Author: admin
ದಶಮಾನೋತ್ಸವ ಸಂಭ್ರಮದಲ್ಲಿ ಯು.ಎ.ಇ ಯಕ್ಷಗಾನ ಅಭ್ಯಾಸ ಕೇಂದ್ರ : ಜೂನ್ 29 ರಂದು ದುಬೈನಲ್ಲಿ ಅದ್ಧೂರಿ ಕಾರ್ಯಕ್ರಮ
ನಿಸ್ವಾರ್ಥವಾಗಿ ದುಡಿದು ಯಕ್ಷಗಾನವನ್ನು ಈ ಮರಳುಭೂಮಿಯಲ್ಲಿ ಬೆಳೆಸಿ, ಉಳಿಸಲು ಶ್ರಮಪಡುವ ನಮ್ಮ ಗುರುಗಳಾದ ಶ್ರೀ ಶೇಖರ್ ಡಿ ಶೆಟ್ಟಿಗಾರ್, ಶ್ರೀ ಶರತ್ ಕುಡ್ಲ ಹಾಗೂ ಎಲ್ಲಾ ಕಾರ್ಯಕರ್ತರಿಗೂ, ಪೋಷಕರಿಗೂ, ಕಲಾವಿದರಿಗೂ, ಬಾಲ ಕಲಾವಿದರಿಗೂ ಶಿರಭಾಗಿ ಮಾಡುವ ನಮಸ್ಕಾರಗಳು. ಇದೀಗ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಸ್ಥೆಗೆ ದಶಮಾನೋತ್ಸವದ ಸಡಗರ. ಹತ್ತರ ಹರುಷದ ಹೊತ್ತಿನಲ್ಲಿ ಹಿಂದೆ ತಿರುಗಿ ನೋಡಿದಾಗ, ಸಾಗಿ ಬಂದ ದಾರಿ, ಸಾಧನೆ ಸಂಭ್ರಮ ಮೂಡಿಸುತ್ತಿದೆ. ಯಕ್ಷಗಾನ ಅಭ್ಯಾಸ ಕೇಂದ್ರದ ಹೆಸರು ಯು. ಎ. ಇ. ಯ ಸರ್ವರ ಮನೆ-ಮನ ತಲುಪಿದೆ. ವಿದ್ವಜ್ಜನರ ಕೊಂಡಾಟಕ್ಕೆ ಕಾರಣವಾಗಿದೆ. ಮುಂಚೂಣಿಯಲ್ಲಿ ನಿಂತ ನಮಗೆ ಸಾರ್ಥಕ್ಯ ಭಾವ. ಮತ್ತಷ್ಟು ಸಾಧನೆಗೆಳಸುವ ಉತ್ಸಾಹ, ಹೆಚ್ಚಿದ ಹೊಣೆಯ ಅರಿವು, ಧನ್ಯತೆ ಸಮ್ಮಿಳಿತ ಭಾವಗಳಿಂದ ನಿರುತ್ತರರು. ಗುರುಗಳಾದ ಶೇಖರ್ ಡಿ ಶೆಟ್ಟಿಗಾರ್ ಚಿಂತನೆಗಳನ್ನು ಚಿಂತೆಯಾಗದಂತೆ ಕಾರ್ಯರೂಪಕ್ಕೆ ತರುವಲ್ಲಿ ಪೂರ್ಣ ಬೆಂಬಲ ಸಂಚಾಲಕ ಕೊಟ್ಟಿಂಜ ದಿನೇಶ ಶೆಟ್ಟಿಯವರದ್ದು. ದೈವಭಕ್ತರು, ನಿಸ್ವಾರ್ಥಿ, ನಿರಂತರ ಕವಲೊಡೆಯದ ನಿಷ್ಠೆಯಿಂದ ಸಂಸ್ಥೆಯ ನೇತೃತ್ವ ವಹಿಸಿ, ಮುನ್ನಡೆಸಿ, ಹೆಸರಿನಂತೆ ದಿನಮಣಿಯಾದವರು.…
ಯಕ್ಷ ಕಲಾರಂಗ (ರಿ) ಕಾರ್ಕಳ ಮತ್ತು ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಹಯೋಗದೊಂದಿಗೆ ಯಕ್ಷ ಶಿಕ್ಷಣ ಅಭಿಯಾನ 2025 – 26 ಯೋಜನೆಯ ಮೂಲಕ ಕಲಿಕಾಸಕ್ತ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ಉಚಿತ ಯಕ್ಷಗಾನ ನಾಟ್ಯ ತರಬೇತಿ ತರಗತಿ ಆರಂಭ ಮಾಡಲಾಯಿತು. ಕಾಂತವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಭಾಕರ ಕುಲಾಲ್ ಬೇಲಾಡಿ ಇವರು ದೀಪ ಬೆಳಗಿಸಿ ನಾಟ್ಯ ತರಬೇತಿ ತರಗತಿಯನ್ನು ಉದ್ಘಾಟಿಸಿ, ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯಪೂರ್ಣ ಕಲೆ ಯಕ್ಷಗಾನ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಯಕ್ಷ ಕಲಾರಂಗ (ರಿ) ಕಾರ್ಕಳ ಇದರ ಕಾರ್ಯದರ್ಶಿ ಶ್ರೀ ಮಹಾವೀರ ಪಾಂಡಿ ಈ ಯಕ್ಷ ಶಿಕ್ಷಣ ಅಭಿಯಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಗಾನ ಮಹತ್ವದ ಬಗ್ಗೆ ಹೇಳಿದರು. ಯಕ್ಷಕಲಾರಂಗ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಉದ್ಯಮಿ ಇವರು ಈ ಸಂದರ್ಭದಲ್ಲಿ ಮಕ್ಕಳಿಗೆ ಶುಭ ಹಾರೈಸಿ ಯೋಜನೆಯ ಸದುಪಯೋಗ ಮಾಡಿಕೊಳ್ಳಿ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ಶ್ರೀ ಕೆ ಶ್ರೀಪತಿ ರಾವ್ ಅದ್ಯಕ್ಷತೆ…
ಸಮಾನತೆ ಸರ್ವರ ಹಕ್ಕು. ಮೇಲು ಕೀಳು ಎಂಬ ಜಾತಿ ಭೇದವಿಲ್ಲದೆ ಆತ್ಮಗೌರವದಿಂದ ಒಂದು ಸಮಾಜದಲ್ಲಿ ಬಾಳುವ ಅಧಿಕಾರ ಎಲ್ಲರಿಗೂ ಇದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರಾದಿಯಾಗಿ ಎಲ್ಲರೂ ಇದನ್ನು ಪ್ರತಿಪಾದಿಸುತ್ತಲೇ ಬಂದರು. ಸಮತೆಯಿಲ್ಲದೆ ನ್ಯಾಯ ಸಾಧ್ಯವಿಲ್ಲ. ಜಾತಿ, ಧರ್ಮ, ಲಿಂಗ, ವರ್ಗದ ಆಧಾರದಲ್ಲಿ ಯಾವುದೇ ವಿಭಜನೆಯಿಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳು ದೊರಕಬೇಕು ಎಂಬುದೇ ಸಮಾನತೆಯ ತತ್ತ್ವ. ಆದರೆ ಜಾತಿ, ವರ್ಗದ ಆಧಾರದಲ್ಲಿ ಮೇಲು ಕೀಳೆಂಬ ವರ್ಗೀಕರಣವು ನಡೆದು ಕೆಳವರ್ಗದ ಜನರು ಅಸಮಾನತೆಯ, ಅಪಮಾನದ ನೋವನ್ನು ಅನುಭವಿಸುವಂತಾಯಿತು. ಶೋಷಿತ ವರ್ಗ ಇದರ ವಿರುದ್ಧ ಅನಿವಾರ್ಯವಾಗಿ ಸಿಡಿದೇಳುವಂತಾಯಿತು. ಕನ್ನಡದಲ್ಲಿ ‘ದಲಿತ ಬಂಡಾಯ ಸಾಹಿತ್ಯ’ ಎಂಬ ರೂಪದಲ್ಲಿ ಒಂದು ಸಾಹಿತ್ಯ ಚಳುವಳಿಯೇ ಆರಂಭವಾಯಿತು. ದಲಿತ ಸಾಹಿತ್ಯವೆನ್ನುವುದು ಅನುಭವಸಿದ್ಧ ಸಾಹಿತ್ಯ. ಭಾರತೀಯ ದಲಿತ ಸಾಹಿತ್ಯಕ್ಕೆ ಅಂಬೇಡ್ಕರ್ ಸಾಹಿತ್ಯವು ಬುನಾದಿಯಾಗಿದೆ ಎನ್ನಬಹುದು. ಕನ್ನಡ ಸಾಹಿತ್ಯದಲ್ಲಿ ಕ್ರಾಂತಿ ಮಾಡಿದ ವಚನ ಸಾಹಿತ್ಯವೂ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಪಂಪನ ಮಾತನ್ನೇ ಮಂತ್ರವಾಗಿಸಿತ್ತು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ‘ದಲಿತ ಬಂಡಾಯ…
