Author: admin
ಏರೋಡೈನಾಮಿಕ್ಸ್ ಸಂಸ್ಥೆಯು ಆಳ್ವಾಸ್ ಕಾಲೇಜಿನಲ್ಲಿ ಪ್ರಾರಂಭಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಡಿಜಿಸಿಎ ಮಾನ್ಯತೆ ಪಡೆದ ಡ್ರೋನ್ ತರಬೇತಿ ಕೇಂದ್ರವನ್ನು ಮಂಗಳವಾರ ಕಾಲೇಜಿನ ಆವರಣದಲ್ಲಿ ಉದ್ಘಾಟಿಸಲಾಯಿತು. ಕರ್ನಾಟಕದ ಕೋಸ್ಟ್ ಗಾರ್ಡ್ ನ ಉಪಮಹಾನಿರೀಕ್ಷಕ (ಡಿಐಜಿ) ಹಾಗೂ ಜಿಲ್ಲಾ ಕಮಾಂಡರ್ ಪಿ.ಕೆ ಮಿಶ್ರಾ ಮಾತನಾಡಿ, ರಕ್ಷಣೆ ಹಾಗೂ ನಾಗರಿಕ ಕ್ಷೇತ್ರಗಳಲ್ಲಿ ಡ್ರೋನ್ ತಂತ್ರಜ್ಞಾನವು ವ್ಯಾಪಕವಾಗಿ ಬಳಸಲ್ಪಡುತ್ತಿರುವುದರಿಂದ ಇದರ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಡಿಮೆ ವೆಚ್ಚ, ನಿಖರತೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಬಳಸಬಹುದಾದ ಸಾಮರ್ಥ್ಯದಿಂದ ಡ್ರೋನ್‌ಗಳು ಕ್ರಾಂತಿಕಾರಿ ತಂತ್ರಜ್ಞಾನವಾಗಿ ಹೊರಹೊಮ್ಮುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಜಾಗತಿಕ ಬೆಳವಣಿಗೆಗಳನ್ನು ಉಲ್ಲೇಖಿಸಿ, ಅಮೇರಿಕಾ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷಗಳಲ್ಲಿ, ಡ್ರೋನ್‌ಗಳು ಆಧುನಿಕ ಯುದ್ಧ ತಂತ್ರಗಳನ್ನು ಮಹತ್ತರವಾಗಿ ಬದಲಾಯಿಸುತ್ತಿರುವುದಾಗಿ ಹೇಳಿದರು. ಡ್ರೋನ್ ತಂತ್ರಜ್ಞಾನವು ಸಣ್ಣ ರಾಷ್ಟ್ರಗಳಿಗೂ ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತಿವೆ. ದುಬಾರಿ ಸಾಂಪ್ರದಾಯಿಕ ಯುದ್ಧೋಪಕರಣಗಳಿಗಿಂತ ಕಡಿಮೆ ವೆಚ್ಚದ ಮಾನವರಹಿತ ಡ್ರೋನ್‌ಗಳ ಅಭಿವೃದ್ಧಿಗೆ ದೇಶಗಳು ಹೆಚ್ಚು ಒತ್ತು ನೀಡುತ್ತಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಇಂತಹ…
ಮುಂಬಯಿ ಮಹಾನಗರದ ಬಂಟರ ಪ್ರತಿಷ್ಠಿತ ಹಿರಿಯ ಸಮಾಜ ಸೇವಾ ಸಂಸ್ಥೆ ಬಂಟರ ಸಂಘ ಮುಂಬಯಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ಬಾರಿ ಏಪ್ರಿಲ್ 14 ರಂದು ಮಂಗಳವಾರ ಬೆಳಿಗ್ಗೆ 9:00 ರಿಂದ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಿಸು ಪರ್ಬ ಆಚರಣೆ, ಬಂಟ ದಿನಾಚರಣೆ, ಶ್ರೀ ಮಹಾವಿಷ್ಣು ಬಂಟ ಯಕ್ಷ ಕಲಾ ವೇದಿಕೆಯ ವಾರ್ಷಿಕೋತ್ಸವ ಹಾಗೂ ಸಂಘದ ವಾರ್ಷಿಕ ಸ್ನೇಹ ಸಮ್ಮಿಲನ -2026 ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಲಿರುವುದು. ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಂಘದ ಸಾಹಿತ್ಯ ಮತ್ತು ಸಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಜರಗಲಿರುವ ಈ ಕಾರ್ಯಕ್ರಮವನ್ನು ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಮುಖ್ಯ ಅತಿಥಿಯಾಗಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ, ಗೌರವ ಅತಿಥಿಯಾಗಿ ರೀಜೆನ್ಸಿ ಗ್ರೂಪ್ ಆಫ್ ಹೋಟೆಲ್ಸ್ ನ ಸಿಎಂಡಿ ಜಯರಾಮ ಎನ್…
