
ಈ ಸೀಸನ್ ನಲ್ಲಿ ಸ್ಪರ್ಧಿಗಳಿಂದ ಅತೀ ಹೆಚ್ಚು ಅನ್ಯಾಯ ಮತ್ತು ನೋವು ಅನುಭವಿಸಿರುವ ಸ್ಪರ್ದಿ ಎಂದರೆ ಅದು ಪಾಪದ ಹುಡುಗಿ ರಕ್ಷಿತಾ ಶೆಟ್ಟಿ. ಗಿಲ್ಲಿ ಗೆದ್ದರೆ ಅಶ್ವಿನಿ ಅಭಿಮಾನಿಗಳಿಗೆ ನಿರಾಸೆ, ಅಶ್ವಿನಿ ಗೆದ್ದರೆ ಗಿಲ್ಲಿ ಅಭಿಮಾನಿಗಳ ಆಕ್ರೋಶ. ಇದ್ಯಾವುದು ಬೇಡ ವಯಸ್ಸು ಚಿಕ್ಕದಾದರೂ, ಬೌದ್ಧಿಕವಾಗಿ ಮನೆಯಲ್ಲಿ ಎಲ್ಲರಿಗಿಂತ ದೊಡ್ಡವಳೆಂದು, ಚಿಕ್ಕ ವಯಸ್ಸಿನಲ್ಲೇ ಅಲ್ಪ ಆದಾಯದಲ್ಲೇ ಸಮಾಜಸೇವೆ ಮಾಡುತ್ತಿರುವ ಪ್ರಭುದ್ದೆ ರಕ್ಷಿತಾಳನ್ನು ಗೆಲ್ಲಿಸಿದರೆ ಇದು ಬಿಗ್ ಬಾಸ್ ತೆಗೆದುಕೊಳ್ಳಬಹುದಾದ ದಿ ಬೆಸ್ಟ್ ಡಿಸಿಷನ್ ಎಂಬುದು ಬಿಗ್ ಬಾಸ್ ಅನ್ನು ಸೂಕ್ಷ್ಮವಾಗಿ ಗಮನಿಸುವವರ ಅಭಿಪ್ರಾಯ.

ಗಿಲ್ಲಿ ಬೇರೆ ಈಗಾಗಲೇ ರಕ್ಷಿತಾಳನ್ನು ಅವರ ವಂಶದ ಕುಡಿ ಎಂದು ಹೇಳಿಕೊಂಡಿದ್ದಾರೆ. ಅಶ್ವಿನಿ ರಕ್ಷಿತಾಳನ್ನು ಟಾರ್ಗೆಟ್ ಮಾಡಿ ಮಾಡಿ ಆ ಹುಡುಗಿಗೆ ಅನ್ನಬಾರದ್ದೆಲ್ಲಾ ಹೇಳಿ ಕ್ಷಮಿಸು ಎಂದು ಮೂರ್ನಾಲ್ಕು ಬಾರಿ ಕೇಳಿದ್ದು ಆಗಿದೆ. ಈಗಿದ್ದಾಗ ಮತ್ತು ಸದ್ಯದ ಅಂಕಿ ಅಂಶಗಳು ಅಂದಾಜಿನ ಪ್ರಕಾರ ರಕ್ಷಿತಾ ವೋಟಿಂಗ್ ನಲ್ಲಿ 2 ನೇ ಸ್ಥಾನದಲ್ಲಿ ಇದ್ದಾರೆ ಮತ್ತು ರಕ್ಷಿತಾಗೆ GEN Z (ಯುವಕ ಯುವತಿಯರ ) ಬೆಂಬಲ ಕೂಡ ಹೆಚ್ಚುತ್ತಿದೆ. ಇವೆಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ RAKSHITA IS THE MOST DESERVING ಎನ್ನುತ್ತಾರೆ ಅನೇಕ ಬಿಗ್ ಬಾಸ್ ಪ್ರಿಯರು. ಎಲ್ಲರೂ ರಕ್ಷಿತಾ ಶೆಟ್ಟಿಗೆ ವೋಟ್ ಮಾಡಿ ಗೆಲ್ಲಲು ಸಹಕರಿಸಿ ಆಶೀರ್ವದಿಸಿ.





















































































































