Author: admin
ಕಾರ್ಕಳ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಶಿಶು ಪಾಲನಾ ಕೇಂದ್ರ ಕಾರ್ಕಳ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ (5 ಲಕ್ಷ ರೂ) ಯಿಂದ ನಿರ್ಮಾಣದವಾದ ಆಪ್ತ ಸಮಾಲೋಚನಾ ಕಟ್ಟಡದ ಉದ್ಘಾಟನೆಯನ್ನು ಏಪ್ರಿಲ್ 4 ರಂದು ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಸಂಘಟಿತರಾಗಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು. ಆಪ್ತ ಸಮಾಲೋಚನಾ ಕೇಂದ್ರದಿಂದಾಗಿ ಮಹಿಳೆಯರು ಒಂದೆಡೆ ಬೆರೆಯಲು ಅನುಕೂಲವಾಗುವುದು ಎಂದರು. ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮಾತನಾಡಿ, ಸಾಂತ್ವಾನ ಕೇಂದ್ರದ ಸದುಪಯೋಗ ಪಡೆದು ಕುಟುಂಬಗಳು ನೆಮ್ಮದಿ ಕಾಣಬೇಕೆಂದರು. ಕಟ್ಟಡದ ಗುತ್ತಿಗೆದಾರ ಗುರುಪ್ರಸಾದ್, ಉದ್ಯಮಿ ಲಕ್ಷ್ಮಣ, ಈಸಿ ಲೈಫ್ ಮ್ಯಾನೇಜರ್ ಕಾರ್ತಿಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳ ಪರವಾಗಿ ಸೌಮ್ಯ, ಉದ್ಯಮಿ ವಿಜಯ್ ಶೆಟ್ಟಿ ಪರವಾಗಿ ಸವಿತಾ ಶೆಟ್ಟಿ, ಸಾವಿತ್ರಿ ಮನೋಹರ್, ವಸಂತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ಪ್ರಯುಕ್ತ…
ವಿಶ್ವ ಆರೋಗ್ಯ ದಿನ 2026 ಪ್ರಯುಕ್ತ ಕಾರ್ಕಳದ ರೋಟರಿ ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ‘ಆರೋಗ್ಯ ಜಾಗೃತಿ ಶಿಕ್ಷಣ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರೋಟರಿ ಟಿ.ಎಂ.ಎ ಪೈ ಆಸ್ಪತ್ರೆಯ ಫಿಸಿಷಿಯನ್ ಡಾ. ಸೂರಜ್ ರಾವ್ ಎಚ್ ಅವರು ಭಾಗವಹಿಸಿ ಆರೋಗ್ಯದ ಮಹತ್ವ, ಜೀವನಶೈಲಿ ಬದಲಾವಣೆಗಳು ಹಾಗೂ ಸಮಕಾಲೀನ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋಟೇರಿಯನ್ ಕೆ. ನವೀನ್ ಚಂದ್ರ ಶೆಟ್ಟಿಯವರು ಪ್ರಸ್ತಾವನಾ ಮಾತುಗಳನ್ನಾಡಿ, ಎಲ್ಲರನ್ನೂ ಸ್ವಾಗತಿಸಿದರು. ನಂತರ ಪಿಡಿಜಿ ಡಾ. ಭರತೇಶ ಆದಿರಾಜ್ ಅವರು ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಮಕ್ಕಳ ತಜ್ಞರಾದ ಡಾ. ಆಶಾ ಪಿ ಹೆಗಡೆ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೆಸಿಐ ಕಾರ್ಕಳದ ಅಧ್ಯಕ್ಷರಾದ ಜೆಸಿ ಅವಿನಾಶ್ ಜಿ ಶೆಟ್ಟಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ರೋಟರಿ ಕ್ಲಬ್ ರಾಕ್ ಸಿಟಿಯ ಅಧ್ಯಕ್ಷರಾದ ರೋಟೇರಿಯನ್ ಸುರೇಂದ್ರ ನಾಯಕ್ ಅವರು ವಂದನಾರ್ಪಣೆ ಸಲ್ಲಿಸಿದರು.…
ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ ಅಧಿಕಾರಿ ಮುಂಡ್ಕೂರು ದೊಡ್ಡಮನೆ ರವೀಂದ್ರನಾಥ ಶೆಟ್ಟಿ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಬಂಟ್ಸ್ ಹಾಸ್ಟೇಲ್ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ಶೃದ್ದಾಂಜಲಿ ಸಭೆ ಜರಗಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, ರವೀಂದ್ರನಾಥ ಶೆಟ್ಟಿ ಅವರ ಅಗಲುವಿಕೆ ಸಮಾಜಕ್ಕೆ ಆದ ಬಲು ದೊಡ್ಡ ನಷ್ಟವಾಗಿದೆ. ಯೂನಿಯನ್ ಬ್ಯಾಂಕಿನ ಅಧ್ಯಕ್ಷರಿಂದ ಹಿಡಿದು ಸಾಮಾನ್ಯ ಸಿಬ್ಬಂದಿಗಳೊಂದಿಗೆ ಅನ್ಯೋನ್ಯ ಒಡನಾಟ ಹೊಂದಿದ್ದ ಅವರು ಬಂಟರ ಮಾತೃ ಸಂಘದಲ್ಲಿ ಪದಾಧಿಕಾರಿಯಾಗಿ ಸಲ್ಲಿಸಿರುವ ಸೇವೆ ಎಂದೂ ಮರೆಯಲಾಗದು ಎಂದರು. ಮಾತೃ ಸಂಘದ ತಾಲೂಕು ಸಮಿತಿಯ ಮಾಜಿ ಸಂಚಾಲಕ ಜಯರಾಮ ಸಾಂತ ಮಾತನಾಡಿ, ರವೀಂದ್ರನಾಥ ಶೆಟ್ಟಿ ಅವರ ಪರೋಪಕಾರಿ ಮನೋಭಾವ ಸರ್ವರಿಗೂ ಮಾದರಿಯಾಗಿದೆ ಎಂದರು. ಬಂಟರ ಮಾತೃ ಸಂಘದ ಮಾಜಿ ಕಾರ್ಯದರ್ಶಿ…
ಪ್ರತಿಷ್ಠಿತ ಮೈಸೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಕೊಳ್ಕೆಬೈಲು ಗಣೇಶ್ ನಾರಾಯಣ್ ಹೆಗ್ಡೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೈಸೂರು ಬಂಟರ ಸಂಘ ಹಾಗೂ ಬಂಟ್ಸ್ ಚಾರಿಟೇಬಲ್ ಟ್ರಸ್ಟ್ ನಲ್ಲಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವೀ ಸಂಘಟಕ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಮೈಸೂರು ಬಂಟರ ಭವನ ನಿರ್ಮಾಣವಾಗುವಲ್ಲಿ ಹಗಲಿರುಳು ಶ್ರಮಿಸಿರುವ ಹೆಗ್ಡೆಯವರು, ಅನಾರೋಗ್ಯ ಪೀಡಿತರಿಗೆ, ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೂ ಸಹಕಾರ ನೀಡುತ್ತಾ ಬರುತ್ತಿದ್ದಾರೆ.
