Author: admin
‘ಮನೆಗೊಂದು ಗ್ರಂಥಾಲಯ’ ಪರಿಕಲ್ಪನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಮನೆಯಲ್ಲಿ ಪುಸ್ತಕಾಲಯವೊಂದನ್ನು ತೆರೆದಿದೆ. ನಾಡಿನ ದೊರೆಯ ಮನೆಯಲ್ಲಿ ಈಗ ಕನ್ನಡದ 500 ಪುಸ್ತಕಗಳು ತುಂಬಿವೆ. ತುಳು ಸಾಹಿತ್ಯ ಅಕಾಡೆಮಿ ಕೂಡಾ ವಾಚನಾಭಿರುಚಿಯನ್ನು ವೃದ್ಧಿಸುವ ಸದಾಶಯದಿಂದ ಇಂಥದ್ದೇ ಒಂದು ಕಾರ್ಯಕ್ರಮವನ್ನು ಇತ್ತೀಚಿಗೆ ಆರಂಭಿಸಿದಾಗ ಉಪಸ್ಥಿತರಿದ್ದ ಪುತ್ತೂರಿನ ಶಾಸಕರು ಹತ್ತು ಸಾವಿರ ಮೊತ್ತದ ತುಳು ಪುಸ್ತಕವನ್ನು ಖರೀದಿಸಿದ್ದು ದೊಡ್ಡ ಸುದ್ದಿಯಾಯಿತು. ತಮ್ಮ ಮನೆಯೊಳಗಡೆಯೇ ಕನ್ನಡ ಪುಸ್ತಕಗಳನ್ನು ಎದೆಗೇರಿಸಿ ವಾಚನಾಲಯವನ್ನು ಉದ್ಘಾಟಿಸಿದ್ದ ಈ ನಾಡಿನ ಮುಖ್ಯಮಂತ್ರಿಗಳು ಒಂದು ವಿಷಯವನ್ನು ಗಮನಿಸಬೇಕು. ಸಾಹಿತ್ಯ ಸಂಸ್ಕೃತಿ ವ್ಯಾಕರಣ ಕಲೆ ನೆಲಪ್ರೀತಿಯನ್ನು ಆಗಾಗ ಬಹಿರಂಗವಾಗಿಯೇ ವ್ಯಕ್ತಪಡಿಸುವ ಮತ್ತು ಆ ಪರವಾಗಿ ಇದ್ದೇನೆ ಎಂದು ತೋರಿಸಿಕೊಳ್ಳುವ ಮುಖ್ಯಮಂತ್ರಿಗಳು ಕಳೆದ ಮೂರು ವರ್ಷಗಳಿಂದ ಪುಸ್ತಕ ಖರೀದಿ ಯಾಕೆ ಸ್ಥಗಿತಗೊಂಡಿದೆ ಎಂಬ ವಿಷಯವನ್ನು ಪ್ರಾಸ್ತಾಪಿಸಿ, ಬೆಂಬಲವಾಗಿ ನಿಲ್ಲುವ ಭರವಸೆ ನೀಡಬೇಕಾಗಿತ್ತು. ಇವು ಯಾವುದನ್ನೂ ಮುಖ್ಯಮಂತ್ರಿಗಳು ಆ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದಂತಿಲ್ಲ. ಯಾವ ಪತ್ರಿಕೆಗಳಲ್ಲೂ ಇಂಥ ಭರವಸೆ ವರದಿಯಾದುದನ್ನು ನಾನು ಕಂಡಿಲ್ಲ. ಕನ್ನಡ ಪುಸ್ತಕೋದ್ಯಮವನ್ನು…
ಕರ್ಮಾಯಿಗುತ್ತು ದಿವಂಗತ ಕೆ. ಕರಿಯಪ್ಪ ರೈ ಅವರ ಪತ್ನಿ, ಮಂಗಳೂರಿನ ಖ್ಯಾತ ನ್ಯಾಯವಾದಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಕೆ. ದಯಾನಂದ ರೈ ಅವರ ಮಾತೃಶ್ರೀ ಆದೂರು ಏಳ್ನಾಡುಗುತ್ತು ಲಲಿತಾ ರೈಯವರು ಅನಾರೋಗ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪುತ್ರರಾದ ದಯಾನಂದ ರೈ ಸಹಿತ ಕಡಬ ಕಾಂಗ್ರೆಸ್ ಮುಖಂಡ ಕೆ. ವಿಜಯಕುಮಾರ್ ರೈ, ಮಾಜಿ ಸೈನಿಕ ಕೆ. ಸನತ್ ಕುಮಾರ್ ರೈ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಇವರು ಸಾಮಾಜಿಕ ಕಾರ್ಯಕರ್ತೆಯಾಗಿ ಪುತ್ತೂರು ಆಸುಪಾಸಿನಲ್ಲಿ ಜನಾನುರಾಗಿಯಾಗಿದ್ದರು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ ಫೆಬ್ರವರಿ 13 ರಂದು ನಡೆಯಲಿದೆ. ಫೆ.9 