ಬ್ರಹ್ಮಾವರ: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಜಿ ಎಮ್ ಗ್ಲೋಬಲ್ ಸ್ಕೂಲ್, ಬ್ರಹ್ಮಾವರ ಮತ್ತು ಚೇರ್ಕಾಡಿ ಅಥ್ಲೆಟಿಕ್ಸ್ ಫಿಟ್ನೆಸ್ ಸೆಂಟರ್ ನ ಸಹಯೋಗದಲ್ಲಿ ಅಂತರ್ ಜಿಲ್ಲಾ ಮಕ್ಕಳ ಅಥ್ಲೆಟಿಕ್ಸ್ ಡಿಸೆಂಬರ್ 28, 2025 ರಂದು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀ ಚಂದ್ರಶೇಖರ ಶೆಟ್ಟಿ ಆಗಮಿಸಿ ದೀಪ ಬೆಳಗಿಸಿ ದೈಹಿಕ ಚಟುವಟಿಕೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಶರೀರದ ದೃಢತೆಯನ್ನು ಕಾಪಾಡಿಕೊಳ್ಳಬಹುದು. ಒಬ್ಬ ಸಮರ್ಥ ಕ್ರೀಡಾಪಟುವಿನಲ್ಲಿ ಕೌಶಲ, ತಂತ್ರ ಮತ್ತು ಯುಕ್ತಿ ಎಂಬ ಮೂರು ಅಂಶಗಳಿರುತ್ತವೆ. ನಮ್ಮ ಶರೀರದಲ್ಲಿರುವ ಔಷದೀಯ ಕಾರ್ಖಾನೆಗಳನ್ನು ಉತ್ಪಾದಕ ಘಟಕಗಳನ್ನಾಗಿ ಪರಿವರ್ತಿಸಲು ಕ್ರೀಡಾ ಚಟುವಟಿಕೆ ಅತ್ಯಗತ್ಯ ಎಂದು ತಿಳಿಸಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು, ತರಬೇತುದಾರರು ಮತ್ತು ಪೆÇೀಷಕರ ಸಹಭಾಗಿತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಉಡುಪಿ, ಮಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ 25ಕ್ಕೂ ಅಧಿಕ ವಿವಿಧ ಜಿಲ್ಲೆಗಳ ಕ್ರೀಡಾ ಕೇಂದ್ರಗಳಿಂದ 8 ರಿಂದ 14 ರವರೆಗಿನ ವಯೋಮಾನದ ಸುಮಾರು 700ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿರುತ್ತಾರೆ. ಕ್ರೀಡಾಕೂಟದ ಆಯೋಜಕರಾದ ಚೇರ್ಕಾಡಿ ಅಥ್ಲೆಟಿಕ್ಸ್ ಫಿಟ್ನೆಸ್ ಸೆಂಟರ್ನ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್, ಜಿ ಎಮ್ ಗ್ಲೋಬಲ್ ಸ್ಕೂಲ್ನ ಆಡಳಿತ ನಿರ್ದೇಶಕರಾದ ಪ್ರಣವ್ ಶೆಟ್ಟಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

















































































