ವರುಷ ಸುಮಾರು ಮೂವತ್ತು ದಾಟಿದರೂ ಮದುವೆ ಆಗಿಲ್ಲ, ಕಂಕಣ ಭಾಗ್ಯ ಕೂಡಿ ಬಂದಿಲ್ಲ, ರಾಶಿ ನಕ್ಷತ್ರ ಸಮನಾಗಿಲ್ಲ, ತಲೆಯ ಕೂದಲೆಲ್ಲಾ ಬೆಳ್ಳಗಾತ್ತಿದೆ ಎಂಬ ಮಾತುಗಳು ಕೇಳಿ ಬಂದರೂ ಇದಕ್ಕಿಂತ ಹೆಚ್ಚಾಗಿ ಈಗಿನ ಕಾಲದಲ್ಲಿ ಹುಡುಗಿ ಸಿಕ್ತಿಲ್ಲ, ಸಿಕ್ಕಿದ್ರೂ ಮದುವೆಗೆ ಒಪ್ಪಲಿಲ್ಲ ಅನ್ನೋ ಮಾತು ಅಚ್ಚರಿಯಂತೆ ಪ್ರಸ್ತುತ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕಾಲ ಬದಲಾದಂತೆ ಹುಡುಗಿಯರ ಡಿಮ್ಯಾಂಡ್ಗಳು ಏರುತ್ತಿದೆ. ಹುಡುಗ ಊರಿನಲ್ಲಿ ಕೃಷಿ ಮಾಡಿಕೊಂಡಿದ್ದರೆ, ತನ್ನದೇ ಅಂಗಡಿ ಇಟ್ಟರೆ, ದೇಶ ಸೇವೆ ಮಾಡಲೇಂದು ಸೇನೆಗೆ ಸೇರಿದರೆ ಈಗಿನ ಕಾಲದಲ್ಲಿ ಯಾವ ಹುಡುಗಿ ತಾನೆ ಒಪ್ಪಿಕೊಂಡಾಳು? ಮದುವೆ ಮಾತುಕತೆ ಮುಂಚೆಗೆ ಹುಡುಗಿ ತನ್ನ ಡಿಮ್ಯಾಂಡ್ ಗಳನ್ನ ಇಟ್ಟು ಬಿಡುತ್ತಾಳೆ. ಒಬ್ಬನೇ ಮಗನಿರಬೆಕು, ಸ್ವಂತ ಕಾರು ಇರಬೇಕು, ಮನೆ ಎರಡು ಅಂತಸ್ತಿನದ್ದು ಆಗಿರಬೇಕು, ಅಪ್ಪ ಅಮ್ಮ, ಒಡ ಹುಟ್ಟಿದವರು ಇಲ್ಲದೆ ಇದ್ದರೆ ಇನ್ನೂ ಉತ್ತಮ ಎಂಬ ಹತ್ತಾರು ನಿಯಮಗಳಿವೆ. ವರದಕ್ಷಿಣೆ ಇಲ್ಲದೆ ಎಲ್ಲಾ ಖರ್ಚನ್ನು ಹುಡುಗನ ಕಡೆಯವರೆ ಹಾಕಿಕೊಂಡು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹುಡುಗನೆ…
ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಘ, ಹೌಸ್ ಹಾಗೂ ವಿವಿಧ ಸಂಘಗಳ ನಾಯಕರ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲೆಯ ಸ್ಕೌಟ್ ಮತ್ತು ಗೈಡ್ಸ್ನ ಮುಖ್ಯ ಆಯುಕ್ತ ಲಯನ್ ಜಯಕರ ಶೆಟ್ಟಿ ಇಂದ್ರಾಳಿಯವರು ಆಗಮಿಸಿದ್ದರು. ಅವರು ಜ್ಯೋತಿಯನ್ನು ಬೆಳಗಿಸಿ ಮಾತನಾಡಿ ಮಕ್ಕಳೆಲ್ಲರೂ ಪ್ರತಿಭಾವಂತರು. ಎಲ್ಲರೂ ಶಾಲೆಯಲ್ಲಿ ಜ್ಞಾನವನ್ನು ಪಡೆದು ಪರಿಪೂರ್ಣ ವಿಚಾರ ಹೊಂದಿದ ವಿದ್ಯಾರ್ಥಿಗಳಾಗಬೇಕು. ಅದನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಶ್ರೇಷ್ಟ ವ್ಯಕ್ತಿಗಳಾಗುತ್ತೀರಿ. ಜೀವನದಲ್ಲಿ ಶಿಸ್ತು, ಸಂಸ್ಕಾರ, ದೇವರ ಮೇಲಿನ ನಂಬಿಕೆ ಇರಬೇಕು. ಪ್ರತಿಯೊಬ್ಬರ ಮೇಲಿನ ಕಾಳಜಿ ಉತ್ತಮ ನಾಯಕತ್ವದ ಗುಣವೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ವಿವಿಧ ಹುದ್ದೆಗಳಿಗೆ ಆಯ್ಕೆಗೊಂಡ ಎಲ್ಲಾ ನಾಯಕರುಗಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದೀರಿ. ಶಾಲೆಯ ಇತರ ವಿದ್ಯಾರ್ಥಿಗಳಿಗೆ ನೀವು ಮಾದರಿಯಾಗಿದ್ದೀರಿ. ಜಿ ಎಮ್ನಲ್ಲಿ ವಿವಿಧ ಸಂಘಗಳಿದ್ದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜೀವನಕ್ಕಾಗಿ ಶಿಕ್ಷಣವನ್ನು ನೀಡುತ್ತಿದೆ. ಮಕ್ಕಳು ತಮಗೆ ಸಿಕ್ಕ…
ಜೂನ್ 21 ರಂದು ಸಯನ್ ನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಮುಂಬಯಿಯ ಪ್ರತಿಷ್ಠಿತ ಸಮುದಾಯ ಸಂಘಟನೆಯಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ವತಿಯಿಂದ ಯೋಗ ದಿನಾಚರಣೆಯು ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಮಾತನಾಡುತ್ತಾ, ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮವಲ್ಲ. ಅದು ದೇಹದ ಆರೋಗ್ಯ, ಮನಸ್ಸಿನ ಶಾಂತತೆ ಮತ್ತು ಆತ್ಮದ ವಿಕಾಸವನ್ನು ಒಳಗೊಂಡಿರುವ ಸಮಗ್ರ ಜೀವನ ಶೈಲಿ ಮತ್ತು ಅರಿವಿನ ಸಾಧನೆ ಯಾಗಿದೆ. ಇಂದಿನ ಮನುಷ್ಯನ ಅನೇಕ ರೋಗಗಳಿಗೆ ಪ್ರಮುಖ ಕಾರಣಗಳೆಂದರೆ ಅಶುದ್ಧ ಪರಿಸರ, ಅಸಂತೃಪ್ತ ಮನೋಭಾವ, ಜಾಗೃತಿ ಕೊರತೆ ಮತ್ತು ಮೂಲಭೂತ ನಿಯಮಗಳನ್ನು ಪಾಲಿಸದ ಜೀವನಶೈಲಿ. ಆದರೆ ಯೋಗದ ಮೂಲಕ ಈ ಎಲ್ಲಾ ಅಸಮತೋಲನಗಳನ್ನು ಸರಿಪಡಿಸಿ ಸಮಪೂರ್ಣ ಆರೋಗ್ಯವನ್ನು ಮನುಷ್ಯ ಸಾಧಿಸಬಹುದಾಗಿದೆ ಎಂದು ತಮ್ಮ ವಿಚಾರವನ್ನು ತೆರೆದಿಟ್ಟರು. ಅಸೋಸಿಯೇಷನ್ ನ ಪರಂಪರೆಯಂತೆ ಮಹಿಳಾ ವಿಭಾಗವು ಆಯಾಯ ಅಧ್ಯಕ್ಷರ ಅಡಿಯಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಅವರ ಅನುಕರಣೀಯ ಪರಂಪರೆಯನ್ನು ಪ್ರಸ್ತುತ ಅಧ್ಯಕ್ಷೆ ಶ್ರೀಮತಿ ಶಾಂತಾ…
ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ : ಅಧ್ಯಕ್ಷೆಯಾಗಿ ಸರೋಜ ಟಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ವರಿ ಡಿ ಶೆಟ್ಟಿ
ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಸಭೆ ಸುರತ್ಕಲ್ ಬಂಟರ ಭವನದಲ್ಲಿ ನಡೆದಿದ್ದು, 2025-27 ರ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷೆಯಾಗಿ ಸರೋಜಾ ಟಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ವರಿ ಡಿ ಶೆಟ್ಟಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಯಂತಿ ಪಿ ಟಿ ರೈ, ಕೋಶಾಧಿಕಾರಿಯಾಗಿ ಮಾಲತಿ ಜೆ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಕವಿತಾ ಪಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಶಾ ಕಿರಣ್ ರೈ, ಕ್ರೀಡಾ ಕಾರ್ಯದರ್ಶಿಯಾಗಿ ಬಬಿತ ಜೆ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ದೀಪಾ ಕೆ ಶೆಟ್ಟಿ ಆಯ್ಕೆಯಾಗಿದ್ದಾರೆ.
ಬಂಟರ ಸಂಘ ಸಿದ್ದಕಟ್ಟೆ ವಲಯ ಇದರ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಎಲಿಯನಡಗೋಡು ಗ್ರಾಮದ ಕೊನೆರಬೆಟ್ಟು ಗುತ್ತುವಿನ ಗದ್ದೆಯಲ್ಲಿ ನಡೆಯಿತು. ಮೀನಾಕ್ಷಿ ರಘುರಾಮ ಶೆಟ್ಟಿ ಕೊನೆರಬೆಟ್ಟು ಮತ್ತು ಸಂಜೀವ ಶೆಟ್ಟಿ ಉಮ್ಮೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಲೋಕೇಶ್ ಶೆಟ್ಟಿ ಕುಳ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಸುಮಾ ಎನ್ ಶೆಟ್ಟಿ, ತಾಲೂಕು ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಹಿರಿಯರಾದ ನಿತ್ಯಾನಂದ ಶೆಟ್ಟಿ, ಬೊಗರಬೆಟ್ಟು, ವಕೀಲ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಪ್ರಮುಖರಾದ ಶ್ರೀಧರ ಶೆಟ್ಟಿ, ಮಂದಾರತಿ ಶೆಟ್ಟಿ, ಅರುಣ ಸುರೇಶ್ ಶೆಟ್ಟಿ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಶೆಟ್ಟಿ, ಪ್ರತಿಭಾ ಶೆಟ್ಟಿ ಬದ್ಯಾರು, ಅಶ್ವಿನಿ ಶೆಟ್ಟಿ, ಸಂತೋಷ್ ಶೆಟ್ಟಿ ಕೊನೆರಬೆಟ್ಟು, ಬಾಬು ಶೆಟ್ಟಿ ಆಸಾಯಿ, ರಾಜೇಶ್ ಶೆಟ್ಟಿ ಸಿದ್ದಕಟ್ಟೆ, ಹರಿಪ್ರಸಾದ್…