ರಂದು ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಬಾರಾಳಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಹೋಮ, ರಾತ್ರಿ 8 ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ವಿಘ್ನೇಶ್ವರ ಪ್ರಾರ್ಥನೆ, ರಂಗ ಪೂಜೆ (ದೊಡ್ಡ ಮನೆಯವರಿಂದ ಕಟ್ಟುಕಟ್ಟಳೆ) ಫೆಬ್ರವರಿ 10 ಸೋಮವಾರ ರಾತ್ರಿ ಎಂಟು ಗಂಟೆಯಿಂದ ವಿಶೇಷ ಪೂಜೆ, ರಂಗ ಪೂಜೆ (ಹೆಗ್ಗುಂಜೆ ದೊಡ್ಡ ಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆಪೂಜೆ.ಫೆ.11 ಮಂಗಳವಾರ ರಾತ್ರಿ 8 ಗಂಟೆಗೆ ರಂಗ ಪೂಜೆ (ಹೆಗ್ಗುಂಜೆ ಹೊಸ ಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆ ಪೂಜೆ, ವಸಂತ ಪೂಜೆ ನಡೆಯಲಿದೆ. ಫೆಬ್ರವರಿ 12 ಬುಧವಾರ ಕುಂಭ ಸಂಕ್ರಮಣ, ರಾತ್ರಿ 9ಗಂಟೆಯಿಂದ ಕೆಂಡಸೇವೆ, ರಾತ್ರಿ 3 ಗಂಟೆಯಿಂದ ಹಾಲಿಟ್ಟು ಸೇವೆ, ನಾಗದರ್ಶನ, ರಾತ್ರಿ 4 ರಿಂದ ಹಿರೇ ರಂಗಪೂಜೆ, ಬಲಿ ಉತ್ಸವ, ದಕ್ಕೆ ಬಲಿ ನಡೆಯಲಿದೆ. ಫೆ. 13 ಗುರುವಾರ ಮಧ್ಯಾಹ್ನ 12:30ಕ್ಕೆ ಶ್ರೀ ಮನ್ಮಹಾರಥಾರೋಹಣ ನಡೆಯಲಿದೆ. ಸಂಜೆ ಆರು ಗಂಟೆಗೆ ರಥೋತ್ಸವ, ರಾತ್ರಿ…
ಮೂಡುಬಿದಿರೆ: ಉತ್ತರಖಂಡದ ಡೆಹ್ರಾಡೂನ್‌ನಲ್ಲಿ ಜರುಗಿದ ರಾಷ್ಟ್ರಿಯ ಕ್ರೀಡಾಕೂಟದ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಉಷಾ ಎಸ್ ಆರ್ ಕಂಚಿನ ಪದಕವನ್ನು ಪಡೆದಿದ್ದಾರೆ. ಇವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ. ೮೭ಕೆಜಿ ದೇಹ ತೂಕ ವಿಭಾಗದಲ್ಲಿ ಸ್ಪರ್ಧಿಸಿರುವ ಇವರು ಒಟ್ಟು ೧೯೭ಕೆಜಿ ಭಾರ ಎತ್ತಿ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ. ೭೬ಕೆಜಿ ದೇಹತೂಕ ವಿಭಾಗದಲ್ಲಿ ಸ್ಪರ್ದಿಸಿದ್ದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ತನುಷ ನಾಲ್ಕನೇ ಸ್ಥಾನ ಪಡೆದಿದ್ದಾರೆ. ರಾಷ್ಟ್ರಿಯ ಕ್ರೀಡಾಕೂಟದ ವೇಯ್ಟ್ಲಿಫ್ಟಿಂಗ್ ವಿಭಾಗದಲ್ಲಿ ಇವರು ಇರ್ವರೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದವರು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕ್ರೀಡಾಪಟುಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.
