ದೇವಸ್ಥಾನ, ದೈವಸ್ಥಾನಗಳಿಗೆ ಸಂಬಂಧಿಸಿ ಆಯಾ ಸ್ಥಳಕ್ಕೆ ಅನುಗುಣವಾಗಿ ನಿಯಮ, ಕ್ರಮಗಳು, ನಂಬಿಕೆಗಳು ಬದಲಾಗುತ್ತವೆ. ಧಾರ್ಮಿಕ ನಂಬಿಕೆಗಳನ್ನು ಪ್ರಶ್ನೆ ಮಾಡದೆ ಜನರ ವಿವೇಚನೆಗೆ ಬಿಡಬೇಕು ಎಂದು ಶ್ರೀ ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಗುರುಪುರ ದೋಣಿಂಜೆ ಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ವಿಶ್ವ ಹಿಂದು ಪರಿಷತ್ತು, ಹಿಂದು ಯುವಸೇನೆ, ತುಳುನಾಡ ರಕ್ಷಣಾ ವೇದಿಕೆ ಸಹಯೋಗದಲ್ಲಿ ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ‘ಧರ್ಮಾವಲೋಕನ ಸಭೆ, ಧರ್ಮಾಚರಣೆ – ಒಂದು ಅವಲೋಕನ’ ಮೊದಲ ಗೋಷ್ಠಿಯಲ್ಲಿ ‘ದೇವಸ್ಥಾನಗಳು ಮತ್ತು ಧರ್ಮಾಚರಣೆ’ ವಿಷಯದ ಬಗ್ಗೆ ಅವರು ಮಾತನಾಡಿದರು.

ದೇವಸ್ಥಾನಕ್ಕೆ ಆಗಮಿಸದವರು ಧರ್ಮಾ ಚರಣೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ದೈವಸ್ಥಾನ, ನೇಮಗಳಿಗೆ ಬರದವರು ದೈವಾರಾಧನೆಯನ್ನು ವಿಮರ್ಶಿಸುತ್ತಾರೆ. ಒಂದು ಸ್ಥಳ, ಒಬ್ಬ ವ್ಯಕ್ತಿಯ ನಂಬಿಕೆ, ನಿಯಮಗಳನ್ನು ಪ್ರಶ್ನೆ ಮಾಡಿದರೆ ಪರಸ್ಪರ ದೂಷಣೆಗೆ ಕಾರಣವಾಗಿ ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹಿಂದು ಧರ್ಮ ಸರಿ ಇಲ್ಲ ಎಂಬಲ್ಲಿಗೆ ಬಂದು ನಿಲ್ಲುತ್ತದೆ’ ಎಂದರು. ಸರಕಾರವೇ ಸಹಕಾರ ನೀಡುತ್ತಿಲ್ಲ. ದೇವಸ್ಥಾನಗಳಲ್ಲಿ ಬ್ರಹ್ಮಕಲಶದ ಬಳಿಕ ತಂತ್ರಿಗಳು ಆಯಾ ದೇವಸ್ಥಾನದ ನಿಯಮಗಳನ್ನು ನಿರ್ಧರಿಸುತ್ತಾರೆ. ಈಗ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಮುಂತಾದವರು ದೇವಸ್ಥಾನದ ನಿಯಮಗಳನ್ನು ನಿರ್ಧರಿಸುವಂತಾಗಿದೆ. ಆಗಮಶಾಸ್ತ್ರದ ಪ್ರಕಾರ ಬ್ರಹ್ಮಕಲಶ ನಡೆಸಲು ದೇವಸ್ಥಾನದ ಆಡಳಿತ ನಡೆಸುವ ಸರಕಾರವೇ ಸಹಕಾರ ನೀಡುತ್ತಿಲ್ಲ’ ಎಂದು ಅವರು ಹೇಳಿದರು. ಶರವು ಶ್ರೀ ಪರಮೇಶ್ವರ ಮಹಾಗಣಪತಿ ದೇವಳದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತಿ ಮಾತನಾಡಿ, ‘ಪ್ರತಿ ದೇವಸ್ಥಾನಗಳಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿ ಪ್ರತ್ಯೇಕ ನಿಯಮಗಳಿರುತ್ತವೆ. ಆಯಾ ದೇವಸ್ಥಾನಗಳಲ್ಲಿ ನಡೆಯಬೇಕಾದ ಆಚರಣೆಗಳು ಸ್ಥಗಿತಗೊಂಡರೆ ನಕಾರಾತ್ಮಕ ಅಂಶಗಳು ಹೆಚ್ಚುತ್ತವೆ. 12 ವರ್ಷಕ್ಕೊಮ್ಮೆ ಬ್ರಹ್ಮಕಲಶ ಎಂಬುದು ಆ ಅವಧಿಯಲ್ಲಿ ಆಗಿರಬಹುದಾದ ತಪ್ಪುಗಳನ್ನು ಸರಿಪಡಿಸುವ ಕಾರ್ಯವಾಗಿದೆ’ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಗುರುಪುರ ಜಂಗಮ ಸಂಸ್ಥಾನ ಮಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ‘ವೇದ, ಉಪನಿಷತ್ತುಗಳನ್ನು ಓದದೇ, ಅವುಗಳನ್ನು ಮಕ್ಕಳಿಗೂ ಕಲಿಸದೆ ನಮ್ಮ ಧಾರ್ಮಿಕ ಆಚರಣೆಗಳನ್ನು ನಾವೇ ಪ್ರಶ್ನೆ ಮಾಡುವುದು ಸರಿಯಲ್ಲ. ಹಿಂದು ಸಮಾಜವನ್ನು ಒಡೆದು ಆಳುವವರ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.
ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿ ದೇವತಾರಾಧನೆ, ದೈವಾರಾಧನೆ ಆಗಬೇಕಿದೆ. ಧರ್ಮಾಚರಣೆಯಲ್ಲಿ ಉಂಟಾದ ಲೋಪ, ವ್ಯತ್ಯಾಸವನ್ನು ಸರಿಪಡಿಸಲು ಈ ಸಭೆ ಆಯೋಜಿಸಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ ಗುರುಪುರ ದೋಣಿಂಜೆ ಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈ ಹೇಳಿದರು. ಮೂಡಬಿದಿರೆ ಜೈನಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಮಾಣಿಲ ಶ್ರೀ ರಾಜಯೋಗಿ ಮೋಹನದಾಸ ಸ್ವಾಮೀಜಿ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕಾಂಞಂಗಾಡು ನಿತ್ಯಾನಂದ ಆಶ್ರಮ ಗುರುವನದ ಶ್ರೀ ವಿದ್ಯಾನಂದ ಭಾರತಿ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್, ಮುಲ್ಕಿ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರು, ಕೂಳೂರು ಬೀಡಿನ ಆಶಿಕ್ಕುಮಾರ್ ಜೈನ್, ವೈದಿಕ ವಿದ್ವಾಂಸ ಭಾಸ್ಕರ ಭಟ್ ಪಂಜ, ಬಪ್ಪನಾಡು ಕ್ಷೇತ್ರದ ಪ್ರಸಾದ್ ಭಟ್, ಜಾನಪದ ವಿದ್ವಾಂಸ ಕೆ.ಎಲ್ ಕುಂಡಂತಾಯ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ, ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್, ಪ್ರಮುಖರಾದ ಏಂತಿಮಾರು ಬೀಡು ಶೀನಪ್ಪ ರೈ, ಜಗದೀಶ ಅಧಿಕಾರಿ ಮೂಡುಬಿದಿರೆ, ಯೋಗೀಶ್ಕುಮಾರ್ ಜೆಪ್ಪು, ಎಸ್.ಆರ್. ಹರೀಶ್ ಆಚಾರ್ಯ, ಜನಾರ್ದನ ಅರ್ಕುಳ, ಗಂಗಾಧರ ಶೆಟ್ಟಿ, ಡಾ. ಅಣ್ಣಯ್ಯ ಕುಲಾಲ್, ಭುಜಂಗ ಶೆಟ್ಟಿ ಜಪ್ಪುಗುಡ್ಡೆಗುತ್ತು, ರೋಹಿತ್ಕುಮಾರ್ ಕಟೀಲು, ಭಾಸ್ಕರಚಂದ್ರ ಶೆಟ್ಟಿ ಕಮಲಾಕ್ಷ ಗಂಧಕಾಡು, ಪ್ರಕಾಶ್ ಇಳಂತಿಲ, ಪ್ರವೀಣ್ ಕುತ್ತಾರ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಲೀಲಾಕ್ಷ ಬಿ. ಕರ್ಕೇರ, ದಯಾನಂದ ಕತ್ತಲ್ಸಾರ್, ಕಿರಣ್ ಉಪಾಧ್ಯಾಯ, ವಿಜಯ್ ಶೆಟ್ಟಿ, ಮಯೂರ ಕೀರ್ತಿ ಜೈನ್, ನಿತ್ಯಾನಂದ ಮುಂಡೋಡಿ, ಜಿತೇಂದ್ರ ಕೊಟ್ಟಾರಿ, ಪದ್ಮನಾಭ ಮೂಡಬಿದಿರೆ, ಅಡ್ಯಾರ್ ಪುರುಷೋತ್ತಮ ಭಂಡಾರಿ, ಲೋಕಯ್ಯ ಗೌಡ, ದಿನಕರ ಶೆಟ್ಟಿ, ಮಾಧವ ಸುವರ್ಣ, ದಿವಾಕರ ಸಾಮಾನಿ, ಪ್ರಶಾಂತ್, ಗಂಗಾಧರ ಶೆಟ್ಟಿ, ಶಿವಪ್ಪ ನಂತೂರು ಮೊದಲಾದವರು ಉಪಸ್ಥಿತರಿದ್ದರು.
ಧರ್ಮಾವಲೋಕನ ಸಮಿತಿ ಸಂಚಾಲಕರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ವಂದಿಸಿದರು. ವಾರುಣಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ದೈವಾರಾಧನೆ – ನಾಗಾರಾಧನೆ ಮತ್ತು ಧರ್ಮಾಚರಣೆ’ ಎರಡನೇ ಅವಲೋಕನ ಗೋಷ್ಠಿ ನಡೆಯಿತು. ಸಭೆಯ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಭಕ್ತಿ ಪಾರಮ್ಯ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ. ಎಂ.ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ರವಿ ಅಲೆವೂರಾಯ, ಜಯರಾಮ ಭಟ್ ದೇವಸ್ಯ ಅರ್ಥಧಾರಿಗಳಾಗಿದ್ದರು. ಪ್ರಶಾಂತ ರೈ ಪುತ್ತೂರು ಅವರ ಭಾಗವತಿಕೆಗೆ ಪ್ರಣಾಮ್ ರಾವ್ ಮತ್ತು ಮೋಹನ್ ಶರವೂರು ಚೆಂಡೆ ಮದ್ದಳೆಗಳಲ್ಲಿ ಸಹಕರಿಸಿದರು.

















































































































