ಇಂದಿನ ಮಕ್ಕಳೇ ಮುಂದಿನ ಭವಿಷ್ಯ. ಇದನ್ನು ರೂಪಿಸುವಲ್ಲಿ ಅನೇಕ ತ್ಯಾಗಗಳೊಂದಿಗೆ ಶಿಕ್ಷಕರು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಯುವಶಕ್ತಿಗೆ ಪ್ರೇರಣಾ ಶಕ್ತಿ ಶಿಕ್ಷಕರು. ಅಂತಹ ಎಲ್ಲಾ ಶಿಕ್ಷಕರಿಗೆ ಶಿಕ್ಷಕ ರಕ್ಷಕ ಪದಾಧಿಕಾರಿಗಳ ನಮನ ಎಂದು ಪುಷ್ಪರಾಜ್ ಶೆಟ್ಟಿ ಮಧ್ಯ ಹೇಳಿದರು. ಇವರು ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಗೋವಿಂದದಾಸ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾಲೇಜಿನ ಆಡಳಿತ ನಿರ್ದೇಶಕ ಪ್ರೊ ರಮೇಶ್ ಭಟ್ ಇವರು ಶಿಕ್ಷಕರ ಕರ್ತವ್ಯವನ್ನು ನೆನಪಿಸಿದರು. ಈ ಸಂದರ್ಭ ಎಲ್ಲಾ ಅಧ್ಯಾಪಕರನ್ನು ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಇಸ್ಮಾಯಿಲ್, ಪ್ರದೀಪ್ ರಾವ್, ವಾಸುದೇವ ಶಾನುಭೋಗ, ಸವಿತಾ, ಲಕ್ಷ್ಮಿ, ವಿಭ ಗೌರವಿಸಿದರು. ಪ್ರಾಂಶುಪಾಲೆ ಲಕ್ಷ್ಮಿ ಪಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲೆ ಸುನಿತಾ ಕೆ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗಂಗಾಧರ್ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧೃತಿ ಕೋಟ್ಯಾನ್ ಸ್ವಾಗತಿಸಿ, ಕುಮಾರಿ ಗ್ರೀಷ್ಮ ವಂದಿಸಿದರು. ಸುಜಾತ ಸತೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.