ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಮಕ್ಕಳಿಗೆ, ಸಮಾಜದಲ್ಲಿ ವ್ಯಾಪಾರ ಮತ್ತು ವಹಿವಾಟುವಿನ ಅನುಭವವನ್ನು ನೀಡುವ ಉದ್ದೇಶದಿಂದ ಚಿಣ್ಣರ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿಯವರು ದೀಪ ಬೆಳಗಿ ಚಿಣ್ಣರ ಸಂತೆಯನ್ನು ಉದ್ಘಾಟಿಸಿ ಮಾತನಾಡಿ ಇಂದು ವ್ಯವಹಾರದಲ್ಲಿ ಮೋಸ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಕ್ಕಳಿಗೆ ಕೊಡು- ಕೊಳ್ಳುವುದರ ಪರಿಜ್ಞಾನವಿರಬೇಕು. ಆ ನಿಟ್ಟಿನಲ್ಲಿ ಮಕ್ಕಳು ಎಳೆಯ ವಯಸ್ಸಿನಲ್ಲೆ ವ್ಯಾವಹಾರಿಕ ಜ್ಞಾನವನ್ನು ಮೈಗೂಡಿಸಿಕೊಳ್ಳುವಂತೆ ಪೆÇೀಷಕರು ಮುತುವರ್ಜಿ ವಹಿಸಬೇಕೆಂದರು.

ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ರವರು ಮಾತನಾಡಿ ಹಣವು ದಿನನಿತ್ಯದ ಜೀವನಕ್ಕೆ ಅಗತ್ಯ, ಮಕ್ಕಳಿಗೆ ಹಣ ಸಂಪಾದನೆಯ ಜೊತೆಗೆ ಅದನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸುವ ಅರಿವಿರಬೇಕು ಅದೇ ರೀತಿ ವ್ಯವಹಾರಕ್ಕೆ ಕೌಶಲ್ಯತೆ ಮತ್ತು ಉತ್ತಮ ಸೇವೆ ಅತ್ಯಗತ್ಯ. ಗ್ರಾಹಕರು ಸಂತೃಪ್ತಿಯಿಂದ ವ್ಯಾಪಾರ ಮಾಡಿದಾಗ ವ್ಯವಹಾರದಲ್ಲಿ ಯಶಸ್ಸನ್ನು ಕಾಣಬಹುದೆಂದು ತಿಳಿಸಿದರು. ಶಾಲೆಯ ಪ್ರಿ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಸ್ತುಗಳ ಪ್ರದರ್ಶನ ಮಾಡಿದರು ಮತ್ತು ತಮ್ಮ ಪೆÇೀಷಕರ ಜೊತೆ ಹಣವನ್ನು ನೀಡಿ ವಸ್ತುಗಳನ್ನು ಖರೀದಿಸಿ ಸಂತೆಯ ಪ್ರಾತ್ಯಕ್ಷಿಕ ಅನುಭವ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪೆÇೀಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

















































































































