
ಬಂಟ ಸಮಾಜದ ವಿದ್ಯಾವಂತ ಯುವಕರು ಹಣಕಾಸು ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಅದ್ಭುತ ಸಾಧನೆಗೈದ ವಿಚಾರ ನಮಗೆಲ್ಲರಿಗೂ ಗೊತ್ತೇ ಇದೆ. ಇಲ್ಲಿ ನಾವು ಪರಿಚಯಿಸಲು ಬಯಸುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಲು ಪ್ರತಿಷ್ಠಿತ ಬೆಳ್ಳಿಪ್ಪಾಡಿ ಸಂಜಾತ ಬಹುಮುಖ ಪ್ರತಿಭೆಯ ಹತ್ತಾರು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ ಶ್ರೀ ಅಮೋಘ್ ಜೆ ರೈ ಅವರನ್ನು. ಪ್ರಸ್ತುತ ಪ್ರವೀಣ್ ಕ್ಯಾಪಿಟಲ್ ಸರ್ವಿಸಸ್ ಪ್ರೈ.ಲಿ. ಇಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿರುವ ಅಮೋಘ್ ಅವರ ನೊಂದಾಯಿತ ಕಛೇರಿ ಮಂಗಳೂರಿನಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ತೀವ್ರ ಪ್ರಗತಿ ಕಂಡ ಹಣಕಾಸು ಉದ್ಯಮ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಒಟ್ಟು ಇಪ್ಪತ್ತು ಶಾಖೆಗಳನ್ನು ಹೊಂದಿದೆ. ತನ್ನ ವೃತ್ತಿಪರ ಜೀವನ ಹಾಗೂ ಸಂಕ್ಷಿಪ್ತ ಭಾರತ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕ್ಷೇತ್ರದಲ್ಲಿ ಎರಡೂವರೆ ದಶಕ ಕಾಲದ ದೀರ್ಘಾನುಭವ ಹೊಂದಿರುತ್ತಾರೆ. ಮೈಸೂರಿನ ಎಸ್.ಡಿ.ಎಂ.ಐಎಮ್.ಡಿ ಯಿಂದ ಆಡಳಿತ ವ್ಯವಹಾರ ಕುಶಲತೆ ಕುರಿತಂತೆ ಸ್ನಾತಕೋತ್ತರ ಡಿಪ್ಲೊಮಾ ಪಡೆದ ಪ್ರತಿಭಾವಂತ. ಪ್ರವೀಣ್ ಕ್ಯಾಪಿಟಲ್ ಇಂದು ಜೀರಾ ಮತ್ತು ಇತರ ತಂಪು ಪಾನೀಯಗಳಿಗೆ ಪ್ರಸಿದ್ಧಿ ಪಡೆದ ಎಸ್ ಜಿ ಕಾರ್ಪೋರೇಟರ್ ಗಳ ಗ್ರೂಪ್ ನಲ್ಲಿ ಗುರುತಿಸಲ್ಪಡುತ್ತಿದೆ.

ದಿ ಅಸೋಸಿಯೇಟ್ಸ್ ಸಿಟಿಗ್ರೂಪ್, ಎಬಿಎನ್ ಅವ್ರೋ, ಐಎನ್ ಜಿ ವೈಶ್ಯ ಬ್ಯಾಂಕಿಂಗ್, ಎನ್ ಬಿ ಎಫ್ ಸಿ ಉದ್ಯಮದಲ್ಲಿ ದೀರ್ಘ ಕಾಲದ ಅನುಭವ ಹೊಂದಿದ ಅಮೋಘ್ ಇಂದು ಅನೇಕ ಹಣಕಾಸು ಸಂಸ್ಥೆಗಳ ಕ್ಯಾಪಿಟಲ್ ಮ್ಯಾನೇಜ್ ಮೆಂಟ್ ಸಲಹೆಗಾರರಾಗಿ ಗುರುತಿಸಿಕೊಳ್ಳುತ್ತಾರೆ. ಎಸ್ ಜಿ ಕಾರ್ಪೋರೇಟರ್ ಸಮೂಹ ಸಂಸ್ಥೆ ಪುತ್ತೂರು ಮೂಲದ್ದಾಗಿದ್ದು ಪರಿಸರದ ಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿದ್ದು ಈ ಸಮೂಹ ಸಂಸ್ಥೆಯು ಶ್ರೀ ಸತ್ಯಶಂಕರ್ ಮತ್ತು ಶ್ರೀಮತಿ ರಂಜಿತಾ ಶಂಕರ್ ಅವರ ನಿರ್ವಹಣೆಯಲ್ಲಿದೆ. ಶಿಲ್ಪಾ ರೈ ಅವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ ಅಮೋಘ್ ರೈ ಶಿಲ್ಪಾ ರೈ ದಂಪತಿಗೆ ಅರ್ನಾ ಅಮೋಘ್ ರೈ ಎಂಬ ಏಳನೇ ತರಗತಿಯಲ್ಲಿ ಓದುತ್ತಿರುವ ಮಗಳಿದ್ದಾಳೆ. ಅಮೋಘ್ ರೈ ತನ್ನ ಇಚ್ಛಾಶಕ್ತಿ, ಸತತ ಪರಿಶ್ರಮ, ವೃತ್ತಿಪರ ಶಿಕ್ಷಣ ಹಾಗೂ ಅನೇಕ ಪ್ರತಿಷ್ಠಿತ ಕಂಪನಿಗಳಲ್ಲಿ ಹಿರಿಯ ಹುದ್ದೆಯಲ್ಲಿ ದುಡಿದ ದೀರ್ಘ ಕಾಲೀನ ಅನುಭವದ ಪರಿಣಾಮ ತಾನು ದುಡಿಯುತ್ತಿರುವ ಸಂಸ್ಥೆಯಲ್ಲಿ ಯಶಸ್ಸನ್ನು ಸಂಪಾದಿಸಿ ಸಮುದಾಯದ ನವಪೀಳಿಗೆಗೆ ಒಬ್ಬ ಮಾದರಿ ಸಾಧಕರಾಗಿ ಗುರುತಿಸಲ್ಪಟ್ಟಿದ್ದಾರೆ. ಮುಂಬರುವ ವರ್ಷಗಳಲ್ಲಿ ಬೆಳ್ಳಿಪ್ಪಾಡಿ ಅಮೋಘ್ ರೈ ಅವರು ಉದ್ಯಮಿಯಾಗಿ ಗುರುತಿಸಿ ಉದ್ಯಮ ಹೆಚ್ಚಿನ ಪ್ರಗತಿ ಕಂಡು ತನ್ಮೂಲಕ ಸ್ವಸಮುದಾಯದ ಬಂಧುಗಳು ಉದ್ಯೋಗ ಸಂಪಾದಿಸಿ ಉಪಕೃತರಾಗಲಿ ಎಂಬುವುದೇ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಹಾರೈಕೆಗಳು.
ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು





















































































































