ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದ ಸಿದ್ವಿನ್ ಇಂಡಸ್ಟ್ರೀಸ್ ಸ್ಥಾಪಕ ಸನತ್ ಶೆಟ್ಟಿ ಅವರು ತುಳುನಾಡಿನ ಸಮೃದ್ಧ ಸಂಸ್ಕ್ರತಿ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬೆಳೆದ ಪ್ರತಿಷ್ಠಿತ ಬೈಲುಮೇಗಿನ ಮನೆ ಬಂಟ ಮನೆತನದಿಂದ ಬಂದವರು. ಸಿದ್ವಿನ್ ಇಂಡಸ್ಟ್ರೀಸ್ ಆತಿಥ್ಯ, ಆರೋಗ್ಯ ಕಾಳಜಿ, ಸ್ವಚ್ಛತಾ ಕಾಳಜಿ, ಸ್ವಚ್ಛತಾ ಸಾಧನ ಕರವಸ್ತ್ರಗಳಿಗೆ ಪರ್ಯಾಯವಾಗಿ ಉಪಯೋಗಿಸುವ ಟಿಶ್ಯೂ ಕಾಗದ, ಇತ್ಯಾದಿಗಳ ತಯಾರಿ ಪೂರೈಕೆಗೆ ಹೆಸರಾದ ವ್ಯಾವಹಾರಿಕ ಸಂಸ್ಥೆ ಎಂದು ಈಗಾಗಲೆ ಪ್ರಸಿದ್ಧಿ ಪಡೆದಿದೆ. ಸನತ್ ಇವರದ್ದು ಹಣ ಸಂಪಾದನೆಯೊಂದೇ ಉದ್ದೇಶವಾಗಿರದೆ ಒಂದು ಆರೋಗ್ಯಕರ ಸಮಾಜ, ಅದರ ಪ್ರಗತಿ, ನವೀಕರಣ ಇತ್ಯಾದಿ ಕುರಿತ ಚಿಂತನೆಗಳಿಂದಲೂ ಗುರುತಿಸಿ ಕೊಂಡಿರುತ್ತದೆ. ತನ್ನ ಧರ್ಮಪತ್ನಿ ಅಖಿಲಾ ವಸಿಷ್ಠ ಶೆಟ್ಟಿ ಅವರ ಜೊತೆಗೂಡಿ ಆರಂಭಿಸಿದ ಮೈ ಸ್ಪೇಸ್ ಎಂಬ ಹಬ್ ಸಮೂಹಗಳು ಸನತ್ ದಂಪತಿಯರ ವ್ಯಾವಹಾರಿಕ ದೂರದೃಷ್ಟಿಗೆ ಉತ್ತಮ ಉದಾಹರಣೆಯಾಗಿದೆ. ಒಂದರ್ಥದಲ್ಲಿ ಒಂದು ಬಹೂದ್ಧೇಶ ಕೈಗಾರಿಕಾ ಸಮೂಹದಂತಿರುವ ಸಿದ್ವಿನ್ ಇಂಡಸ್ಟ್ರೀಸ್ ಸಮಾಜದ ವಿವಿಧ ವರ್ಗಗಳ ವಿವಿಧ ವ್ಯವಹಾರಗಳಿಗೆ ಸ್ಪಂದಿಸಬಲ್ಲ ಬಲು ಅಪರೂಪದ ಸಂಸ್ಥೆ ಎನಿಸಿದ್ದಷ್ಟೇ ಅಲ್ಲದೇ ಒಂದು ಮಾಜರಿ ಸಮಾಜ ನಿರ್ಮಾಣದ ಚರಮ ಲಕ್ಷ್ಯವನ್ನು ಹೊಂದಿದ ಕೈಗಾರಿಕಾ ಉತ್ಪನ್ನ ಜೊತೆಗೆ ಬಹು ಅಮೂಲ್ಯವಾದ ಮಾನವ ಸೇವೆಗೆ ಹೆಸರು ಪಡೆದಿದೆ.

