
ಖ್ಯಾತ ಚುಟುಕು ಸಾಹಿತಿ, ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರ ನೇನೋ ಕತೆಗಳ ಸಂಕಲನ ‘ಕೋಲ್ಮಿಂಚು’ ಜನವರಿ 25 ರಂದು ಭಾನುವಾರ ಕದ್ರಿ ದೇವಾಲಯದ ಅಭಿಷೇಕ ಕಲಾಮಂದಿರದಲ್ಲಿ ನಡೆಯುವ ಸಾಹಿತ್ಯ ವೈಭವ – 2026 ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ದಿವ್ಯಹಸ್ತದಿಂದ ಬಿಡುಗಡೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಚು.ಸಾ.ಪ ಗೌರವಾಧ್ಯಕ್ಷರಾದ ಇರಾ ನೇಮು ಪೂಜಾರಿಯವರ ಚುಟುಕು ಕಾಮಿನಿ ಕಾವ್ಯಸಂಕಲನವನ್ನು ಡಾ| ಎ ಜನಾರ್ಧನ ಶೆಟ್ಟಿಯವರು ಬಿಡುಗಡೆಗೊಳಿಸಲಿರುವರು. ಕಾರ್ಯಕ್ರಮವನ್ನು ಎಸ್ ಗಣೇಶ್ ರಾವ್ ಉದ್ಘಾಟಿಸಲಿರುವರು.


ಕಾರ್ಯಕ್ರಮದಲ್ಲಿ ಸದಾಶಿವ ಉಳ್ಳಾಲ್ ಮತ್ತು ಗೋಪಾಲಕೃಷ್ಣ ಶೆಟ್ಟಿ, ಡಾ| ಎಂ ಜಗದೀಶ್ ಶೆಟ್ಟಿ, ಶ್ರೀಮತಿ ಪುಷ್ಪಲತಾ ಮತ್ತು ನಾರಾಯಣಯ್ಯ ಮೂಳೂರು ಅತಿಥಿಗಳಾಗಿ ಆಗಮಿಸಲಿದ್ದು, ಚು.ಸಾ.ಪ ಸಂಚಾಲಕರಾದ ಡಾ| ಎಂ.ಜಿ.ಆರ್ ಅರಸ್ ಅವರು ಅಧ್ಯಕ್ಷತೆ ವಹಿಸಲಿರುವರು.

















































































