ಹಿರಿಯಡ್ಕ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಮಕ್ಕಳು ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ವಿಹಾರದ ಮುಖ್ಯ ಅತಿಥಿಯಾಗಿ ಆಗಮಿಸಿದ ರಂಗಕರ್ಮಿ, ಸಾಹಿತಿ ಶ್ರೀಮತಿ ಪೂರ್ಣಿಮಾ ಸುರೇಶ್ ಸ್ಥಳ ಸಾನಿಧ್ಯದ ಪರಿಚಯ ಮಾಡಿಕೊಟ್ಟರು. ನಮ್ಮ ಊರಿನ ಕ್ಷೇತ್ರದ ಮಹಿಮೆಗಳನ್ನು, ಹಿರಿಯರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ, ದೈವಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊAಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಮಕ್ಕಳು ದೇವಸ್ಥಾನದ ಮುಂಭಾಗದಲ್ಲಿರುವ ಭೂತರಾಜ ಕಂಬ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಬ್ರಹ್ಮಲಿಂಗ ದೇವರಗುಡಿ, ಬೊಬ್ಬರ್ಯ ಕಂಬ, ಆದಿ ನಾಗಬನ, ಆದಿ ಬ್ರಹ್ಮಸ್ಥಾನ, ವ್ಯಾಘ್ರ ಚಾಮುಂಡಿ ಗುಡಿ, ಪರಿವಾರ ಗಣಶಾಲೆ (ಆಲಡೆ), ಗುರುಚಿ ಮರ, ಅಡಕತ್ತಾಯ, ಕ್ಷೇತ್ರಪಾಲ, ಪುಷ್ಕರಣಿ, ಶೂಲಪಾಣಿ ಮತ್ತು ದಂಡಪಾಣಿ ಗುಡಿ, ಮಾಲಿ-ಸುಮಾಲಿ ದ್ವಾರಪಾಲಕ ಮಂಟಪಗಳನ್ನು ದರ್ಶನ ಪಡೆಯುವುದರ ಜೊತೆಗೆ ದೇಗುಲದ ಒಳಾಂಗಣ, ಹೊರಾಂಗಣ ಮತ್ತು ಮೇಲ್ಛಾವಣಿಯ ದಾರುಶಿಲ್ಪಗಳನ್ನು ಕಂಡು…
ವಿದ್ಯಾಗಿರಿ: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ನಡೆಸಿದ ‘ಶೂಟಿಂಗ್ ಸ್ಟಾರ್ಸ್ ೨೦೨೫’ ರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ಮಾಣ ಮತ್ತು ಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜು ಪದವಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಚಾಂಪಿಯನ್ ಆದರು. ಶೂಟಿಂಗ್ ಸ್ಟಾರ್ಸ್ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನರಾದರು. ಫೋಟೊಗ್ರಪಿ: ಸ್ಪೂರ್ತಿ – (ಪ್ರಥಮ), ಟ್ರೈಲರ್ ಮೇಕಿಂಗ್ : ಸ್ಪೂರ್ತಿ ಮತ್ತು ತಂಡ (ದ್ವಿತೀಯ), ಆರ್.ಜೆ ಹಂಟ್ – ದಿಶಾ (ದ್ವಿತೀಯ), ನ್ಯೂಸ್ ಆ್ಯಂಕರಿAಗ್ – ರಿಶಾಂತ್ (ಪ್ರಥಮ), ಸ್ವಾತಿ (ದ್ವಿತೀಯ) ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಚರ‍್ಯ ಕುರಿಯನ್ ಅಭಿನಂದಿಸಿದ್ದಾರೆ.