ಮಂಗಳೂರಿನ ಪುರಭವನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ (ರಿ) ಬಹಿರಂಗ ಅಧಿವೇಶನವು ಸಮಾಜದ ಹಿರಿಯರು, ಸಾಧಕರು ಮತ್ತು ಯುವ ಪೀಳಿಗೆಯ ಸಮಾಗಮಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು ಮತ್ತು ರಾಜೇಶ್ ರೈ ಕಲ್ಲಂಗಳ ಅವರು ದೀಪ ಬೆಳಗಿಸಿ ಹಾಗೂ ಕಳಸದಲ್ಲಿದ್ದ ತೆಂಗಿನ ಸಿರಿಯನ್ನು ಅರಳಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಉದ್ಘಾಟನಾ ಭಾಷಣ ಮಾಡಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಸವಣೂರು ಅವರು, 118 ವರ್ಷಗಳ ಇತಿಹಾಸವಿರುವ ಈ ಸಂಘದೊಂದಿಗೆ ತಮಗೆ ವಿದ್ಯಾರ್ಥಿ ದೆಸೆಯಿಂದಲೇ ಇರುವ 40 ವರ್ಷಗಳ ಸುದೀರ್ಘ ಒಡನಾಟವನ್ನು ಸ್ಮರಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದರೂ, ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಯಾದಗಿರಿಯಂತಹ ಜಿಲ್ಲೆಗಳು ಎಸ್‌ಎಸ್‌ಎಲ್‌ಸಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಯುಪಿಎಸ್‌ಸಿಯಲ್ಲಿ ಹೆಚ್ಚು ಸಾಧನೆ ಮಾಡುತ್ತಿವೆ ಎಂದು ಉದಾಹರಿಸಿದ ಅವರು, ಬಂಟರ ಸಂಘವು ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಇಂತಹ ಪರೀಕ್ಷೆ ಎದುರಿಸಲು ವಿಶೇಷ ತರಬೇತಿ…
ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ಹೂವಿನ ಅಲಂಕಾರ ಸ್ಪರ್ಧೆಯು ಹೋಟೆಲ್ ಪ್ರಕಾಶ್ ನಲ್ಲಿ ನಡೆಯಿತು. ಕ್ಲಬ್ಬಿನ ಅಧ್ಯಕ್ಷೆ ಜಯಂತಿ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ರೋಟರಿ ಜಿಲ್ಲಾ ಪ್ರಥಮ ಮಹಿಳೆ ರೇಖಾ ಪಾಲಾಕ್ಷರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಭಾಪತಿ ವೃಂದಾ ಹರಿಪ್ರಕಾಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಹೂವಿನ ಅಲಂಕಾರ ಮತ್ತು ರಂಗೋಲಿ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ಆಶಾ ಡಿಮೆಲ್ಲೊ, ಸಹನಾ ಹೆಗ್ಡೆ ಮತ್ತು ಗಾಯತ್ರಿ ವಿಜೇಂದ್ರ, ದ್ವಿತೀಯ ಸ್ಥಾನ ಪಡೆದ ಕಸ್ತೂರಿ ವಸಂತ್, ವೃಂದಾ ಹರಿಪ್ರಕಾಶ್ ಶೆಟ್ಟಿ ಇವರಿಗೆ ಅತಿಥಿಗಳು ಬಹುಮಾನದೊಂದಿಗೆ ಅಭಿನಂದಿಸಿದರು. ವಿಜಯಶ್ರೀ ರಾವ್ ಪ್ರಾರ್ಥಿಸಿದರು. ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ ನಿರೂಪಿಸಿದರು. ಆಶಾ ಡಿಮೆಲ್ಲೊ ವಂದಿಸಿದರು.
