ಭಾರತೀಯ ಸೇನೆಯಲ್ಲಿ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (NSG) ಒಂದು ಸ್ಪೆಷಲ್ ಫೋರ್ಸ್. ಇವರನ್ನು ಬ್ಲ್ಯಾಕ್ ಕ್ಯಾಟ್ ಕಮಾಂಡೊ ಎಂದು ಕರೆಯುತ್ತಾರೆ. ಕೆಲವೇ ಆಯ್ದ ಸೈನಿಕರಿಗೆ ಮಾತ್ರ ದೊರೆಯುವ ಅತೀ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ NSG BLACK CAT COMMANDO ಆಗಿ ಸಚಿನ್ ಶೆಟ್ಟಿ ನೇಮಕಗೊಂಡಿದ್ದಾರೆ.

ಸಚಿನ್ ಶೆಟ್ಟಿ ಹೆಬ್ರಿಯ ದಿ. ಜಗದೀಶ್ ಶೆಟ್ಟಿ ಮತ್ತು ಸತ್ಯವತಿ ಶೆಟ್ಟಿ ದಂಪತಿಯ ಪುತ್ರ. 2012ರಲ್ಲಿ ಸೇನೆಗೆ ಸೇರ್ಪಡೆಗೊಂಡ ಇವರು 1 ವರ್ಷ ಮಧ್ಯಪ್ರದೇಶದ ಜಬಲ್ಪುರ್ ನಲ್ಲಿ ತರಬೇತಿ ಪಡೆದು ಬಳಿಕ ರಾಜಸ್ತಾನ್, ಜಮ್ಮು ಕಾಶ್ಮೀರ, ಪಂಜಾಬ್ ಹಾಗೂ ಜಮ್ಮು ರಾಷ್ಟ್ರೀಯ ರೈಪಲ್ಸ್ ನಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಪ್ರಸ್ತುತ 60 ದಿನಗಳ NSG Commando ತರಬೇತಿ ಮುಗಿಸಿ ದೆಹಲಿಯಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿದ್ದಾರೆ.

















































































































