ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ನಿವಾಸಿ ಸಂಪತ್ ಶೆಟ್ಟಿ ಅವರು ಭೂ ವ್ಯವಹಾರ, ನಿವೇಶನ ಕುರಿತ ಉದ್ಯಮದಲ್ಲಿ ತೊಡಗಿಸಿಕೊಂಡ ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತ. ಮೂಲತಃ ಬಹು ಪ್ರತಿಷ್ಠಿತ ಪಂಜದ ಗುತ್ತು ಮನೆತನದವರು. ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಇತಿಹಾಸದಲ್ಲಿ ಪಂಜದ ಗುತ್ತು ಇಲ್ಲಿನ ಉಲ್ಲೇಖ ಇದೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಿ ಉತ್ಸವ ಸಂದರ್ಭದಲ್ಲಿ ಇಲ್ಲಿನ ಹಿರಿಯರ ಉಪಸ್ಥಿತಿ ಇರಬೇಕು. ಪಂಜದ ಗುತ್ತಿಗೆ ಒಂದು ಗತ್ತಿನ ಗುತ್ತು ಮನೆತನದ ಪರಂಪರೆ ಇದೆ. ಈ ಮನೆತನಕ್ಕೆ ಸಂಬಂಧ ಪಟ್ಟ ಸಂಪತ್ ಅವರು ತನ್ನ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿ ಮುಂದೆ ದೇಶದ ವಾಣಿಜ್ಯ ನಗರಿ ಮುಂಬಯಿ ಸೇರಿ ಕ್ಯಾಂಟೀನ್ ವ್ಯವಹಾರ ಸೇರಿದಂತೆ ಅನೇಕ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಉದ್ಯಮ ಕ್ಷೇತ್ರದಲ್ಲಿ ತನ್ನ ಅನುಭವವನ್ನು ಹೆಚ್ಚಿಸಿಕೊಂಡರು. ಕೆಲವು ವರ್ಷಗಳಿಂದ ಮೀರಾರೋಡ್ ನಲ್ಲಿ ವಾಸ್ತವ್ಯ ಹಾಗೂ ವ್ಯವಹಾರ ಹೊಂದಿದ ಸಂಪತ್ ಶೆಟ್ಟಿ ಓರ್ವ ಉತ್ತಮ ನಡೆ ನುಡಿಯ ಸಂಘಟಕನಾಗಿ, ಉದಾರ ದಾನಿಯಾಗಿ ಉತ್ತಮ ಮಟ್ಟದ ಸಮಾಜ ಸೇವಕನಾಗಿ ಪರಿಚಯಿಸಿಕೊಂಡರು. ಅತ್ಯಂಚ ಸರಳ ಸ್ವಭಾವದ ವಿನಮ್ರ ಭಾವ ಹೊಂದಿದ, ಗುರು ಹಿರಿಯರನ್ನು ಅಪಾರ ಗೌರವದಿಂದ ಕಾಣುವ ಬಡವರ, ಆರ್ತರ ಕಣ್ಣೀರೊರಸುವ ಗುಣಗಳಿಂದ ಈ ಪರಿಸರದಲ್ಲಿ ಎಲ್ಲರಿಗೂ ಆಪ್ತರಾಗಿ ಆಪತ್ಬಾಂಧವನಾಗಿ ಗುರುತಿಸಿಕೊಂಡರು.

ಮುಂಬಯಿ ನಗರದಲ್ಲಿನ ಅದರಲ್ಲೂ ಮೀರಾ ಭಾಯಂದರ್ ನಂಥ ಉಪನಗರಗಳಲ್ಲಿ ಮಧ್ಯಮ ವರ್ಗದ ಜನರು ತಮಗೊಂದು ವಾಸ್ತವ ವ್ಯವಸ್ಥೆ ನಿವೇಶನಗಳನ್ನು ಒದಗಿಸಿಕೊಳ್ಳುವಲ್ಲಿ ಯೋಗ್ಯ ಮಾರ್ದರ್ಶನಕ್ಕಾಗಿ ಪರದಾಡುವ ಸ್ಥಿತಿಯಲ್ಲಿರುವಾಗ ಅಂಥವರ ಆರ್ಥಿಕ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಂಡು ಅವರ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿ ನಿವೇಶನಗಳನ್ನು ಮಾಲಿಕತ್ವ ಇರಲಿ ಬಾಡಿಗೆಗೆ ಇರಲಿ ಒದಗಿಸಿಕೊಡುವ ಅತ್ಯಂತ ಮಹತ್ವದ ಕೆಲಸವನ್ನು ಕನಿಷ್ಠತಮ ಪ್ರತಿಫಲದಿಂದ ದಕ್ಷ ರೀತಿಯಲ್ಲಿ ನಿರ್ವಹಿಸುವ ಮಾರ್ಕೆಟಿಂಗ್ ಮಾಧ್ಯಮ ವಿಚಕ್ಷಣ ಇವರು. ಮೀರಾ ಭಾಯಂದರ್ ಪರಿಸರದ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ, ಮೀರಾ ಡಹಣು ಬಂಟ್ಸ್, ಬಂಟರ ಸಂಘ ಮುಂಬಯಿ ಮೀರಾ ಭಾಯಂಧರ್ ಪ್ರಾದೇಶಿಕ ಸಮಿತಿ, ಪಲಿಮಾರು ಮಠ ಬಾಲಾಜಿ ಸನ್ನಿಧಿ, ಶ್ರೀ ಶನೀಶ್ವರ ಸೇವಾ ಸಮಿತಿ ಸೇರಿದಂತೆ ಇನ್ನೂ ಅದೆಷ್ಟೋ ಸಂಘ ಸಂಸ್ಥೆಗಳ ಮೂಲಕ ತನ್ನ ಸಂಘಟನಾ ಚಾತುರ್ಯದ ಪರಿಚಯ ನೀಡಿದ ಶೆಟ್ಟಿ ಅವರು ಓರ್ವ ಕಲೆ, ಸಂಸ್ಕೃತಿ ಪೋಷಕ, ದೈವಭಕ್ತ ಹಾಗೂ ತನ್ನ ಸಾಮರ್ಥ್ಯಕ್ಕನುಗುಣವಾಗಿ ಅದೆಷ್ಟೋ ಸಂಘ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಮಾತ್ರವಲ್ಲದೇ ತನು ಮನ ಧನಗಳಿಂದ ಸಹಕರಿಸಿ ಪೋಷಿಸಿ ಪ್ರೋತ್ಸಾಹಿಸುವ ಹೃದಯವಂತರು. ತುಂಬಾ ಸರಳ ಜೀವನ ನಡೆಸುವ ಶ್ರೀಯುತರು ಸಂಮಾನ, ಪ್ರಶಸ್ತಿ, ಶ್ಲಾಘನೆಗಳಿಂದ ಮಾರು ದೂರ ಉಳಿಯುತ್ತಾರೆ. ಉತ್ತಮರನ್ನು ಗೌರವಿಸುವ ಕುಜನರಿಂದ ದೂರ ಉಳಿಯುವ ವಿಶಿಷ್ಟ ಗುಣದ ಸಂಪತ್ ಸಮಾಜದಲ್ಲಿ ಪ್ರೀತಿ ವಿಶ್ವಾಸ ಗಳಿಸುವ ಮೂಲಕ ಆಕರ್ಷಕ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ.


ಇದೀಗ ಸಂಪತ್ ಶೆಟ್ಟಿ ಅವರು ಮುಂಬರುವ ಮೀರಾ ಭಾಯಂದರ್ ಮಹಾನಗರಪಾಲಿಕೆಯ 19 ನೇಯ ವಾರ್ಡ್ ನಿಂದ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸುತ್ತಿದ್ದು ಇದು ಮೀರಾ ಭಾಯಂದರ್ ಹೆಚ್ಚೇಕೆ ಮುಂಬಯಿ ಕನ್ನಡಿಗರ ಪ್ರತಿಷ್ಠೆಗೆ ದೊರಕಿದ ಫಲವೆ ಸರಿ. ಮೀರಾ ಭಾಯಂದರ್ ವಾರ್ಡ್ ನಂ 19 ರ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರನಾಗಿ ಹೊರಹೊಮ್ಮಲೇ ಬೇಕಾದ ಜೊತೆಗೆ ಸಮಸ್ತ ತುಳು ಕನ್ನಡಿಗರ ಹಿತಾಸಕ್ತಿಗೆ ಸ್ಪಂದಿಸುವ ಸಮರ್ಥ ಸಜ್ಜನ ಬಂಧು ಸಂಪತ್ ಶೆಟ್ಟಿ ಅವರನ್ನು ಬೆಂಬಲಿಸುವುದು ನಮ್ಮೆಲ್ಲಾ ಕರ್ತವ್ಯ ಅಷ್ಟೇ ಅಲ್ಲ ಪ್ರತಿಷ್ಠೆ ಯ ಪ್ರಶ್ನೆಯೂ ಹೌದು.
ಜೈ ಬಂಟ್ಸ್…
ಲೇಖನ : ಅರುಣ್ ಶೆಟ್ಟಿ ಎರ್ಮಾಳ್ ಗೌರವ ಸಂಪಾದಕರು

















































































































