Author: admin
ಯಸ್ ಬಿ ಗ್ರೂಪ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಅವರ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿ ನಿರ್ದೇಶನದ “ಪಿಲಿಪಂಜ” ವಿಭಿನ್ನ ಶೈಲಿಯ ತಂತ್ರಜ್ಞಾನದ ತುಳು ಸಿನಿಮಾದ “ಫಸ್ಟ್ ಲುಕ್ ಪೋಸ್ಟರನ್ನು ಜನವರಿ 27 ರಂದು ಸಾವಿರಾರು ವರ್ಷಗಳ ಇತಿಹಾಸವಿರುವ ವನದುರ್ಗೆ ಎಂದೇ ಪ್ರಸಿದ್ಧಿ ಪಡೆದಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ ಕೆ ವಿಘ್ಣೇಶ್ ಭಟ್ ಅವರು ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಾಶೀರ್ವಾದ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀಧರ್ ಭಟ್, ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ ಇದರ ಸಂಚಾಲಕರಾದ ಸಂದೀಪ್ ವಿ ಪೂಜಾರಿ, ಚಿತ್ರದ ನಿರ್ಮಾಪಕರಾದ ಪ್ರತೀಕ್ ಯು ಪೂಜಾರಿ ಕಾವೂರು, ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಹಾಗೂ ನಟ ರಮೇಶ್ ರೈ ಕುಕ್ಕುವಳ್ಳಿ, ಪ್ರೊಡಕ್ಷನ್ ಮೆನೇಜರ್ ಕಾರ್ತಿಕ್ ಶೆಟ್ಟಿ, ಸಂಕಲನಕಾರ ಶ್ರೀನಾಥ್ ಪವರ್ ಮುಂತಾದವರು ಉಪಸ್ಥಿತರಿದ್ದರು. “ಪಿಲಿಪಂಜ” ಚಲನಚಿತ್ರವು ಎರಡು…
ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿಯವರ ಮಾತೃಶ್ರೀ ಲೀಲಾವತಿ ಎಸ್ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆಯು ಜನವರಿ 23 ರಂದು ಪೊವಾಯಿಯ ಮಾತೃಭೂಮಿ ಕಚೇರಿಯಲ್ಲಿ ನಡೆಯಿತು. ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಆಶ್ರಯದಲ್ಲಿ ಮಹೇಶ್ ಎಸ್ ಶೆಟ್ಟಿಯವರು ತಾಯಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಸಮಿತಿಯ ಸಮನ್ವಯಾಧಿಕಾರಿಗಳಾದ ರವೀಂದ್ರನಾಥ ಎಮ್ ಭಂಡಾರಿ, ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ, ಬಂಟರ ಸಂಘದ ಮ್ಯಾರೇಜ್ ಸೆಲ್ ನ ಕಾರ್ಯಾಧ್ಯಕ್ಷ ರಮೇಶ್ ರೈ ಮತ್ತು ಉಪ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ ಅವರು ಸಂತಾಪ ವ್ಯಕ್ತಪಡಿಸುತ್ತಾ, ಲೀಲಾವತಿ ಅಮ್ಮನ ಸೇವಾ ಕಾರ್ಯಗಳ ಬಗ್ಗೆ ವಿವರವಾಗಿ ಮಾತನಾಡಿದರು ಮತ್ತು ಮಹೇಶ್ ಶೆಟ್ಟಿ ಅವರು ತಮ್ಮ ತಾಯಿಗೆ ನೀಡಿದ ಸೇವೆಯ ಬಗ್ಗೆ ಶ್ಲಾಘಿಸಿದರು. ತಾಯಿಯ ಪ್ರೇರಣೆಯಿಂದ ಬಂಟರ ಸಮುದಾಯಕ್ಕೆ ಮಹೇಶ್ ಶೆಟ್ಟಿಯವರು ಸಲ್ಲಿಸಿದ ಸೇವೆಯ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಾದೇಶಿಕ ಸಮಿತಿಯ ಸದಸ್ಯರು ನುಡಿದರು. ಸಭೆಯಲ್ಲಿ ಪೊವಾಯಿ…
