ಕರಾವಳಿ ಕರ್ನಾಟಕದ ಅದರಲ್ಲೂ ಯಕ್ಷಗಾನ ಕಲೆಯನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಕಾಯಕ ನಮ್ಮಿಂದಾಗಲಿ. ಜೊತೆಗೆ ಮುಂಬಯಿಯ ಹವ್ಯಾಸಿ ಕಲಾವಿದರನ್ನೂ ಪ್ರೋತ್ಸಾಹಿಸೋಣ. ತವರೂರ ವೃತ್ತಿಪರ ಕಲಾವಿದರಿಂದ ನಮ್ಮ ಹವ್ಯಾಸಿ ಕಲಾವಿದರಿಗೂ ತಿಳಿಯಲು ತುಂಬಾ ಸಿಗುತ್ತದೆ. ಆ ಮೂಲಕ ಯಕ್ಷಗಾನದ ಬೆಳೆವಣಿಗೆಗೆ ವಿಪುಲ ಅವಕಾಶ ನೀಡುವಂತಾಗುತ್ತದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಕಲಾಪ್ರಕಾಶ ಪ್ರತಿಷ್ಠಾನದ ಸಂಯೋಜನೆಯಲ್ಲಿ ತವರೂರ ಕಲಾವಿದರ ಮುಂಬಯಿ ಪ್ರವಾಸದ ಎರಡನೇ ದಿನ ಬಂಟ್ಸ್ ಸೆಂಟರ್ ನಲ್ಲಿ ನಡೆದ ‘ಭಕ್ತ ಮಯೂರಧ್ವಜ’ ತಾಳಮದ್ದಳೆ ಕಾರ್ಯಕ್ರಮದ ಸಂದರ್ಭದಲ್ಲಿ ನುಡಿದರು. ಅತಿಥಿ ಗಣ್ಯರನ್ನು ಪ್ರಕಾಶ್ ಎಂ ಶೆಟ್ಟಿ ಸುರತ್ಕಲ್ ಹೂಗುಚ್ಛ ನೀಡಿ ಗೌರವಿಸಿದರು.




ಆಗಸ್ಟ್ 16 ರಂದು ನವಿಮುಂಬಯಿ ಜೂಯಿನಗರದ ಬಂಟ್ಸ್ ಸೆಂಟರ್ ನಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ವತಿಯಿಂದ ನಡೆದ ‘ಭಕ್ತ ಮಯೂರಧ್ವಜ’ ತಾಳಮದ್ದಳೆ ಕಾರ್ಯಕ್ರಮದ ಸಂದರ್ಭದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಶೇಖರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಅಡ್ವೋಕೇಟ್ ಪ್ರಕಾಶ್ ಎಲ್ ಶೆಟ್ಟಿ ಕಡಂದಲೆ ಪರಾರಿ, ಅಡ್ವೊಕೇಟ್ ರತ್ನಾಕರ್ ಶೆಟ್ಟಿ, ಶ್ಯಾಮ್ ಎನ್ ಶೆಟ್ಟಿ, ಥಾಣೆ ಕಲ್ಯಾಣ್ ವಲಯ ಉಸ್ತುವಾರಿ ಶಂಕರ್ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಾರದಾ ಎಸ್ ಶೆಟ್ಟಿ, ಹಿರಿಯ ತಾಳಮದ್ದಳೆ ಅರ್ಥಧಾರಿಗಳಾದ ಯಕ್ಷಮಿತ್ರ ಕೆ.ಕೆ ಶೆಟ್ಟಿ ಇವರುಗಳು ಉಪಸ್ಥಿತರಿದ್ದು, ಶುಭ ಹಾರೈಸಿದರು. ಕಾರ್ಯಕ್ರಮವನ್ನು ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿಯವರು ನಿರೂಪಿಸಿ, ವಂದಿಸಿದರು. ನಂತರ ತವರೂರ ಕಲಾವಿದರಿಂದ ಭಕ್ತ ಮಯೂರಧ್ವಜ ಆಖ್ಯಾನ ತಾಳಮದ್ದಳೆ ರೂಪದಲ್ಲಿ ಸಾದರಗೊಂಡಿತು.














































































































