
ಬನ್ನಾಡಿ ಲಯನ್ಸ್ ಕ್ಲಬ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಭೇಟಿ ಕಾರ್ಯಕ್ರಮ ಫೆಬ್ರವರಿ 23ರಂದು ಸುಬ್ಬಣ್ಣ ಸಿಂಧೂ ಸಭಾಂಗಣದಲ್ಲಿ ನೆರವೇರಿತು. ಸಪ್ನಾ ಸುರೇಶ್ ಮಾತನಾಡಿ, ಗ್ರಾಮೀಣ ಭಾಗದ ಕ್ಲಬ್ ಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬನ್ನಾಡಿ ಕ್ಲಬ್ ಕೂಡ ಉತ್ತಮ ಸೇವೆ ನೀಡಿದೆ ಎಂದರು. ಅತ್ಯುತ್ತಮ ಬಿ.ಎಲ್.ಒ ಪ್ರಶಸ್ತಿ ಪುರಸ್ಕೃತೆ ವಿಜಯಲಕ್ಷ್ಮೀ ಬನ್ನಾಡಿ, ಮಾನವೀಯ ಮೌಲ್ಯ ಪಾಲನೆ ನಿಟ್ಟಿನಲ್ಲಿ ಪ್ರವೀಣ್ ಹೆಗ್ಡೆ ಅವರನ್ನು ಗೌರವಿಸಲಾಯಿತು.

ಲಯನ್ಸ್ ಮಾಜಿ ಗವರ್ನರ್ ಕೆ. ಸುರೇಶ್ ಪ್ರಭು, ವಿ.ಡಿ.ಜಿ ರಾಜೀವ ಕೋಟ್ಯಾನ್, ಪ್ರಾದೇಶಿಕ ಅಧ್ಯಕ್ಷ ರಜತ್ ಕುಮಾರ್ ಹೆಗ್ಡೆ, ಪ್ರಾದೇಶಿಕ ಕಾರ್ಯದರ್ಶಿ ಏಕನಾಥ ಬೋಳಾರ್, ಪ್ರಮುಖರಾದ ಸಂತೋಷ ಕುಮಾರ್ ಶೆಟ್ಟಿ, ದಿನಕರ ಶೆಟ್ಟಿ ಎಂ, ಕ್ಲಬ್ ಅಧ್ಯಕ್ಷ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಚಂದ್ರ ಶೆಟ್ಟಿ ಯಾಳಕ್ಕು, ಖಜಾಂಚಿ ನಿತೀಶ್ ಆಚಾರ್ಯ ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಚಂದ್ರಶೇಖರ ಶೆಟ್ಟಿ ಕಲ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬನ್ನಾಡಿ ಸೋಮನಾಥ ಹೆಗ್ಡೆ ಸಹಕರಿಸಿದರು. ಖಜಾಂಚಿ ನಿತೀಶ್ ಆಚಾರ್ಯ ಅಚ್ಲಾಡಿ ವಂದಿಸಿದರು.


























































































































