



ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ ನಡೆಸಿದ ಸಿ.ಎಸ್.ಇ.ಇ.ಟಿ (ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ – ಜನವರಿ 2026) ನಲ್ಲಿ ಜ್ಞಾನಸುಧಾದ ವಾಣಿಜ್ಯ ವಿಭಾಗದ 48 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಸಂಸ್ಥೆಯ ಗ್ಯಾನ್ ಹೆಗ್ಡೆ ಅವರು 200ರಲ್ಲಿ 145 ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಯಾಗಿದ್ದು, ಜೊತೆಗೆ ಕಾರ್ತಿಕ್ ಶೆಟ್ಟಿ (142 ಅಂಕ), ಶ್ರೀಕರ ಎಸ್ ಉಪಾಧ್ಯಾಯ (141 ಅಂಕ), ವಿಭೂಷಿತ್ ಶೆಟ್ಟಿ (134 ಅಂಕ), ಪ್ರತುಲ್ ಡಿ’ಸೋಜ (132 ಅಂಕ) ಹಾಗೂ ರಕ್ಷಿತ್ ಶೆಟ್ಟಿ (132 ಅಂಕ) ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹಾಗೂ ಜ್ಞಾನಸುಧಾ ಪರಿವಾರವು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

















































































































