ಬಂಟರ ಸಂಘ ಸಿದ್ಧಕಟ್ಟೆ ವಲಯದ ಆಶ್ರಯದಲ್ಲಿ ಆಟಿದ ಕೂಟ, ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮವು ಸಿದ್ದಕಟ್ಟೆ ಅಶ್ವಿನಿ ವಾಣಿಜ್ಯ ಸಂಕೀರ್ಣದಲ್ಲಿರುವ ಅಕ್ಷಯ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾ| ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಸಿದ್ಧಕಟ್ಟೆ ವಲಯದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪೊಡುಂಬ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಂಟರ ಸಂಘ (ರಿ.) ಬಂಟವಾಳ ತಾಲೂಕು ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದ್ರೆಯ ಖ್ಯಾತ ಮೂಳೆ ತಜ್ಞ ಡಾ. ಸಚಿನ್ ಶೆಟ್ಟಿ, ಮೂಡುಬಿದ್ರೆ ಯುವ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಬೆಳುವಾಯಿ, ಬಂಟ್ವಾಳ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಗೋಕುಲ್ ಭಂಡಾರಿ, ಬಂಟರವಾಹಿನಿ ಪತ್ರಿಕೆಯ ಸಂಪಾದಕ ಪ್ರದೀಪ್ ಕುಮಾರ್ ರೈ, ಬಂಟ್ವಾಳ ತಾಲೂಕು ಮಹಿಳಾ ಬಂಟರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಜ್ಯೋತಿ ಎನ್. ಹೆಗ್ಡೆ, ಬಂಟರ ಸಂಘ ಸಿದ್ಧಕಟ್ಟೆ ವಲಯದ ಗೌರವಾಧ್ಯಕ್ಷ ಶ್ರೀಧರ ಶೆಟ್ಟಿ, ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ಸಂಚಾಲಕ ವಿಜಯಕುಮಾರ್ ಚೌಟ, ಲೋಕೇಶ್ ಶೆಟ್ಟಿ ಮುಚ್ಚೂರು, ರಾಜೇಶ್ ಶೆಟ್ಟಿ ಇವರುಗಳು ಭಾಗವಹಿಸಿದ್ದರು.






ಬೆಳಿಗ್ಗೆ ನಡೆದ ಆಟಿದ ಕೂಟ ಕಾರ್ಯಕ್ರಮವನ್ನು ಶ್ರೀಮತಿ ಸರೋಜಿನಿ ಸಂಜೀವ ಶೆಟ್ಟಿ ಸಿದ್ಧಕಟ್ಟೆ ಪೊಡುಂಬ ಇವರು ಉದ್ಘಾಟಿಸಿದರು. ಮದ್ಯಾಹ್ನ ಆಟಿ ತಿಂಗಳ ವಿಶೇಷ ಖಾದ್ಯಗಳನ್ನೊಳಗೊಂಡ ಸಹ ಭೋಜನ ನಡೆಯಿತು. ಅಡ್ವೋಕೇಟ್ ಸುರೇಶ್ ಶೆಟ್ಟಿ ಸಿದ್ದಕಟ್ಟೆ ಹಾಗೂ ಪಿಡಿಒ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.














































































































