Author: admin
ಮುಂಬೈ ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳಲ್ಲಿ ಒಂದಾದ ಬೊಂಬೇ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಸಮಾಜ ಸೇವಕಿ ಶಾಂತಾ ನಾರಾಯಣ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಮಾಜಮುಖಿ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶಾಂತಾ ಶೆಟ್ಟಿಯವರು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ ಕೋಪರ್ ನಲ್ಲಿ ಸತತ ಎರಡು ಅವಧಿಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಅಲ್ಲದೇ ಕನ್ನಡ ವೆಲ್ಫೇರ್ ಸೊಸೈಟಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅತ್ಯಧಿಕ ಧನ ಸಂಗ್ರಹ ಮಾಡಿ ಚಿನ್ನದ ಪದಕವನ್ನು ಪಡೆದಿದ್ದಾರೆ.ಬಂಟರ ಸಂಘ ಕುರ್ಲಾ ಭಾಂಡೂಪ್ ಪ್ರಾದೇಶಿಕ ವಿಭಾಗದ ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಎರಡು ಬಾರಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಪ್ರಸ್ತುತ ಶೈಕ್ಷಣಿಕ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಂಟರ ಸಂಘ ಮುಂಬಯಿಯ ಬೊರಿವಿಲಿಯಲ್ಲಿ ನಿರ್ಮಾಣಗೊಂಡಿರುವ ಕಾಲೇಜಿಗೆ 1 ಲಕ್ಷ ದೇಣಿಗೆಯನ್ನು ನೀಡಿ ಅಂದಿನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರಿಂದ ಗೌರವವನ್ನು ಸ್ವೀಕರಿಸಿದ್ದಾರೆ. ಉತ್ತಮ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಶಾಂತಾ ನಾರಾಯಣ ಶೆಟ್ಟಿ ಅವರು…
ವಿದ್ಯಾಗಿರಿ: ‘ಉಮಂಗ್ ಮೇ ಮತ್ ಫಾಸ್ ಯೇ ದುನಿಯಾ ಕಾ ಖೇಲ್ ಹೇ’ (ಅತ್ಯುತ್ಸಾಹದಲ್ಲಿ ಮುಳುಗದಿರು, ಇದು ಜಗದ ಆಟ) ಎಂದು ಮೂಡುಬಿದಿರೆಯ ಜೈನ್ ಪ್ರೌಢಶಾಲೆಯ ನಿವೃತ್ತ ಹಿಂದಿ ಶಿಕ್ಷಕ ರಾಯಿ ರಾಜಕುಮಾರ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಿಂದಿ ವಿಭಾಗದ ವತಿಯಿಂದ ಆಯೋಜಿಸಲಾದ ‘ಉಮಂಗ್-2025’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಎಲ್ಲಾ ಭಾಷೆಯು ನಮಗೆ ಉಪಯೋಗಿಯಾಗಿರುತ್ತೆ. ಅದು ಇಂಗ್ಲಿಷ್, ಹಿಂದಿ, ಕನ್ನಡ ಯಾವುದೇ ಭಾಷೆ ಆಗಲಿ. ಅವುಗಳನ್ನು ಬಳಸಿಕೊಂಡು ನಮ್ಮನು ನಾವು ಬೆಳಸಿಕೊಳ್ಳಬೇಕಾದ ಅವಶ್ಯಕತೆ ಇದೆ’ ಎಂದರು. ಉಮಂಗ್ ಎಂದರೆ ಖುಷಿ, ಆನಂದ, ಉಲ್ಲಾಸ, ಅತ್ಯುತ್ಸಾಹ. ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ, ಸುಖದ ಅನುಭವ ಎಲ್ಲರಿಗೂ ಸಿಗಬೇಕು ಅದುವೇ ಉಮಂಗ್ ಎಂದರು. ಯಾವುದೇ ಕೆಲಸವಾಗಲಿ, ಅದನ್ನು ಮನಸ್ಸಿನಿಂದ ಮಾಡಿದಾಗಲೇ ಉತ್ಸಾಹ. ಖುಷಿ ಎನ್ನುವಂತದ್ದು, ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ನಮ್ಮ ಬದುಕನ್ನು ನಾವು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ. ಅಷ್ಟರ ಮಟ್ಟಿಗೆ ನಾವು ಬೆಳೆಯಲು ಸಾಧ್ಯವಿದೆ’ ಎಂದರು. ಝೆಂಕೊ.ಐಒ…
ಬೋಂಬೆ ಬಂಟ್ಸ್ ಅಸೋಸಿಯೇಷನ್ ನ 41ನೇ ವಾರ್ಷಿಕ ಮಹಾಸಭೆಯು ಮಾರ್ಚ್ 9ರಂದು ಬೆಳಿಗ್ಗೆ ನವಿ ಮುಂಬಯಿಯ ಜೂಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಶ್ರೀಮತಿ ಸೌಮ್ಯ ಲತಾ ಸದಾನಂದ ಶೆಟ್ಟಿ ಆಡಿಟೋರಿಯಂ ನಲ್ಲಿ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ಮಹಾಸಭೆಯಲ್ಲಿ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಮುಂದಿನ ಕಾಲಾವಧಿಗೆ ಅಧ್ಯಕ್ಷರಾಗಿ ಸೇವೆ ಮಾಡಲಿದ್ದಾರೆ ಎಂದು ಘೋಷಿಸಲಾಯಿತು.ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ನ್ಯಾಯವಾದಿ ಡಿ.ಕೆ ಶೆಟ್ಟಿ ಅವರನ್ನು ನಿರ್ಗಮನ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಹೂಗುಚ್ಚ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಾಂಬೆ ಬಂಟ್ಸ್ ಅಸೋಶಿಯೇಷನ್ ನ ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ ಡಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ…
ಸನ್ಮಾನಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಹೆಬ್ರಿ ಬಂಟರ ಸಂಘದಿಂದ ಹುಟ್ಟೂರಿನಲ್ಲಿ ಆದ ಸನ್ಮಾನ ಅತ್ಯಂತ ಸಂತೋಷ ತಂದಿದೆ. ಹೆಬ್ರಿ ಸಂಘಕ್ಕೆ ಬೆಂಗಳೂರು ಬಂಟರ ಸಂಘದ ಮೂಲಕ ಮುಂದೆಯೂ ಸಹಕಾರವನ್ನು ನೀಡಲಾಗುವುದು ಎಂದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು. ಅವರು ಮಾರ್ಚ್ 8 ರಂದು ಹೆಬ್ರಿ ಶ್ರೀಮತಿ ಶೀಲಾ ಸುಭೋದ ಬಲ್ಲಾಳ್ ಸಭಾಭವನದಲ್ಲಿ ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರು ವಲಯದ ವತಿಯಿಂದ ಹೆಬ್ಬೇರಿ ಬಂಟ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ನೂರಾರು ಕೋಟಿ ಆಸ್ತಿಯನ್ನು ಹೊಂದಿರುವ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ನಮ್ಮ ಸಮಾಜದ ಆಸ್ತಿ ಎಂದು ಬಂಟರ ಸಂಘದ ಗೌರವಾಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಹೇಳಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸೀತಾನದಿ ವಿಟ್ಟಲ್ ಶೆಟ್ಟಿ ವಹಿಸಿ ಮಾತನಾಡಿ, ಸಮಾಜ ಬಾಂಧವರ ನಿರಂತರ ಸಹಕಾರ ಮತ್ತು ದಾನಿಗಳ ಪ್ರೋತ್ಸಾಹದಿಂದ ಸಂಘದ ಪ್ರತಿಯೊಂದು ಕಾರ್ಯಕ್ರಮವು ಯಶಸ್ಸನ್ನು ಕಂಡಿದೆ…