ಬ್ರಹ್ಮಾವರ ಜ 29 : ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅದ್ಧೂರಿಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೈಂಟ್ ಜೋಸೆಫ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ. ಜೆ. ಜೋಸೆಪ್ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು ಅವರು ಮಾತನಾಡಿ ಜಿ ಎಮ್ ಸಂಸ್ಥೆ ನಿಮಗೆ ಉತ್ತಮ ಆಕಾರವನ್ನು ಕೊಟ್ಟು ಪ್ರಜ್ವಲಿಸುವಂತೆ ಮಾಡಿದೆ. ಇಲ್ಲಿ ಪಡೆದ ಜ್ಞಾನವನ್ನು ವಿವೇಕದಿಂದ ಉಪಯೋಗಿಸಬೇಕು, ಪ್ರತಿಯೊಬ್ಬರು ಶಿಸ್ತು, ಮೌಲ್ಯಗಳೊಂದಿಗೆ ಗುರಿಯತ್ತ ಸಾಗಬೇಕೆಂದರು. ಸಂಸ್ಥೆಯ ಹಳೆ ವಿದ್ಯಾರ್ಥಿನಿ ಡಾ. ರಿತಿಕಾ ಶೆಟ್ಟಿ ಮಾತನಾಡಿ ಈ ಸ್ಪರ್ದಾತ್ಮಕ ಯುಗದಲ್ಲಿ ನಾವು ಸಮಯವನ್ನು ವ್ಯರ್ಥಮಾಡದೇ ಆತ್ಮಸ್ಥೈರ್ಯದೊಂದಿಗೆ ಸಾಧನೆಯತ್ತ ಮುನ್ನುಗ್ಗಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿ ಎಲ್ಲರೂ ತಮ್ಮ ಪೆÇೀಷಕರ ಮುಖದಲ್ಲಿ ನಗುವನ್ನು, ಅವರು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಬೇಕು. ಹಾಗೆಯೇ ಭವಿಷ್ಯದಲ್ಲಿ ನಿಮ್ಮ ಸಾಧನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಾಗ ಸಾರ್ಥಕತೆಯ ಭಾವನೆ ಉಂಟಾಗುತ್ತದೆ ಎಂದರು.ಶಾಲಾ ಪ್ರಾಂಶುಪಾಲರಾದ ಜಾರ್ಜ್…
ಮಂಗಳೂರಿನ ಹೊಟೇಲೊಂದರಲ್ಲಿ ಕೂತು ಊಟ ಮಾಡುತ್ತಿದ್ದೆವು. ಅಲ್ಲಿ ರಘು ದೀಕ್ಷಿತ್ ಹಾಡು ಹಚ್ಚಿದ್ದರು! ನಮ್ಮ ಮುಂದೆ ಕೂತಿದ್ದ ವ್ಯಕ್ತಿ ವೈಟರನ್ನ ಕರೆದು ’ಪ್ಲೀಸ್ ಆ ಹಾಡು ಬಿಟ್ಟು ಬೇರೆ ಯಾರದ್ದಾದ್ರೂ ಹಾಕಿ, ಕಿರಿ ಕಿರಿ ಆಗೊತ್ತೆ’ ಎಂದರು. ಅಸಲಿಗೆ ಅವತ್ತು ನಮ್ಮ ಮುಂದೆ ಕೂತಿದ್ದ ವ್ಯಕ್ತಿ ರಘು ದೀಕ್ಷಿತ್ ! ನಾನು ಎಲ್ಲೇ ಹೋಗಲಿ ನನಗೆ ಖುಶಿ ಆಗೊತ್ತೆ ಅಂತ ನನ್ನದೇ ಹಾಡು ಹಾಕ್ತಾರೆ, ಹೀಗಾದ್ರೆ ಬೇರೆಯವರ ಹಾಡು ಕೇಳುವ ಸುಖವೆಲ್ಲಿ? ಎನ್ನುವುದು ರಘು ದೀಕ್ಷಿತ್ ಪ್ರಶ್ನೆ! ಹೀಗೆ ಮಾತಿನ ನಡುವೆ ಅಭಿಮತದ ಹಿಂದಿನ ಕಾರ್ಯಕ್ರಮದ ಬಗ್ಗೆ ಮಾತಾಡುತ್ತಾ ಜರ್ನಿಥೇಟರ್ ಟೀಮಿನ ಹಾಡಿನ ಅದರಲ್ಲೂ ಮೇಘನ ಕುಂದಾಪುರ ಹಾಡಿನ ಬಗ್ಗೆ ಅವರು ಪ್ರಸ್ತಾಪಿಸುತ್ತಾರೆ. ’ಏನ್ ಸಕ್ಕತ್ತಾಗಿ ಹಾಡ್ತಾಳಲ್ಲ ಆ ಹುಡ್ಗಿ’ ಅಂತ! ಚಕ್ ಅಂತ ಮೇಘನಾಗೆ ಕಾಲ್ ಹಚ್ಚಿ ಯಾರೋ ನಿನ್ನ ಹಾಡಿನ ಬಗ್ಗೆ ಮಾತಾಡ್ತಾ ಇದ್ದಾರೆ ಕೇಳು ಎಂದು ಕೊಟ್ಟೆ! ’ನಾನು ನಿಮ್ಮ ಹಾಡಿಗೆ ಫ಼್ಯಾನ್ ಎಂದರು ದೀಕ್ಷಿತ್! ಆ…
