Author: admin
ಭಾರತೀಯ ಕಲೆ, ಲಲಿತ ಕಲೆ, ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಕೆಲಸ ಮಾಡುವ ರಾಷ್ಟ್ರೀಯ ಚಿಂತನೆ ಸಂಸ್ಥೆಯ ಸಂಸ್ಕಾರ ಭಾರತಿ, ಬೇರೆ ಬೇರೆ ವಿಶೇಷ ಕೆಲಸ ಕಾರ್ಯಗಳ ಮೂಲಕ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರನ್ನಾಗಿ ಮನ್ಮಥ ಶೆಟ್ಟಿ ಪುತ್ತೂರು ಇವರನ್ನು ಜಿಲ್ಲಾ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷರಾಗಿ ತಾರಾನಾಥ್ ಕೊಟ್ಟಾರಿಯವರು ಜಿಲ್ಲಾ ಬೈಠಕ್ ನ ಪ್ರಮುಖರ ಸಭೆಯಲ್ಲಿ ಘೋಷಿಸಿದರು.ಬರಹಗಾರರಾಗಿ, ಭಾಷಣಗಾರರಾಗಿ, ದೈವರಾದನೆ, ಸಾಹಿತ್ಯ, ಜಾನಪದ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಇವರು ಕಳೆದ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದು, ಬೇರೆ ಪ್ರಶಸ್ತಿಗಳನ್ನು ಪಡೆದುಕೊಂಡವರಾಗಿದ್ದಾರೆ. ಸಭೆಯಲ್ಲಿ ಬೆಳ್ತಂಗಡಿ, ಬಂಟ್ವಾಳ, ಪುತ್ತೂರಿನ ಸಂಯೋಜಕರು, ಗೌರವಾಧ್ಯಕ್ಷರು, ಪ್ರಮುಖರು ಉಪಸ್ಥಿತರಿದ್ದರು.
ಶಿವಾಯ ಫೌಂಡೇಶನ್ ಮುಂಬೈ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ, ದಕ್ಷಿಣದ ಕುಂಭ ಮೇಳವೆಂದೇ ಪ್ರಸಿದ್ಧಿ ಪಡೆದಿರುವ, ಲಕ್ಷಾಂತರ ಭಕ್ತ ಜನರು ಸೇರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಸೇವಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಸ್ವಾಮಿಗಳು, ತುಮಕೂರು ಸಿದ್ದಗಂಗ ಮಠದ ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಗಳು, ಶ್ರೀ ಷಣ್ಮುಖರೂಢ ಮಠ ವಿಜಯಪುರದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಸೇರಿದಂತೆ ಬಸವ ತತ್ವವನ್ನು ಪ್ರತಿಪಾದಿಸುವ ಶರಣರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿಂದೂಸ್ತಾನಿ ಗಾಯಕರಾದ ಡಾ. ವೆಂಕಟೇಶ್ ಕುಮಾರ್, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಅತಿಥಿ ಗಣ್ಯರು ಮಠದ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಪರವಾಗಿ ಪ್ರಶಾಂತ್ ಶೆಟ್ಟಿ ಪಲಿಮಾರು, ಮಧುಸೂದನ್ ಶೆಟ್ಟಿ ಹಿರಿಯಡ್ಕ, ಪ್ರಶಾಂತ್ ಶೆಟ್ಟಿ ಪಂಜ ಮತ್ತು ಡಾ. ಸ್ವರ್ಣಾ ಶೆಟ್ಟಿಯವರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ತುಳುನಾಡಿನ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ತ್ರಿರಂಗ ಸಂಗಮದ ಪಾತ್ರ ಬಹಳವಿದೆ. ಇದರ ರೂವಾರಿಗಳಾದ ಕಲಾ ಸಂಘಟಕರಾದ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ, ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರು ನಿರಂತರ ಕಲೆ ಹಾಗೂ ಕಲಾವಿದರಿಗಾಗಿ ವೇದಿಕೆ ಒದಗಿಸುವುದರೊಂದಿಗೆ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕಲಾವಿದರಿಗೆ ನಾವು ಪ್ರೋತ್ಸಾಹ ನೀಡಬೇಕು. ಇವರಿಂದ ಕಲಾ ಸೇವೆ ನಿರಂತರ ನಡೆಯುತ್ತಿರಲಿ ಎಂದು ಉದ್ಯಮಿ ವೆಲ್ಕಂ ಪ್ಯಾಕೇಜ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ರವೀಂದ್ರನಾಥ್ ಭಂಡಾರಿ ತಿಳಿಸಿದರು. ಕುರ್ಲಾ ಪೂರ್ವಾದ ಬಂಟರ ಭವನದಲ್ಲಿ ಫೆಬ್ರವರಿ 9ರಂದು ಜರಗಿದ ಮುಂಬೈಯ ಕಲಾ ಸಂಘಟಕರಾದ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ, ನವೀನ್ ಶೆಟ್ಟಿ ಇನ್ನ ಬಾಳಿಕೆ ನೇತೃತ್ವದ ತ್ರಿರಂಗ ಸಂಗಮ ಮುಂಬೈ ಇದರ ಮೂರನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ ಪ್ರಭು ದ್ವೀಪ ಪ್ರಜ್ವಲಿಸಿ ಆಶೀರ್ವಚಿಸಿ, ನಮ್ಮ ಸಂಸ್ಕೃತಿ,…
ಮೂಡುಬಿದಿರೆ: ವೈದ್ಯಕೀಯ ನಿರ್ಧಾರಗಳು ಕ್ಲಿನಿಕಲ್ ಲ್ಯಾಬೋರೇಟರಿ ಫಲಿತಾಂಶಗಳ ಮೇಲೆ ಆಧಾರಿತವಾಗಿರುವುದರಿಂದ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವಿಷಯದಲ್ಲಿ ಜ್ಞಾನವರ್ಧನೆ ಅಗತ್ಯವಿದೆ ಎಂದು ಆಳ್ವಾಸ್ ಹೆಲ್ತ್ ಸೆಂಟರ್ನ ಹೃದ್ರೋಗ ತಜ್ಞ ಡಾ. ಸದಾನಂದ್ ನಾಯ್ಕ ಹೇಳಿದರು. ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ವಿಭಾಗದ ವತಿಯಿಂದ `ಮೆಡಿಕಲ್ ಲ್ಯಾಬೋರೇಟರಿ ತಂತ್ರಜ್ಞಾನದಲ್ಲಿ ಆಗುತ್ತಿರುವ ನವೀಕರಣದ ಕುರಿತು ಕುವೆಂಪು ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ಸೇವೆಗಳು ನೈತಿಕತೆ ಉಳಿಸಿಕೊಂಡು ಸಾಮಾನ್ಯರಿಗೂ ಕೈಗೆಟಕುವಂತಿರಬೇಕು.ವಿದ್ಯಾರ್ಥಿಗಳು ತಂತ್ರಜ್ಞಾನಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಿ ವೈದ್ಯಕೀಯ ಕ್ಷೇತ್ರದ ನಿರ್ಧಾರಗಳನ್ನು ಅತ್ಯಂತ ವಿಶ್ವಾಸಾರ್ಹಗೊಳಿಸುವಲ್ಲಿ ಸಹಕರಿಸಬೇಕು ಎಂದರು. ಸAಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಎಜೆ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಹಾಗೂ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಅರವಿಂದ್, ಟ್ರಾನ್ಸ್ಫ್ಯೂಷನ್ ಮೆಡಿಸಿನ್ನಲ್ಲಿ ವಿಶೇಷವಾಗಿ ರಕ್ತ ನಿಧಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟಿç ವಿಭಾಗದ ಮುಖ್ಯಸ್ಥ ಡಾ.…
ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆಬ್ರವರಿ 15ರವರೆಗೆ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಮಂದಾರ್ತಿ ವ್ಯವಸಾಯ ಸೇವಾ ಸಹಕಾರ ಸಂಘದ ನೇತೃತ್ವದಲ್ಲಿ ನವೋದಯ ಸ್ವಸಹಾಯ ಸಂಘ ಮತ್ತು ಊರ ಸಮಸ್ತರಿಂದ 17ನೇ ವರ್ಷದ ಹೊರೆ ಕಾಣಿಕೆ ಸಮರ್ಪಣೆ ಭಾನುವಾರ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಚ್. ಧನಂಜಯ ಶೆಟ್ಟಿ, ಮೊಕ್ತೇಸರ ಶ್ರೀನಿವಾಸ ಶೆಟ್ಟಿ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ, ಉಪಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಮಕೃಷ್ಣ ಶೆಟ್ಟಿ, ನವೋದಯ ಸ್ವಸಹಾಯ ಸಂಘದ ಜಿಲ್ಲಾ ಮೇಲ್ವಿಚಾರಕ ಹರಿನಾಥ, ತಾಲೂಕು ಮೇಲ್ವಿಚಾರಕ ಕೃಷ್ಣ, ಮಂದಾರ್ತಿ ವಲಯ ಪ್ರೇರಕಿ ಶೋಭ ಭಾಗವಹಿಸಿದ್ದರು.