ಗುಜರಾತ್ ಸೂರತ್ ನ ವಿಶ್ವವಿಖ್ಯಾತ ಫಿಟ್ನೆಸ್ ಗುರು ಡಾ| ರಾಜ್ ಅಶೋಕ್ ಶೆಟ್ಟಿಯವರು ‘ಬೆಸ್ಟ್ ವೆಲ್ನೆಸ್ ಕೋಚ್’ ಗೌರವಕ್ಕೆ ಪಾತ್ರರಾಗಿದ್ದು, ಪದ್ಮಭೂಷಣ ಕ್ರಿಕೆಟರ್ ಸುನಿಲ್ ಗಾವಸ್ಕರ್ ಅವರು ಈ ಪುರಸ್ಕಾರವನ್ನು ನೀಡಿ ಗೌರವಿಸಿದರು. ಡಾ| ರಾಜ್ ಅಶೋಕ್ ಶೆಟ್ಟರ ಸಾಧನೆಗಾಗಿ ಅನೇಕ ಸನ್ಮಾನ ಪ್ರಶಸ್ತಿಗಳು ಅವರಿಗೆ ಸಂದಿವೆ. 1963ರ ಡಿಸೆಂಬರ್ 9ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ ಶೆಟ್ಟರು ಕಳೆದ 30 ವರ್ಷಗಳಿಂದ ಗುಜರಾತ್ ನ ಸೂರತ್ ನಲ್ಲಿ ನೆಲೆಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹೊಸ ಮೈಲುಗಲ್ಲು ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನ ಆಶ್ರಯದಲ್ಲಿ ಎಳೆಯ ಮನಸ್ಸುಗಳನ್ನು ಒಗ್ಗೂಡಿಸುವ ‘ಕ್ರಿಯೇಟಿವ್ ಚಿಲಿಪಿಲಿ-2026’ ಮೂರು ದಿನಗಳ ಬೇಸಿಗೆ ಶಿಬಿರವು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಸಂಸ್ಥೆಯ ಸಹ ಸಂಸ್ಥಾಪಕರಾದ ಅಶ್ವತ್ ಎಸ್ .ಎಲ್ ರವರು, ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪಾಠ ಪ್ರವಚನಗಳ ಜೊತೆಗೆ ಬದುಕಿನ ಮೌಲ್ಯಗಳನ್ನು ಕಲಿಯಬೇಕು. ಮಕ್ಕಳು ತಮ್ಮ ಸುಂದರ ಬಾಲ್ಯವನ್ನು ಮೊಬೈಲ್ ನಿಂದ ದೂರವಿದ್ದು ತಮ್ಮ ಬದುಕನ್ನು ಸವಿಯಬೇಕೆಂಬ ಸದಾಶಯವನ್ನಿಟ್ಟುಕೊಂಡು ಈ ಚಿಲಿಪಿಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಮಾತ್ರವಲ್ಲದೇ ಕ್ರಿಯೇಟಿವ್ ಸಂಸ್ಥೆಯ ಹೊಸ ಪರಿಕಲ್ಪನೆಯಾದ ಎಳೆಯ ಮನಸ್ಸುಗಳಿಗೆ ಮುಂದೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಮತ್ತು ನಮ್ಮ ಸಂಸ್ಕೃತಿ, ದೇಶಾಭಿಮಾನವನ್ನು ಹೊಂದಲು ಕ್ರಿಯೇಟಿವ್ ಗ್ಲೋಬಲ್ ಸ್ಕೂಲನ್ನು ಪ್ರಾರಂಭಿಸುತ್ತಿದ್ದೇವೆ. ಇದರ ಮೊದಲ ಹೆಜ್ಜೆಯಾಗಿ ಇಂದು ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ನುಡಿದರು. ಸಹ ಸಂಸ್ಥಾಪಕರಲ್ಲಿ ಓರ್ವರಾದ ಡಾ| ಗಣನಾಥ ಶೆಟ್ಟಿ…
ಮಿಸ್ ಯೂನಿವರ್ಸ್ ಕರ್ನಾಟಕದ (Ms Universe Karnataka 2026) ಪ್ರಾದೇಶಿಕ ವ್ಯಾಪ್ತಿಯ ಸೌಂದರ್ಯ ಸ್ಪರ್ಧೆಯು ಏಪ್ರಿಲ್ 3ರಂದು ಉದ್ಯಾನನಗರಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆದಿದ್ದು, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ, ಉದ್ಯಮಿ, ಸಮಾಜಸೇವಕಿ, ಮಹಿಳಾರತ್ನ ಶ್ರೀಮತಿ ಕಾಂತಿ ಶೆಟ್ಟಿಯವರ ಸುಪುತ್ರಿ ಲೇಖನ ಹೆಗ್ಡೆಯವರು ‘ಮಿಸ್ ಯೂನಿವರ್ಸ್ ಕರ್ನಾಟಕ – 2026’ ಆಗಿ ಹೊರಹೊಮ್ಮಿದ್ದಾರೆ.
