ರೋಟರಿ ಕ್ಲಬ್ ಕಾರ್ಕಳ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾರ್ಕಳದ ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಮಕ್ಕಳ ತಜ್ಞೆ ಆಶಾ ಪಿ. ಹೆಗ್ಡೆ ಮಾತನಾಡಿ, ಪೋಲಿಯೋ ಕಾಯಿಲೆಯನ್ನು ನಿರ್ಮೂಲನೆ ಮಾಡುವಲ್ಲಿ ರೋಟರಿಯು ಮಹತ್ತರ ಪಾತ್ರ ವಹಿಸಿದೆ. ಆರೋಗ್ಯ ಇಲಾಖೆಯ ಪರಿಶ್ರಮ ಪ್ರಶಂಸನೀಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂದೀಪ್ ಕುಡ್ವ ಪೋಲಿಯೋ ಲಸಿಕೆ ಅಭಿಯಾನದ ಇತಿಹಾಸವನ್ನು ವಿವರಿಸುತ್ತಾ ಇನ್ನೂ ಕೆಲವು ದೇಶಗಳಲ್ಲಿ ಪೋಲಿಯೋ ಸಕ್ರಿಯವಾಗಿರುವುದರಿಂದ ನಾವು ಇನ್ನೂ ಜಾಗೃತರಾಗಿ ಇರಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಶಶಿಕಲಾ ಆಡಳಿತ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಡಾ. ಸೌಜನ್ಯ ಮಕ್ಕಳ ತಜ್ಞರು, ಡಾ. ಉದಯ ಕುಮಾರ್ ಶಸ್ತ್ರಚಿಕಿತ್ಸಾ ತಜ್ಞರು, ಆಯುಷ್ ವೈದ್ಯಾಧಿಕಾರಿಗಳಾದ ಡಾ. ಸುಜಾತ ಮತ್ತು ಡಾ. ರೇಷ್ಮಾ ಪೈ, ಹಿರಿಯ ಪ್ರಾಥಮಿಕ ಆರೋಗ್ಯ ಅಧಿಕಾರಿ ವೇರೋನಿಕ, ಫಾರ್ಮಾಸಿಸ್ಟ್ ಜಯಲಕ್ಷ್ಮಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸ್ಮಿತಾ, ನರ್ಸಿಂಗ್ ವಿದ್ಯಾರ್ಥಿಗಳು, ರೋಟರಿ ಕ್ಲಬ್ಬಿನ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸದಸ್ಯರಾದ ಶೇಖರ್ ಹೆಚ್, ವಸಂತ್ ಎಂ, ಸೌಜನ್ಯ ಉಪಾಧ್ಯಾಯ, ಪಬ್ಲಿಕ್ ಇಮೇಜ್ ಡಿಸ್ಟ್ರಿಕ್ಟ್ ಚೇರ್ ಮ್ಯಾನ್ ರೇಖಾ ಉಪಾಧ್ಯಾಯ ಉಪಸ್ಥಿತರಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಾ ಸ್ವಾಗತಿಸಿ ನಿರೂಪಿಸಿದರು. ವಸಂತ ಶೆಟ್ಟಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಂದಿಸಿದರು.

















































































































