ನಮ್ಮ ನೆಲದ ಅಸ್ಮಿತೆ, ತುಳುನಾಡಿನ ಸಾಂಸ್ಕೃತಿಕ ಜನಪದ ವೈಭವದ ಸಂಕೇತವಾದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ‘ಮಂಗಳೂರು ಕಂಬಳ’ಕ್ಕೆ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ‘ರಾಮ-ಲಕ್ಷ್ಮಣ’ ಜೋಡುಕರೆಯಲ್ಲಿ ಭವ್ಯ ಚಾಲನೆ ದೊರೆಯಿತು.

ಈ ಬಾರಿಯ ಕಂಬಳವು ಕೇವಲ ಕ್ರೀಡೆಯಾಗಿ ಉಳಿಯದೆ, ‘ನವ ವೈವಿಧ್ಯ’ ಎಂಬ ಪರಿಕಲ್ಪನೆಯಡಿ ಸಂಪ್ರದಾಯ ಮತ್ತು ಆಧುನಿಕತೆಯ ಅದ್ಭುತ ಸಂಗಮಕ್ಕೆ ವೇದಿಕೆಯಾಯಿತು. ಕೆಸರು ಗದ್ದೆಯ ವೀರ ಕ್ರೀಡೆಯ ಜೊತೆಗೆ ಈ ಬಾರಿ ಹಮ್ಮಿಕೊಳ್ಳಲಾದ ವಿನೂತನ ಚಟುವಟಿಕೆಗಳು ಕಂಬಳದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿವೆ.

















































































