ಬೋಂಬೆ ಬಂಟ್ಸ್ ಅಸೋಸಿಯೇಷನ್ ನ 41ನೇ ವಾರ್ಷಿಕ ಮಹಾಸಭೆಯ ಬಳಿಕ ಬಹಿರಂಗ ಅಧಿವೇಶನವನ್ನು ಮಾರ್ಚ್ 9 ರಂದು ನವಿ ಮುಂಬಯಿಯ ಜೂಯಿನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಶ್ರೀಮತಿ ಸೌಮ್ಯಲತಾ ಸದಾನಂದ ಶೆಟ್ಟಿ ಆಡಿಟೋರಿಯಂನಲ್ಲಿ ಎಸೋಸಿಯೇಷನ್ ನ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ. ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು. ಬಹಿರಂಗ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಶ್ರೀಮತಿ ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಐಕಳ ಹರೀಶ್ ಶೆಟ್ಟಿ ಅವರ ಸುದೀರ್ಘ ಕಾಲದ ಸಾಮಾಜಿಕ ಸೇವೆಗಳನ್ನು ಗುರುತಿಸಿ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಅಸೋಸಿಯೇಷನ್ ಉಪಾಧ್ಯಕ್ಷ ನ್ಯಾಯವಾದಿ ಡಿ. ಕೆ. ಶೆಟ್ಟಿ ಮಾಡಿದರು. ವೇದಿಕೆಯಲ್ಲಿ ಡಾ. ಶ್ರೀಧರ್ ಶೆಟ್ಟಿ (ಶಿಕ್ಷಣ), ಡಾ. ಸುನಿಲ್ ಎಚ್ ಶೆಟ್ಟಿ (ವೈದ್ಯಕೀಯ) ಮತ್ತು ಪ್ರತಾಪ್ ವಿ ಶೆಟ್ಟಿ (ಕ್ರೀಡೆ), ಬೋಂಬೆ ಬಂಟ್ಸ್ ಅಸೋಸಿಯೇಷನ್…
ಬಂಟರ ಯಾನೆ ನಾಡವರ ಸಂಘ ಶಿರೂರು ಮತ್ತು ಯುವ ಬಂಟರ ಸಂಘ ಶಿರೂರು, ಬೆಂಗಳೂರು ಬಂಟರ ಸಂಘ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಶಿರೂರು ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಡಾ. ಯು. ಮಾಧವ ಶೆಟ್ಟಿ ಗಂಗಾವತಿ ವಿದ್ಯಾರ್ಥಿವೇತನ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿರೂರು ಬಂಟರ ಸಂಘ ಕಳೆದ ಹಲವು ವರ್ಷಗಳಿಂದ ಶಿಕ್ಷಣ, ಸಾಹಿತ್ಯ, ಆಸಕ್ತರಿಗೆ ನೆರವು ನೀಡುವುದರ ಮೂಲಕ ವಿವಿಧ ಸಂಘಗಳಿಗೆ ಮಾದರಿ ಸಂಘವಾಗಿದೆ. ಸಮುದಾಯ ಸಂಘಟನೆಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುತುವರ್ಜಿ ವಹಿಸಿ ಸಮಾಜದ ಅಶಕ್ತರಿಗೆ ನೆರವಾದಾಗ ಬಡ ಕುಟುಂಬಗಳು ಮುಖ್ಯ ವಾಹಿನಿಯಲ್ಲಿ ಗುರುತಿಸಲು ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯಕ್ರಮದ ಮೂಲಕ ಸಂಘಟಿತರಾದಾಗ ಸಮುದಾಯಕ್ಕೆ ಶಕ್ತಿ ದೊರೆಯುತ್ತದೆ ಎಂದರು. ಶಿರೂರು ಬಂಟರ ಸಂಘದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ, ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಂಗಳೂರು…