ಲಕುಮಿ ಸಿನಿ ಕ್ರಿಯೇಷನ್ಸ್ ವತಿಯಿಂದ ಶ್ರೀ ಕದಳಿ ಸಿನಿ ಪ್ರೊಡಕ್ಷನ್ ಇವರ ಸೂರಜ್ ಶೆಟ್ಟಿ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ “ಕತೆ ಕೈಲಾಸ” ಕನ್ನಡ, ತುಳು ಸಿನಿಮಾದ ಮುಹೂರ್ತ ಸಮಾರಂಭ ಕದ್ರಿ ದೇವಸ್ಥಾನದಲ್ಲಿ ಜರುಗಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸಿನಿಮಾಕ್ಕೆ ಕ್ಲಾಪ್ ಮಾಡಿ ಮಾತಾಡಿದರು. ಸೂರಜ್ ಶೆಟ್ಟಿ ನೇತೃತ್ವದಲ್ಲಿ ಮೂಡಿ ಬರಲಿರುವ ಸಿನಿಮಾ ಜನರನ್ನು ರಂಜಿಸುವುದರಲ್ಲಿ ಅನುಮಾನವಿಲ್ಲ. ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ನಡೆದು ತೆರೆಯ ಮೇಲೆ ಬರಲಿ ಎಂದರು. ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಶುಭಾಶಂಸನೆಗೈದರು. ಶ್ರೀರಂಗ ಐತಾಳ್ ದೀಪ ಪ್ರಜ್ವಲನೆಗೈದರು. ಮುಖ್ಯ ಅತಿಥಿಗಳಾಗಿ ಪ್ರಕಾಶ್ ಪಾಂಡೇಶ್ವರ, ಕದ್ರಿ ನವನೀತ ಶೆಟ್ಟಿ, ಶಶಿಧರ ಶೆಟ್ಟಿ ಮಹಾಗಣಪತಿ ಟ್ರಾನ್ಸ್ ಪೋರ್ಟ್, ಆರ್ ಕೆ ಮಾಧವ ನಾಯ್ಕ್, ಬಾಳ ಜಗನ್ನಾಥ ಶೆಟ್ಟಿ, ರವಿ ರೈ ಕಳಸ, ಲೀಲಾಕ್ಷ ಕರ್ಕೇರ, ಪ್ರೀತಮ್, ಅಜಿತ್ ಚೌಟ ದೇವಸ್ಯ, ಸುದೇಶ್ ರೈ ಸಿಎ, ಸಿಎ…
ಸರ್ಕಾರಿ ಶಾಲೆಗಳ ಉಳಿವಿನಲ್ಲಿ ಶಿಕ್ಷಕರು, ಎಸ್ ಡಿಎಂಸಿ, ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ಇಲ್ಲಿ ಕಲಿತ ವಿದ್ಯಾರ್ಥಿಗಳು ಅಭಿಮಾನದಿಂದ ಶಾಲೆಯತ್ತ ಮತ್ತೆ ಹಿಂತಿರುಗಿ ನೋಡಿದರೆ ಶಾಲೆಯ ಅಭಿವೃದ್ಧಿಗೆ ಶ್ರಮ ವಹಿಸಬೇಕಾಗಿಲ್ಲ. ಉತ್ತಮ ಶಿಕ್ಷಣದೊಂದಿಗೆ ಉತ್ತಮ ಅಲೋಚನಾ ಕ್ರಮ ರೂಪಿಸುವ ಶಕ್ತಿ ಸರಕಾರಿ ಶಾಲೆಗಳಲ್ಲಿದೆ ಎಂದು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು. ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಸ್ವಯಂಸ್ಫೂರ್ತಿ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಟೇಬಲ್, ಕುರ್ಚಿ ಸಹಿತ ನಾಲ್ಕು ಕಂಪ್ಯೂಟರ್ ಸೆಟ್, ಬುಕ್ ರ್ಯಾಕ್, ಆಟದ ಸಾಮಾಗ್ರಿಗಳನ್ನು ಒಳಗೊಂಡ ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕ ಸಿ.ಎಸ್ ನಾಗರಾಜ ಶೆಟ್ಟಿ ಜಡ್ಕಲ್ ಹಾಗೂ ಶಾಸಕರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಮಾಜಿ ಅಧ್ಯಕ್ಷ ಪ್ರಭಾಕರ ಗಾಣಿಗ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್, ಕಾರ್ಯದರ್ಶಿ ಸುನಿಲ್ ಎಚ್.ಜಿ. ಅಣ್ಣಪ್ಪ…
