Author: admin
ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ ಶಿವಗಿರಿಯ ಹೆಸರಿನಲ್ಲಿ, ಮತ್ತವರ ತತ್ವದಂತೆ ಬದುಕಿ ಬಾಳಿದ ಜಯ ಸುವರ್ಣರ ನೆನಪಿನಲ್ಲಿ ನೀಡಿದ ಈ ಸನ್ಮಾನ ನನ್ನ ಬದುಕಿನಲ್ಲಿ ಅಮೂಲ್ಯವಾಗಿದೆ. ಕರ್ನಾಟಕ ಸರಕಾರ, ನಾನು ಹುಟ್ಟಿರುವ ಸಮಾಜ ಹಾಗೂ ನೂರಾರು ಸನ್ಮಾನಗಳನ್ನು ಸ್ವೀಕರಿಸಿಕೊಂಡಿದ್ದೇನೆ. ಆದರೆ ಬಿಲ್ಲವ ಸಮಾಜ ನೀಡಿರುವ ಈ ಸನ್ಮಾನಕ್ಕೆ ನಾನು ಋಣಿಯಾಗಿದ್ದೇನೆ. ಬಿಲ್ಲವ ಸಮಾಜ ಇಂದು ಈ ಮಟ್ಟದಲ್ಲಿ ಬಲಿಷ್ಠವಾಗಲು ಕಾರಣ ಜಯ ಸುವರ್ಣರು ಮತ್ತು ಜನಾರ್ಧನ ಪೂಜಾರಿ ಅವರು ಕಾರಣರಾಗಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು. ಅವರು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಸೆಪ್ಟೆಂಬರ್ 7 ರಂದು ಆದಿತ್ಯವಾರ ಜಯಲೀಲಾ ಬ್ಯಾಂಕ್ವೆಟ್ ಹಾಲ್ ಜಯ ಸಿ ಸುವರ್ಣ ಮಾರ್ಗ ಗೋರೆಗಾಂವ್ ಪೂರ್ವ ಇಲ್ಲಿ 171 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯಲ್ಲಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ…
ಬಾಂಬೆ ಬಂಟ್ಸ್ ಅಸೋಸಿಯೇಷನ್ : ಸಾಂಸ್ಕೃತಿಕ ಸಮಿತಿಯಿಂದ ಕಲಾಪ್ರಕಾಶ ಪ್ರತಿಷ್ಠಾನದ ಸರಣಿ ತಾಳಮದ್ದಳೆ ಕಾರ್ಯಕ್ರಮ ಉದ್ಘಾಟನೆ
ಮುಂಬಯಿಯ ಪ್ರತಿಷ್ಟಿತ ಸಂಸ್ಥೆಗಳಲ್ಲೊಂದಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಮುಂಬಯಿಯ ಕಲಾ ರಸಿಕರಿಗೆ ಹಾಗೂ ಯುವ ಪೀಳಿಗೆಗೆ ಧರ್ಮ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವರ್ಷಂಪ್ರತಿ ಹಲವು ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ಬಯಲಾಟಗಳನ್ನು ನಡೆಸುತ್ತಾ ಬಂದಿದೆ. ಅದೇ ರೀತಿ, ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಮುಂದಾಳತ್ವದಲ್ಲಿ, ಪ್ರಕಾಶ ಶೆಟ್ಟಿ ಇವರ ಕಲಾಪ್ರಕಾಶ ಪ್ರತಿಷ್ಠಾನ (ರಿ) ಮುಂಬಯಿ ಇದರ ಸಂಯೋಜನೆಯಲ್ಲಿ, ಸೆಪ್ಟೆಂಬರ್ 06 ರಂದು ‘ಭೃಗು ಶಾಪ’ ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಎಲ್ಲಾ ಪಧಾದಿಕಾರಿಗಳ ಮತ್ತು ಮಾಜಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಾಂಬೆ ಬಂಟ್ಸ್ ಅಸೋಸಿಯೇಷನ್ ನಿರಂತರವಾಗಿ ಮೊದಲಿನಿಂದಲೂ ತಾಳಮದ್ದಲೆ, ಯಕ್ಷಗಾನದಂತಹ ಕಾರ್ಯಕ್ರಮಗಳಿಗೆ ಆಧ್ಯತೆ ನೀಡುತ್ತಾ ಬಂದಿದೆ. ಮುಂದೆಯೂ ಇದೇ ರೀತಿಯಲ್ಲಿ ನಡೆಸುತ್ತಾ ಬರುತ್ತದೆ. ಆದರೆ, ಇದಕ್ಕೆ ಸದಸ್ಯರ ಮತ್ತು ಅಭಿಮಾನಿಗಳ ಪ್ರೋತ್ಸಾಹ, ಸಹಕಾರ ಅಗತ್ಯ ಎಂದು ಹೇಳಿದರು.…
ಬ್ರಹ್ಮ ಜಗತ್ತನ್ನು ಸೃಷ್ಟಿಸುತ್ತಾನೆ. ನಂತರ ಗುರುವೆಂಬ ಪರಬ್ರಹ್ಮ ಮಕ್ಕಳ ಬದುಕಿಗೆ ದೀವಿಗೆಯಾಗುತ್ತಾನೆ ಎಂದು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ| ಮಾಧವಿ ಎಸ್. ಭಂಡಾರಿ ಶನಿವಾರ ನುಡಿದರು. ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ಬದುಕಿನಲ್ಲಿ ಹೆತ್ತ ತಾಯಿ ಮೊದಲ ಗುರು. ಸತ್ಯ, ಧರ್ಮ, ನ್ಯಾಯ ನೀತಿಯ ಬಗ್ಗೆ ಮನೆಯಲ್ಲಿ ಮಕ್ಕಳಿಗೆ ತಿಳಿಸಿ ಕೊಡುವವಳು ತಾಯಿ. ತದನಂತರ ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿರುತ್ತದೆ. ಗುರುವು ತ್ರಿಮೂರ್ತಿಗಳ ಸ್ವರೂಪ ಎಂದು ವಿವರಿಸಿದರು. ಇನ್ನು ಶಿಕ್ಷಕರು ಕೂಡಾ ಮಕ್ಕಳ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು. ಮಕ್ಕಳಿಗೆ ಜೀವನದ ಮೌಲ್ಯ ಕಲಿಸಿಕೊಡಬೇಕು ಎಂದು ಕಿವಿಮಾತು ನುಡಿದರು. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, ‘ಶಿಕ್ಷಕರನ್ನು ಶಿಲ್ಪಿಗಳೆಂದು ಕರೆಯುತ್ತಾರೆ. ಸಮಾಜವನ್ನು ತಿದ್ದುವವರು ಶಿಕ್ಷಕರು. ತಾವು ಕಲಿಸಿದ ವಿದಾರ್ಥಿಗಳು ಉನ್ನತ ಸ್ಥಾನಕ್ಕೆ ಹೋದಾಗ ಹೆತ್ತವರಿಗಿಂತ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಕಡಬ ಘಟಕ : ಅಧ್ಯಕ್ಷರಾಗಿ ದಯಾನಂದ ರೈ ಮನವಳಿಕೆ ಗುತ್ತು, ಪ್ರಧಾನ ಸಂಚಾಲಕರಾಗಿ ಡಾ| ಹೇಮಂತ್ ರೈ ಮನವಳಿಕೆ ಗುತ್ತು
ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಕಡಬ ತಾಲೂಕು ಘಟಕ ರಚನೆಯಾಗಿದ್ದು, ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಪಡ್ಡಿಲ್ಲಾಯ, ಅಧ್ಯಕ್ಷರಾಗಿ ದಯಾನಂದ ರೈ ಮನವಳಿಕೆ ಗುತ್ತು, ಪ್ರಧಾನ ಸಂಚಾಲಕರಾಗಿ ಡಾ| ಹೇಮಂತ್ ರೈ ಮನವಳಿಕೆ ಗುತ್ತು ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 5 ರಂದು ಅಲಂಕಾರಿನ ದುರ್ಗಾಂಬ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಪಟ್ಲ ಫೌಂಡೇಶನ್ ನ ಅಭಿಮಾನಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಎಸ್‌ವಿ ಪ್ರಸಾದ್ ಕಣಿಪುರ, ಜೊತೆ ಕಾರ್ಯದರ್ಶಿಯಾಗಿ ಜನಾರ್ದನ ಗೌಡ ಕಯ್ಯಪೆ, ಕೋಶಾಧಿಕಾರಿಯಾಗಿ ಶ್ರೀಮತಿ ಮಮತಾ ಅಂಬರಾಜೆ, ಉಪಾಧ್ಯಕ್ಷರಾಗಿ ವಿಟ್ಟಲ್ ರೈ ಕೊಣಾಲು ಗುತ್ತು, ಶ್ರೀಮತಿ ಬೇಬಿ ಪಾಟಾಲಿ, ಗೌರವ ಸಲಹೆಗಾರರಾಗಿ ಸುಬ್ರಹ್ಮಣ್ಯ ರಾವ್ ನಗ್ರಿ, ರಮೇಶ್ ಭಟ್ ಉಪ್ಪಂಗಳ, ಈಶ್ವರ ಗೌಡ ಪಜ್ಜಡ್ಕ, ರಾಧಾಕೃಷ್ಣ ರೈ ಪರಾರಿ ಗುತ್ತು, ಗೋಪಾಲ ಕಡಬ, ಮುತ್ತಪ್ಪ ಪೂಜಾರಿ ನೆಯ್ಯಲ್ಗ ಆಯ್ಕೆಯಾಗಿದ್ದಾರೆ. ಕಡಬ ತಾಲೂಕು ಘಟಕದ ಪದಗ್ರಹಣ ಸಮಾರಂಭವು ನವರಾತ್ರಿಯ ಸುಸಂದರ್ಭದಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಿಯ ದಿವ್ಯ ಸನ್ನಿಧಿಯಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ಹಾಗೂ ಕೇಂದ್ರ…
ಬಂಟರ ಸಂಘ ಬಂಟ್ವಾಳ ತಾಲೂಕು ಇದರ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಜಾತ ಪಿ.ರೈ ಕಲ್ಲಡ್ಕ ಅವರು ಗೆಲುವು ಸಾಧಿಸಿದ್ದಾರೆ. ಬಂಟ್ವಾಳ ಮಹಿಳಾ ಬಂಟರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸುಜಾತ ಪಿ ರೈ ಕಲ್ಲಡ್ಕ ಹಾಗೂ ಸಂಧ್ಯಾ ರೈ ಬೆಳ್ಳೂರು ಅವರ ನಡುವೆ ಪ್ರಬಲ ಪೈಪೋಟಿ ನಡೆದಿದ್ದು, ಕೊನೆಗೆ ಚುನಾವಣೆಯ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ಸುಜಾತ ಪಿ ರೈ ಕಲ್ಲಡ್ಕ ಅವರು ಅಭೂತಪೂರ್ವ ಗೆಲುವು ಸಾಧಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಇವರು ಸಮಿತಿಯ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಉಳಿದಂತೆ ಉಪಾಧ್ಯಕ್ಷರಾಗಿ ಜ್ಯೋತಿ ಎನ್ ಹೆಗ್ಡೆ ಮಾಣಿ, ಕಾರ್ಯದರ್ಶಿಯಾಗಿ ಮಂದಾರತಿ ಎಸ್ ಶೆಟ್ಟಿ ಸಿದ್ದಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ರೂಪ ಎಲ್ ಶೆಟ್ಟಿ ಅರಳ, ಜೊತೆ ಕಾರ್ಯದರ್ಶಿಯಾಗಿ ಸುಜಾತ ಭಂಡಾರಿ ಮುಡಿಪು ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಂಟರ ಸಂಘ ಬಂಟ್ವಾಳ ತಾಲೂಕು ಯುವ ವಿಭಾಗದ 2025 -28 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು. ನೂತನ ಯುವ ವಿಭಾಗದ ಅಧ್ಯಕ್ಷರಾಗಿ ಗೋಕುಲ್ ಭಂಡಾರಿ ಸಜೀಪ, ಉಪಾಧ್ಯಕ್ಷರಾಗಿ ರಂಜಿತ್ ಶೆಟ್ಟಿ ಗುಭ್ಯ, ಕಾರ್ಯದರ್ಶಿಯಾಗಿ ಸುನಾದ್ ರಾಜ್ ಶೆಟ್ಟಿ ಬೊಂಡಾಲ, ಕೋಶಾಧಿಕಾರಿಯಾಗಿ ರತನ್ ರೈ ಸರಪಾಡಿ, ಜೊತೆ ಕಾರ್ಯದರ್ಶಿಯಾಗಿ ಕುಮಾರಿ ಸುವೀಕ್ಷ ಭಂಡಾರಿ ಮುಡಿಪು ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಯುವ ವಿಭಾಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಬಂಟರ ಸಂಘ ಬಂಟ್ವಾಳ ತಾಲೂಕಿನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ಕ್ರಿಯೇಟಿವ್ ಗುರುದೇವೋಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನ ಜ್ಯೋತಿಯನ್ನು ಬೆಳಗಿ, ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು. ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ತರವಾಗಿದೆ. ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ಸಂಸ್ಕಾರ, ಶಿಸ್ತು ಹಾಗೂ ಮಾನವೀಯತೆ ಬೆಳೆಸುವುದು ಶಿಕ್ಷಕರ ಮಹತ್ತರ ಜವಾಬ್ದಾರಿ ಎಂದು ನುಡಿದರು. ಗುರುವಂದನೆಯನ್ನು ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಲಾಯಿ ಬಾಕ್ಯಾರು, ತೆಳ್ಳಾರುವಿನ ಶಿಕ್ಷಕ ಕೆ. ಯೋಗೀಶ್ ಕಿಣಿ ಯವರು ಮಾತನಾಡಿ ಇಂದಿನ ಪೀಳಿಗೆಗೆ ಶಿಕ್ಷಕರು ಕೇವಲ ಪಾಠ ಬೋಧಕರು ಮಾತ್ರವಲ್ಲ, ಬಾಳಿನ ದಾರಿ ತೋರಿಸುವ ದೀಪಸ್ತಂಭರೂ ಆಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅನನ್ಯಎಂದು ಹೇಳಿದರು. ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ) ಕಾರ್ಕಳ ಇಲ್ಲಿನ ಅಧ್ಯಕ್ಷರಾದ ಅವಿನಾಶ್ ಜಿ. ಶೆಟ್ಟಿಯವರು ಶಿಕ್ಷಕರ ಸೇವೆ ಶಾಶ್ವತ. ಅವರು…
ಕಾರ್ಕಳ : ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕಾರ್ಕಳದ ಕ್ರೆöಸ್ಟ್ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಗಣಿತನಗರ : ಇಂದಿನ ಬದುಕು ಒತ್ತಡದಲ್ಲಿರಲು ಕಾರಣ ಮನುಷ್ಯನಿಗೆ ತೃಪ್ತಿ ಇಲ್ಲದಿರುವುದೇ ಆಗಿದೆ. ನೆಮ್ಮದಿಯನ್ನು ಕಳಕೊಂಡ ಮನುಜ ತಾಳ್ಮೆ, ಸಹನೆಯ ಮನೋಭಾವವನ್ನು ಇಟ್ಟುಕೊಳ್ಳುವುದು ಮುಖ್ಯ. ವಿದ್ಯಾರ್ಥಿ ಜೀವನದಲ್ಲಿಯೇ ಸಾವಧಾನದ ಮನಸ್ಥಿತಿಯನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಗೌರವದ ಉಪಸ್ಥಿತಿಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯ ಎಂದು ಪಳ್ಳಿ ಸ.ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀ ವಸಂತ ಆಚಾರ್ ನುಡಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. ಜ್ಞಾನಸುಧಾ ಒತ್ತಡರಹಿತವಾಗಿ ವಿದ್ಯಾರ್ಥಿಗಳ ಏಳಿಗೆಗೆ ತನ್ನ ಯೋಜನಾ ಬದ್ಧವಾದ ಶೈಕ್ಷಣಿಕ ಚಟುವಟಿಕೆಯನ್ನು ರೂಪಿಸಿಕೊಂಡು, ಮೌಲಿಕವಾದ ವಿಚಾರಧಾರೆಯನ್ನು ಪಸರಿಸುವ ಸಾಮಾಜಿಕ ಕಾರ್ಯಕ್ರಮಗಳ ಮುಖೇನ ಶೈಕ್ಷಣಿಕ ಕ್ಷೇತ್ರದಲ್ಲಿ ನಾಡಿನಲ್ಲಿ ಮಾದರಿಯಾಗಿ ನಿಂತಿದೆ ಎಂದರು. ನಿವೃತ್ತರಾದ ಬೋಳಾದ ಶ್ರೀ ರಾಮಕೃಷ್ಣ ಅನುದಾನಿಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು, ಬೆಳ್ಮಣ್ಣುವಿನ ಸ.ಪ್ರೌ.ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲಾ ಎನ್, ಎರ್ಲಪ್ಪಾಡಿಯ ಶ್ರೀ…
ಆಳ್ವಾಸ್ ಸಹಕಾರ ಸಂಘವು 2024-25 ನೇ ಸಾಲಿನಲ್ಲಿ 3.55 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ 17 ಲಾಭಾಂಶ (ಡಿವಿಡೆಂಟ್) ಘೋಷಿಸಿದೆ. ಆಳ್ವಾಸ್ ಕೃಷಿಸಿರಿ ಆವರಣದಲ್ಲಿನ ಮುಂಡ್ರುದೆಗುತ್ತು ಕೆ ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಶನಿವಾರ ನಡೆದ ಸಂಘದ 2024-25 ನೇ ಸಾಲಿನ 9ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಕಟಿಸಲಾಯಿತು. ವಾರ್ಷಿಕ ವರದಿ ವಾಚಿಸಿದ ಸಂಘದ ಕಾರ್ಯ ನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ, ಸಂಘವು ಈ ಸಾಲಿನಲ್ಲಿ 170 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಕಳೆದ ವಿತ್ತೀಯ ವರ್ಷಕ್ಕಿಂತ ಈ ವರ್ಷ 19 ಲಕ್ಷದಷ್ಟು ಹೆಚ್ಚಿನ ಲಾಭ ಗಳಿಸಿದೆ. ಶೇ 99.62 ಸಾಲ ವಸೂಲಾತಿ ಮಾಡಿದೆ. 2016ರ ಜುಲೈ 10 ರಂದು ಸಂಘ ಆರಂಭಗೊಂಡಿದ್ದು, ಪ್ರಸ್ತುತ 5543 ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು. ಆಳ್ವಾಸ್ ಸಹಕಾರಿ ಸಂಘದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮಾತನಾಡಿ, ನಮ್ಮ ಆಳ್ವಾಸ್ ಸಹಕಾರಿ ಸಂಘ ಮುಂದಿನ ವರ್ಷ ತನ್ನ ದಶಮಾನೋತ್ಸವದ ಹಿರಿಮೆಯ ಮೈಲಿಗಲ್ಲನ್ನು ತಲುಪಲಿದೆ.…