ಯುಎಇ ಯಲ್ಲಿ ಕಳೆದ 23 ವರ್ಷಗಳಿಂದ ಕನ್ನಡಪರ ಸೇವೆಗಳನ್ನು ಮಾಡುತ್ತಾ ವಿಶೇಷ ಮತ್ತು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅನಿವಾಸಿ ಕನ್ನಡಿಗರಿಗೆ ಆಯೋಜನೆ ಮಾಡುವ ಹೆಮ್ಮಯ ಸಂಸ್ಥೆ ಕರ್ನಾಟಕ ಸಂಘ ಶಾರ್ಜಾ. ಈ ಸಂಸ್ಥೆಯ 2026-28 ರ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಯುಎಇ ಯಲ್ಲಿ ಹಲವಾರು ರಂಗಭೂಮಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಗೊಳಿಸಿದ ರಂಗಸಾರಥಿ ವಿಶ್ವನಾಥ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂತೇಯೆ ಸಂಘದ ಸಲಹಾ ಸಮಿತಿಯ ನಿರ್ದೇಶಕರಾಗಿ ವಕ್ವಾಡಿ ಪ್ರವೀಣ್ ಶೆಟ್ಟಿ, ಹರೀಶ್ ಶೇರಿಗಾರ್, ಜೋಸೆಫ್ ಮಥಾಯಿಸ್, ರಾಮಚಂದ್ರ ಹೆಗ್ಡೆಯವರು ಮುಂದುವರಿಯಲಿದ್ದಾರೆ. ಸಂಘದ ಸಲಹೆಗಾರರಾಗಿ ಎಂ.ಇ ಮೂಳುರು, ಗಣೇಶ್ ರೈ, ಸತೀಶ್ ಪೂಜಾರಿ ಮತ್ತು ನೋಯೆಲ್ ಡಿ ಅಲ್ಮೆಡಾ ಮುಂದುವರಿಯಲಿದ್ದಾರೆ.
ಹೊರನಾಡ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಮುಂಬಯಿ ನಗರಿಯ ಪ್ರತಿಷ್ಠಿತ ಕಲಾ ಸಂಸ್ಥೆ ಕಲಾ ಸೌರಭ ತನ್ನ 33ನೇ ವಾರ್ಷಿಕ ಸಂಗೀತ ನೃತ್ಯ ಸಂಭ್ರಮದ ಸಾಂಸ್ಕೃತಿಕ ಕಲೋತ್ಸವ ‘ಸಂಸ್ಕಾರ-2026’ ಸರಣಿಯ ನಾಲ್ಕನೇ ಕಾರ್ಯಕ್ರಮವನ್ನು ಮಾರ್ಚ್ 27ರಂದು ಶಿರ್ಡಿ ಶ್ರೀ ಸಾಯಿಬಾಬಾ ಸಾನಿಧ್ಯದಲ್ಲಿ ಏರ್ಪಡಿಸಿತ್ತು. ಶಿರ್ಡಿ ಶ್ರೀ ಸಾಯಿಬಾಬಾ ಸಂಸ್ಥಾನಮ್ ಆಶ್ರಯದಲ್ಲಿ ರಾಮನವಮಿ ಜಾತ್ರಾ ನಿಮಿತ್ತ ಕನ್ನಡ ತುಳು ಸೇರಿದಂತೆ ಬಹು ಭಾಷಾ ವೈವಿಧ್ಯಮಯ ಸಂಗೀತ ನೃತ್ಯ ಸಂಯೋಜನೆಯ ‘ಶ್ರೀ ಸಾಯಿ ರಾಮ ಸ್ತುತಿ ಗೀತ ಗಾನಾಮೃತ’ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಜರಗಿತು. ಕಲಾ ಸೌರಭದ ನೂತನ ಪರಿಕಲ್ಪನೆಯ ಸಾಂಸ್ಕೃತಿಕ ವೈವಿಧ್ಯತೆಗಳ ಸರಣಿ ಕಾರ್ಯಕ್ರಮ ಸಂಸ್ಥೆಯ ಸಂಯೋಜಕ ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅವರ ನಿರ್ದೇಶನದಲ್ಲಿ ವರ್ಷದ ಪ್ರಾರಂಭದಲ್ಲಿ ಚಾಲನೆ ಪಡೆದು ಮುಂಬಯಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಆಮಂತ್ರಿತ ಕಲಾವಿದರುಗಳಿಂದ ಬಹು ಭಾಷೀಯ ಭಕ್ತಿ ಭಾವ ಜಾನಪದ ಗೀತಾ ಸಂಗೀತ ನೃತ್ಯ ಕಲಾ ಪ್ರಕಾರಗಳು ಬಹಳ ಯಶಸ್ವಿಯಾಗಿ ನಡೆದು ಇದೀಗ ಬೇಡಿಕೆ ಮೇರೆಗೆ ಶಿರ್ಡಿ…
ರಾಜಕೀಯ, ಧರ್ಮ ಮತ್ತು ಮೋಸ – ವಂಚನೆ ಎಂಬ ವಿಷಯವು ಸಮಾಜದ ಆಳವಾದ ಸತ್ಯಗಳನ್ನು ತೆರೆದಿಡುತ್ತದೆ. ಮೂಲತಃ ರಾಜಕೀಯವು ಜನರ ಸೇವೆಗೆ, ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಇರುವ ವ್ಯವಸ್ಥೆ. ಧರ್ಮವು ಮನುಷ್ಯನ ಒಳಗಿನ ನೈತಿಕತೆಯನ್ನು ಬೆಳೆಸುವ ಮಾರ್ಗ. ಆದರೆ ಇವುಗಳ ಮಧ್ಯೆ ಮೋಸ ಮತ್ತು ವಂಚನೆ ಪ್ರವೇಶಿಸಿದಾಗ ಸಮಾಜದ ದಿಕ್ಕೇ ಬದಲಾಗುತ್ತದೆ. ಕೆಲವರು ರಾಜಕೀಯದಲ್ಲಿ ಅಧಿಕಾರಕ್ಕಾಗಿ ಧರ್ಮವನ್ನು ಉಪಯೋಗಿಸುತ್ತಾರೆ. ಜನರ ಭಾವನೆಗಳನ್ನು ಕೆದಕುವ ಮೂಲಕ ಮತಗಳನ್ನು ಗಳಿಸಲು ಪ್ರಯತ್ನಿಸುತ್ತಾರೆ. ಧರ್ಮದ ಹೆಸರಿನಲ್ಲಿ ಭಯ, ದ್ವೇಷ ಮತ್ತು ವಿಭಜನೆ ಸೃಷ್ಟಿಸುವುದು ನಿಜವಾದ ಧರ್ಮದ ಮೌಲ್ಯಗಳಿಗೆ ವಿರುದ್ಧ. ಇದೇ ವೇಳೆ ಧರ್ಮದ ಮುಖವಾಡದ ಹಿಂದೆ ಕೆಲವರು ತಮ್ಮ ಸ್ವಾರ್ಥವನ್ನು ಸಾಧಿಸಲು ಮೋಸ ಮತ್ತು ವಂಚನೆಗೆ ಕೈ ಹಾಕುತ್ತಾರೆ. ಮನುಷ್ಯರು ಜಾಗೃತರಾಗಬೇಕು. ರಾಜಕೀಯ ಮತ್ತು ಧರ್ಮ ಎರಡನ್ನೂ ಅರ್ಥಪೂರ್ಣವಾಗಿ ಅರಿತುಕೊಳ್ಳಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಿಜವಾದ ಧರ್ಮ ಮಾನವೀಯತೆಯನ್ನು ಕಲಿಸುತ್ತದೆ. ನಿಜವಾದ ರಾಜಕೀಯ ಜನಸೇವೆಯನ್ನು ಗುರಿಯಾಗಿರುತ್ತದೆ. ಮೋಸ ಮತ್ತು ವಂಚನೆಗೆ ಅವಕಾಶ ಕೊಡದ ಸಮಾಜವೇ…