ಬಂಟರ ಸಂಘ ಮುಂಬಯಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ‘ಮಾತಾ ಕೀ ಚೌಕಿ’ ಭಕ್ತಿ ಪ್ರಧಾನ ಕಾರ್ಯಕ್ರಮವು ಮಾರ್ಚ್ 31 ರಂದು ಎಸ್.ಎಂ ಶೆಟ್ಟಿ ಪೊವಾಯಿ ಶಿಕ್ಷಣ ಸಂಕುಲದ ಸಭಾಂಗಣದಲ್ಲಿ ಸಂಜೆ 4 ಗಂಟೆಯಿಂದ ಅದ್ದೂರಿಯಾಗಿ ಆಚರಿಸಲ್ಪಟ್ಟಿತು. ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಪ್ರಾದೇಶಿಕ ಸಮಿತಿಗಳ ಸಂಚಾಲಕರಾದ ರವೀಂದ್ರನಾಥ ಭಂಡಾರಿ, ಎಸ್.ಎಮ್ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ್ ಶೆಟ್ಟಿ, ಸಮಿತಿಯ ಸಂಚಾಲಕರಾದ ರವೀಂದ್ರ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ವಜ್ರಾಕ್ಷಿ ಪೂಂಜಾ ಹಾಗೂ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗುವುದರ ಮೂಲಕ ಚಾಲನೆ ನೀಡಲಾಯಿತು. ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ…
ಮೈಸೂರಿನ ಪ್ರತಿಷ್ಠಿತ ಬಂಟರ ಸಂಘದ ಬಂಟ್ಸ್ ಚಾರಿಟೇಬಲ್ ಟ್ರಸ್ಟ್ ನ ನೂತನ ಡೆಪ್ಯೂಟಿ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಉದ್ಯಮಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಪಿ. ಸುರೇಶ್ ಆಳ್ವರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮೈಸೂರು ಬಂಟರ ಸಂಘದಲ್ಲಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವೀ ಸಂಘಟಕ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಹೋಟೆಲ್ ಉದ್ಯಮಿಯಾಗಿದ್ದುಕೊಂಡು ಅನಾರೋಗ್ಯ ಪೀಡಿತರಿಗೆ, ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೂ ಸಹಕಾರ ನೀಡುತ್ತಾ ಬರುತ್ತಿದ್ದಾರೆ.
ತುಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಮಾತೃಮೂಲ ಪರಂಪರೆಯ ಪುನರುಜ್ಜೀವನಕ್ಕಾಗಿ ಆಯೋಜಿಸಲಾಗುತ್ತಿರುವ ಮಹತ್ವದ ‘ಅಪ್ಪೆ ಬೇರ್ ದ ತುಳುನಾಡ್’ ಕಾರ್ಯಕ್ರಮಕ್ಕೆ ಖ್ಯಾತ ಲೇಖಕಿ ಹಾಗೂ ಜಾನಪದ ತಜ್ಞೆ ಡಾ| ಇಂದಿರಾ ಹೆಗ್ಡೆ ಅವರನ್ನು ಸಮ್ಮೇಳನ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಡಾ| ಇಂದಿರಾ ಹೆಗ್ಡೆ ಅವರು ತುಳುನಾಡಿನ ಜಾನಪದ ಆಚರಣೆಗಳು, ನಂಬಿಕೆಗಳು ಮತ್ತು ಸಂಸ್ಕೃತಿಯ ಕುರಿತಾಗಿ ದೀರ್ಘಕಾಲದಿಂದ ಆಳವಾದ ಅಧ್ಯಯನ ನಡೆಸುತ್ತಿರುವ ಪ್ರಮುಖ ವಿದ್ವಾಂಸರು. ಕಿನ್ನಿಗೋಳಿ ಮೂಲದ ಅವರು ತುಳು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರು ರಚಿಸಿರುವ ಕೃತಿಗಳಲ್ಲಿ ‘ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ’, ‘ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’, ‘ಕರಾವಳಿ ಸಂಸ್ಕೃತಿ ಸಮೀಕ್ಷೆ’ ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು ಮೊದಲಾದ ಗ್ರಂಥಗಳು ತುಳುನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ಜೀವನದ ಅಧ್ಯಯನಕ್ಕೆ ಮಹತ್ವದ ಆಧಾರವಾಗಿವೆ. ತುಳುನಾಡಿನ ನಾಗಾರಾಧನೆ, ಭೂತಾರಾಧನೆ, ದೈವಾರಾಧನೆ, ಕುಟುಂಬ ವ್ಯವಸ್ಥೆ, ಸಮಾಜ ವ್ಯವಸ್ಥೆ, ಜಾನಪದ ಆಚರಣೆಗಳು ಮತ್ತು…