ತುಳುನಾಡಿನಲ್ಲಿ ಧಾರ್ಮಿಕ, ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಭಾಷೆಯ ಜಾಗೃತಿ ಮೂಡಿಸಲಾಗುತ್ತದೆ. ನಾಲ್ಕು ಕಾಲ ಬದುಕುವ, ಉಳಿಯುವಂತಹ ಸಾಹಿತ್ಯ ರಚನೆಯಾಗಬೇಕು. ನೆಲ ಮೂಲದ ಗ್ರಾಮ ಸಂಸ್ಕೃತಿಯತ್ತ ಬರಹಗಾರರು ಗಮನಿಸಬೇಕು. ತುಳುವರನ್ನು ಓದಿನೆಡೆಗೆ ಆಕರ್ಷಿಸುವಂತಹ ರಚನಾತ್ಮಕ ಕೆಲಸಗಳು ಸಾಹಿತ್ಯದಲ್ಲಿ ನಡೆಯಬೇಕು ಎಂದು ತುಳು ಕನ್ನಡ ಸಾಹಿತಿ, ಕರ್ನಾಟಕ ಜಾನಪದ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕರೆ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರು ರಥೋತ್ಸವ ಹಾಗೂ ತುಳುನಾಡು ಜಾತ್ರೆಯ ಸಂದರ್ಭದಲ್ಲಿ ‘25ನೇ ತುಳು ಸಾಹಿತ್ಯ ಸಮ್ಮೇಳನ’ ದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಂಗಾರದ ಬಟ್ಟಲಾಗಿದ್ದ ತುಳುನಾಡು ಈಗ ಬರಡು ನೆಲವಾಗುತ್ತಿದೆ. ಯುವಕರು ಕೃಷಿ ತ್ಯಜಿಸಿ ಪೇಟೆ ಕಡೆಗೆ ಅಥವಾ ವಿದೇಶಕ್ಕೆ ತೆರಳುತ್ತಿರುವುದು ಬೇಸರದ ವಿಚಾರ. ಇಂದು ತುಳು ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಆಗುತ್ತಿದ್ದು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತುಳು ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ ಎಂದವರು ವಿಷಾದಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ…
ವ್ಯಕ್ತಿತ್ವ ವಿಕಸನ ಹಾಗೂ ತರಬೇತಿಗಾಗಿಯೇ ಇರುವ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಇದರ ಪುತ್ತೂರು ಘಟಕದ ಅಧ್ಯಕ್ಷರಾದ ಭಾಗ್ಯೇಶ್ ರೈಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕುರಿತಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಕರ್ನಾಟಕ ಪೊಲೀಸ್, ಆರೋಗ್ಯ ಇಲಾಖೆಗಳ ಸಹಕಾರದೊಂದಿಗೆ ಪುತ್ತೂರು ತಾಲೂಕು ವ್ಯಾಪ್ತಿಯ 100 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಪುತ್ತೂರಿನ ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನ ಕೊಂಬೆಟ್ಟು ಇಲ್ಲಿ ಚಾಲನೆಯನ್ನು ನೀಡಲಾಯಿತು. ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದ ಅವರು ಜೆಸಿಐ ಪುತ್ತೂರಿನ ವಿಭಿನ್ನ ಪ್ರಯತ್ನಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್. ಆರ್, ತಾಲೂಕು ವೈದ್ಯಾಧಿಕಾರಿ ದೀಪಕ್ ರೈ, ಪುತ್ತೂರು ನಗರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಅವರು ಮಾದಕ…
ಮೂಡುಬಿದಿರೆ: ಬಳ್ಳಾರಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಶ್ರವಣ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಶ್ರವಣ ಕಪ್ ಅಖಿಲ ಭಾರತ ಆಹ್ವಾನಿತ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿತು. ರಾಷ್ಟ್ರದ 10 ಆಹ್ವಾನಿತ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಫೈನಲ್ನಲ್ಲಿ ಆಳ್ವಾಸ್ ತಂಡವು ತಮಿಳುನಾಡಿನ ಪಿಎಸ್ಎನ್ಎ ದಿಂಡಿಗಲ್ ತಂಡವನ್ನು 35-31, 35-18 ನೇರ ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸೆಮಿಫೈನಲ್ಸ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಶ್ರವಣ ಬಳ್ಳಾರಿ ತಂಡವನ್ನ ನೇರ ಸೆಟ್ಟುಗಳಿಂದ ಸೋಲಿಸಿ ಫೈನಲ್ಸಿಗೆ ಅರ್ಹತೆಯನ್ನು ಪಡೆದಿತ್ತು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.