ಸನತ್ ಇವರು ನಿಟ್ಟೆಗುತ್ತು ಡಾ. ಪೃಥ್ವಿರಾಜ್ ಶೆಟ್ಟಿ ಹಾಗೂ ಬೈಲುಮೆಗಿನ ಮನೆ ಭವಾನಿ ಪಿ ಶೆಟ್ಟಿಯವರ ಸುಪುತ್ರರಾಗಿದ್ದಾರೆ. ಇವರು ಭೂ ವ್ಯವಹಾರ ಹಾಗೂ ಅಭಿವೃದ್ಧಿ ಉದ್ಯಮದಲ್ಲಿ ಬಲು ಖ್ಯಾತಿಯ ಹೆಸರಾಗಿ ಎಲ್ಲಾ ವರ್ಗದ ಆರ್ಥಿಕ ಅಂತಸ್ತು ಅರ್ಹತೆಗಳನ್ನು ಹೊಂದಿದ ಸಾಮಾಜಿಕರ ಮುಕ್ತ ಕಂಠದ ಶ್ಲಾಘನೆಗೆ ಪಾತ್ರವಾಗಿದೆ. ಪ್ರಸ್ತುತ ದೊಡ್ಡಬಳ್ಳಾಪುರದಲ್ಲಿ ರೆಸಿಡೆನ್ಸಿಯಲ್ ಪ್ರಾಜೆಕ್ಟ್ ASA HOMES ಉದ್ಘಾಟಿಸಿ ಅಲ್ಲಿಯೂ ವ್ಯವಹಾರ ಮಗ್ನವಾಗಿದೆ. ಸನತ್ ಅವರು ನಿಟ್ಟೆಗುತ್ತು ಡಾ. ಪೃಥ್ವಿರಾಜ್ ಶೆಟ್ಟಿ ಹಾಗೂ ಬೈಲುಮೆಗಿನ ಮನೆ ಭವಾನಿ ಪಿ ಶೆಟ್ಟಿಯವರ ಸುಪುತ್ರರಾಗಿದ್ದಾರೆ. ಒಂದು ಉತ್ತಮ ಪರಂಪರೆ ತಲೆಮಾರುಗಳನ್ನು ಹೊಂದಿದ ಇವರ ಮಾತಾಪಿತರ ಪ್ರತಿಷ್ಠೆಯನ್ನು ಬೆಳಗಿಸಿ ನೈತಿಕ ಸಿದ್ಧಾಂತವನ್ನು ವ್ಯವಹಾರದಲ್ಲಿ ಅಳವಡಿಸಿಕೊಂಡ ಸನತ್ ಉದ್ಯಮಿಗಳ ಸಾಲಿನಲ್ಲಿ ಅನ್ಯ ಗೌರವ ಪಂಕ್ತಿಯಲ್ಲಿ ಗುರುತಿಸಲ್ಪಡುತ್ತಾರೆ.

ಮೂರು ದಶಕ ಪೂರ್ವ ತನ್ನ ತಾತ ಸಂಜೀವ ಶೆಟ್ಟಿಯವರು ಮನ್ದೇವ್ ವೆಂಚರ್ಸ್ ಹಾಗೂ ಗಣೇಶ್ ಶಿಪ್ಪಿಂಗ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಜಗತ್ ಪ್ರಸಿದ್ಧಿ ಪಡೆದಿದ್ದರು. ತನ್ನ ತಾತನ ಹಾದಿಯಲ್ಲೇ ತನ್ನ ಸಂಸ್ಥೆಯನ್ನು ಹೊಸ ಕಾಯಕಲ್ಪ ನೀಡಿ ಮುನ್ನಡೆಸುತ್ತಿರುವ ಹೆಗ್ಗಳಿಕೆ ಸನತ್ ಶೆಟ್ಟಿ ಅವರಿಗಿದೆ. ಹೀಗೆ ಸಮಾಜದ ವಿವಿಧ ಸ್ತರಗಳ ಅಭಿರುಚಿ ಹಾಗೂ ಅವಶ್ಯಕತೆಗಳ ಅರ್ಥೈಸಿಕೊಂಡು ವ್ಯವಹಾರ ನಡೆಸಬಲ್ಲ ಬಹುಮಖಿ ಉದ್ಯಮ ಮುಖಗಳ ಪರಿಜ್ಞಾನ ಹೊಂದಿದ ಸನತ್ ಶೆಟ್ಟಿ ಅವರು ಬಂಟ ಸಮುದಾಯದ ಸಮುದ್ಜಾತ ಬಂಧು ಎಂಬುವುದೇ ನಮಗೆ ಅಭಿಮಾನದ ವಿಷಯ. ಇಂಥವರನ್ನು ಗುರುತಿಸುವುದಕ್ಕೂ ಒಂದರ್ಥದ ಗೃಧ್ರ ದೃಷ್ಟಿ ಇರಬೇಕು. ಇಂಥಹ ಕೆಲಸವನ್ನು ಬಂಟ್ಸ್ ನೌ ಮಾಡುತ್ತಿದೆ. ತಮ್ಮ ಪ್ರೀತಿಯ ಹಾರೈಕೆಗಳಿರಲಿ.
ಬರಹ : ಅರುಣ್ ಶೆಟ್ಟಿ ಎರ್ಮಾಳ್, ಗೌರವ ಸಂಪಾದಕರು

















































































