ಫೇಮಸ್ ಯೂತ್ ಕ್ಲಬ್ (ರಿ) 10ನೇ ತೋಕೂರು ಇದರ ವಾರ್ಷಿಕ ಮಹಾಸಭೆಯನ್ನು ದಿನಾಂಕ 26.01.2027 ನೇ ಭಾನುವಾರ ಸಂಸ್ಥೆಯ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರುವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು. ವಾರ್ಷಿಕ ವರದಿ ಮತ್ತು ಆಯವ್ಯಯದ ಮಂಡನೆಯನ್ನು ಕಾರ್ಯದರ್ಶಿ, ಹಿಮಕರ್ ಕೋಟ್ಯಾನ್ ರವರು ನೆರವೇರಿಸಿಕೊಟ್ಟರು. ಗೌರವ ಅಧ್ಯಕ್ಷರಾದ ಗುರುರಾಜ ಪೂಜಾರಿಯವರು ಉಪಸ್ಥಿತರಿದ್ದು, ಈ ಹಿಂದಿನ ಆರು ವರ್ಷಗಳ ಕಾಲ ಸಂಸ್ಥೆಯು ಅತ್ಯುತ್ತಮ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುತ್ತದೆ. ಈ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದರು. ಅಧ್ಯಕ್ಷೀಯ ಮಾತಿನಲ್ಲಿ ಭಾಸ್ಕರ್ ಅಮೀನ್ ರವರು ಮಾತನಾಡಿ, ತನ್ನ ಅಧ್ಯಕ್ಷತೆಯ ಆರು ವರ್ಷಗಳ ಕಾಲ ಸಂಸ್ಥೆಯ ಸದಸ್ಯರ ವಿಶೇಷವಾಗಿ ಮಹಿಳಾ ಮಂಡಲದ ಸದಸ್ಯರ ಸಹಕಾರವನ್ನು ಸ್ಮರಿಸಿದರು. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಜವಾಬ್ದಾರಿ ನೂತನ ಸಮಿತಿ ಸಮಿತಿಯದ್ದಾಗಿದೆ ಎಂಬ ಅಬಿಪ್ರಾಯವನ್ನು ವ್ಯಕ್ತಪಡಿಸಿದರು. ನೂತನ ಅಧ್ಯಕ್ಷರಾಗಿ ಸಂಘಟಕ ಸಂಪತ್ ಜೆ. ಶೆಟ್ಟಿ, ಕಾರ್ಯದರ್ಶಿಯಾಗಿ ಮೋಹನ್ ದಾಸ್ ದೇವಾಡಿಗ, ಉಪಾಧ್ಯಕ್ಷರಾಗಿ ಮಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ಶಂಕರ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಗಳಾಗಿ ಸಂದೇಶ ಆಚಾರ್ಯ…
ಪುತ್ತೂರು ಸೇರಿದಂತೆ ವಿವಿಧೆಡೆ ಹೆಚ್.ಪಿ.ಆರ್ ಇನ್ಸ್ಟಿಟ್ಯೂಷನ್ ನಡೆಸುತ್ತಿರುವ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಮುಖಂಡ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ನಿವಾಸಿ ಹರಿಪ್ರಸಾದ್ ರೈ ಅವರ ಉಡುಪಿಯ ಮನೆಗೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೌಹಾರ್ದ ಭೇಟಿ ನೀಡಿ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆ ಬಗ್ಗೆ ಚರ್ಚೆ ನಡೆಸಲಾಯಿತು. ಮಾಜಿ ಸಚಿವರುಗಳಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹರಿಪ್ರಸಾದ್ ರೈಯವರ ಪತ್ನಿ ವಿಜೇತ ರೈ ಅತಿಥಿಗಳನ್ನು ಸತ್ಕರಿಸಿದರು.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕುಂದಾಪುರದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ದೀನಪಾಲ ಶೆಟ್ಟಿ ಮೊಳಹಳ್ಳಿ ಆಯ್ಕೆಯಾಗಿದ್ದಾರೆ.ನಿರ್ದೇಶಕರಾಗಿ ದಿವಾಕರ ಪೂಜಾರಿ, ಅಣ್ಣಯ್ಯ ಗಾಣಿಗ, ಜಿ. ಮಹಮ್ಮದ್, ಗೋಪಾಲ ಬಳೆಗಾರ, ಗೀತಾ ಎಸ್. ಶೆಟ್ಟಿ, ಗೌರಿ, ಶೇಖರ ಜಾತ್ರಬೆಟ್ಟು ಸುಖಾನಂದ ಶೆಟ್ಟಿ, ಲಲಿತಾ, ವೆಂಕಪ್ಪ ಪೂಜಾರಿ, ರಾಜೇಂದ್ರ ಶೆಟ್ಟಿ ಬಿ ಆಯ್ಕೆಯಾಗಿದ್ದಾರೆ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಆಶ್ರಯದಲ್ಲಿ ಶೈಕ್ಷಣಿಕ ಜಿಲ್ಲೆ ಶಿರಸಿಯಲ್ಲಿ ಪ್ರೇರಣಾ ಶಿಬಿರ – 2025
ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಶಿರಸಿ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ವಸತಿಯುತ ಪ್ರೇರಣಾ ಶಿಬಿರದ ಉದ್ಘಾಟನಾ ಸಮಾರಂಭ 27.01.2025 ರಂದು ಲಯನ್ಸ್ ಪ್ರೌಢಶಾಲಾ ಸಭಾಂಗಣ, ಶಿರಸಿ (ಉ. ಕ )ಯಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಆಗಮಿಸಿದ ಶಿರಸಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಎಂ.ಎಸ್ ಪ್ರಸನ್ನಕುಮಾರ್ ರವರು ಪ್ರೇರಣಾ ಶಿಬಿರ ಸಾಗಿ ಬಂದ ಹಾದಿಯ ಕುರಿತು ಮಾತನಾಡಿದರು. ಕಳೆದ ಬಾರಿಯ ವಾರ್ಷಿಕ ಫಲಿತಾಂಶದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ 39 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ಅತ್ಯುತ್ತಮ ಅಂಕಗಳೊಂದಿಗೆ ಗುರುತಿಸಿಕೊಂಡಿದ್ದು, ಈ ಪ್ರೇರಣಾ ಶಿಬಿರಕ್ಕೆ ಸಹಕರಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಪ್ರಪ್ರತಿಷ್ಠಾನ, ಕಾರ್ಕಳದ ಸಹಕಾರವನ್ನು ಸ್ಮರಿಸಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್ ರವರು ಎಸ್.ಎಸ್.ಎಲ್.ಸಿ ಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವ ಸಲುವಾಗಿ ವಿಶೇಷ ತರಬೇತಿ ನೀಡುವ ಈ ಪ್ರೇರಣಾ ಶಿಬಿರದ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ವತಿಯಿಂದ ಸೋಮವಾರ ಕುವೆಂಪು ಸಭಾಂಗಣದಲ್ಲಿ ಅಘನಾಶಿನಿ ಸ್ಪೀಕ್ಸ್ – ರಿವರ್ ರಿದಮ್ಸ್ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಘನಾಶಿನಿ ಸಾಕ್ಷ್ಯಚಿತ್ರ ನಿರ್ದೇಶಕ ಅಶ್ವಿನಿ ಕುಮಾರ್ ಭಟ್ ಮಾತನಾಡಿ, ಸಾಕ್ಷ್ಯಚಿತ್ರ ರಚನೆಯ ಸೂಕ್ಷ್ಮಗಳನ್ನು ವಿವರಿಸಿದರು. ಕಥೆ ಹೇಳುವ ಮಹತ್ವವನ್ನು ತಿಳಿಸಿದರು. “ಸಾಕ್ಷ್ಯಚಿತ್ರ ನಿರ್ಮಾಣ ಕೇವಲ ಕ್ಷಣಗಳನ್ನು ಸೆರೆಹಿಡಿಯುವುದೇ ಮುಖ್ಯ ಅಲ್ಲ, ಚಿತ್ರಕಥೆ, ಸಂಕಲನ ಮತ್ತು ಛಾಯಾಗ್ರಹಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಅಂಶಗಳು ಸಮ್ಮಿಳಿತಗೊಂಡು ನೈಜ್ಯತೆಯ ಸಾಕ್ಷೀಕರಣವಾದಾಗ ಮನಸೆಳೆಯುವ ಸಾಕ್ಸ್ಯಚಿತ್ರ ಹೊರಹೊಮ್ಮಲು ಸಾಧ್ಯ ಎಂದರು. ಅಘನಾಶಿನಿ ಸಾಕ್ಷ್ಯಚಿತ್ರ ನಿರ್ಮಾಣ ನಂತರದ ಪ್ರಭಾವದ ಕುರಿತು ಮಾತನಾಡಿದ ಅವರು ಈ ಸಾಕ್ಸ್ಯಚಿತ್ರವು ನದಿಗಳನ್ನ ಅವುಗಳ ನೈಸರ್ಗಿಕ ಸ್ಥಿತಿಯಲ್ಲಿ ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಿತು.”ಅಘನಾಶಿನಿ ಅಳಿವೆ ಪ್ರದೇಶವನ್ನು ರಾಮ್ಸಾರ್ ಸೈಟ್ ಎಂದು ಪ್ರಸ್ತಾಪಿಸುವಲ್ಲಿ ಈ ಸಾಕ್ಸ್ಯಚಿತ್ರವು ಪ್ರಮುಖ ಪಾತ್ರ ವಹಿಸಿತು ಎಂದರು. ಸ್ಥಳೀಯ ನೇತ್ರಾವತಿ ನದಿಯನ್ನು ಸಂರಕ್ಷಿಸಲು ಹೇಗೆ ಕೊಡುಗೆ ನೀಡಬಹುದು ಎಂದು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ “ಜನಸಾಮಾನ್ಯರು ನದಿ…
ಉಳ್ಳಾಲದ ಯುವಕನೋರ್ವ ಕ್ರೀಡಾ ಜಗತ್ತಿನಲ್ಲಿ ಸಾಧಿಸಿದ ಸಾಧನೆ ಅದ್ಭುತವಾದುದು. ಅದರಲ್ಲೂ ಕಬಡ್ಡಿ ಆಟದಲ್ಲಿ ವಿಶೇಷ ಆಸಕ್ತಿ ವಹಿಸಿ ಸತತ ಅಭ್ಯಾಸದಿಂದ ಓರ್ವ ಅಪ್ರತಿಮ ಕಬಡ್ಡಿ ಕ್ರೀಡಾ ಪಟು ಎಂದು ಗುರುತಿಸಿಕೊಳ್ಳುವುದರ ಜೊತೆಗೆ ಅದೆಷ್ಟೋ ಯುವ ಕ್ರೀಡಾಪಟುಗಳಿಗೆ ತರಬೇತುದಾರನಾಗಿ ಅವರನ್ನು ಶ್ರೇಷ್ಠ ಆಟಗಾರರನ್ನಾಗಿ ಸಿದ್ಧಗೊಳಿಸಿದ ಹೆಗ್ಗಳಿಕೆ ಇವರಿಗಿದೆ. 1992ರಲ್ಲಿ ಉಳ್ಳಾಲದಲ್ಲಿ ಜನಿಸಿದ ಆಕಾಶ್ ಬೆಳಗಾವಿಯ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ದೈಹಿಕ ಶಿಕ್ಷಣ ತರಬೇತಿ ಪಡೆದರು. ಮುಂದೆ 2015 ರಿಂದ 2020 ರವರೆಗೆ ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಬಡ್ಡಿ ಕೋಚ್ ಆಗಿ ವೃತ್ತಿ ಜೀವನ ಆರಂಭಿಸಿದ ಆಕಾಶ್ ಅಲ್ಲಿಯೇ ಮುಂಬಡ್ತಿ ಹೊಂದಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಬಡ್ಡಿ ಕೋಚ್ ಆಗಿ 2019 ರಿಂದ 2021ರ ವರೆಗೆ ಸೇವೆ ಸಲ್ಲಿಸಿದರು. ಬಳಿಕ ಪ್ರೇರಣಾ ಕಾಲೇಜು ಮಂಗಳೂರು ಅಲ್ಲಿ ತಾತ್ಕಾಲಿಕ ನಿಯಮದಡಿ ಕೆಲಸ ಮಾಡಿ 2021 ರಿಂದ 2023 ರವರೆಗೆ ಶಕ್ತಿ ರೆಸಿಡೆನ್ಸಿ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜು ವಿಭಾಗದಲ್ಲಿ ತರಬೇತುದಾರರಾಗಿ ಸೇರಿಕೊಂಡರು. 2020 ರಿಂದ ಉಳ್ಳಾಲದ…