
ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ತಾಲೂಕು ಯುವ ವಿಭಾಗದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಬಂಟರ ಸಂಘದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ನೊಚ್ಚ ಅವರ ಅಧ್ಯಕ್ಷತೆಯಲ್ಲಿ ಗುರುವಾಯನಕೆರೆಯ ಬಂಟರ ಸಭಾಭವನದಲ್ಲಿ ನಡೆಯಿತು. ಯುವ ವಿಭಾಗದ ನೂತನ ಅಧ್ಯಕ್ಷರಾಗಿ ಅಜೇಯ್ ಶೆಟ್ಟಿ ಭಂಡಾರಿ ಗುಡ್ಡೆ, ಉಪಾಧ್ಯಕ್ಷರಾಗಿ ಕಾರ್ತಿಕ್ ರೈ ಇಡ್ಯಾಲ, ಕಾರ್ಯದರ್ಶಿಯಾಗಿ ನಿಧೀಶ್ ಶೆಟ್ಟಿ ಕೊರೆಲ್ಯ, ಕೋಶಾಧಿಕಾರಿಯಾಗಿ ನಿತಿನ್ ಶೆಟ್ಟಿ ಪಣೇಜಾಲು ಹಾಗೂ ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿ ಬಳೆಂಜ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಬಂಟರ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲ್ಯಾಲ, ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ, ಯುವ ವಿಭಾಗದ ಸಂಚಾಲಕ ವೆಂಕಟ್ರಮಣ ಶೆಟ್ಟಿ ಉಜಿರೆ ಹಾಗೂ ಯುವ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

















































































