ರಾಷ್ಟ್ರೀಯತೆಯನ್ನೇ ಉಸಿರಾಗಿಸಿಕೊಂಡಿದ್ದ ಡಾ| ಶ್ಯಾಮಪ್ರಸಾದ್ ಮುಖರ್ಜಿ ಜೀವನಾದರ್ಶ, ಬಲಿದಾನದಿಂದ ಬಿಜೆಪಿ ಕಾರ್ಯಕರ್ತರು ಪ್ರೇರಣೆ ಪಡೆಯಬೇಕು. ಡಾ| ಮುಖರ್ಜಿ ಕನಸು ಪ್ರಧಾನಿ ಮೋದಿ ಅವರಿಂದ ನನಸಾಗಿದೆ. ಕಾಟಾಚಾರದ ಬದಲು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಜನ ಸೇವೆ, ಜನ ಜಾಗೃತಿಯಲ್ಲಿ ತೊಡಗಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಭಾರತೀಯ ಜನಸಂಘದ ಸಂಸ್ಥಾಪಕ ಡಾ| ಶಾಮಪ್ರಸಾದ್ ಮುಖರ್ಜಿ ‘ಬಲಿದಾನ ದಿವಸ್’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ| ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು. ಡಾ| ಶಾಮಪ್ರಸಾದ್ ಮುಖರ್ಜಿ ಅವರ ತತ್ವಾದರ್ಶಗಳು ಮತ್ತು ಬಲಿದಾನದ ಕುರಿತು ಉಪನ್ಯಾಸ ನೀಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ, ಇಂಗ್ಲೆಂಡ್ ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ವಕೀಲಿ ವೃತ್ತಿ ನಡೆಸಿದ ಡಾ| ಮುಖರ್ಜಿ ಅವರು ದೇಶ ವಿಭಜನೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರಾಗಿದ್ದರೂ ಹಿಂದೂ ಮಹಾಸಭಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನೆಹರೂ…
ಸರಕಾರಿ ನೇಮಕಾತಿಗಳು, ಅದರಲ್ಲೂ ಅಗ್ನಿಪಥ್ ಮತ್ತು SSC GD ಸೇರಿದಂತೆ ಸಶಸ್ತ್ರ ಪಡೆಗಳಿಗೆ ತರಬೇತಿ ನೀಡುವ ಪ್ರತಿಷ್ಠಿತ ತರಬೇತಿ ಸಂಸ್ಥೆ ಭಾಗ್ಯೆಶ್ ರೈ ಮಾಲಕತ್ವದ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇಲ್ಲಿ ಸದ್ಯ SSC GD ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬರುವ ದೈಹಿಕ ಸದೃಢತೆಯ ಪರೀಕ್ಷೆಗೆ (physical fitness) ತಯಾರಾಗುತ್ತಿರುವವರಿಗೆ ಮತ್ತು ಅಗ್ನಿಪಥ್ ನೇಮಕಾತಿಗೆ ಮೈದಾನ ತರಬೇತಿಯನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ ಅತ್ಯುತ್ತಮ ತರಬೇತಿಯ ಮೂಲಕ 26 ಯುವಕರು ವಿವಿಧ ಸಶಸ್ತ್ರ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ನಡೆಯಲಿರುವ ಈ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಲು ಪ್ರಕಟಣೆಯು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೆಕ್ಸ್ , ಎಪಿಎಂಸಿ ರೋಡ್, ಪುತ್ತೂರು. 9620468869 ; 9148935808