೆದಿದ್ದಾರೆ. ಜ. 30ರಂದು ನಡೆದ ದಾವಣಗೆರೆ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ರವರು ಪದವಿ ಪ್ರಧಾನ ಮಾಡಿದರು. ಇವರು ಎಮ್‌ಆರ್‌ಪಿಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಚೀಫ್ ಮ್ಯಾನೇಜರ್ ಸ್ವಾಮಿ ಪ್ರಸಾದ್ ಅವರ ಪತ್ನಿ.
ಅರಬ್ ಸಂಯುಕ್ತ ಸಂಸ್ಥಾನ ವಾಣಿಜ್ಯ ನಗರಿ ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಫೆಬ್ರವರಿ 1 ರಂದು ದುಬಾಯಿ ಅಲ್ ಸಫಾದಲ್ಲಿರುವ ಜೆ.ಎಸ್.ಎಸ್ ಪ್ರೈವೈಟ್ ಸ್ಕೂಲ್ ಸಭಾಂಗಣದಲ್ಲಿ ಸಂಜೆ ಸಂಕಲ್ಪ ಹಾಗೂ ಸುಮಂಗಲೆಯರಿಂದ ಜ್ಯೋತಿ ಬೆಳಗುವುದರರೊಂದಿಗೆ ಪ್ರಾರಂಭವಾಯಿತು. ಪುರೋಹಿತ ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರ್ಥನೆ, ಸಂಕಲ್ಪ, ಗುರುಗಣಪತಿ ಪೂಜೆ, ಕಳಸ ಪೂಜೆ, ನವಗ್ರಹ ಪೂಜೆ, ವೃತಕ ಲೋಕ್ತ ಪೂಜೆ, ಕಥಾಸಾರ, ಮಹಾನೈವೇದ್ಯ, ಮಂಗಳಾರತಿ, ಬ್ರಾಹ್ಮಣರಾಧನೆ, ಸುವಾಸಿನಿ ಪೂಜೆ, ಕನ್ನಿಕಾರಾಧನೆ ತೀರ್ಥ ಪ್ರಸಾದ ಮತ್ತು ಮಹಾಪ್ರಸಾದ ವಿತರಣೆ ಮಾಡಲಾಯಿತು. ಪೂಜೆಯಲ್ಲಿ ಸಾರ್ವಜನಿಕರ ಪರವಾಗಿ ಶ್ರೀಮತಿ ಅಂಜಲಿ ಕೌಶಿಕ್ ದಂಪತಿ, ಕಾರ್ಯಕಾರಿ ಸಮಿತಿಯ ಪರವಾಗಿ ಶ್ರೀಮತಿ ವೀಣಾ ಸುದರ್ಶನ್ ಹೆಗ್ಡೆ ಕಾರ್ಕಳ ದಂಪತಿಗಳು ಪೂಜೆಯಲ್ಲಿ ಕುಳಿತು ಪೂಜಾ ಕಾರ್ಯದಲ್ಲಿ ಭಾಗಿಗಳಾಗಿದ್ದರು. ದುಬಾಯಿಯಲ್ಲಿ ನೆಲೆಸಿ ಕಾರ್ಯೋನ್ಮುಖವಾಗಿರುವ ಸಂಘ ಸಂಸ್ಥೆಗಳಾದ ಯು.ಎ.ಇ ಬಂಟ್ಸ್, ಬಿಲ್ಲವಾಸ್ ಫ್ಯಾಮಿಲಿ ದುಬಾಯಿ,…
ಸೌರಾಷ್ಟ್ರ (ಗುಜರಾತ್) ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮುನಿಯಾಲು ಮೂಲದ ನಿತ್ಯಾ ಶೆಟ್ಟಿ ಆಯ್ಕೆಯಾಗಿದ್ದಾರೆ. 21 ವರ್ಷದ ನಿತ್ಯಾ ಶೆಟ್ಟಿ ಫೆಬ್ರವರಿ 6 ರಂದು ರಾಂಚಿಯಲ್ಲಿ ನಡೆಯಲಿರುವ ಅಂಡರ್ 23 ವುಮೆನ್ಸ್ ಬಿ.ಸಿ.ಸಿ.ಐ ಟೂರ್ನಮೆಂಟ್ ನಲ್ಲಿ ಸೌರಾಷ್ಟ್ರ ತಂಡದಲ್ಲಿ ಅಗ್ರ ಕ್ರಮಾಂಕದ ಆಟಗಾರ್ತಿ ಹಾಗೂ ಮಧ್ಯಮ ವೇಗದ ಬೌಲರ್ ಆಗಿ ಆಡಲಿದ್ದಾರೆ. ಇವರು ಮೂಲತಃ ಮುನಿಯಾಲು ಬೈಲಿನವರಾದ ಆರತಿ ಶೆಟ್ಟಿ ಮತ್ತು ಗುಜರಾತ್ ನ ವಿಪುಲ್ ಪಾಂಚಲ್ ದಂಪತಿಯ ಪುತ್ರಿ.