ಧರ್ಮ ಶಿಕ್ಷಣ ಸಿಗುವ ಜಾಗದಲ್ಲಿ ಜಾತ್ರೆಗೆ ಮಾರ್ಗದರ್ಶನ ಸಿಗಬೇಕು. ಜಾತ್ರೆಯಲ್ಲಿ ಸಾಗುವ ರಥ ಜೀವನ ಪಯಣಕ್ಕೆ ಸ್ಪೂರ್ತಿ ನೀಡಬೇಕು. ಸಂಪತ್ತಿನ ಸದ್ಬಳಕೆಯಿಂದ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಪ್ರಯುಕ್ತ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಸಂಸ್ಕೃತಿಯ ಕೊರತೆಯಿಂದ ವಿಕೃತಿ ಹೆಚ್ಚುತ್ತಿರುವುದು ಆತಂಕದ ಸಂಗತಿ. ಸಂಸ್ಕಾರಭರಿತ ಶಿಕ್ಷಣ ಕೊಡುವ ವ್ಯವಸ್ಥೆ ಆಗಬೇಕು. ಸಾಮಾಜಿಕ ಸಮತೋಲಕ್ಕೆ ಆಧ್ಯಾತ್ಮಕ ಹಾದಿಯೇ ಸೂಕ್ತ ಎಂದರು. ದಿವ್ಯ ಸಾನಿದ್ಯ ವಹಿಸಿದ್ದ ಶ್ರೀ ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡಿ, “ಗುರುಗಳ ಕೃಪೆಯಿಂದ ಎಲ್ಲವೂ ಸಾಧ್ಯ. ಗುರುಗಳ ಸಾನಿಧ್ಯದಲ್ಲಿ ಆಧ್ಯಾತ್ಮಿಕ ಚಿತ್ತಹರಿಸಿ ಆನಂದ ಹೊಂದೋಣ. ಒತ್ತಡ ರಹಿತ ಸಂತೃಪ್ತ ಜೀವನ ಸಾಗಿಸೋಣ” ಎಂದರು. ನಾನಾ ಕ್ಷೇತ್ರಗಳ ಗಣ್ಯರಾದ ವೀರೇಂದ್ರ ಮೋಹನ್ ಜೋಶಿ, ಡಾ. ಅವಿನ್ ಆಳ್ವ, ಮಲ್ಲಿಕಾ ಪ್ರಶಾಂತ ಪಕ್ಕಳ, ತಮನ್ನಾ ಪ್ರಭಾಕರ ಶೆಟ್ಟಿ, ಶ್ವೇತಾ ಸಿ. ರೈ, ಪಿ.…
ಕಾವಡಿ ಶ್ರೀವಾಣಿ ಯಕ್ಷಗಾನ ಕಲಾಮಂಡಳಿಯ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಉದಯ ಚಂದ್ರ ಶೆಟ್ಟಿಯವರು ಇತ್ತೀಚಿಗೆ ನೆರವೇರಿಸಿದರು. ಈ ಸಂಧರ್ಭದಲ್ಲಿ ಬಳ್ಳಾರಿಯ ಉದ್ಯಮಿ, ಸಮಾಜಸೇವಕ ರೇಣುಕಾ ಬೇಕರಿ ಮಾಲೀಕ ವಸಂತ ಶೆಟ್ಟಿ, ಕಲಾ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಮಾತನಾಡಿದ ವಸಂತ ಶೆಟ್ಟಿಯವರು ಮಾತನಾಡಿ ಯಕ್ಷಗಾನ ಒಂದು ಅದ್ಭುತವಾದ ಕಲೆ, ಯಕ್ಷಗಾನವನ್ನು ಉಳಿಸಿ ಬೆಳೆಸೋಣ ಎಂದು ನೂತನ ಸಂಸ್ಥೆಗೆ ಶುಭ ಹಾರೈಸಿದರು.