ಒರಿ ಅಮ್ಮೆ ತನ್ನ ಮಗಕ್ ಪಟ್ಟೆ ಪಚ್ಚಡ (ರೇಷ್ಮೆ ಶಾಲು) ಉಡ್‌ಗಿರ ಮಲ್ತೆ. ಮಗೆ ತನ್ನ ಸಂಪಾದೆನದ ದೊಡ್ಡುಡು ಒಂಜಿ ಜೋಡು ಜೋಡು ಕಟ್ಟಾಯೆ. ಸಾಲ್ ಪುಗ್ಗೆಲ್‌ಗ್, ಮುಟ್ಟು ಕಾರ್‌ಗ್ ಪಾಡೊಂದು, ಒಂಜಿ ಸುತ್ತು ಪೋದು ಬತ್ತಿನ ಮಗೆ, ಮುಟ್ಟುದ ದೂಲುನು ಸಾಲ್‌ಡ್ ಗಟ್ಟಿಯೆಗೆ. ಪಚ್ಚಡೊಗು ಅಮ್ಮೆ ನೂದು ಕೊರ್ತೆಡ, ಜೋಡುಗು ಮಗೆ ಪತ್ತ್ ಕೊರ್ದಿಪ್ಪೆ. ಅತ್ತಾವಂದೆ ಮೆಯಿಕ್ ಪಾಡುನ ಸಾಲ್‌ಡ್, ಕುರ್ತೆಲ್ ದೊಕೊಂದು ಬಯಿದಿನ ಕಾರ್ದ ಜೋಡುನು ಒಚ್ಚಿಯೆ. ನರಮಾನಿಗ್ ತಾನ್ ಬೆಂದಿನ ದೊಡ್ಡುದ ಬಿಲೆ ಮಲ್ಲೆ (ಎಚ್ಚ), ನನೊರಿಯನ ದೊಡ್ಡುಗು ಬಿಲೆನೇ ಇಜ್ಜಿ. ಅಂಚ ಬೊಕ್ಕೊರಿ ಅಮ್ಮೆ ಮಗಕ್ ಬುದ್ದಿದ ಪಾತೆರ ಪಂಡೆಡ ಮಗೆ ಉಡಾಫೆ ಪಾತೆರೊಂದು ಇತ್ತೆಗೆ. ‘ಗುರು ಹೆರಿಯೆರ್ ತಗ್ಗ್‌ದ್ ಬಗ್ಗ್‌ದ್ ನಡಪೊಡು’ ಪಂದ್ ಅಮ್ಮೆ ಪಂಡೆಡ ‘ನಡತ್‌ಜಿಡ ದಾದ ಆಪುಂಡು?’ ಪನ್ವೆ. ‘ನಾಲ್ ಜನೊಕು ಬೋಡಾದ್ ಇಪ್ಪೊಡು, ಜನೊಕುಲೆನ ಮುರಿಯೊಗು ಬೂರಿಯೆರೆ ಬಲ್ಲಿ’ ಪಂಡಿನಯಿಕ್ ‘ದಾದ ಆಪುಂಡು?’ ಪಂದ್ ಪೆದಂಬು ಪಾತೆರುವೆ. ‘ಪಯ್ಯೆರು (ಕುದುರೆ)ತ…
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ. ಮಂಗಳೂರು : ೨೦೨೫ -೨೬ ಸಾಲಿನಲ್ಲಿ ರೂ.೧೩೦೫ ಕೋಟಿ ಒಟ್ಟು ವ್ಯವಹಾರ, ರೂ.೧೯.೩೫ ಕೋಟಿ ನಿವ್ವಳ ಲಾಭ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ ೨೯ ಶಾಖೆಗಳು ಹಾಗೂ ೨ ವಿಸ್ತರಣಾ ಕೌಂಟರ್‌ಗಳೊAದಿಗೆ, ವಿಸ್ತöÈತ ಸೇವಾ ಜಾಲವನ್ನು ಹೊಂದಿ ಕಳೆದ ೩೨ ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲಿ ಒಂದಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ೨೦೨೫- ೨೬ನೇ ಸಾಲಿನಲ್ಲಿ ಒಟ್ಟು ವ್ಯವಹಾರದಲ್ಲಿ ಸಾರ್ವಕಾಲಿಕ ದಾಖಲೆಯ ವೃದ್ಧಿಯನ್ನು ಹೊಂದಿ ೩೧.೦೩.೨೦೨೬ಕ್ಕೆ ಠೇವಣಾತಿ ರೂ.೬೯೫ ಕೋಟಿ ಹಾಗೂ ಸಾಲ ರೂ.೬೧೦ ಕೋಟಿಯೊಂದಿಗೆ ಒಟ್ಟು ವ್ಯವಹಾರ ರೂ.೧೩೦೫ ಕೋಟಿಯನ್ನು ತಲುಪಿ, ರೂ.