1972 ಮತ್ತು 1978 ಈ ಎರಡು ಅವಧಿಯಲ್ಲಿ ಸುರತ್ಕಲ್ ಶಾಸಕರಾಗಿ, ಮುಖ್ಯಮಂತ್ರಿ ದೇವರಾಜ್ ಅರಸು ಅವರ ಕ್ಯಾಬಿನೆಟ್ ನಲ್ಲಿ ಭೂ ಸುಧಾರಣಾ ಸಚಿವರಾಗಿ, ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದ ಬಂಟ್ವಾಳ ತಾಲೂಕಿನ ಬಾಕ್ರಬೈಲು ನಿವಾಸಿ, ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ (91 ವರ್ಷ) ಅವರು ಮಾರ್ಚ್ 10 ರಂದು ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ತನ್ನ ವಿದ್ಯಾಭ್ಯಾಸವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದಿರುವ ಇವರು ಆ ಬಳಿಕ ಕಾನೂನು ಪದವಿಯನ್ನು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡಿದ್ದರು. ನಂತರ ಸಿ.ಬಿ.ಐ ಹುದ್ದೆಗೆ ನೇಮಕಗೊಂಡು ಕಾಶ್ಮೀರ ಮತ್ತು ಲಡಾಖ್ ನಲ್ಲಿ ಸೇವೆಯನ್ನು ಸಲ್ಲಿಸಿದರು. ನಂತರ ಕಾರಣಾಂತರಗಳಿಂದ ಸಿ.ಬಿ.ಐ ಹುದ್ದೆಯನ್ನು ತ್ಯಜಿಸಿದ್ದ ಇವರು ಕಾನೂನು ಸೇವೆಯನ್ನು ಸಲ್ಲಿಸಿದ್ದರು. ಬಳಿಕ ಸಾರ್ವಜನಿಕ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡ ಇವರು ಶಾಸಕರಾಗಿ, ಸಚಿವರಾಗಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಸಾಧನೆಗೆ ಡಿ. ದೇವರಾಜ ಅರಸ್ ಪ್ರಶಸ್ತಿ, ಶಾಂತವೆರಿ ಗೋಪಾಲ ಅವಾರ್ಡ್ ಮತ್ತು ಡಾ. ದ.ರಾ…
ಮೂಡುಬಿದಿರೆ: ಯಾವುದೇ ಉದ್ಯಮದಲ್ಲಿ ಯಶಸ್ಸು ಗಳಿಸುವುದಕ್ಕಿಂತಲೂ ಪ್ರಗತಿ ಹೊಂದುವುದು ಮುಖ್ಯ, ಸೋಲು ಕಂಡ ವ್ಯಕ್ತಿ ಗೆಲ್ಲುವ ಗುಟ್ಟನ್ನು ಚೆನ್ನಾಗಿ ಕಲಿಸಬಲ್ಲನು ಎಂದು ದೈಜಿವರ್ಲ್ಡ್ ವಾಹಿನಿಯ ಸ್ಥಾಪಕ ಹಾಗೂ ಮುಖ್ಯ ಸಂಪಾದಕ ವಾಲ್ಟರ್ ನಂದಳಿಕೆ ಹೇಳಿದರು. ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ‘ಟ್ರೈಬ್ಲೇಜ್’ ವಿದ್ಯಾರ್ಥಿ ವೇದಿಕೆವತಿಯಿಂದ ಹಮ್ಮಿಕೊಂಡ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ಸಂಸ್ಥೆ ಮುಖಾಂತರ ಕಂಡುಕೊAಡ ಉದ್ಯಮಶೀಲತೆಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು. ಉದ್ಯಮಿಗಳಾಗಲು ಆಶಯ ಹೊಂದಿರುವ ವಿದ್ಯಾರ್ಥಿಗಳು ಶಿಕ್ಷಣದ ಪ್ರಮಾಣ ಪತ್ರಗಳ ಜತೆಗೆ ಆತ್ಮವಿಶ್ವಾಸದೊಂದಿಗೆ ಸಂವಹನ ನಡೆಸುವದನ್ನೂ ಬೆಳೆಸಿಕೊಳ್ಳಬೇಕು. ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯ ವಿಧಾನ ಇಲ್ಲ, ಹೊಸ ವಿಷಯಗಳನ್ನು ತಿಳಿದುಕೊಂಡು ಆಯಾ ಕಾಲದ ಪ್ರವೃತ್ತಿಗಳಿಗೆ ಅನುಗುಣವಾಗಿ ನವೀಕರಿಸಿಕ್ಕೊಳ್ಳುವುದು ಯಶಸ್ವಿ ಉದ್ಯಮಕ್ಕೆ ಬಹಳ ಅಗತ್ಯ.ಅವಮಾನಗಳಿಗೆ ಹಿಂಜರಿಯದೆ ಉತ್ಸಾಹವಿರುವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹಾಗೂ ಉತ್ತಮ ಜೀವನ ಶೈಲಿಗೆ ಬದಲಾವಣೆಯಾಗಲು ಆರಂಭಿಕ ಹಂತದಲ್ಲಿ ಸ್ವಲ್ಪ ಕಷ್ಟವೆನಿಸಿದರೂ ಅಪ್ಡೇಟ್, ಅಪ್ಗ್ರೇಡ್ ಹಾಗೂ ಅಪ್ಲಿಫ್ಟ್ ಎನ್ನುವ ರೂಡಿಯನ್ನು ಪ್ರತಿಯೊಬ್ಬರೂ ಕಂಡುಕೊಳ್ಳಿ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ…
ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವ : ಮಾರ್ಚ್ 11 ರಂದು ಪುಣೆ ಭಕ್ತರ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ
ಅವಿಭಜಿತ ತುಳುನಾಡಿನ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ದೇಶದ ಅತೀ ಪುರಾತನ ಐತಿಹಾಸಿಕ ಮತ್ತು ಚಾರಿತ್ರಿಕ ಮಹತ್ವದ ದೇವಾಲಯಗಳಲ್ಲೊಂದು. ಹತ್ತನೇ ಶತಮಾನ ಪೂರ್ವದ, ಅತೀ ವಿಶಿಷ್ಟ ಮತ್ತು ಅಪೂರ್ವವೆಂಬ ಹೆಗ್ಗಳಿಕೆ ಹೊಂದಿರುವ, ಭಾರತದ ಹಿಂದೂ ಬೌದ್ಧ ವಾಸ್ತು ವಿಶೇಷದ ಪ್ರಚ್ಚನ್ನ ಸಾಕ್ಷಿಯಾಗಿರುವ ಗಜಪೃಷ್ಠ ಶೈಲಿಯ ಈ ದೇವಸ್ಥಾನ ಭಾರತದಲ್ಲೇ ಅಪರೂಪದ ದೇವಾಲಯವಾಗಿದೆ. ಇಂತಹ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಸುಮಾರು ಮೂವತ್ತು ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.ಮಾರ್ಚ್ 26 ರಿಂದ ಏಪ್ರಿಲ್ 7 ರ ತನಕ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಸಕಲ ವೈಧಿಕ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕಲಶಾಭಿಷೇಕಗೊಂಡು ಈ ಮಹಾ ದೇವಾಲಯವು ಸಮಸ್ತ ಭಕ್ತ ಸಮೂಹಕ್ಕೆ ಸಮರ್ಪಣೆಗೆ ಸಿದ್ಧವಾಗಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಕನ್ಯಾನ ಸದಾಶಿವ ಶೆಟ್ಟಿಯವರ ಗಣ್ಯ ಉಪಸ್ಥಿತಿಯಲ್ಲಿ, ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ಪುಣೆ…
ಇತ್ತೀಚಿಗೆ ಒಂದು ಬೋಡೊ ಭಾಷೆಯ ಕಥೆಯನ್ನು ಇಂಗ್ಲಿಷ್ನಲ್ಲಿ ಓದಿದೆ. ಧುಬಡಿ ಎಂಬ ಊರಿನಲ್ಲಿ ಶಾಲಾ ಇನ್ಸ್ಪೆಕ್ಟರ್ ಕಚೇರಿಯಲ್ಲಿ ಯಾದವ ಬೋರಾ ಎಂಬ ವ್ಯಕ್ತಿ ಮುಖ್ಯ ಗುಮಾಸ್ತ. ಈತನ ಮೇಲೆ ಸಬ್ ಇನ್ಸ್ಪೆಕ್ಟರ್ ಮತ್ತು ಇನ್ಸ್ಪೆಕ್ಟರ್ ಇದ್ದಾರೆ. ಯಾದವ ಬೋರಾ ಕುಳಿತು ಕೊಳ್ಳೋದು ಕಚೇರಿಯ ಒಂದು ಮೂಲೆಯಲ್ಲಿದ್ದ ಕೊಠಡಿಯಲ್ಲಿ. ಹಳೆಯ ಮರದ ಮೇಜು, ಅದರ ಮೇಲೆ ಹಸಿರು ಪ್ಲಾಸ್ಟಿಕ್ ಬಟ್ಟೆ ಹೊದಿಸಿದ್ದಾರೆ. ಮೇಜಿನ ಮೇಲೆಲ್ಲ ಫೈಲುಗಳು. ಒಂದೆರಡು ಬಳಸಿ ಬಳಸಿ ನುಣುಪಾದ ಕಲ್ಲುಗಳು ಕಾಗದಗಳು ಹಾರಿಹೋಗದಂತೆ ನೋಡಿಕೊಳ್ಳುತ್ತವೆ. ಮೇಜಿನ ಮಧ್ಯದಲ್ಲಿರುವುದು ಹೊಳೆವ ಕರೆಗಂಟೆ. ಯಾದವ ಬೋರಾನಿಗೆ ಈ ಕರೆಗಂಟೆ ಅಧಿಕಾರದ ಲಾಂಛನ. ಅದು ಬ್ರಿಟಿಷರ ಕಾಲದ ಗಂಟೆ. ಬೋರಾನ ಅಧಿಕಾರಿಗಳ ಹತ್ತಿರವೂ ಕರೆಗಂಟೆಗಳಿದ್ದರೂ ಅವುಗಳ ಧ್ವನಿ ಇಷ್ಟು ತೀಕ್ಷ್ಣವಾಗಿಲ್ಲ. ಅದಲ್ಲದೇ ಅವು ಹಲವಾರು ಬಾರಿ ಬದಲಾಗಿವೆ. ಆದರೆ, ಬೋರಾನ ಕರೆಗಂಟೆ ಮಾತ್ರ ದಶಕಗಳಿಂದ ಹಾಗೆಯೇ ಇದೆ. ತಾನು ಎರಡನೇ ದರ್ಜೆ ಗುಮಾಸ್ತನಾಗಿದ್ದಾಗಿನಿಂದ ಈ ಕರೆಗಂಟೆಯನ್ನು ಕೇಳಿದ್ದಾನೆ. ತಾನೂ ಮುಂದೆ ಮುಖ್ಯ ಗುಮಾಸ್ತನಾದ ಮೇಲೆ…