ಪುತ್ತೂರು ತಾಲೂಕು ಯುವ ಬಂಟರ ವಿಭಾಗದ ನೂತನ ಅಧ್ಯಕ್ಷರನ್ನಾಗಿ ಶ್ರೀ ಭಾಗ್ಯೇಶ್ ರೈ ಮತ್ತು 2025-26 ಕ್ರಿಕೆಟ್ ಟೂರ್ನಮೆಂಟ್ ಸಂಚಾಲಕರನ್ನಾಗಿ ಶ್ರೀ ಕಾರ್ತಿಕ್ ರೈ ಬೆಳಿಯೂರು ಕಟ್ಟೆ ಅವರನ್ನು ತಾಲೂಕು ಬಂಟರ ಸಂಘದ ಶಿಫಾರಸ್ಸಿನಂತೆ ಅಧ್ಯಕ್ಷರಾದ ಶ್ರೀ ಕಾವು ಹೇಮನಾಥ ಶೆಟ್ಟಿಯವರು ನೇಮಕ ಮಾಡಿರುತ್ತಾರೆ. ಕಳೆದ ಎರಡು ವರುಷಗಳಿಂದ ಯುವ ಬಂಟರ ಸಂಘವನ್ನು ಗ್ರಾಮ ಮಟ್ಟದಲ್ಲಿ ಕಟ್ಟಿ ಬೆಳೆಸಿ,ಯುವ ಸಮುದಾಯಕ್ಕೆ ಪ್ರೇರಣಾ ಶಕ್ತಿಯು ಅದೇ ರೀತಿ ಸಂಘದ ಬೆಳವಣಿಗೆ ಅದ್ಭುತ ಕೂಡುಗೆ ನೀಡಿದ ಯುವ ಉದ್ಯಮಿ ಶ್ರೀ ಹರ್ಷ ಕುಮಾರ್ ರೈ ಮಾಡವು ಇವರಿಂದ ತೆರವಾದ ಯುವ ಬಂಟರ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ಅವಧಿಗೆ ವಿದ್ಯಾಮಾತಾ ಅಕಾಡಮಿಯ ಮೂಲಕ ಯುವ ಜನರನ್ನು ಉದ್ಯೋಗಿಗಳನ್ನಾಗಿ ಮಾಡುವ 50 ವರ್ಷ ಹಳೆಯ ಜೆಸಿಐಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವಿ ಯುವ ನಾಯಕ ಭಾಗ್ಯೇಶ್ ರೈಯವರನ್ನು ನೇಮಕಗೊಳಿಸಲಾಗಿದೆ.

ಅನೇಕ ವರುಷಗಳಿಂದ ನಡೆಯುವ ಪ್ರತಿಷ್ಠಿತ ಯುವ ಬಂಟರ ವಿಭಾಗದ ಕ್ರಿಕೆಟ್ ಪಂದ್ಯಾಟದ 2025-26 ಸಾಲಿನ ಸಂಚಾಲಕರನ್ನಾಗಿ ಉತ್ತಮ ಕ್ರಿಕೆಟ್ ಆಟಗಾರರು, ಯುವ ಉದ್ಯಮಿ, ಟಾಟಾ ಪವರ್ ಸೋಲಾರ್ ರೂಫ್ ಡೀಲರ್ ಲಿಶಿ ಪವರ್ ಸೊಲ್ಯೂಷನ್ ಮಾಲಕ ಶ್ರೀ ಕಾರ್ತಿಕ್ ರೈ ಬೆಳಿಯೂರು ಕಟ್ಟೆ ಇವರನ್ನು ನೇಮಕಗೊಳಿಸಲಾಗಿದೆ ಎಂದು ಬಂಟರ ಸಂಘದ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















































































