೫೯೦೧ ಕೋಟಿ ಒಟ್ಟು ವಹಿವಾಟು ದಾಖಲಿಸಿ ತನ್ನ ಎಲ್ಲಾ ಕಾರ್ಯವಿಭಾಗಗಳಲ್ಲಿ ನಿಗದಿತ ಗುರಿಯನ್ನು ಮೀರಿ ಅಮೋಘ ಸಾಧನೆಯನ್ನು ಮಾಡಿದೆ. ಹಿಂದಿನ ಸಾಲಿಗೆ ಹೋಲಿಸಿದಾಗ ಪ್ರಸ್ತುತ ಸಾಲಿನಲ್ಲಿ ಠೇವಣಾತಿಯಲ್ಲಿ ರೂ.೧೦೬ ಕೋಟಿ ಹೆಚ್ಚಳ ಶೇ.೧೮ ವೃದ್ಧಿ ಹಾಗೂ ಸಾಲದಲ್ಲಿ ರೂ.೧೦೫ ಕೋಟಿ ಹೆಚ್ಚಳ, ಶೇ.೨೧ ವೃದ್ಧಿ, ಒಟ್ಟು ವ್ಯವಹಾರದಲ್ಲಿ ರೂ.೨೧೧ ಕೋಟಿಯಾಗಿ ಸಾರ್ವಕಾಲಿಕ ದಾಖಲೆಯ ಹೆಚ್ಚಳದೊಂದಿಗೆ ಶೇ.೧೯ ವಾರ್ಷಿಕ ವೃದ್ಧಿಯೊಂದಿಗೆ ಒಟ್ಟು ವ್ಯವಹಾರವು…
ಡಿ.ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಪಿ ಡಿ’ಸೋಜ ನಿರ್ಮಾಣದಲ್ಲಿ ತಯಾರಾದ ’90 ಎಂಎಲ್’ ತುಳು ಚಲನಚಿತ್ರ ಶುಕ್ರವಾರ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಂಡಿತು. ದೀಪ ಬೆಳಗಿಸುವ ಮೂಲಕ ಸಿನಿಮಾ ಉದ್ಘಾಟನೆ ನೆರವೇರಿಸಿ ಮಾತಾಡಿದ ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು ‘ತುಳುವಿನಲ್ಲಿ ಸದಭಿರುಚಿಯ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಇಂದು ಬಿಡುಗಡೆಯಾಗುತ್ತಿರುವ 90 ಎಂಎಲ್ ಸಿನಿಮಾ ತುಳು ಪ್ರೇಕ್ಷಕರ ಮನೆ ಮನ ಮುಟ್ಟುವ ಕೆಲಸ ಮಾಡಲಿ. ಇಡೀ ಚಿತ್ರತಂಡಕ್ಕೆ ಶುಭವಾಗಲಿ’ ಎಂದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ‘ಸಿನಿಮಾದ ಟ್ರೈಲರ್ ನೋಡಿದೆ. ಮಲಯಾಳಂ ಚಿತ್ರದಂತೆ ಇದೆ. ಟೈಟಲ್ ಕೂಡ ಸಖತ್ತಾಗಿದೆ ಎಲ್ಲರಿಗೂ ಶುಭವಾಗಲಿ’ ಎಂದರು. ಲಾಂಚುಲಾಲ್ ಕೆ.ಎಸ್. ಮಾತನಾಡಿ, ’90 ಎಂಎಲ್ ಸಿನಿಮಾ ಟೈಟಲ್ ಡಿಫರೆಂಟ್ ಆಗಿದೆ. ತುಳುವರು ಸಿನಿಮಾ ನೋಡಿದರೆ ಖಂಡಿತ ಸಿನಿಮಾ ಗೆಲ್ಲಲಿದೆ. ಸಿನಿಮಾಕ್ಕೆ ಶುಭ ಹಾರೈಕೆಗಳು’ ಎಂದರು. ನಟ ಅರ್ಜುನ್ ದೇವ್ ಮಾತನಾಡಿ, ’90 ಎಂಎಲ್ ನಿಜ ಜೀವನದಿಂದ ದೂರವಿರಲಿ,…