ಇಡೀ ಜಗತ್ತೇ ದಾವಂತದಲ್ಲಿ ಮುಂದೆ ಹೋಗುತ್ತಾ ಇದೆ. ಅಗತ್ಯತೆಯನ್ನು ಪೂರೈಸಲು ಅನಿವಾರ್ಯವಾಗಿ ಎಲ್ಲರೂ ದುಡ್ಡಿನ ಹಿಂದೆ ಓಡುವವರೆ!! ಅದರ ಜೊತೆ ದೈವ ದೇವರು ಎಂಬ ಭಯ ಭಕ್ತಿ ಈಗೀಗ ಸ್ವಲ್ಪ ಹೆಚ್ಚೇ ಆಗಿದೆ. ಇದು ಕಾಂತರ ಚಿತ್ರದ ಎಫೆಕ್ಟ್ ಅಂದರೆ ಹೆಚ್ಚಾಗದು. ಪ್ರಸ್ತುತ ಸಂಬಂಧದೊಳಗೂ ಮನುಷ್ಯ ಮನುಷ್ಯರ ನಡುವಿನ ಆಪ್ತತೆಗಿಂತ ದೈವದೇವರಲ್ಲಿ ಮಾತಾಡುವುದು ಹೆಚ್ಚಾಗಿದೆ. ಅವ್ಯಕ್ತ ಶಕ್ತಿಯಲ್ಲಿ ವಿಶ್ವಾಸ ಗಾಢವಾಗುತ್ತಿದೆ. ಒಂದು ಕಾಲದಲ್ಲಿ ವಿದ್ಯಾಭ್ಯಾಸವಿರದ ಹಳ್ಳಿಯ ಮಂದಿ ಮಾತ್ರ ನಂಬುತ್ತಿದ್ದ ಕೆಲವರು ಬರೀ ಮೂಢನಂಬಿಕೆ ಎಂದು ಮೂಗು ಮುರಿದಿದ್ದ ಸತ್ಯ ಈಗ ವಿದ್ಯಾವಂತರ ಮೂಲ ನಂಬಿಕೆಯಾಗಿ ಬೆಳೆದಿದೆ. ಇದು ನಿಜಕ್ಕೂ ಸಂತೋಷದಾಯಕ ಬೆಳವಣಿಗೆ. ನಾನು ಮಂಗಳೂರಿಗೆ ಬಂದವ ಒಂದು ತಿಂಗಳು ಇದ್ದು ಮತ್ತೆ ವಾಪಾಸ್ ನೈಜೀರಿಯಾಕ್ಕೆ ಬಂದೆ. ಒಂದು ತಿಂಗಳಲ್ಲಿ ಶರವು ಶ್ರೀ ಮಹಾಗಣಪತಿ, ಕದ್ರಿ ಶ್ರೀ ಮಂಜುನಾಥ, ಶ್ರೀ ಮಂಗಳಾದೇವಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಕಟೀಲು ಶ್ರೀ ಉಳ್ಳಾಲ್ತಿ, ಕುಡುಪು ಶ್ರೀ ಅನಂತ ಪದ್ಮನಾಭ, ವಾಮಂಜೂರು ಶ್ರೀ ಅಮೃತೇಶ್ವರ, ತಿರುವೈಲು…
ಬಂಟ ಸಮಾಜದ ವಿದ್ಯಾವಂತ ಯುವಕರು ಹಣಕಾಸು ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಅದ್ಭುತ ಸಾಧನೆಗೈದ ವಿಚಾರ ನಮಗೆಲ್ಲರಿಗೂ ಗೊತ್ತೇ ಇದೆ. ಇಲ್ಲಿ ನಾವು ಪರಿಚಯಿಸಲು ಬಯಸುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಲು ಪ್ರತಿಷ್ಠಿತ ಬೆಳ್ಳಿಪ್ಪಾಡಿ ಸಂಜಾತ ಬಹುಮುಖ ಪ್ರತಿಭೆಯ ಹತ್ತಾರು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ ಶ್ರೀ ಅಮೋಘ್ ಜೆ ರೈ ಅವರನ್ನು. ಪ್ರಸ್ತುತ ಪ್ರವೀಣ್ ಕ್ಯಾಪಿಟಲ್ ಸರ್ವಿಸಸ್ ಪ್ರೈ.ಲಿ. ಇಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿರುವ ಅಮೋಘ್ ಅವರ ನೊಂದಾಯಿತ ಕಛೇರಿ ಮಂಗಳೂರಿನಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ತೀವ್ರ ಪ್ರಗತಿ ಕಂಡ ಹಣಕಾಸು ಉದ್ಯಮ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಒಟ್ಟು ಇಪ್ಪತ್ತು ಶಾಖೆಗಳನ್ನು ಹೊಂದಿದೆ. ತನ್ನ ವೃತ್ತಿಪರ ಜೀವನ ಹಾಗೂ ಸಂಕ್ಷಿಪ್ತ ಭಾರತ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕ್ಷೇತ್ರದಲ್ಲಿ ಎರಡೂವರೆ ದಶಕ ಕಾಲದ ದೀರ್ಘಾನುಭವ ಹೊಂದಿರುತ್ತಾರೆ. ಮೈಸೂರಿನ ಎಸ್.ಡಿ.ಎಂ.ಐಎಮ್.ಡಿ ಯಿಂದ ಆಡಳಿತ ವ್ಯವಹಾರ ಕುಶಲತೆ ಕುರಿತಂತೆ ಸ್ನಾತಕೋತ್ತರ ಡಿಪ್ಲೊಮಾ ಪಡೆದ ಪ್ರತಿಭಾವಂತ. ಪ್ರವೀಣ್ ಕ್ಯಾಪಿಟಲ್ ಇಂದು ಜೀರಾ ಮತ್ತು ಇತರ ತಂಪು ಪಾನೀಯಗಳಿಗೆ ಪ್ರಸಿದ್ಧಿ ಪಡೆದ ಎಸ್…















