
ಬಂಟ ಸಮುದಾಯವು ಎಲ್ಲರೊಂದಿಗೆ ಬೆರೆತು ಬದುಕುವ ಸಮುದಾಯವಾಗಿದ್ದು, ಎಲ್ಲಾ ಜಾತಿ ಧರ್ಮಗಳನ್ನು ಗೌರವಿಸುತ್ತದೆ. ಬಂಟ ಸಂಘಟನೆಯು ಕೇವಲ ಜಾತಿಗೆ ಸೀಮಿತವಾಗದೆ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದರು. ಬಂಟರ ಸಂಘ ಹಿರೇಬಂಡಾಡಿ ವತಿಯಿಂದ ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಸಹಸಹಯೋಗದಲ್ಲಿ ಹಿರೇಬಂಡಾಡಿಯ ಅಂಬೇಡ್ಕರ್ ಭವನದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆಗಳು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಈ ನಿಟ್ಟಿನಲ್ಲಿ ಹಿರೇಬಂಡಾಡಿಯಂತಹ ಗ್ರಾಮಾಂತರ ಪ್ರದೇಶದಲ್ಲಿ ಸಮಾಜದ ಎಲ್ಲರಿಗಾಗಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಮೂಡಿ ಬರಬೇಕು. ಸಮಾಜದ ಎಲ್ಲರಿಗೂ ಅವುಗಳಿಂದ ಪ್ರಯೋಜನ ಸಿಗಬೇಕು ಎಂದರು.

ದಂತ ವೈದ್ಯದ ರಾಜಾರಾಮ್ ಕೆ ಬಿ ಮಾತನಾಡಿ, ಆರೋಗ್ಯವಿದ್ದರೆ ಎಲ್ಲಾ ಇದೆ. ಆದ್ದರಿಂದ ಮೊದಲನೆಯದಾಗಿ ನಾವು ಆರೋಗ್ಯದ ಬಗ್ಗೆ ಗಮನ ನೀಡಬೇಕು. ಬಂಟ ಸಮಾಜವು ಎಲ್ಲೇ ಹೋದರೂ ತುಳು ಸಂಸ್ಕೃತಿಯನ್ನು ಇನ್ನೂ ಮೈಗೂಡಿಸಿಕೊಂಡಿದೆ. ಇದರಿಂದ ನಮ್ಮ ಸಂಸ್ಕೃತಿಯು ಬೆಳೆಯಲು ಸಾಧ್ಯವಾಗಿದೆ ಎಂದರು. ವೈದ್ಯ ನಿರಂಜನ್ ರೈ ಮಾತನಾಡಿ, ತುಳುವಿನಲ್ಲಿ ಬಂಟರನ್ನು ಒಕ್ಕೆಲ್ನಾಯೆ ಎಂದು ಕರೆಯುತ್ತಾರೆ. ಇಲ್ಲಿ ಒಕ್ಕೆಲ್ಮೆ ಎಂದರೆ ರೈತರು ಎಂದರ್ಥ. ಬಂಟರಂಬಂಟರದ್ದು ಮೂಲ ಕಸುಬು ಕೃಷಿಯಾಗಿತ್ತು ಎಂದರು. ವೈದ್ಯರಾದ ಡಾ. ಸುಪ್ರೀತ್ ಲೋಬೊ, ಡಾ. ಕೃಷ್ಣಾನಂದ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಹಿರೇಬಂಡಾಡಿಯ ದಂತ ವೈದ್ಯೆ ಸೈಪುನ್ನಿಸ ಎಂ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ದಯಾನಂದ ಗೌಡ ಸರೋಳಿ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ, ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ರೇಷ್ಮಾ ಉಪಸ್ಥಿತರಿದ್ದರು. ಈ ಸಂದರ್ಭ ಉದಯೋನ್ಮುಖ ವೈದ್ಯರಾದ ಡಾ. ದೇವೀಶ್ ರೈ ಹಾಗೂ ಡಾ. ಗುಲ್ಶನ್ ಎಲ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.



ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಸಂತೋಷ ಶೆಟ್ಟಿ, ಅಶೋಕ್ ಶೆಟ್ಟಿ, ಪ್ರಕಾಶ್ ರೈ ಬೆಳ್ಳಿಪಾಡಿ, ಲಕ್ಷ್ಮಣ ಶೆಟ್ಟಿಗುತ್ತು, ಅನುರಾಧ ಆರ್ ಶೆಟ್ಟಿ, ರಾಕೇಶ್ ಶೆಟ್ಟಿ, ನಾರಾಯಣ ಶೆಟ್ಟಿ ಹೊಳೆಕೆರೆ, ನಿತ್ಯಾನಂದ ಶೆಟ್ಟಿ ದರ್ಬೆ, ವಿನೋದ್ ಶೆಟ್ಟಿ ಪೊಟ್ಟೆಜಾಲ್, ಶ್ರವಣ್ ಶೆಟ್ಟಿ ಪೊಟ್ಟೆಜಾಲ್, ಪುರಂದರ ಬಾರ್ಲ, ಪ್ರಶಾಂತ್ ಶೆಟ್ಟಿ ಬೋಳಾಮೆ, ಹರಿಣಿ ರವೀಂದ್ರ ದರ್ಬೆ, ವಿನಯ ಎಲ್ ಶೆಟ್ಟಿ, ಶಿಲ್ಪ ಪ್ರಶಾಂತ್ ಶೆಟ್ಟಿ, ಶಶಿಕಲಾ, ಡಾ. ಶೈನಿ, ಲಕ್ಷ್ಮಣ ಶೆಟ್ಟಿಗುತ್ತು ಮತ್ತಿತರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರವೀಂದ್ರ ದರ್ಬೆ ಸ್ವಾಗತಿಸಿದರು. ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಹೆನ್ನಾಳ, ಶೋಭಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

















































































