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಯುವ ಸಂಘಗಳ ಒಕ್ಕೂಟ ಮಂಗಳೂರು ಇವರ ಆಶ್ರಯದಲ್ಲಿ ಸವಣೂರಿನಲ್ಲಿ ಜರಗಿದ ರಾಜ್ಯಮಟ್ಟದ ಜನಪದ ನೃತ್ಯ ಸ್ಪರ್ಧೆ ‘ಕಲಾವೈಭವ’, ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳುರವರ ನೇತೃತ್ವದಲ್ಲಿ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ಸನ್ಮಾನಿಸಿ, ಗೌರವಿಸಿದರು. ಈ ಸಂಧರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಪ್ರಮುಖರಾದ ದಿನೇಶ್ ಮೆದು, ತಾರಾನಾಥ ಕಾಯರ್ಗ, ಸುಂದರಿ ಬಂಬಿಲ, ರಾಕೇಶ್ ರೈ ಕೆಡೆಂಜಿ, ಶಿವಪ್ರಸಾದ್ ರೈ ಮೈಲೇರಿ, ಜಿತಾಕ್ಷಿ ಜಿ ಕುದ್ಮಾರು, ಸಚಿನ್ ಸವಣೂರು, ಸತೀಶ್ ಬಲ್ಯಾಯ, ಆಶ್ರಫ್ ಜನತಾ, ನಿಂಗರಾಜು, ಒಕ್ಕೂಟದ ರಾಜ್ಯಾಧ್ಯಕ್ಷ ಬಾಲಾಜಿ ಬೆಂಗಳೂರುರವರು ಉಪಸ್ಥಿತರಿದ್ದರು.
ಮಹಾರಾಷ್ಟ್ರದ ಮರಾಠಿ ಮಣ್ಣಿನಲ್ಲಿ ತುಳುವರ ಹಾಗೂ ಕನ್ನಡಿಗರ ಸಂಘ ಸಂಸ್ಥೆಗಳು ಹುಟ್ಟಿ ಬೆಳೆದಿವೆ. ಹಲವು ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ವಿವಿಧ ಸೇವಾ ಕಾರ್ಯಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಾ ಇವೆ. ಕೆಲವು ಸಂಘಟನೆಗಳು ಶತಮಾನೋತ್ಸವವನ್ನು ಆಚರಿಸಿ ವಿಜೃಂಭಿಸಿವೆ. ಕೇವಲ 2 ವರ್ಷದ ಹಿಂದೆ ಹುಟ್ಟಿ ಅಂಬೆಗಾಲಿಡುತ್ತಾ ಹೆಜ್ಜೆ ಹಾಕುತ್ತಿರುವ ಶ್ರೀಶಕ್ತಿ ಸಂಸ್ಥೆಯು ಸದಭಿರುಚಿಯ ಸಾವಿರಾರು ಮಹಿಳೆಯರನ್ನು ಒಟ್ಟು ಸೇರಿಸಿ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜನಸೇವಾ ಸಂಸ್ಥೆ ಶ್ರೀಶಕ್ತಿ ಫೌಂಡೇಶನ್ ಮಹಾರಾಷ್ಟ್ರ (ರಿ) ಮೀರಾ ರೋಡ್ ‘ಹೆಣ್ಣು ಬಲವೂ ಹೌದು ಬುದ್ಧಿಯೂ ಹೌದು’ ಎಂಬ ಮಾತಿನಂತೆ ಸ್ತ್ರೀ ಶಕ್ತಿ ಅಗಾಧವಾದುದು. ಸ್ತ್ರೀಯರು ಒಟ್ಟಾಗಿ ಸಂಘಟಿತರಾದರೆ ಯಾವ ಕಾರ್ಯವನ್ನೂ ಸುಲಭವಾಗಿ ಸಾಧಿಸಬಹುದು. ಸಂಘಟನಾ ಚತುರೆಯಾಗಿರುವ ಶಾಲಿನಿ ಶೆಟ್ಟಿ ಸಚ್ಚೇರಿಗುತ್ತು ಶ್ರೀಶಕ್ತಿ ಸಂಘಟನೆಯ ಸ್ಥಾಪಕ ಅಧ್ಯಕ್ಷೆಯಾಗಿದ್ದಾರೆ. ಅವರ ನೇತೃತ್ವದಲ್ಲಿ ಸ್ತ್ರೀಯರ ಸಂಘಟನೆಯ ಮೂಲಕ ಹಲವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.ಜಗತ್ತನ್ನೇ ಅಲ್ಲೋಲ ಕಲ್ಲೋಲಗೊಳಿಸಿದ ಕೋವಿಡ್…