ಮಹಾರಾಷ್ಟ್ರದ ನಾಂದೇಡ್ ನ ಹೋಟೆಲ್ ಉದ್ಯಮಿ ಅಳಕೆಮಜಲು (ಕುದ್ರಿಯಗುತ್ತು) ದಾಮೋದರ ಶೆಟ್ಟಿ ಹಾಗೂ ಬಜನಿಗುತ್ತು ಕರುಣಾ ಡಿ ಶೆಟ್ಟಿಯವರ ಪುತ್ರಿ ಮನೀಶಾ ಶೆಟ್ಟಿ 2025ರಲ್ಲಿ ICAR ನಡೆಸಿದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮಹಾರಾಷ್ಟ್ರದ ನಾಂದೇಡ್ ನಲ್ಲಿ ಪ್ರಾಥಮಿಕ, ಪ್ರೌಡಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಪೂರೈಸಿ ನಂತರ ಸಿಎ ತರಗತಿಗೆ ಸೇರ್ಪಡೆಗೊಂಡರು. ಮಹಾರಾಷ್ಟ್ರದ ಪುಣೆಯಲ್ಲಿ ಕೋಚಿಂಗ್ ಕ್ಲಾಸ್ ನ ಮೂಲಕ ಪ್ರಾರಂಭದಲ್ಲಿ ತರಬೇತಿ ಪಡೆದು ಪುಣೆಯ ಪ್ರಸಿದ್ದ ಕೀರ್ತನ್ & ಪಂಡಿತ್ ಚಾರ್ಟೆಡ್ ಅಕೌಂಟೆನ್ಸ್ ಕಂಪನಿಯಲ್ಲಿ ಆರ್ಟಿಕಲ್ ಶಿಪ್ ನಡೆಸಿ 2025ರಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.









































































































